Mann Ki Baat: PM Modi speaks about the tradition of storytelling
The agriculture sector of the country, our farmers, our villages, is the foundation of self-reliant India: PM Modi during Mann Ki Baat
In today's date, the more modern methods we apply to agriculture, the more the sector will flourish: Prime Minister during Mann Ki Baat
I bow to Shaheed Veer Bhagat Singh, an icon of courage and valour among all the countrymen: PM Modi
Mann Ki Baat: PM Modi remembers greats like Mahatma Gandhi, Jayprakash Narayan, Nanaji Deshmukh
Rajmata Vijayaraje Scindia dedicated her entire life to the service of the people: PM Modi during Mann Ki Baat
Wear masks properly, maintain social distancing to combat Coronavirus: PM Modi

ನನ್ನ ಪ್ರೀತಿಯ ದೇಶವಾಸಿಗಳೇ, ನಮಸ್ಕಾರ.

ಕೊರೊನಾದ ಈ ಕಾಲಘಟ್ಟದಲ್ಲಿ ಸಂಪೂರ್ಣ ಜಗತ್ತು ಅನೇಕ ಪರಿವರ್ತನೆಗಳನ್ನು ಎದುರಿಸುತ್ತಿದೆ. ಇಂದು, ಎರಡು ಗಜಗಳ ಅಂತರವು ಅನಿವಾರ್ಯ ಅಗತ್ಯವಾಗಿಬಿಟ್ಟಿದೆ, ಆದರೆ ಇದೇ ಸಂಕಟದ ಸಮಯವು ಕುಟುಂಬದ ಸದಸ್ಯರನ್ನು ಪರಸ್ಪರ ಬಾಂಧವ್ಯದಲ್ಲಿ ಕಟ್ಟಿಹಾಕಿದೆ ಮತ್ತು ಹತ್ತಿರಕ್ಕೆ ತರುವ ಕೆಲಸವನ್ನೂ ಮಾಡಿದೆ. ಆದರೆ ಇಷ್ಟು ದೀರ್ಘ ಸಮಯದವರೆಗೆ ಒಟ್ಟಿಗೆ ಇರುವುದು, ಹೇಗೆ ಬಾಳುವುದು, ಸಮಯ ಹೇಗೆ ಕಳೆಯುವುದು, ಪ್ರತಿ ಕ್ಷಣವೂ ಸಂತೋಷವಾಗಿರುವುದು ಹೇಗೆ? ಆದ್ದರಿಂದ ಅನೇಕ ಕುಟುಂಬಗಳಲ್ಲಿ ಸಮಸ್ಯೆಗಳು ಎದುರಾದವು ಅದಕ್ಕೆ ಕಾರಣವೆಂದರೆ, ಕುಟುಂಬದಲ್ಲಿ ಒಂದೇ ರೀತಿಯಾಗಿ ಸಂಸ್ಕಾರ ಪರವಾಗಿ ನಡೆಯುತ್ತಿದ್ದ ನಮ್ಮ ಸಂಪ್ರದಾಯಗಳು ಕಾಣೆಯಾಗಿರುವುದು. ಅನೇಕ ಕುಟುಂಬಗಳಲ್ಲಿ ಇಂತಹವುಗಳು ಕೊನೆಗೊಂಡಿವೆ ಮತ್ತು ಇದರಿಂದಾಗಿ, ಆ ಕೊರತೆಯಿಂದಾಗಿ, ಈ ಬಿಕ್ಕಟ್ಟಿನ ಸಮಯದಲ್ಲಿ ಕುಟುಂಬಗಳಿಗೆ ಸಮಯ ಕಳೆಯುವುದು ಸ್ವಲ್ಪ ಕಷ್ಟವಾಯಿತು ಮತ್ತು ಅದರಲ್ಲಿದ್ದ ಮುಖ್ಯವಾದ ವಿಷಯ ಯಾವುದು? ಪ್ರತಿ ಕುಟುಂಬದಲ್ಲಿ ಯಾರಾದರೊಬ್ಬ ವೃದ್ಧರು, ಕುಟುಂಬದ ಹಿರಿಯರು, ಕತೆಗಳನ್ನು ಹೇಳುತ್ತಿದ್ದರು ಮತ್ತು ಮನೆಯಲ್ಲಿ ಹೊಸ ಸ್ಫೂರ್ತಿ ಹೊಸ ಶಕ್ತಿ ತುಂಬುತ್ತಿದ್ದರು. ನಮ್ಮ ಪೂರ್ವಿಕರು ರೂಪಿಸಿದ ವಿಧಿ ವಿಧಾನಗಳು ಇಂದಿಗೂ ಎಷ್ಟು ಮಹತ್ವಪೂರ್ಣವಾಗಿವೆ ಮತ್ತು ಅವುಗಳು ಇಲ್ಲದಿರುವಾಗ ಅವುಗಳ ಕೊರತೆಯ ಅನುಭವವಾಗುತ್ತದೆ ಎಂದು ನಾವು ಅರಿತುಕೊಂಡಿರಬೇಕು. ನಾನು ಹೇಳಿದಂತೆ ಅಂತಹದ್ದೇ ಒಂದು ಪ್ರಕಾರವೆಂದರೆ ಕತೆಹೇಳುವ (ಸ್ಟೋರಿ ಟೆಲ್ಲಿಂಗ್) ಕಲೆಗಾರಿಕೆ.  ಸ್ನೇಹಿತರೆ, ಕತೆಗಳ ಇತಿಹಾಸ ಮಾನವನ ನಾಗರಿಕತೆಯಷ್ಟೇ ಪುರಾತನವಾದದ್ದು.

ಎಲ್ಲಿ ಒಂದು ಆತ್ಮವಿರುತ್ತದೋ ಅಲ್ಲಿ ಒಂದು ಕತೆಯಿರುತ್ತದೆ. (`where there is a soul there is a story') ಕತೆಗಳು ಜನರ ಸೃಜನಾತ್ಮಕ ಮತ್ತು ಸಂವೇದನಾಶೀಲ ಭಾಗವನ್ನು ಹೊರತರುತ್ತವೆ, ಅವುಗಳನ್ನು ಬಹಿರಂಗಪಡಿಸುತ್ತವೆ. ಕತೆಯ ಶಕ್ತಿಯನ್ನು ಅನುಭವಿಸಬೇಕಾದರೆ, ತಾಯಿಯೊಬ್ಬಳು ತನ್ನ ಚಿಕ್ಕ ಮಗುವನ್ನು ಮಲಗಿಸುವುದಕ್ಕೆ ಅಥವಾ ಅದಕ್ಕೆ ಊಟ ಮಾಡಿಸುವುದಕ್ಕಾಗಿ ಕತೆ ಹೇಳುತ್ತಿರುವಾಗ ಆಕೆಯನ್ನು ನೋಡಬೇಕು. ನಾನು ನನ್ನ ಜೀವನದಲ್ಲಿ ಬಹಳ ದೀರ್ಘ ಕಾಲದವರೆಗೆ ಅಲೆದಾಡುವ ಮುನಿಯಂತಿದ್ದೆ. (A wandering ascetic) ಅಲ್ಲಿಂದಿಲ್ಲಿಗೆ ಅಲೆದಾಡುವುದೇ ನನ್ನ ಜೀವನವಾಗಿತ್ತು. ಪ್ರತಿ ದಿನ ಹೊಸ ಗ್ರಾಮ, ಹೊಸ ಜನರು, ಹೊಸ ಕುಟುಂಬ, ಆದರೆ, ನಾನು ಕುಟುಂಬಗಳಿಗೆ ಭೇಟಿ ನೀಡುತ್ತಿದ್ದಾಗ, ಮಕ್ಕಳೊಂದಿಗೆ ಖಂಡಿತವಾಗಿಯೂ ಮಾತನಾಡುತ್ತಿದ್ದೆ, ಮತ್ತು ಕೆಲವೊಮ್ಮೆ ಅವರನ್ನು ಮಕ್ಕಳೇ ನನಗೆ ಯಾವುದಾದರೊಂದು ಕತೆ ಹೇಳಿ ಎಂದು ಕೇಳುತ್ತಿದ್ದೆ, ನನಗೆ ಆಶ್ಚರ್ಯವಾಗುತ್ತಿತ್ತು, ಮಕ್ಕಳು ನನಗೆ ಹೇಳುತ್ತಿದ್ದರು, ಇಲ್ಲ ಅಂಕಲ್ ಕತೆ ಬೇಡಾ, ನಾವು ನಿಮಗೆ ಹಾಸ್ಯದ ಪ್ರಸಂಗ ಹೇಳುತ್ತೇವೆ. ಮತ್ತು ಅವರು ನನಗೆ ಕೂಡಾ ಇದೇ ಹೇಳುತ್ತಿದ್ದರು ಅಂಕಲ್ ನಮಗೆ ಹಾಸ್ಯ ವಿಷಯ ಹೇಳಿ ಎಂದು. ಅಂದರೆ ಅವರಿಗೆ ಕತೆಯ ಪರಿಚಯವೇ ಇರಲಿಲ್ಲ. ಹೆಚ್ಚುಕಡಿಮೆ ಅವರ ಜೀವನದಲ್ಲಿ ಹಾಸ್ಯ ಸಮ್ಮಿಳಿತವಾಗಿತ್ತು.

