ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೃತ್ಪೂರ್ವಕ ಕೃತಜ್ಞತೆಗಳನ್ನು ವ್ಯಕ್ತಪಡಿಸಿದ್ದಾರೆ
October 07th, 09:06 pm
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸರ್ಕಾರದ ಮುಖ್ಯಸ್ಥರಾಗಿ 23 ವರ್ಷಗಳನ್ನು ಪೂರೈಸಿದ್ದಕ್ಕಾಗಿ ತಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಶ್ರೀ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಾಗಿದ್ದ ತಮ್ಮ ಕಾಲವನ್ನು ನೆನಪಿಸಿಕೊಂಡು, ಗುಜರಾತ್ 'ಸಬ್ಕಾ ಸಾಥ್, ಸಬ್ಕಾ ವಿಕಾಸ್' ಪರಿಕಲ್ಪನೆಯ ಉಜ್ವಲ ಉದಾಹರಣೆಯಾಗಿ ಹೊರಹೊಮ್ಮಿತು. ಸಮಾಜದ ಎಲ್ಲಾ ವರ್ಗಗಳಿಗೆ ಸಮೃದ್ಧಿಯನ್ನು ಖಾತ್ರಿಪಡಿಸಿತು ಎಂದು ಹೇಳಿದರು. ಕಳೆದ ದಶಕವನ್ನು ನೆನಪಿಸಿಕೊಳ್ಳುತ್ತಾ, ಭಾರತದ ಅಭಿವೃದ್ಧಿಯ ಹೆಜ್ಜೆಗಳು ನಮ್ಮ ದೇಶವನ್ನು ಜಾಗತಿಕವಾಗಿ ಅತ್ಯಂತ ಆಶಾವಾದದಿಂದ ನೋಡಲಾಗುತ್ತಿದೆ ಎಂಬುದನ್ನು ಖಚಿತಪಡಿಸಿವೆ ಎಂದು ಪ್ರಧಾನಮಂತ್ರಿ ಹೇಳಿದರು. ವಿಕಸಿತ ಭಾರತದ ಸಾಮೂಹಿಕ ಗುರಿ ಸಾಧಿಸುವವರೆಗೆ ತಾವು ಅವಿರತವಾಗಿ ದುಡಿಯುತ್ತೇನೆ ಮತ್ತು ವಿಶ್ರಮಿಸುವುದಿಲ್ಲ ಎಂದು ಅವರು ನಾಗರಿಕರಿಗೆ ಭರವಸೆ ನೀಡಿದರು.