QuoteAfter 500 years, this holy moment has come after countless and continuous sacrifice and penance of Ram devotees: PM

ಭವ್ಯವಾದ ಮತ್ತು ದೈವಿಕ ದೀಪೋತ್ಸವದ ಆಚರಣೆಯ ಅಂಗವಾಗಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಅಯೋಧ್ಯೆಯ ಜನರಿಗೆ ಮತ್ತು ಇಡೀ ರಾಷ್ಟ್ರಕ್ಕೆ ಹೃತ್ಪೂರ್ವಕ ಅಭಿನಂದನೆ ತಿಳಿಸುತ್ತಾ ಮನಃಪೂರ್ವಕ ಶುಭಾಶಯ‌ ಕೋರಿದ್ದಾರೆ. 

ಪ್ರಧಾನಮಂತ್ರಿಯವರು ಸರಣಿ ಟ್ವೀಟ್‌ಗಳಲ್ಲಿ, ಭಗವಾನ್ ಶ್ರೀರಾಮನ ಪವಿತ್ರ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಪ್ರಕಾಶಮಾನ ಉತ್ಸವದ ಬಗ್ಗೆ ಸಂತೋಷ ಮತ್ತು ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ.
“ಅತ್ಯದ್ಭುತ, ಸಾಟಿಯಿಲ್ಲದ ಮತ್ತು ಊಹೆಗೆ ನಿಲುಕದ್ದು!

ಭವ್ಯ ಮತ್ತು ದೈವಿಕ ದೀಪೋತ್ಸವಕ್ಕಾಗಿ ಅಯೋಧ್ಯೆಯ ಜನರಿಗೆ ಅನಂತ ಅಭಿನಂದನೆಗಳು! ರಾಮ್ ಲಲ್ಲಾನ ಪವಿತ್ರ ಜನ್ಮಸ್ಥಳದಲ್ಲಿ ಲಕ್ಷಾಂತರ ದೀಪಗಳಿಂದ ಪ್ರಜ್ವಲಿಸುತ್ತಿರುವ ಈ ಜ್ಯೋತಿಪರ್ವವು ಭಾವನಾತ್ಮಕವಾಗಿರಲಿದೆ. ಅಯೋಧ್ಯಾ ಧಾಮದಿಂದ ಬೆಳಗುತ್ತಿರುವ ಈ ಕಿರಣವು ದೇಶದಾದ್ಯಂತ ನನ್ನ ಕುಟುಂಬ ಸದಸ್ಯರಲ್ಲಿ ಹೊಸ ಉತ್ಸಾಹ ಮತ್ತು ಹೊಸ ಚೈತನ್ಯವನ್ನು ತುಂಬುತ್ತದೆ.  ಭಗವಾನ್ ಶ್ರೀರಾಮನು ಎಲ್ಲಾ ದೇಶವಾಸಿಗಳಿಗೆ ಸಂತೋಷ, ಸಮೃದ್ಧಿ ಮತ್ತು ಯಶಸ್ವಿ ಜೀವನವನ್ನು ದಯಪಾಲಿಸಲಿ ಎಂದು ನಾನು ಆಶಿಸುತ್ತೇನೆ.

ಜೈ ಶ್ರೀ ರಾಮ್!”

 

 

 

ಈ ದೀಪಾವಳಿಯ ಮಹತ್ವದ ಬಗ್ಗೆ ತಿಳಿಸುತ್ತಾ ಅವರು ಹೀಗೆ ಹೇಳಿದ್ದಾರೆ:

“ದೈವೀಕ ಅಯೋಧ್ಯಾ!

ಮರ್ಯಾದಾ ಪುರುಷೋತ್ತಮ ಭಗವಾನ್ ಶ್ರೀ ರಾಮನನ್ನು ಈ ಭವ್ಯ ದೇಗುಲದಲ್ಲಿ ಪ್ರತಿಷ್ಠಾಪಿಸಿದ ಬಳಿಕ ಇದು ಮೊದಲ ದೀಪಾವಳಿಯಾಗಿದೆ. ಅಯೋಧ್ಯೆಯ ರಾಮಲಲ್ಲಾ ದೇಗುಲದ ವಿಶಿಷ್ಟ ಸೌಂದರ್ಯ ಎಲ್ಲರನ್ನೂ ಮಂತ್ರಮುಗ್ಧಗೊಳಿಸಲಿದೆ. 

ಅಸಂಖ್ಯಾತ ರಾಮ ಭಕ್ತರ ತ್ಯಾಗ ಮತ್ತು  ತಪಸ್ಸಿನಿಂದಾಗಿ  500 ವರ್ಷಗಳ ನಂತರ ಈ ಪವಿತ್ರ ಕ್ಷಣ ಬಂದಿದೆ. ಈ ಐತಿಹಾಸಿಕ ಸಂದರ್ಭಕ್ಕೆ ನಾವೆಲ್ಲರೂ ಸಾಕ್ಷಿಯಾಗಿರುವುದು ನಮ್ಮ ಸೌಭಾಗ್ಯ. ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿಸಬೇಕು ಎಂಬ ಸಂಕಲ್ಪದ ಈಡೇರಿಕೆಗೆ ಭಗವಾನ್ ಶ್ರೀ ರಾಮನ ಜೀವನ ಮತ್ತು ಆದರ್ಶಗಳು ಮುಂದೆಯೂ ಪ್ರೇರಣೆ ನೀಡಲಿದೆ ಎಂಬ ನಂಬಿಕೆ ನನಗಿದೆ.
ಜೈ ಸಿಯಾ ರಾಮ್!”

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'Operation Brahma': First Responder India Ships Medicines, Food To Earthquake-Hit Myanmar

Media Coverage

'Operation Brahma': First Responder India Ships Medicines, Food To Earthquake-Hit Myanmar
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 29 ಮಾರ್ಚ್ 2025
March 29, 2025

Citizens Appreciate Promises Kept: PM Modi’s Blueprint for Progress