ಸ್ನೇಹಿತರೆ, ಭಾರತದಲ್ಲಿ ಕತೆ ಹೇಳುವ, ಉಪಾಖ್ಯಾನ ಹೇಳುವ ಶ್ರೀಮಂತ ಪರಂಪರೆ ಇದೆ. ಹಿತೋಪದೇಶ ಮತ್ತು ಪಂಚತಂತ್ರದ ಪರಂಪರೆಯಿರುವ ದೇಶವಾಸಿಗಳೆಂಬ ಹೆಮ್ಮೆ ನಮಗಿದೆ. ಕತೆಗಳಲ್ಲಿ ಪಶು–ಪಕ್ಷಿಗಳು ಮತ್ತು ಯಕ್ಷಿಣಿಯರ ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಸಲಾಗಿದೆ, ಇದರಿಂದಾಗಿ ವಿವೇಕ ಮತ್ತು ಬುದ್ಧಿಶಕ್ತಿಯ ಮಾತುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ. ನಮ್ಮಲ್ಲಿ ಕತೆಯ ಪರಂಪರೆಯಿದೆ. ಇದು ಧಾರ್ಮಿಕ ಕತೆಗಳನ್ನು ಹೇಳುವ ಪ್ರಾಚೀನ ಪದ್ಧತಿಯಾಗಿದೆ. ಇದರಲ್ಲಿ  `ಕಥಾಕಾಲಕ್ಷೇಪವೂ' ಸೇರಿದೆ. ನಮ್ಮಲ್ಲಿ ವಿಧ ವಿಧವಾದ ಜಾನಪದ ಕತೆಗಳು ಚಾಲ್ತಿಯಲ್ಲಿವೆ. ತಮಿಳುನಾಡು ಮತ್ತು ಕೇರಳದಲ್ಲಿ ಕತೆ ಹೇಳುವ ಬಹಳ ಕುತೂಹಲಕಾರಿ ವಿಧಾನವಿದೆ.  ಇದನ್ನು `ವಿಲ್ಲೂ ಪಾಟ್' ಎಂದು ಕರೆಯುತ್ತಾರೆ. ಇದರಲ್ಲಿ ಕತೆ ಮತ್ತು ಸಂಗೀತದ ಬಹಳ ಆಕರ್ಷಕ ಸಾಮರಸ್ಯವಿರುತ್ತದೆ. ಭಾರತದಲ್ಲಿ ತೊಗಲುಬೊಂಬೆಯಾಟದ ಜೀವಂತ ಪರಂಪರೆಯಿದೆ. ಇಂದಿನ ದಿನಗಳಲ್ಲಿ ವಿಜ್ಞಾನ (Science)ಮತ್ತು ವೈ ಜ್ಞಾನಿಕ ಕಲ್ಪನೆಯ (Science fiction) ಕತೆಗಳು ಮತ್ತು ಕತೆ ಹೇಳುವ ವಿಧಾನ ಜನಪ್ರಿಯವಾಗುತ್ತಿದೆ. ಕೆಲವರು ಕತೆ ಹೇಳುವ ಕಲೆಯನ್ನು ಮುಂದುವರಿಸಲು ಶಾಘನೀಯ ಕ್ರಮಗಳನ್ನು ಕೈಗೊಳ್ಳುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನನಗೆ gaathastory.in ನಂತಹ website ನ ಬಗ್ಗೆ ತಿಳಿದುಬಂತು, ಇದನ್ನು ಅಮರ್ ವ್ಯಾಸ್ ಇತರರೊಂದಿಗೆ ಸೇರಿ ನಡೆಸುತ್ತಾರೆ. ಅಮರ್ ವ್ಯಾಸ್ ಅವರು ಐಐಎಂ (IIM) ಅಹಮದಾಬಾದ್ ನಲ್ಲಿ ಎಂಬಿಎ (IBM) ಓದಿದ ನಂತರ ವಿದೇಶಕ್ಕೆ ತೆರಳಿದ್ದರು, ಮತ್ತು ಪುನಃ ಹಿಂದಿರುಗಿ ಬಂದರು.  ಈಗ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ ಮತ್ತು ತಮ್ಮ ಸಮಯವನ್ನು ಮೀಸಲಿಟ್ಟು ಕತೆಗಳಿಗೆ ಸಂಬಂಧಿಸಿದಂತೆ ಇಂತಹ ಆಸಕ್ತಿಪೂರ್ಣ ಕೆಲಸ ಮಾಡುತ್ತಿದ್ದಾರೆ. ಇಂತಹ ಅನೇಕ ಪ್ರಯತ್ನಗಳು ಗ್ರಾಮೀಣ ಭಾರತದ ಕತೆಗಳನ್ನು ಉತ್ತಮವಾಗಿ ಪ್ರಚಾರ ಮಾಡುತ್ತಿರುವೆ. ವೈಶಾಲಿ ವ್ಯವಹಾರೇ ದೇಶಪಾಂಡೆಯಂತಹ ಅನೇಕ ವ್ಯಕ್ತಿಗಳು ಇದನ್ನು ಮರಾಠಿ ಭಾಷೆಯಲ್ಲಿ ಜನಪ್ರಿಯಗೊಳಿಸುತ್ತಿದ್ದಾರೆ.

ಚೆನ್ನೈನ ಶ್ರೀವಿದ್ಯಾ ವೀರ ರಾಘವನ್ ಅವರು ಕೂಡಾ ನಮ್ಮ ಸಂಸ್ಕೃತಿಗೆ ಸಂಬಂಧಿಸಿದ ಕತೆಗಳನ್ನು ಪ್ರಚಾರ, ಪ್ರಸಾರ ಮಾಡುವುದರಲ್ಲಿ ತೊಡಗಿಕೊಂಡಿದ್ದರೆ, ಕಥಾಲಯ್ ಮತ್ತು The Indian story telling network ಹೆಸರಿನ ಎರಡು website ಗಳು ಕೂಡಾ ಈ ಕ್ಷೇತ್ರದಲ್ಲಿ ಅದ್ಭುತ ಕೆಲಸ ಮಾಡುತ್ತಿವೆ. ಗೀತಾ ರಾಮಾನುಜನ್ ಅವರು kathalaya.org ನಲ್ಲಿ ಕತೆಗಳನ್ನು ಕ್ರೋಢೀಕರಿಸಿದ್ದರೆ, The Indian story telling network ಮುಖಾಂತರ ಕೂಡಾ ಬೇರೆ ಬೇರೆ ನಗರಗಳ ಕತೆಗಾರರ (story tellers) network ಸಿದ್ಧಪಡಿಸಲಾಗುತ್ತಿದೆ.  ಬಾಪೂರವರ ಕುರಿತ ಕತೆಗಳಲ್ಲಿ ಬಹಳ ಉತ್ಸಾಹಿತರಾಗಿರುವ ವಿಕ್ರಮ್ ಶ್ರೀಧರ್ ಎನ್ನುವ ವ್ಯಕ್ತಿಯೊಬ್ಬರು ಬೆಂಗಳೂರಿನಲ್ಲಿದ್ದಾರೆ. ಅಲ್ಲದೇ ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇನ್ನೂ ಅನೇಕರಿರಬಹುದು, –ನೀವು ಅವರುಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಖಂಡಿತವಾಗಿಯೂ ಹಂಚಿಕೊಳ್ಳಿ.

ಇಂದು ನಮ್ಮೊಂದಿಗೆ ಬೆಂಗಳೂರು Story telling society ಯ ಸೋದರಿ ಅಪರ್ಣಾ ಆತ್ರೇಯ ಮತ್ತು ಇತರ ಕೆಲವು ಸದಸ್ಯರಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ ಮತ್ತು ಅವರ ಅನುಭವ ತಿಳಿದುಕೊಳ್ಳೋಣ.

ಪ್ರಧಾನಮಂತ್ರಿ:- ಹಲೋ

ಅಪರ್ಣಾ :-         ಆದರಣೀಯ ಪ್ರಧಾನಮಂತ್ರಿಗಳೇ ನಮಸ್ಕಾರ. ನೀವು ಹೇಗಿದ್ದೀರಿ ?

ಪ್ರಧಾನ ಮಂತ್ರಿ :-   ನಾನು ಚೆನ್ನಾಗಿದ್ದೇನೆ. ನೀವು ಹೇಗಿದ್ದೀರಿ ಅಪರ್ಣಾ ಅವರೇ?

ಅಪರ್ಣಾ :-   ಬಹಳ ಚೆನ್ನಾಗಿದ್ದೇನೆ ಸರ್. ನಮ್ಮಂತಹ ಕಲಾವಿದರನ್ನು ಈ ವೇದಿಕೆಗೆ ಕರೆದಿದ್ದೀರಿ ಮತ್ತು ನಮ್ಮೊಂದಿಗೆ ಮಾತನಾಡುತ್ತಿರುವುದಕ್ಕೆ ಎಲ್ಲಕ್ಕಿಂತ ಮೊದಲು Bangalore Story Telling Society ಪರವಾಗಿ ಧನ್ಯವಾದ ಹೇಳಲು ಬಯಸುತ್ತೇನೆ.

ಪ್ರಧಾನ ಮಂತ್ರಿ:-   ಇಂದು ಬಹಶಃ ನಿಮ್ಮ ಪೂರ್ತಿ ತಂಡ ನಿಮ್ಮೊಂದಿಗೆ ಕುಳಿತಿದೆ ಎಂದು ನಾನು ಕೇಳಿದ್ದೇನೆ.

ಅಪರ್ಣಾ :- ಹೌದು.. ನಿಜ | ನಿಜ ಸರ್ |

ಪ್ರಧಾನ ಮಂತ್ರಿ :-   ಸರಿ ನಿಮ್ಮ ತಂಡದ ಪರಿಚಯ ಮಾಡಿಸಿದರೆ ಚೆನ್ನಾಗಿರುತ್ತದೆ. ಇದರಿಂದ ಮನ್ ಕಿ ಬಾತ್ ನ ಶ್ರೋತೃಗಳಿಗೆ ನೀವು ನಡೆಸುತ್ತಿರುವ ಇಷ್ಟು ದೊಡ್ಡ ಅಭಿಯಾನದ  ಪರಿಚಯವಾಗುತ್ತದೆ.

ಅಪರ್ಣಾ:- ಸರ್. ನನ್ನ ಹೆಸರು ಅಪರ್ಣಾ ಆತ್ರೇಯ. ನಾನು ಇಬ್ಬರು ಮಕ್ಕಳ ತಾಯಿ, ಭಾರತೀಯ ವಾಯುಸೇನೆಯ ಅಧಿಕಾರಿಯ ಪತ್ನಿ ಮತ್ತು ಓರ್ವ passionate storyteller ಆಗಿದ್ದೇನೆ ಸರ್.  ಕತೆ ಹೇಳುವ ಅಭ್ಯಾಸ 15 ವರ್ಷಗಳ ಹಿಂದೆ ನಾನು ಸಾಫ್ಟ್ ವೇರ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾಗ ಆರಂಭವಾಯಿತು. ಆಗ ನಾನು CSR projects ನಲ್ಲಿ voluntary  ಕೆಲಸ ಮಾಡುವುದಕ್ಕಾಗಿ ಹೋಗಿದ್ದಾಗ ಸಾವಿರಾರು ಮಕ್ಕಳಿಗೆ ಕತೆಗಳ ಮುಖಾಂತರ ಶಿಕ್ಷಣ ನೀಡುವ ಅವಕಾಶ ದೊರೆತಿತ್ತು ಮತ್ತು ನಾನು ಹೇಳುತ್ತಿದ್ದ ಈ ಕತೆ ಅವರು ತಮ್ಮ ಅಜ್ಜಿಯಿಂದ ಕೇಳಿದ್ದರು. ಆದರೆ ಕತೆ ಕೇಳುವ ಸಮಯದಲ್ಲಿ ನಾನು ಆ ಮಕ್ಕಳ ಮುಖದಲ್ಲಿ ಕಂಡ ಸಂತೋಷ ನಾನು ನಿಮಗೆ ಏನೆಂದು ಹೇಳಲಿ, ಎಷ್ಟೊಂದು ಮಂದಹಾಸವಿತ್ತು, ಎಷ್ಟೊಂದು ಸಂತೋಷವಿತ್ತು, ನನ್ನ ಜೀವನದಲ್ಲಿ ಕತೆ ಹೇಳುವುದು (Storytelling) ನನ್ನ ಜೀವನದ ಒಂದು ಗುರಿಯಾಗಬೇಕೆಂದು ನಾನು ಆಗಲೇ ನಿರ್ಧರಿಸಿಬಿಟ್ಟೆ ಸರ್.

ಪ್ರಧಾನ ಮಂತ್ರಿ:- ನಿಮ್ಮ ತಂಡದಲ್ಲಿ ಮತ್ಯಾರಿದ್ದಾರೆ?

ಅಪರ್ಣಾ:-          ನನ್ನೊಂದಿಗೆ ಶೈಲಜಾ ಸಂಪತ್ ಇದ್ದಾರೆ.

ಶೈಲಜಾ:-          ನಮಸ್ಕಾರ ಸರ್ |

ಪ್ರಧಾನ ಮಂತ್ರಿ:-  ನಮಸ್ತೇ |

ಶೈಲಜಾ:-          ನಾನು ಶೈಲಜಾ ಸಂಪತ್ ಮಾತನಾಡುತ್ತಿದ್ದೇನೆ. ನಾನು ಮೊದಲು ಶಿಕ್ಷಕಿಯಾಗಿದ್ದೆ. ನಂತರ ನನ್ನ ಮಕ್ಕಳು ದೊಡ್ಡವರಾದಾಗ ನಾನು ಥಿಯೇಟರ್ ನಲ್ಲಿ ಕೆಲಸ ಆರಂಭಿಸಿದೆ ಮತ್ತು ಅಂತಿಮವಾಗಿ ಕತೆಗಳನ್ನು ಕೇಳಿಸುವುದರಲ್ಲಿ ಅತ್ಯಂತ ಹೆಚ್ಚು ಸಂತೃಪ್ತಿ ದೊರೆಯಿತು.

