ಅದು 1995. ಗುಜರಾತ್ನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮೊದಲ ಬಾರಿಗೆ ಜಯ ಗಳಿಸಿ, ಬಹುಮತದಿಂದ ಸಕರ್ಾರವನ್ನು ರಚಿಸಿತ್ತು. ಎರಡು ತಿಂಗಳ ಬಳಿಕ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವುದಿತ್ತು. ಚುನಾವಣೆಗೆ ಸಿದ್ಧತೆ ಆರಂಭ ಭರದಿಂದ ಸಾಗಿದ್ದ ಹೊತ್ತಿನಲ್ಲೇ ತಮ್ಮ ನಂಬುಗೆ ಯವರು, ಅನುಯಾಯಿಗಳು ಹಾಗೂ ಪಕ್ಷದ ಸದಸ್ಯರಲ್ಲದವರ ಸಭೆ ಕರೆದ ಮೋದಿ ಅವರು, ಈವರೆಗೆ ಯಾರೂ ನೋಡಿರದ, ತಾವು ಇತ್ತೀಚೆಗೆ ವಿದೇಶ ಪ್ರವಾಸದ ವೇಳೆ ತಂದಿದ್ದ ಡಿಜಿಟಲ್ ಕ್ಯಾಮೆರಾವನ್ನು ತೋರಿಸಿದರು. ರಾಜ್ಯದೆಲ್ಲೆಡೆ ಚುನಾವಣೆ ಪ್ರಚಾರದ ವೇಳೆ ತಂಡದೊಂದಿಗೆ ಕ್ಯಾಮೆರಾ ಕೊಂಡೊಯ್ದು ತಾವು ಕಂಡಿದ್ದನ್ನು-ಜನರ ವೇಷಭೂಷಣ, ಅಭಿವ್ಯಕ್ತಿ, ಧರಿಸುವ ವಸ್ತ್ರ, ಅವರು ಸೇವಿಸುವ ಆಹಾರ ಇದನ್ನೆಲ್ಲ ದಾಖಲಿಸಲು ತಂಡಕ್ಕೆ ಅವರು ಸೂಚಿಸಿದರು. ಪಾಶ್ಚಿಮಾತ್ಯ ದೇಶಗಳಲ್ಲಿ ಡಿಜಿಟಲ್ ಕ್ಯಾಮೆರಾ ಪ್ರಸಿದ್ಧಿಗೆ ಬರುವ ಮುನ್ನವೇ ಅದರ ಸಾಧ್ಯತೆಗಳು ಮೋದಿ ಅವರಿಗೆ ಮನದಟ್ಟಾಗಿತ್ತು.ದೇಶದ ಬಹುತೇಕರಿಗೆ ಆ ಕ್ಯಾಮೆರಾ ಬಗ್ಗೆ ಅರಿವು ಇರಲಿಲ್ಲ.