ಪ್ರಧಾನ ಮಂತ್ರಿ:-  ಧನ್ಯವಾದ !

ಶೈಲಜಾ:-          ನನ್ನೊಂದಿಗೆ ಸೌಮ್ಯಾ ಇದ್ದಾರೆ |

ಸೌಮ್ಯಾ:-          ನಮಸ್ಕಾರ ಸರ್ !

ಪ್ರಧಾನಮಂತ್ರಿ:- ನಮಸ್ತೇ!

ಸೌಮ್ಯಾ:-          ನನ್ನ ಹೆಸರು ಸೌಮ್ಯಾ ಶ್ರೀನಿವಾಸನ್ | ನಾನು ಓರ್ವ psychologist ಆಗಿದ್ದೇನೆ. ಮಕ್ಕಳು ಮತ್ತು ದೊಡ್ಡವರೊಂದಿಗೆ ನಾನು ಕೆಲಸ ಮಾಡುವಾಗ, ನಾನು ಕತೆಗಳ ಮುಖಾಂತರ ಮನುಷ್ಯನ ನವರಸಗಳನ್ನು ಜಾಗೃತಗೊಳಿಸುವ ಪ್ರಯತ್ನ ಮಾಡುತ್ತೇನೆ ಮತ್ತು ಅವರುಗಳೊಂದಿಗೆ ಚರ್ಚಿಸುತ್ತೇನೆ ಕೂಡಾ. `ಗುಣಪಡಿಸುವುದು ಮತ್ತು ಪರಿವರ್ತನಾತ್ಮಕ ಕತೆ ಹೇಳುವುದು' (`Healing and transformative storytelling') ಇದು ನನ್ನ ಗುರಿಯಾಗಿದೆ.

ಅಪರ್ಣಾ:-  ನಮಸ್ತೇ ಸರ್ !

ಪ್ರಧಾನ ಮಂತ್ರಿ:-  ನಮಸ್ತೇ.

ಅಪರ್ಣಾ:           ನನ್ನ ಹೆಸರು ಅಪರ್ಣಾ ಜೈಶಂಕರ್. ಅಂದಹಾಗೆ ನಾನು ನನ್ನ ತಾಯಿಯ ಅಪ್ಪ–ಅಮ್ಮನ ಮತ್ತು ತಂದೆಯ ತಾಯಿಯ (ಅಜ್ಜ–ಅಜ್ಜಿಯರ) ಜೊತೆಯಲ್ಲಿ ಈ ದೇಶದ ಅನೇಕ ಭಾಗಗಳಲ್ಲಿ ಬೆಳೆದು ದೊಡ್ಡವಳಾಗಿರುವುದು ನನ್ನ ಸೌಭಾಗ್ಯವಾಗಿದೆ. ಆದ್ದರಿಂದ ರಾಮಾಯಣ, ಪುರಾಣ ಮತ್ತು ಗೀತೆಯ ಕತೆಗಳು ನನಗೆ ಅನುವಂಶಿಕವಾಗಿ ಪ್ರತಿ ದಿನ ಕೇಳಲು ಸಿಗುತ್ತಿತ್ತು ಮತ್ತು Bangalore Storytelling Society ನಂತಹ ಸಂಸ್ಥೆಯಿರುವಾಗ ನಾನು storyteller ಆಗಲೇ ಬೇಕಿತ್ತು. ನನ್ನೊಂದಿಗೆ ನನ್ನ ಒಡನಾಡಿ ಲಾವಣ್ಯ ಪ್ರಸಾದ್ ಇದ್ದಾರೆ.

ಪ್ರಧಾನ ಮಂತ್ರಿ:-             ಲಾವಣ್ಯಾ ಅವರೇ, ನಮಸ್ತೇ!

ಲಾವಣ್ಯ:-           ನಮಸ್ತೇ ಸರ್. ನಾನು ಓರ್ವ ಎಲೆಕ್ಟ್ರಿಕ್ ಇಂಜನಿಯರ್ ಈಗ ವೃತ್ತಿಪರ ಸ್ಟೋರಿಟೆಲ್ಲರ್ ಆಗಿದ್ದೇನೆ. ನಾನು ನನ್ನ ತಾತನವರಿಂದ ಕತೆಗಳನ್ನು ಕೇಳುತ್ತಲೇ ಬೆಳೆದು ದೊಡ್ಡವಳಾದೆ. ನಾನು ಹಿರಿಯ ನಾಗರಿಕರೊಂದಿಗೆ ಕೆಲಸ ಮಾಡುತ್ತೇನೆ. ಬೇರುಗಳು ಎಂದು ಕರೆಯುವ ನನ್ನ ವಿಶೇಷ ಪ್ರಾಜೆಕ್ಟ್ ನಲ್ಲಿ ನಾನು ಹಿರಿಯ ನಾಗರಿಕರು ತಮ್ಮ ಜೀವನದ ಕತೆಗಳನ್ನು ತಮ್ಮ ಕುಟುಂಬಗಳಿಗಾಗಿ ದಾಖಲಿಸಲು ನಾನು ಅವರಿಗೆ ಸಹಾಯ ಮಾಡುತ್ತೇನೆ. (I am an Electrical Engineer turned professional storyteller. Sir, I grew up listening to stories from my grandfather. I work with senior citizens. In my special project called `Roots' where I help them document their life stories for their families.)

ಪ್ರಧಾನ ಮಂತ್ರಿ:- ಲಾವಣ್ಯಾ ಅವರಿಗೆ, ನಿಮಗೆ ಅಭಿನಂದನೆಗಳು. ನೀವು ಹೇಳಿದ ಹಾಗೆ ನಾನು ಕೂಡಾ ಒಮ್ಮೆ `ಮನದ ಮಾತಿನಲ್ಲಿ' ಎಲ್ಲರಿಗೂ ಹೇಳಿದ್ದೆ, ನೀವುಗಳು ಕೂಡಾ ಕುಟುಂಬದಲ್ಲಿ ನಿಮ್ಮ ಅಜ್ಜ–ಅಜ್ಜಿಯರಿದ್ದರೆ, ಅವರುಗಳಿಂದ ಅವರ ಬಾಲ್ಯದ ಕತೆಗಳನ್ನು ಹೇಳಿರೆಂದು ಕೇಳಿ ಮತ್ತು ಅವುಗಳನ್ನು ರೆಕಾರ್ಡ್ ಮಾಡಿಕೊಳ್ಳಿ, ಮುಂದೆ ಬಹಳ ಉಪಯೋಗಕ್ಕೆ ಬರುತ್ತದೆ ಎಂದು. ನೀವೆಲ್ಲರೂ ನಿಮ್ಮ ಮತ್ತು ನಿಮ್ಮ ಕಲೆ, ನಿಮ್ಮ ಸಂವಹನ ಕೌಶಲ್ಯ (communication skill) ಮತ್ತು ಕಡಿಮೆ ಶಬ್ದಗಳಲ್ಲಿ ಬಹಳ ಉತ್ತಮ ರೀತಿಯಲ್ಲಿ ನಿಮ್ಮ ನಿಮ್ಮ ಪರಿಚಯ ಮಾಡಿಕೊಂಡಿರಿ ಇದಕ್ಕಾಗಿ ಕೂಡಾ ನಾನು ನಿಮಗೆ ಅಭಿನಂದನೆ ಹೇಳುತ್ತೇನೆ.

ನನ್ನ ನಲ್ಮೆಯ ದೇಶವಾಸಿಗಳೇ, ಬನ್ನಿ! ಈಗ ಕಥಾಪ್ರಪಂಚದಿಂದ ಮುಂದಕ್ಕೆ ಸಪ್ತಸಮುದ್ರಗಳ ಆಚೆ ಪಯಣಿಸೋಣ. ಈ ಧ್ವನಿಯನ್ನು ಕೇಳಿರಿ.

“ನಮಸ್ಕಾರ, ನನ್ನ ಸಹೋದರ, ಸಹೋದರಿಯರೇ! ನನ್ನ ಹೆಸರು ಸೇದೂ ದೆಂಬೇಲೆ. ನಾನು ಪಶ್ಚಿಮ ಆಫ್ರಿಕಾದ `ಮಾಲಿ’ ದೇಶದವನು. ನನಗೆ ಫೆಬ್ರವರಿ ತಿಂಗಳಿನಲ್ಲಿ ಭಾರತದ ಬೃಹತ್ ಧಾರ್ಮಿಕ ಉತ್ಸವ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಅವಕಾಶ ಲಭ್ಯವಾಯಿತು. ನನಗಂತೂ ಇದು ಅತಿ ಹೆಮ್ಮೆ ತರುವ ವಿಷಯ. ನನಗೆ ಕುಂಭಮೇಳದಲ್ಲಿ ಪಾಲ್ಗೊಂಡು ತುಂಬಾ ಒಳ್ಳೆಯ ಅನುಭವಗಳಾದವುಹಾಗೂ ಭಾರತೀಯ ಸಂಸ್ಕøತಿಯನ್ನು ನೋಡಿ ಬಹಳಷ್ಟು ಕಲಿಯಲು ಸಾಧ್ಯವಾಯಿತು. ಭಾರತದ ಬಗ್ಗೆ ಇನ್ನೂ ಹೆಚ್ಚಿನ ಅರಿವು ದೊರೆಯಲು ಮತ್ತೊಮ್ಮೆ ನಮಗೆ ಭಾರತಕ್ಕೆ ಭೇಟಿ ಕೊಡುವ ಅವಕಾಶ ಕಲ್ಪಿಸಿ ಎಂದು ವಿನಂತಿಸುತ್ತೇನೆ. ನಮಸ್ಕಾರ. ’’