ಅತ್ಯಾಧುನಿಕ ತಂತ್ರಜ್ಞಾನ ಮತ್ತು ಡಿಜಿಟಲ್ ಶೋಧನೆಗಳನ್ನು ವೈಯಕ್ತಿಕ ಹಾಗೂ ಸಕರ್ಾರದಲ್ಲೂ ಬಳಕೆ ಮಾಡುವ ಅವರ ಅಭ್ಯಾಸ ಈಗಲೂ ಮುಂದುವ ರಿದಿದೆ. ಅದು ಅವರ ದೂರದೃಷ್ಟಿಯ ದ್ಯೋತಕ. ಸಮೂಹ ಸಂವಹನದಲ್ಲಿ ಸಾಮಾಜಿಕ ಮಾಧ್ಯಮದ  ಸಾಧ್ಯತೆಯನ್ನು ಮೊದಲು ಗುರುತಿಸಿದವರು ಅವ ರು. ಏಕಮುಖ ಸಂವಹನವಲ್ಲದೆ ಸಮಾನರ ನಡುವೆ ದ್ವಿಮುಖ ಸಂವಹನಕ್ಕೂ ಸಾಮಾಜಿಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿದವರು ಅವರು. ಗುಜರಾತ್ನ ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ ಮಾಧ್ಯಮದ ಮೂಲಕ ಅವರನ್ನು ಸುಲಭವಾಗಿ ಸಂಪಕರ್ಿಸ ಬಹುದಾಗಿತ್ತು. ಪ್ರಧಾನಿ ಆದ ಬಳಿಕ ಅವರು ಜುಲೈ 2014ರಲ್ಲಿ ಆರಂಭಿಸಿದ ಮೊದಲ ಉಪಕ್ರಮವೇ "ಮೈಗವ್'. ಒಂದು ವರ್ಷದ ಬಳಿಕ "ಡಿಜಿಟಲ್ ಇಂಡಿಯಾ'ವನ್ನು ಆರಂಭಿಸಲಾಯಿತು. ಸಕರ್ಾರ ದ ಆಡಳಿತವನ್ನು ಉತ್ತರದಾಯಿ, ಪಾರದರ್ಶಕ ಹಾಗೂ ಪ್ರತಿಕ್ರಿಯಾತ್ಮಕಗೊಳಿಸುವುದು ಇದರ ಉದ್ದೇಶವಾಗಿತ್ತು. 2015ರಲ್ಲಿ ಕ್ಯಾಲಿಫೋನರ್ಿಯಾದ ಸ್ಯಾನ್ ಹ್ಯೂಸೆಯಲ್ಲಿ ನಡೆದ ಡಿಜಿಟಲ್ ಇಂಡಿಯಾ ಸಮಾವೇಶದಲ್ಲಿ ಮಾತನಾಡಿ,"ಸಾಮಾಜಿಕ ಮಾಧ್ಯಮ ಇಲ್ಲವೇ ತಂತ್ರಜ್ಞಾನ ವೇಗವಾಗಿ ಮತ್ತು ವ್ಯಾಪ್ತಿ ಯಲ್ಲಿ ಹಿರಿದುಗೊಳ್ಳುತ್ತ ನಡೆದಿದೆ. ಇದನ್ನು ಬಳಸಿಕೊಂಡು ಸಮಾಜದ ಅಂಚಿನಲ್ಲಿ ಉಳಿದುಕೊಂಡವರನ್ನು ಮೇಲೆತ್ತಲು ಸಾಧ್ಯವಿದೆಯೇ ಎಂಬುದನ್ನು ನಾವು ಆಲೋಚಿಸಬೇಕಿದೆ. ಈ ನಂಬಿಕೆಯನ್ನು ಆಧರಿಸಿ ಡಿಜಿಟಲ್ ಇಂಡಿಯಾ ಸೃಷ್ಟಿಯಾಗಿದೆ. ಮಾನವ ಜನಾಂಗದ ಇತಿಹಾಸದಲ್ಲೇ ಅತಿ ದೊಡ್ಡಡು ಎನ್ನಬಹುದಾದ ಹಾಗೂ ಭಾರತವನ್ನು ಪರಿವತರ್ಿಸುವ ಉಪಕ್ರಮ ಇದು. ದೇಶದಲ್ಲಿರುವ ದುರ್ಬಲರು, ದೂರ ಪ್ರದೇಶದವರು ಹಾಗೂ ಬಡವರ ಬದುಕನ್ನಲ್ಲ ದೆ, ನಾವು ಬದುಕುವ ಹಾಗೂ ಕೆಲಸ ಮಾಡುವ ರೀತಿಯನ್ನೇ ಇದು ಬದಲಿಸಲಿದೆ,'ಎಂದು ಹೇಳಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bharat Tex showcases India's cultural diversity through traditional garments: PM Modi

Media Coverage

Bharat Tex showcases India's cultural diversity through traditional garments: PM Modi
NM on the go

Nm on the go

Always be the first to hear from the PM. Get the App Now!
...
ಪ್ರಧಾನಿ ಮೋದಿಯವರಿಂದ ಹೃದಯ ಸ್ಪರ್ಶಿ ಪತ್ರ
December 03, 2024