ಪ್ರಧಾನಮಂತ್ರಿ: ಇದು ಸ್ವಾರಸ್ಯಕರವಾಗಿತ್ತಲ್ಲವೇ! ಇದು ಮಾಲಿ ದೇಶದ ಸೇದೂ ದೆಂಬೇಲೆಯ ವೃತ್ತಾಂತ. ಮಾಲಿಯು, ಭಾರತದಿಂದ ದೂರವಿರುವ ಪಶ್ಚಿಮ ಆಫ್ರಿಕಾದ ಒಂದು ದೊಡ್ಡ ಮತ್ತು ಬರೀ ಭೂಪ್ರದೇಶದಿಂದ ಸುತ್ತುವರಿದ ಒಂದು ದೇಶ. ಸೇದೂ ದೆಂಬೇಲೆ, ಮಾಲಿ ದೇಶದ ಕಿಟಾ ನಗರದ ಒಂದು ಪಬ್ಲಿಕ್ ಸ್ಕೂಲ್‍ನ ಶಿಕ್ಷಕ. ಮಕ್ಕಳಿಗೆ ಅವರು ಇಂಗ್ಲೀಷ್ ಭಾಷೆ, ಸಂಗೀತ ಮತ್ತು ಚಿತ್ರಕಲೆ ಹಾಗೂ ಪೈಂಟಿಂಗ್ ವಿಷಯಗಳನ್ನು ಹೇಳಿಕೊಡುತ್ತಾರೆ. ಆದರೆ ಇದರೊಂದಿಗೆ ಅವರ ಇನ್ನೊಂದು ಮುಖವೂ ಇದೆ. ಜನರು ಅವರನ್ನು ಮಾಲಿಯ `ಹಿಂದೂಸ್ತಾನಿ ಬಾಬು’ ಎಂದು ಕರೆಯುತ್ತಾರೆ. ಹಾಗೂ ಹೀಗೆ ಕರೆಸಿಕೊಳ್ಳುವುದರಿಂದಅವರಿಗೆ ಹೆಮ್ಮೆಯ ಅನುಭವವಾಗುತ್ತದೆ. ಪ್ರತಿ ಭಾನುವಾರ ಮಧ್ಯಾಹ್ನದ ನಂತರ ಮಾಲಿ ದೇಶದಲ್ಲಿ ಒಂದು ಗಂಟೆಯ ರೇಡಿಯೋ ಕಾರ್ಯಕ್ರಮ ಪ್ರಸ್ತುತಪಡಿಸುತ್ತಾರೆ. ಈ ಕಾರ್ಯಕ್ರಮದ ಹೆಸರು `ಇಂಡಿಯನ್ ಫ್ರೀಕೆನ್ಸಿ ಆನ್ ಬಾಲಿವುಡ್ ಸಾಂಗ್ಸ್’ ಎಂದು. ಇದನ್ನು ಕಳೆದ 23 ವರ್ಷಗಳಿಂದ ಪ್ರಸಾರ ಮಾಡುತ್ತಾ ಬಂದಿರುತ್ತಾರೆ! ಈ ಕಾರ್ಯಕ್ರಮದಲ್ಲಿ ಅವರು ಫ್ರೆಂಚ್ ಭಾಷೆಯ ಜೊತೆಗೆ ಮಾಲಿಯ ಸ್ಥಳೀಯ ಭಾಷೆ `ಬಂಬಾರಾ’ದಲ್ಲಿಯೂ ಸಹ ತಮ್ಮ ವಿವರಣೆಯನ್ನು ಅದರಲ್ಲೂ ಅತ್ಯಂತ ನಾಟಕೀಯ ರೀತಿಯಲ್ಲಿ ನೀಡುತ್ತಾರೆ. ಭಾರತದ ಬಗ್ಗೆ ಅವರ ಮನದಲ್ಲಿ ಅಗಾಧ ಪ್ರೇಮ! ಭಾರತದೊಂದಿಗೆ ಅವರ ಗಾಢಸಂಬಂಧ ಏರ್ಪಡಲು ಒಂದು ಕಾರಣವೂ ಇದೆ. ಅದೇನೆಂದರೆ ಸೇದೂಜಿ ಅವರ ಜನ್ಮವೂ 15ನೇ ಆಗಸ್ಟ್‍ನಲ್ಲಿ ಆಯಿತು. ಸೇದೂಜೀ ಅವರು ಎರಡು ಗಂಟೆ ಅವಧಿಯ ಮತ್ತೊಂದು ಕಾರ್ಯಕ್ರಮವನ್ನು ಪ್ರತಿ ಭಾನುವಾರ ರಾತ್ರಿ 9 ಗಂಟೆಯಿಂದ ಆರಂಭಿಸಿದ್ದಾರೆ. ಇದರಲ್ಲಿ ಅವರು ಒಂದು ಬಾಲಿವುಡ್ ಚಲನಚಿತ್ರದ ಇಡೀ ಕಥೆಯನ್ನು ಫ್ರೆಂಚ್ ಮತ್ತು ಬಂಬಾರಾ ಭಾಷೆಯಲ್ಲಿ ಶ್ರೋತೃಗಳಿಗೆ ಕೇಳಿಸುತ್ತಾರೆ. ಒಮ್ಮೊಮ್ಮೆ ಕೆಲವು ಭಾವನಾತ್ಮಕ ದೃಶ್ಯಗಳ ಕುರಿತು ಹೇಳುವ ಸಮಯದಲ್ಲಿ, ಶ್ರೋತೃಗಳೊಂದಿಗೆ ಅವರೂ ಭಾವಪರವಶರಾಗಿ ಅತ್ತಿದ್ದೂ ಉಂಟು. ಸೇದೂಜೀ ಅವರ ತಂದೆಯವರೂ ಕೂಡ ಭಾರತೀಯ ಸಂಸ್ಕøತಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿರುವವರೇ. ಅವರ ತಂದೆ ಸಿನಿಮಾ ಹಾಗೂ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಭಾರತೀಯ ಚಲನಚಿತ್ರಗಳನ್ನೂ ಪ್ರದರ್ಶಿಸಲಾಗುತ್ತಿತ್ತು. ಈ 15ನೇ ಆಗಸ್ಟ್‍ರಂದು ಅವರು ಒಂದು ವೀಡಿಯೋ ಮೂಲಕ ಭಾರತೀಯರಿಗೆ ಸ್ವಾತಂತ್ರ್ಯ ದಿನಾಚರಣೆಯ ಶುಭಹಾರೈಕೆಯನ್ನು ಹಿಂದಿಯಲ್ಲಿ ತಿಳಿಸಿದ್ದರು. ಇಂದು ಅವರ ಮಕ್ಕಳು ಭಾರತದ ರಾಷ್ಟ್ರಗೀತೆಯನ್ನು ಬಹಳ ಸಲೀಸಾಗಿ ಹಾಡುತ್ತಾರೆ. ನೀವು ಈ ಎರಡೂ ವೀಡಿಯೋಗಳನ್ನು ತಪ್ಪದೆ ನೋಡಿ. ಅವರ ಭಾರತಪ್ರೇಮದ ಅನುಭವವನ್ನು ಸ್ವತಃ ಕಂಡುಕೊಳ್ಳಿ.

ಸೇದೂ ಅವರು ನಿಯೋಗವೊಂದರ ಭಾಗವಾಗಿ ಕುಂಭಮೇಳದಲ್ಲಿ ಪಾಲ್ಗೊಂಡಿದ್ದಾಗ, ನಾನು ಅವರನ್ನು ಭೇಟಿ ಮಾಡಿದೆ. ಭಾರತ ಕುರಿತ ಈ ಬಗೆಯ ಅವರ ಅಭಿಮಾನ, ಸ್ನೇಹ ಮತ್ತು ಪ್ರೀತಿ ನಿಜಕ್ಕೂ ನಮಗೆಲ್ಲಾ ಹೆಮ್ಮೆ ತರುವ ವಿಷಯ.

ನನ್ನ ಪ್ರೀತಿಯ ದೇಶವಾಸಿಗಳೇ,

ನಮ್ಮಲ್ಲಿ ಒಂದು ನಾಣ್ಣುಡಿಯಿದೆ. `ಯಾರು ಭೂಮಿಯ ಜೊತೆ ಗಾಢಸಂಬಂಧ ಹೊಂದಿರುತ್ತಾರೋ, ಅವರು ದೊಡ್ಡ ದೊಡ್ಡ ಚಂಡಮಾರುತದ ಕಾಲದಲ್ಲೂ ಅಷ್ಟೇ ನಿಶ್ಚಲರಾಗಿರುತ್ತಾರೆ ಎಂದು. ಕೊರೊನಾಸಂಕಷ್ಟದ ಈ ಸಮಯದಲ್ಲಿ ನಮ್ಮ ಕೃಷಿ ಕ್ಷೇತ್ರ, ನಮ್ಮ ಕೃಷಿಕರು ಇದಕ್ಕೆ ಜೀವಂತ ಉದಾಹರಣೆ. ಸಂಕಷ್ಟದ ಈ ಕಾಲದಲ್ಲೂ ಸಹ ನಮ್ಮ ದೇಶದಲ್ಲಿ ಕೃಷಿಕ್ಷೇತ್ರ ಮತ್ತೆ ತನ್ನ ಶಕ್ತಿಯನ್ನು ಪ್ರದರ್ಶಿಸಿದೆ. ಬಾಂಧವರೇ, ದೇಶದ ಕೃಷಿಕ್ಷೇತ್ರ, ನಮ್ಮ ರೈತರು, ನಮ್ಮ ಹಳ್ಳಿಗಳು ಸ್ವಾವಲಂಬಿ ಭಾರತದ ಆಧಾರವಾಗಿದೆ.

ಕಳೆದ ಕೆಲಸಮಯದಲ್ಲಿ ಈ ಕ್ಷೇತ್ರಗಳು ತಮ್ಮನ್ನು ತಾವು ಅನೇಕ ಬಂಧನಗಳಿಂದ ಮುಕ್ತವಾಗಿಸಿಕೊಂಡು ಸ್ವತಂತ್ರವಾಗಿದೆ. ಅನೇಕ ಮಿಥ್ಯೆಗಳನ್ನು ಮುರಿಯುವ ಪ್ರಯತ್ನಗಳನ್ನು ಮಾಡಿದೆ. ನನಗೆ ಕೆಲವು ರೈತರ ಪತ್ರಗಳು ತಲುಪಿವೆ. ನಾನು ಹಲವಾರು ರೈತರ ಸಂಘಟನೆಗಳೊಂದಿಗೆ ಸಂವಾದ ಮಾಡಿರುತ್ತೇನೆ. ಆಗ ಅವರು, ಹೇಗೆ ಕೃಷಿಯಲ್ಲಿ ಹೊಸ ಹೊಸ ಆಯಾಮಗಳನ್ನು ಅಳವಡಿಸಲಾಗುತ್ತಿದೆ? ಹೇಗೆ ಬೇಸಾಯದಲ್ಲಿ ಪರಿವರ್ತನೆಗಳು ಆಗುತ್ತಿವೆ ಎಂದು ಹೇಳುತ್ತಾರೆ. ನಾನು ಅವರಿಂದ ಕೇಳಿದ್ದು ಹಾಗೂ ಅನ್ಯರಿಂದ ಕೇಳಿದ್ದು; ಹಾಗೂ ನನಗೆ ಅನಿಸಿದ್ದನ್ನು ನಾನು ನಿಮಗೆ ಇಂದಿನ ಮನ್–ಕಿ–ಬಾತ್‍ನಲ್ಲಿ ನಿಮ್ಮೊಂದಿಗೆ ರೈತರ ಬಗೆಗಿನ ಕೆಲವು ಮಾತುಗಳನ್ನು ಹಂಚಿಕೊಳ್ಳೋಣ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಮೂಡಿದೆ.

ಹರಿಯಾಣದ ಸೋನಿಪತ್ ಜಿಲ್ಲೆಯಲ್ಲಿ ನಮ್ಮ ಓರ್ವ ರೈತಬಾಂಧವರಿದ್ದಾರೆ. ಅವರ ಹೆಸರು ಕವರ್ ಚೌಹಾನ್! ಒಂದು ಸಮಯದಲ್ಲಿ ಹಣ್ಣು, ತರಕಾರಿಗಳನ್ನು ಮಂಡಿಯಲ್ಲಿ ಮಾರಾಟ ಮಾಡಲು ಬಹಳ ಕಷ್ಟವಾಗುತ್ತಿತ್ತು ಎಂಬುದನ್ನು ಅವರು ತಿಳಿಸಿದ್ದಾರೆ. ಆದರೆ ಅವರು ಮಂಡಿಯ ಹೊರಗೆ ತಮ್ಮ ಹಣ್ಣು, ತರಕಾರಿಗಳನ್ನು ಮಾರಿದರೆ, ಅವರ ಹಣ್ಣು–ತರಕಾರಿಗಳು ಹಾಗೂ ಗಾಡಿಯೂ ಜಪ್ತಿಯಾಗುತ್ತಿತ್ತು. ಆದರೆ 2014ರಲ್ಲಿ ಹಣ್ಣು–ತರಕಾರಿಯನ್ನು ಎಪಿಎಂಸಿ ಕಾನೂನಿನಿಂದ ಪ್ರತ್ಯೇಕ ಮಾಡಲಾಯಿತು. ಇದರಿಂದ ಅವರಿಗೂ, ಅವರ ಸುತ್ತಮುತ್ತಲ ಇತರ ರೈತರಿಗೂ ಹೆಚ್ಚಿನ ಪ್ರಯೋಜನವಾಯಿತು. 4 ವರ್ಷಗಳ ಹಿಂದೆ ಅವರು ತಮ್ಮ ಹಳ್ಳಿಯ ಇನ್ನಿತರ ರೈತರ ಜೊತೆ ಸೇರಿ ಒಂದು `ರೈತ ಉತ್ಪಾದಕರ ಒಕ್ಕೂಟ’ದ ಸ್ಥಾಪನೆಯನ್ನು ಮಾಡಿರುತ್ತಾರೆ. ಇಂದು ಹಳ್ಳಿಯ ರೈತನೂ ಸಹ ಸ್ವೀಟ್‍ಕಾರ್ನ್ ಮತ್ತು ಬೇಬಿಕಾರ್ನ್ ಕೃಷಿ ಮಾಡುತ್ತಾರೆ. ಅವರ ಉತ್ಪಾದನೆ ಇಂದು ದೆಹಲಿಯ ಅeóÁದ್‍ಪುರ ಮಂಡಿ ಹಾಗೂ ದೊಡ್ಡ ರೀಟೈಲ್ ಜಾಲ ಹಾಗೂ ಪಂಚತಾರಾ ಹೋಟೆಲುಗಳಿಗೂ ಸಹ ನೇರ ಪೂರೈಕೆ ಆಗುತ್ತಿದೆ. ಇಂದು ಹಳ್ಳಿಯ ರೈತರು ಸ್ವೀಟ್‍ಕಾರ್ನ್ ಮತ್ತು ಬೇಬಿಕಾರ್ನ್ ಕೃಷಿಯಿಂದ ಪ್ರತಿ ಎಕರೆಯೊಂದಕ್ಕೆ ಎರಡೂವರೆ ಲಕ್ಷದಿಂದ 3 ಲಕ್ಷ ಹಣವನ್ನು ಗಳಿಸುವಂತಾಗಿದೆ. ಅಷ್ಟೇ ಅಲ್ಲದೆ, ಇದೇ ಹಳ್ಳಿಯ 60ಕ್ಕೂ ಹೆಚ್ಚು ರೈತರು `ನೆಟ್‍ಹೌಸ್’ ಹಾಗೂ `ಪಾಲಿಹೌಸ್’ಗಳನ್ನು ಮಾಡಿಕೊಂಡು ಟೊಮೊಟೊ, ಸೌತೆಕಾಯಿ, ದೊಣ್ಣೆ ಮೆಣಸಿನಕಾಯಿಗಳ ವಿವಿಧ ಪ್ರಬೇಧಗಳನ್ನು ಬೆಳೆಯುತ್ತಿದ್ದಾರೆ. ಹಾಗೂ ಪ್ರತಿ ವರ್ಷ ಎಕರೆಯೊಂದಕ್ಕೆ 10 ರಿಂದ 12 ಲಕ್ಷ ರೂ.ಗಳ ಆದಾಯವನ್ನು ಪಡೆಯುತ್ತಿದ್ದಾರೆ. ಈ ರೈತರಲ್ಲಿನ ವಿಭಿನ್ನತೆ ಏನು ಗೊತ್ತಾಯಿತೆ? ಈ ರೈತನಿಗೆ ಉತ್ಪಾದನೆಗಳಾದ ಹಣ್ಣು, ತರಕಾರಿಗಳನ್ನು ಯಾರಿಗೆ ಬೇಕಾದರೂ, ಎಲ್ಲಿಗೆ ಬೇಕಾದರೂ ಮಾರಾಟ ಮಾಡುವ ಶಕ್ತಿ ಇದೆ. ಈ ಶಕ್ತಿಯೇಅವರ ಈ ಪ್ರಗತಿಗೆ ಆಧಾರ. ಅವರ ಇದೇ ಸಾಮಥ್ರ್ಯ ಇಂದು ದೇಶದ ಇತರ ರೈತರಿಗೂಲಭ್ಯವಾಗಿದೆ. ಕೇವಲ ಹಣ್ಣು–ತರಕಾರಿಯನ್ನಷ್ಟೇ ಅಲ್ಲ; ಅವರು ತಮ್ಮ ಹೊಲಗಳಲ್ಲಿ ವಿವಿಧ ಧಾನ್ಯ, ಸಾಸಿವೆ, ಗೋಧಿ, ಕಬ್ಬು ಇತ್ಯಾದಿ ಏನೆಲ್ಲಾ ಬೆಳೆಯುತ್ತಿದ್ದಾರೋ, ಅವೆಲ್ಲವನ್ನೂ ತಮ್ಮ ಇಚ್ಛಾನುಸಾರ, ಎಲ್ಲಿ ಹೆಚ್ಚಿನ ಬೆಲೆ ದೊರಕುವುದೋ ಅಲ್ಲಿ ಮಾರಾಟ ಮಾಡಲು ಅವರಿಗೆ ಸ್ವಾತಂತ್ರ್ಯ ಸಿಕ್ಕಿದೆ.

ಆತ್ಮೀಯರೇ, 3-4 ವರ್ಷಗಳ ಹಿಂದೆಯೇ, ಮಹಾರಾಷ್ಟ್ರದಲ್ಲಿ ಹಣ್ಣು ಹಾಗೂ ತರಕಾರಿಗಳನ್ನು ಎಪಿಎಂಸಿ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು. ಈ ಬದಲಾವಣೆಯಿಂದ ಹೇಗೆ ಮಹಾರಾಷ್ಟ್ರದ ಹಣ್ಣು ಮತ್ತು ತರಕಾರಿ ಬೆಳೆಗಾರರ ಸ್ಥಿತಿ ಬದಲಾಯಿತು ಎಂಬುದಕ್ಕೆ ಉದಾಹರಣೆ: `ಶ್ರೀ ಸ್ವಾಮಿ ಸಮರ್ಥ್ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್’. ಇದು ರೈತರ ಒಕ್ಕೂಟ. ಪುಣೆ ಮತ್ತು ಮುಂಬಯಿಯಲ್ಲಿ ರೈತರೇ ವಾರದ ಸಂತೆಯನ್ನು ಖುದ್ದಾಗಿ ನಡೆಸುತ್ತಿದ್ದಾರೆ. ಈ ಮಾರುಕಟ್ಟೆಗೆ ಸರಿಸುಮಾರು 70 ಹಳ್ಳಿಗಳ 4500 ರೈತರ ಉತ್ಪಾದನೆ ನೇರವಾಗಿ ಮಾರಾಟ ಮಾಡಲಾಗುತ್ತದೆ. ಯಾವ ಮಧ್ಯವರ್ತಿಯೂ ಇಲ್ಲದೆ ಗ್ರಾಮೀಣ ಯುವಕರು ನೇರವಾಗಿ ಈಮಾರುಕಟ್ಟೆಯಲ್ಲಿ, ಕೃಷಿ ಮತ್ತು ಮಾರಾಟದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇದರ ನೇರ ಲಾಭ ರೈತರಿಗೆ ಸೇರುತ್ತದೆ. ಹಾಗೂ ಗ್ರಾಮೀಣ ಯುವಕರಿಗೆ ಉದ್ಯೋಗಾವಕಾಶ ಉಂಟಾಗುತ್ತದೆ.

ಮತ್ತೊಂದು ಉದಾಹರಣೆ, ತಮಿಳುನಾಡಿನ ಥೇಣಿ ಜಿಲ್ಲೆಯದು. ಇಲ್ಲಿ ತಮಿಳುನಾಡು ಬಾಳೆಹಣ್ಣು ಉತ್ಪಾದಕರ ಕಂಪನಿ ಇದೆ. ಇದು ಹೇಳಿಕೊಳ್ಳಲು ರೈತ ಉತ್ಪಾದಕರ ಕಂಪನಿ, ವಾಸ್ತವದಲ್ಲಿ ರೈತರೆಲ್ಲರೂ ಸೇರಿ ರಚಿಸಿರುವ ಒಂದು ಸಂಸ್ಥೆ. ಒಳ್ಳೆಯ ಹೊಂದಾಣಿಕೆ ಇರುವ ವ್ಯವಸ್ಥೆ ಇದೆ. ಇದೂ ಸಹ 5-6 ವರ್ಷಗಳ ಹಿಂದೆ ಸ್ಥಾಪನೆವಾದದ್ದು! ಈ ರೈತರ ಒಕ್ಕೂಟವು, ಲಾಕ್‍ಡೌನ್ ಸಮಯದಲ್ಲಿ ಸುತ್ತಮುತ್ತಲ ಹಳ್ಳಿಗಳಿಂದ ನೂರಾರು ಮೆಟ್ರಿಕ್ ಟನ್ ತರಕಾರಿ, ಹಣ್ಣು ಹಾಗೂ ಬಾಳೆ ಉತ್ಪನ್ನಗಳನ್ನು ಖರೀದಿಸಿತು. ಮತ್ತು ಚೆನ್ನೈ ನಗರದಲ್ಲಿ `ತರಕಾರಿಗಳ ಕೊಂಬೋ ಕಿಟ್’ ನೀಡಿತು. ಇದರಿಂದ ಎಷ್ಟೊಂದು ನವಯುವಕರಿಗೆ ಉದ್ಯೋಗ ಲಭಿಸಿತು, ಯೋಚಿಸಿ! ಮತ್ತು ಸ್ವಾರಸ್ಯವೆಂದರೆ, ಮಧ್ಯವರ್ತಿಗಳಿಲ್ಲದ ಕಾರಣ, ರೈತರಿಗೂ ಹೆಚ್ಚಿನ ಲಾಭ ದೊರಕಿತು. ಬಳಕೆದಾರನಿಗೂ ಲಾಭ ಲಭ್ಯವಾಯಿತು.

ಇದರಂತೆಯೇ, ಇನ್ನೊಂದು ರೈತರ ಒಕ್ಕೂಟ ಲಕ್ನೋದಲ್ಲಿದೆ. ಅವರು `ಇರಾದಾ ಫಾರ್ಮರ್ಸ್ ಪ್ಯೊಡ್ಯೂಸರ್ಸ್’ ಎಂದು ಹೆಸರಿಟ್ಟಿದ್ದಾರೆ. ಇವರೂ ಕೂಡ ಲಾಕ್‍ಡೌನ್ ಸಮಯದಲ್ಲಿ ರೈತರ ಹೊಲದಿಂದ ನೇರವಾಗಿ ಹಣ್ಣು ಮತ್ತು ತರಕಾರಿಗಳನ್ನು ಖರೀದಿಸಿದರು. ಹಾಗೂ ನೇರವಾಗಿ ಲಕ್ನೋದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿದರು. ಮಧ್ಯವರ್ತಿಗಳಿಂದ ಮುಕ್ತರಾದರು. ಹಾಗೂ ತಮ್ಮ ಇಚ್ಛಾನುಸಾರ ಬೆಲೆಯನ್ನು ನಿಗದಿಪಡಿಸಿ ಯಶಸ್ವಿಯಾದರು.

ಬಂಧುಗಳೇ, ಗುಜರಾತ್‍ನಲ್ಲಿ ಬನಾಸಕಾಂಠಾದ ರಾಮಪುರ ಹಳ್ಳಿಯಲ್ಲಿ ರೈತ ಇಸ್ಮಾಯಿಲ್‍ಭಾಯಿ ಇದ್ದಾರೆ. ಅವರ ಕಥೆಯೂ ರೋಚಕವಾಗಿದೆ. ಇಸ್ಮಾಯಿಲ್ ಭಾಯಿಯವರು ಕೃಷಿಕರಾಗಲು ಬಯಸಿದ್ದರು. ಆದರೆ, ಸಾಮಾನ್ಯವಾಗಿ ಹೆಚ್ಚಿನ ಜನರು ಯೋಚಿಸುವಂತೆ, ಅವರ ಪರಿವಾರದವರಿಗೆ ಇಸ್ಮಾಯಿಲ್ ಅವರ ಈ ಯೋಜನೆ ಇಷ್ಟವಾಗಿರಲಿಲ್ಲ. ಇಸ್ಮಾಯಿಲ್ ಅವರ ತಂದೆಯೂ ಕೃಷಿಕರಾಗಿದ್ದರು. ಆದರೆ ಅದರಲ್ಲಿ ಅವರು ನಷ್ಟ ಅನುಭವಿಸಿದ್ದರು. ಹೀಗಾಗಿ ತಂದೆಯೂ ಕೂಡ ಕೃಷಿ ಬೇಡ ಎಂದಿದ್ದರು. ಇಡೀ ಪರಿವಾರದ ವಿರೋಧದ ನಡುವೆಯೂ ಕೃಷಿಕರಾಗಲು ಇಸ್ಮಾಯಿಲ್ ದೃಢಸಂಕಲ್ಪ ಮಾಡಿದರು. “ಕೃಷಿ ಇಂದು ನಷ್ಟದ ಕೆಲಸವಾಗಿದೆ. ಆದರೂ ಆ ಮನೋಭಾವ ಹಾಗೂ ವಸ್ತುಸ್ಥಿತಿ ಎರಡನ್ನೂ ಬದಲಾಯಿಸಿ, ಆ ಮೂಲಕ ಕೃಷಿಯ ದಿಕ್ಕನ್ನೇ ಪರಿವರ್ತಿಸುತ್ತೇನೆ’’ ಎಂದು ಇಸ್ಮಾಯಿಲ್‍ಭಾಯಿ ದೀಕ್ಷೆ ತೊಟ್ಟರು. ಅವರು ಕ್ರಿಯಾಶೀಲ ನೆಲೆಯಲ್ಲಿ ಆವಿಷ್ಕಾರ ಮನೋಭಾವದಿಂದ ಹೊಸ ವಿಧಾನದಿಂದ ಕೃಷಿಯನ್ನು ಆರಂಭಿಸಿದರು. ಹನಿನೀರಾವರಿ ಯನ್ನು ಜಮೀನಿಗೆ ಅಳವಡಿಸಿ ಆಲೂಗೆಡ್ಡೆ ಕೃಷಿ ಮಾಡಿದರು. ಇಂದು ಅವರು ಬೆಳೆಯುವ ಆಲೂಗೆಡ್ಡೆ ಅತ್ಯುತ್ತಮ ಗುಣಮಟ್ಟದ ಹೆಗ್ಗುರುತಾಗಿದೆ. ಇಸ್ಲಾಯಿಲ್ ಭಾಯಿ, ಉತ್ಕøಷ್ಟ ದರ್ಜೆಯ ಆಲೂಗೆಡ್ಡೆಯನ್ನು ಬೆಳೆದು ನೇರವಾಗಿ ದೊಡ್ಡ ದೊಡ್ಡ ಕಂಪನಿಗಳಿಗೆ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳ ಲವಲೇಶವೂ ಮಧ್ಯಪ್ರವೇಶವಿಲ್ಲದೆ! ಅದರ ಪರಿಣಾಮ, ಹೆಚ್ಚಿನ ಆದಾಯ ಲಭ್ಯವಾಗುತ್ತಿದೆ. ಅಲ್ಲದೆ, ಇಸ್ಮಾಯಿಲ್ ತಮ್ಮ ತಂದೆಯ ಎಲ್ಲಾ ಸಾಲಗಳನ್ನೂ ತೀರಿಸಿದ್ದಾರೆ ಎಂಬುದು ಅತ್ಯಂತ ಗಮನಾರ್ಹವಾದ ಅಂಶ. ಸ್ವಾರಸ್ಯಕರ ವಿಷಯವೆಂದರೆ, ಇಸ್ಮಾಯಿಲ್ ಭಾಯಿ, ನೆರೆಯ ಇನ್ನಿತರ ಹಲವಾರು ರೈತರಿಗೂ ನೆರವಾಗುತ್ತಿದ್ದಾರೆ. ಅವರೆಲ್ಲರ ಜೀವನವನ್ನೂ ಬದಲಾಯಿಸುತ್ತಿದ್ದಾರೆ.

ಬಂಧುಗಳೇ, ಇಂದಿನ ದಿನಮಾನಗಳಲ್ಲಿ ನಾವು ಕೃಷಿಗೆ ಎಷ್ಟು ಅತ್ಯಾಧುನಿಕ ಸ್ಪರ್ಶ ನೀಡುತ್ತೇವೆಯೋ, ಅದು ಅಷ್ಟು ಪ್ರಗತಿ ಕಾಣುತ್ತೇವೆ. ಅದರಲ್ಲಿ ನವವೀನ ವಿಧಿವಿಧಾನಗಳು ಬರುತ್ತವೆ. ಹೊಸ ಹೊಸ ಆವಿಷ್ಕಾರಗಳು ಸೇರ್ಪಡೆಗೊಳ್ಳಲಿದೆ. ಮಣಿಪುರದಲ್ಲಿ ವಾಸವಾಗಿರುವ ಬಿಜಯಶಾಂತಿ, ಹೊಸ ಆವಿಷ್ಕಾರಗಳನ್ನು ಅಳವಡಿಸಿಕೊಂಡು ಸುದ್ದಿಯಲ್ಲಿದ್ದಾರೆ. ಅವರು ಕಮಲದ ಹೂವಿನ ನಾಳದಿಂದ ದಾರವನ್ನು ಉತ್ಪಾದಿಸುವ `ಸ್ಟಾರ್ಟ್‍ಅಪ್’ ಆರಂಭಿಸಿದ್ದಾರೆ. ಇಂದು ಅವರ ಆವಿಷ್ಕಾರದಿಂದ ಕಮಲಪುಷ್ಪದ ಕೃಷಿ ಮತ್ತು ಜವಳಿ ಕ್ಷೇತ್ರದಲ್ಲಿ ಒಂದು ಹೊಸ ಪಥವೇ ನಿರ್ಮಾಣವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ,

ನಾನು ನಿಮ್ಮನ್ನು ಸ್ವಲ್ಪ ಗತಕಾಲಕ್ಕೆ ಕರೆದುಕೊಂಡು ಹೋಗಲು ಇಚ್ಛಿಸುತ್ತೇನೆ. 101 ವರ್ಷಗಳ ಹಿಂದಿನ ವಿಚಾರ. 1919ರಲ್ಲಿ ಜಲಿಯನ್ ವಾಲಾಬಾಗ್‍ನಲ್ಲಿ ಬ್ರಿಟಿಷರು ಅಮಾಯಕರನ್ನು ಹತ್ಯೆ ಮಾಡಿದರು. ಈ ನರಮೇಧದ ನಂತರ 12 ವರ್ಷದ ಓರ್ವ ಬಾಲಕ ಆ ಘಟನೆ ನಡೆದ ಸ್ಥಳಕ್ಕೆ ಹೋದ. ಸಾಮಾನ್ಯವಾಗಿ ಹರ್ಷಚಿತ್ತದ, ಚಂಚಲ ಮನಸ್ಸಿನ ಹುಡುಗ ಅಲ್ಲಿ ಏನನ್ನು ನೋಡಿದನೋ ಅದು ಅವನ ಆಲೋಚನೆಗೆ ಮೀರಿದ್ದಾಗಿತ್ತು. ಯಾರೇ ಆದರೂ ಇಷ್ಟೊಂದು ನಿರ್ದಯಿ ಆಗಿರಲು ಹೇಗೆ ಸಾಧ್ಯ? ಎಂಬ ಯೋಚನೆಯೊಂದಿಗೆಆ ಪುಟ್ಟ ಬಾಲಕ ಸ್ತಬ್ದನಾಗಿದ್ದ. ಅವನು ಮುಗ್ಧ ಕೋಪದ ಬೆಂಕಿಯಲ್ಲಿ ಬೇಯುತ್ತಿದ್ದ. ಅದೇ ಜಲಿಯನ್ ವಾಲಾಬಾಗ್‍ನಲ್ಲಿ ಅವನು ಬ್ರಿಟಿಷ್ ಶಾಸನದ ವಿರುದ್ಧ ಹೋರಾಡುವ ಪ್ರತಿಜ್ಞೆ ಮಾಡಿದ. ನಿಮಗೆ ಗೊತ್ತಾಯಿತೇ, ನಾನು ಯಾರ ಬಗ್ಗೆ ಹೇಳುತ್ತಿದ್ದೇನೆ ಎಂದು? ಹೌದು; ನಾನು ಹುತಾತ್ಮ ವೀರಯೋಧ ಭಗತ್‍ಸಿಂಗ್ ಬಗ್ಗೆಯೇ ಹೇಳುತ್ತಿರುವುದು. ನಾಳೆ 28ನೇ ಸೆಪ್ಟೆಂಬರ್‍ದಂದು ನಾವು ವೀರಯೋಧ ಭಗತ್‍ಸಿಂಗ್ ಜಯಂತಿಯನ್ನು ಆಚರಿಸುತ್ತಿದ್ದೇವೆ. ನಾನು ಸಮಸ್ತ ದೇಶವಾಸಿಗಳೊಂದಿಗೆ ಸಾಹಸ ಮತ್ತು ಶೌರ್ಯದ ಪ್ರತಿಮೂರ್ತಿ ಹುತಾತ್ಮವೀರ ಭಗತ್‍ಸಿಂಗ್‍ಗೆ ನಮಿಸುತ್ತೇನೆ. ನಿಮಗೆ ಕಲ್ಪನೆ ಇದೆಯೇ? ಒಂದು ಸಾಮ್ರಾಜ್ಯಶಾಹಿ ಆಡಳಿತ; ಯಾವುದು ಪ್ರಪಂಚದ ಒಂದು ದೊಡ್ಡ ಭಾಗವನ್ನು ಆಳುತ್ತಿತ್ತೋ; ಯಾವುದರ ಬಗ್ಗೆ ಜನರು `ಸೂರ್ಯ ಮುಳುಗದ ಸಂಸ್ಥಾನ’ ಎಂದು ಮಾತಾಡಿಕೊಳ್ಳುತ್ತಿದ್ದಾರೋ, ಅಂತಹ ಶಕ್ತಿಶಾಲಿ ಬ್ರಿಟಿಷ್ ಸಂಸ್ಥಾನ ಒಬ್ಬ 23 ವರ್ಷದ ಯುವಕನ ಬಗ್ಗೆ ಭಯಭೀತವಾಗಿತ್ತು ಎಂದು! ಹುತಾತ್ಮ ಭಗತ್‍ಸಿಂಗ್ ಪರಾಕ್ರಮಿಯಾಗಿದ್ದರ ಜೊತೆಗೆ ವಿದ್ವಾಂಸರೂ, ಚಿಂತಕರೂ ಆಗಿದ್ದರು. ತನ್ನ ಸ್ವಂತಜೀವನದ ಬಗ್ಗೆ ಲೆಕ್ಕಿಸದೆ ಭಗತ್‍ಸಿಂಗ್ ಮತ್ತು ಅವರ ಸಹಚರರು ಎಂತಹ ಸಾಹಸ ಕಾರ್ಯಕ್ಕೆ ಆರಂಭ ಕೊಟ್ಟರೆಂದರೆ, ಅದು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ದೊಡ್ಡ ಯೋಗದಾನವಾಯಿತು. ಹುತಾತ್ಮ ಭಗತ್‍ಸಿಂಗ್‍ರ ಇನ್ನೊಂದು ಸುಂದರ ವಿಷಯವೆಂದರೆ, ಒಂದು ತಂಡವಾಗಿ ಕೆಲಸ ಮಾಡುವಲ್ಲಿ ಅವರು ಇಟ್ಟಿರುವ ನಂಬಿಕೆ. ಸಾಮೂಹಿಕ ಪ್ರಯತ್ನದಲ್ಲಿ ಇರುವ ಶಕ್ತಿಯನ್ನು ಅವರು ಮನಗಂಡಿದ್ದರು. ಲಾಲಾ ಲಜಪತ್‍ರಾಯ್ ಬಗೆಗೆ ಅವರ ಸಮರ್ಪಣಾ ಭಾವ; ಚಂದ್ರಶೇಖರ ಅಜಾದ್, ಸುಖದೇವ್, ರಾಜಗುರು ಅವರಂಥ ಕ್ರಾಂತಿಕಾರಿಗಳೊಂದಿಗಿನ ಅವರ ಒಡನಾಟ. ಅವರಿಗೆ ವ್ಯಕ್ತಿಗತ ಗೌರವ ಮುಖ್ಯವಾಗಿರಲಿಲ್ಲ. ತಾವು ಜೀವಿಸಿರುವವರೆಗೆ ತಾವು ನಂಬಿದ ಗುರಿಗಾಗಿ ಹೋರಾಡಿದರು. ಹಾಗೂ ಅದಕ್ಕಾಗಿಯೇ ತಮ್ಮ ಬಲಿದಾನವನ್ನು ದೇಶಕ್ಕೆ ಸಮರ್ಪಿಸಿದರು. “ಭಾರತವನ್ನು ನ್ಯಾಯಸಮ್ಮತವಲ್ಲದ ಬ್ರಿಟಿಷ್ ಶಾಸನಗಳಿಂದ ಮುಕ್ತಗೊಳಿಸುವುದೇ’’ ಅವರ ಗುರಿಯಾಗಿತ್ತು.

ನಾನು `ನಮೋ ಆಪ್’ನಲ್ಲಿ ಹೈದರಾಬಾದ್‍ನ ಎಸ್.ಜಿ. ಅಜಯ್ ಅವರ ಪ್ರತಿಕ್ರಿಯೆ ಓದಿದೆ. ಅಜಯ್ ಅವರು ಬರೆಯುತ್ತಾರೆ: ಇಂದಿನ ಯುವಕರು ಹೇಗೆ ಭಗತ್‍ಸಿಂಗ್‍ರಂತೆ ಆಗಬಹುದು? ಎಂದಿದ್ದಾರೆ. ನಾವು ಭಗತ್‍ಸಿಂಗ್‍ರಂತೆ ಆಗುವೆವೋ ಇಲ್ಲವೋ, ಆದರೆ ಭಗತ್‍ಸಿಂಗ್‍ರವರ ದೇಶಪ್ರೇಮ, ದೇಶಕ್ಕಾಗಿ ಏನನ್ನಾದರೂ ಮಾಡುವ ಛಲ–ಸಂಕಲ್ಪವನ್ನಂತೂ ಖಂಡಿತವಾಗಿಯೂ ನಮ್ಮೆಲ್ಲರ ಹೃದಯದಲ್ಲಿ ಹೊಂದಿರಬೇಕು. ಹುತಾತ್ಮ ಭಗತ್‍ಸಿಂಗ್‍ರಿಗೆ ಇದೇ ನಾವು ಸಲ್ಲಿಸುವ ಅತಿ ದೊಡ್ಡ ಶ್ರದ್ಧಾಂಜಲಿ ಆಗುತ್ತದೆ.

ನಾಲ್ಕು ವರ್ಷಗಳ ಹಿಂದೆ ಸರಿಸುಮಾರು ಇದೇ ಸಮಯದಲ್ಲಿ, `ಸರ್ಜಿಕಲ್ ಸ್ಟ್ರೈಕ್’ ಮೂಲಕ ನಮ್ಮ ಸಾಹಸಿ ಸೈನಿಕರ ಧೈರ್ಯ–ಸ್ಥೈರ್ಯವನ್ನು ಇಡೀ ಪ್ರಪಂಚವೇ ಕಂಡಿತು. ನಮ್ಮ ವೀರ ಸೈನಿಕರ ಒಂದೇ ಒಂದು ಗುರಿ ಹಾಗೂ ಲಕ್ಷ್ಯ, ಯಾವುದೇ ಬೆಲೆ ತೆತ್ತಾದರೂ, ಭಾರತ ಮಾತೆಯ ಗೌರವ ಮತ್ತು ಸಮ್ಮಾನ–ಸಂರಕ್ಷಣೆ ಮಾಡುವುದು. ಅವರು ತಮ್ಮ ಜೀವನದ ಬಗ್ಗೆ ಲವಲೇಶವೂ ಚಿಂತೆಮಾಡಲಿಲ್ಲ. ಅವರು ತಮ್ಮ ಕರ್ತವ್ಯನಿಷ್ಠೆಯ ಲಕ್ಷ್ಯದತ್ತ ದೃಷ್ಟಿನೆಟ್ಟು ಮುನ್ನಡೆದಿದ್ದರು. ಅವರು ಹೇಗೆ ಜಯಶೀಲರಾದರು ಎಂಬುದನ್ನು ನಾವು ಕಣ್ಣಾರೆ ನೋಡಿದ್ದೇವೆ. ಭಾರತ ಮಾತೆಯ ಗೌರವವನ್ನು ಅವರು ಇಮ್ಮಡಿಸಿದರು.

ನನ್ನ ಪ್ರೀತಿಯ ದೇಶವಾಸಿಗಳೇ, ಮುಂಬರುವ ದಿನಗಳಲ್ಲಿ ನಾವು ಮಹಾನ್ ಚೇತನಗಳ ಸ್ಮರಣೆಯನ್ನು ಮಾಡಲಿದ್ದೇವೆ. ಭಾರತ ನಿರ್ಮಾಣದಲ್ಲಿ ಅಂತಹ ಮಹಾನ್ ವ್ಯಕ್ತಿಗಳ ಯೋಗದಾನವನ್ನು ನಾವು ಸ್ಮರಿಸಲಿದ್ದೇವೆ. 2ನೇ ಅಕ್ಟೋಬರ್, ನಮ್ಮೆಲ್ಲರಿಗೆ ಪವಿತ್ರ ಮತ್ತು ಪ್ರೇರಣದಾಯಕ ದಿವಸವಾಗಿದೆ. ಆ ದಿನ ಭಾರತ ಮಾತೆಯ ಇಬ್ಬರು ಸುಪುತ್ರರಾದ ಮಹಾತ್ಮಾ ಗಾಂಧಿ ಮತ್ತು ಲಾಲ್‍ಬಹದ್ದೂರ್ ಶಾಸ್ತ್ರಿಯವರ ಸ್ಮರಣೆ ಮಾಡುವ ದಿನವಾಗಿದೆ.

ಪೂಜ್ಯ ಬಾಪು ಅವರ ವಿಚಾರ ಮತ್ತು ಆದರ್ಶಗಳು ಮೊದಲಿಗಿಂತಲೂ ಇಂದು ಅತ್ಯಂತ ಪ್ರಸ್ತುತವಾಗಿದೆ. ಮಹಾತ್ಮಾ ಗಾಂಧಿಯವರ ಆರ್ಥಿಕ ಚಿಂತನೆಯನ್ನು ಅರ್ಥ ಮಾಡಿಕೊಂಡು, ಅದರ ಮೌಲ್ಯವನ್ನು ಅರ್ಥಮಾಡಿಕೊಂಡು ಆ ಪ್ರೇರಣೆಯ ಪಥದಲ್ಲೇ ಮುನ್ನಡೆದಿದ್ದರೆ ಇಂದು ಭಾರತದ `ಆತ್ಮನಿರ್ಭರ’ ಯೋಜನೆಯ ಅವಶ್ಯಕತೆಯೇ ಇರುತ್ತಿರಲಿಲ್ಲ. ಗಾಂಧಿಯವರು, ಆರ್ಥಿಕ ಚಿಂತನೆಯಲ್ಲಿ ಭಾರತದ ನರನಾಡಿಗಳ ಅರಿವಿತ್ತು. ಭಾರತದ ಕಂಪಿತ್ತು. ಪೂಜ್ಯ ಬಾಪು ಅವರ ಜೀವನವು, ಬಡವರಲ್ಲಿ ಬಡವರಾದವರ ಒಳಿತು, ಏಳ್ಗೆ ಹಾಗೂ ಉನ್ನತಿಗೆ ನಮ್ಮ ಕಾರ್ಯ ನಿಶ್ಚಿತವಾಗಿರಬೇಕು ಎಂಬುದನ್ನು ನೆನಪಿಸುತ್ತದೆ.

ಅಂತೆಯೇ ಲಾಲ್‍ಬಹದ್ದೂರ್ ಶಾಸ್ತ್ರೀಯವರ ಜೀವನವು ನಮಗೆ ವಿನಮ್ರತೆಯನ್ನು ಮತ್ತು ಸರಳ ಜೀವನದ ಸಂದೇಶವನ್ನು ನೀಡುತ್ತದೆ. 11ನೇ ಅಕ್ಟೋಬರ್ ದಿನವೂ ನಮಗೆ ಬಹಳ ವಿಶೇಷದ ದಿನವಾಗಿದೆ. ಈ ದಿನ ನಾವು `ಭಾರತರತ್ನ’ ಲೋಕನಾಯಕ ಜಯಪ್ರಕಾಶ ನಾರಾಯಣ್ ಜಯಂತಿ ಹಿನ್ನೆಲೆ ಅವರ ಸ್ಮರಣೆಯನ್ನೂ ಮಾಡುತ್ತಿದ್ದೇವೆ. ಜೆ.ಪಿ.ಯವರು ನಮ್ಮ ಲೋಕತಾಂತ್ರಿಕ ಮೌಲ್ಯಗಳ ರಕ್ಷಣೆಯಲ್ಲಿ ಅಗ್ರಮಾನ್ಯ ಭೂಮಿಕೆಯನ್ನು ನಿರ್ವಹಿಸಿದರು. ಇದೇ ದಿನ ನಾವು `ಭಾರತರತ್ನ’ ನಾನಾಜಿ ದೇಶಮುಖ್ ಅವರನ್ನೂ ಸ್ಮರಿಸುತ್ತಿದ್ದೇವೆ. ನಾನಾಜಿಯವರ ಜಯಂತಿಯೂ ಕೂಡ ಅಕ್ಟೋಬರ್ 11ರಂದು. ನಾನಾಜಿ ದೇಶ್‍ಮುಖ್ ಅವರು ಜಯಪ್ರಕಾಶ್ ನಾರಾಯಣ್ ಅವರ ಅತ್ಯಂತ ನಿಕಟವರ್ತಿ ಕೂಡ ಆಗಿದ್ದರು. ಜೆಪಿ ಯವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವಾಗ, ಪಾಟ್ನಾದಲ್ಲಿ ಅವರ ಮೇಲೆ ಪ್ರಾಣಾಂತಿಕ ಹಲ್ಲೆ ಕೂಡ ಆಗಿತ್ತು. ಆಗ ನಾನಾಜಿ ದೇಶ್‍ಮುಖ್‍ರವರು ಜೆ.ಪಿ.ಯವರನ್ನು ರಕ್ಷಿಸಿದರು. ಹಲ್ಲೆಯಲಿ ನಾನಾಜಿಯವರಿಗೂ ಬಹಳಷ್ಟು ಗಾಯಗಳಾದವು. ಆದರೂ ಜೆ.ಪಿ.ಯವರ ಜೀವವನ್ನು ಉಳಿಸುವುದರಲ್ಲಿ ನಾನಾಜಿ ಯಶಸ್ವಿಯಾದರು.

ಇದೇ 12ನೇ ಅಕ್ಟೋಬರ್‍ದಂದು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ಜಯಂತಿಯೂ ಆಗಿರುತ್ತದೆ. ಅವರು ತಮ್ಮ ಇಡೀ ಜೀವನವನ್ನು ಜನರ ಸೇವೆಗೇ ಸಮರ್ಪಿಸಿದ್ದರು. ಅವರು ಒಂದು ರಾಜಪರಿವಾರಕ್ಕೆ ಸೇರಿದವರಾಗಿದ್ದರೂ, ಅವರ ಬಳಿ ಸಂಪತ್ತು, ಶಕ್ತಿ ಹಾಗೂ ಇತರೆ ಸಾಧನಗಳ ಕೊರತೆ ಇರಲಿಲ್ಲವಾದರೂ, ಅವರು ತಮ್ಮ ಜೀವನವನ್ನು ಒಂದು ತಾಯಿಯ ರೀತಿ, ಮಾತೃವಾತ್ಸಲ್ಯದ ಭಾವದಿಂದ ಜನಸೇವೆಗೆ ಮುಡಿಪಾಗಿಟ್ಟರು. ಅವರು ಉದಾರಹೃದಯಿಗಳು. ಈ 12ನೇ ಅಕ್ಟೋಬರ್ ಅವರ ಜನ್ಮಶತಾಬ್ದಿ ವರ್ಷದ ಸಮಾರೋಪ ಸಮಾರಂಭದ ದಿನ. ನಾನು ರಾಜಮಾತೆ ವಿಜಯರಾಜೇ ಸಿಂಧಿಯಾ ಅವರ ವಿಚಾರ ಮಾತನಾಡುತ್ತಿರುವಂತೆಯೇ ಭಾವುಕವಾದ ಒಂದು ಘಟನೆ ನೆನಪಾಗುತ್ತಿದೆ.

ಅವರೊಂದಿಗೆ ಬಹಳ ವರ್ಷಗಳ ಕಾಲ ಕೆಲಸ ಮಾಡುವ ಸೌಭಾಗ್ಯ ನನಗೆ ಸಿಕ್ಕಿತ್ತು. ಬಹಳಷ್ಟು ಘಟನೆಗಳಿವೆ. ಆದರೆ ನನ್ನ ಮನಸ್ಸಿನಲ್ಲಿ ಒಂದು ವಿಷಯ ಹೇಳಬೇಕೆನಿಸಿದೆ. ಕನ್ಯಾಕುಮಾರಿಯಿಂದ ಕಾಶ್ಮೀರದ ವರೆಗೆ ನಾವು ಏಕತಾ ಯಾತ್ರೆ ಆರಂಭಿಸಿದ್ದೆವು. ಡಾ. ಮುರಳೀಮನೋಹರ ಜೋಷಿ ಅವರ ನೇತೃತ್ವದಲ್ಲಿ ಈ ಯಾತ್ರೆ ನಡೆಯುತ್ತಿತ್ತು. ಡಿಸೆಂಬರ್–ಜನವರಿ ತಿಂಗಳು ತೀವ್ರ ಚಳಿಗಾಲದ ದಿನಗಳಾಗಿದ್ದವು. ನಾವು ರಾತ್ರಿ ಸುಮಾರು 12.00-1.00 ಗಂಟೆ ಹೊತ್ತಿಗೆ ಮಧ್ಯಪ್ರದೇಶದ ಗ್ವಾಲಿಯರ್ ಹತ್ತಿರದ ಶಿವಪುರಿ ತಲುಪಿದೆವು. ಅತಿಥಿಗೃಹಕ್ಕೆ ತೆರಳಿ ದಿನದ ಆಯಾಸ ಪರಿಹರಿಸುವ ಸಲುವಾಗಿ ಸ್ನಾನ ಮಾಡಿ, ಮಾರನೇ ದಿನದ ತಯಾರಿ ಮಾಡಿಕೊಳ್ಳುತ್ತಿದ್ದೆವು. ರಾತ್ರಿ 2 ಗಂಟೆ ವೇಳೆ, ಮಲಗುವ ತಯಾರಲ್ಲಿದ್ದೆ. ಆಗ ಯಾರೋ ಬಾಗಿಲು ಬಡಿದ ಶಬ್ದವಾಯಿತು. ಬಾಗಿಲು ತೆಗೆದಾಗ ರಾಜಮಾತೆ ಸಹ ಬಾಗಿಲ ಮುಂದೆ ನಿಂತಿದ್ದರು. ಆ ಚಳಿಯ ರಾತ್ರಿಯಲ್ಲೂ ರಾಜಮಾತೆಯನ್ನು ಕಂಡಾಗ ಆ ನನಗೆ ಸಖೇದಾಶ್ಚರ್ಯವಾಯಿತು. ನಾನು ಅವರಿಗೆ ನಮಸ್ಕರಿಸಿ, “ಈಗಾಗಲೇ ಮಧ್ಯರಾತ್ರಿಯಾಗಿದೆ’’ ಎಂದಾಗ, ರಾಜಮಾತೆ, “ಬೇಟ, ಮೋದೀಜೀ, ಪರವಾಗಿಲ್ಲ. ನೀವು ಬಿಸಿ ಅರಿಶಿನ ಬೆರೆಸಿದ ಹಾಲು ಕುಡಿದು, ನಂತರ ಮಲಗಿ’’ ಎಂದು ಅರಿಶಿನ ಬೆರೆಸಿದ ಹಾಲನ್ನು ಸ್ವತಃ ಅವರೇ ತಂದಿದ್ದರು. ಮಾರನೇ ದಿನ ತಿಳಿದುಬಂದ ವಿಷಯವೆಂದರೆ, ಅಲ್ಲಿದ್ದ 30 ಜನರಿಗೆಲ್ಲರಿಗೂ ಅವರು ಅರಿಶಿನ ಬೆರೆಸಿದ ಹಾಲು ನೀಡಿ ಸತ್ಕರಿಸಿದ್ದರು. ಅದರಲ್ಲಿ ಡ್ರೈವರ್‍ಗಳಿದ್ದರು, ಕಾರ್ಯಕರ್ತರೂ ಇದ್ದರು. ಪ್ರತಿಯೊಬ್ಬರ ಕೋಣೆಗೆ ರಾತ್ರಿ 2 ಗಂಟೆಗೆ ಹೋಗಿ ಸ್ವತಃ ಹಾಲು ವಿತರಿಸಿದ್ರು. ತಾಯಿಯ ಪ್ರೀತಿ ಏನು? ವಾತ್ಸಲ್ಯವೆಂದರೇನು ಎಂಬುದನ್ನ ಆಗ ನಾನು ಅರಿತೆನು. ಈ ಘಟನೆಯನ್ನು ನಾನು ಎಂದೂ ಮರೆಯಲಾರೆ.

ಇಂತಹ ಮಹನೀಯರು ನಮ್ಮ ಭೂಮಿಯಲ್ಲಿ ಜನ್ಮವೆತ್ತಿದ್ದು ನಮ್ಮ ಸೌಭಾಗ್ಯ. ಅವರ ತ್ಯಾಗ–ಬಲಿದಾನಗಳ ಸಿಂಚನ ಈ ಭೂಮಿಯ ಮೇಲಾಗಿದೆ. ಬನ್ನಿ ನಾವೆಲ್ಲರೂ ಸೇರಿ ಈ ಮಹನೀಯರು ಹೆಮ್ಮೆಪಡುವಂತಹ ರಾಷ್ಟ್ರನಿರ್ಮಾಣ ಮಾಡೋಣ. ಅವರ ಕನಸುಗಳನ್ನು ನಮ್ಮ ಸಂಕಲ್ಪವಾಗಿಸೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೊನಾದ ಈ ಸಂಕಷ್ಟ ಕಾಲದಲ್ಲಿ ನಾನು ನಿಮಗೆ ಮತ್ತೊಮ್ಮೆ ಜ್ಞಾಪಿಸುತ್ತೇನೆ. ಮಾಸ್ಕನ್ನು ಅವಶ್ಯಕವಾಗಿ ಧರಿಸಿ. ಮುಖಮುಚ್ಚಿಕೊಳ್ಳದೆ ಹೊರಗೆ ಓಡಾಡದಿರಿ. ಪರಸ್ಪರ ಎರಡು ಗಜಗಳ ಅಂತರದ ನಿಯಮವು ನಿಮ್ಮನ್ನೂ, ನಿಮ್ಮ ಪರಿವಾರವನ್ನೂ ಉಳಿಸಬಲ್ಲುದು. ಈ ಕೆಲವು ನಿಯಮಗಳು ಕೊರೊನಾದ ವಿರುದ್ಧ ಹೋರಾಡುವ ನಮ್ಮ ಆಯುಧಗಳು. ಇದು ಪ್ರತಿಯೊಬ್ಬ ನಾಗರೀಕನ ಜೀವನವನ್ನೂ ರಕ್ಷಿಸುವ ಬಲವಾದ ಸಾಧನಗಳು. ನೆನಪಿರಲಿ: ಎಲ್ಲಿಯತನಕ ಔಷಧಿ ಇಲ್ಲವೋ, ಅಲ್ಲಿಯ ತನಕ ನಿರ್ಲಕ್ಷ್ಯ ಸಲ್ಲ. ಈ ನಿಬಂಧನೆ–ನಿರ್ಬಂಧಗಳಿಂದ ಬಿಡುಗಡೆಯಿಲ್ಲ. ನೀವು ಆರೋಗ್ಯವಾಗಿರಿ; ನಿಮ್ಮ ಪರಿವಾರವೂ ಆರೋಗ್ಯದಿಂದಿರಲಿ. ಇದೇ ಶುಭಕಾಮನೆಗಳೊಂದಿಗೆ ನಿಮಗೆಲ್ಲರಿಗೂ ಅನಂತಾನಂತ ಧನ್ಯವಾದಗಳು. ನಮಸ್ಕಾರ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.