ದಿವ್ಯಾಂಗ್ ಕಲಾವಿದೆ ದಿಯಾ ಗೋಸಾಯಿ ಅವರಿಗೆ, ಸೃಜನಶೀಲತೆಯ ಒಂದು ಕ್ಷಣವು ಜೀವನವನ್ನು ಬದಲಾಯಿಸುವ ಅನುಭವವಾಗಿ ಮಾರ್ಪಟ್ಟಿತು. ಅಕ್ಟೋಬರ್ 29 ರಂದು ಪ್ರಧಾನಿ ಮೋದಿಯವರ ವಡೋದರಾ ರೋಡ್‌ಶೋ ಸಮಯದಲ್ಲಿ, ಅವರು ತಮ್ಮ ರೇಖಾಚಿತ್ರಗಳನ್ನು ಪ್ರಸ್ತುತಪಡಿಸಿದರು ಮತ್ತು ಎಚ್.ಇ. ಶ್ರೀ ಪೆಡ್ರೊ ಸ್ಯಾಂಚೆಜ್, ಸ್ಪೇನ್ ಸರ್ಕಾರದ ಅಧ್ಯಕ್ಷ. ಇಬ್ಬರೂ ನಾಯಕರು ಅವಳ ಹೃತ್ಪೂರ್ವಕ ಉಡುಗೊರೆಯನ್ನು ವೈಯಕ್ತಿಕವಾಗಿ ಸ್ವೀಕರಿಸಲು ಮುಂದಾದರು, ಅವಳನ್ನು ಸಂತೋಷಪಡಿಸಿದರು.

ವಾರಗಳ ನಂತರ, ನವೆಂಬರ್ 6 ರಂದು, ದಿಯಾ ಅವರ ಕಲಾಕೃತಿಯನ್ನು ಶ್ಲಾಘಿಸಿ ಮತ್ತು ಶ್ರೀ ಸ್ಯಾಂಚೆಜ್ ಅದನ್ನು ಮೆಚ್ಚಿದರು. "ವಿಕಸಿತ್ ಭಾರತ್" ನಿರ್ಮಾಣದಲ್ಲಿ ಯುವಕರ ಪಾತ್ರದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸುವ ಮೂಲಕ ಸಮರ್ಪಣಾ ಭಾವದಿಂದ ಲಲಿತಕಲೆಗಳನ್ನು ಮುಂದುವರಿಸಲು ಪ್ರಧಾನಿ ಮೋದಿ ಅವರನ್ನು ಪ್ರೋತ್ಸಾಹಿಸಿದರು. ಅವರು ತಮ್ಮ ವೈಯಕ್ತಿಕ ಸ್ಪರ್ಶವನ್ನು ಪ್ರದರ್ಶಿಸುವ ಮೂಲಕ ಅವರ ಕುಟುಂಬಕ್ಕೆ ಬೆಚ್ಚಗಿನ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ನೀಡಿದರು.

ಸಂತೋಷದಿಂದ ಮುಳುಗಿದ ದಿಯಾ ತನ್ನ ಹೆತ್ತವರಿಗೆ ಪತ್ರವನ್ನು ಓದಿದರು, ಅವರು ಕುಟುಂಬಕ್ಕೆ ಅಪಾರ ಗೌರವವನ್ನು ತಂದರು ಎಂದು ಹರ್ಷ ವ್ಯಕ್ತಪಡಿಸಿದರು. "ನಮ್ಮ ದೇಶದ ಚಿಕ್ಕ ಭಾಗವಾಗಿರುವುದಕ್ಕೆ ನಾನು ಹೆಮ್ಮೆ ಪಡುತ್ತೇನೆ. ಮೋದಿ ಜೀ, ನನಗೆ ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನೀಡಿದ್ದಕ್ಕಾಗಿ ಧನ್ಯವಾದಗಳು" ಎಂದು ದಿಯಾ ಹೇಳಿದರು, ಪ್ರಧಾನಿಯವರ ಪತ್ರವನ್ನು ಸ್ವೀಕರಿಸುವುದು ಜೀವನದಲ್ಲಿ ದಿಟ್ಟ ಕ್ರಮಗಳನ್ನು ತೆಗೆದುಕೊಳ್ಳಲು ಮತ್ತು ಸಬಲೀಕರಣಗೊಳ್ಳಲು ಆಳವಾಗಿ ಪ್ರೇರೇಪಿಸಿತು. ಇತರರು ಅದೇ ರೀತಿ ಮಾಡಲು.

ದಿವ್ಯಾಂಗರನ್ನು ಸಬಲೀಕರಣಗೊಳಿಸುವ ಮತ್ತು ಅವರ ಕೊಡುಗೆಗಳನ್ನು ಗುರುತಿಸುವ ಅವರ ಬದ್ಧತೆಯನ್ನು ಪಿಎಂ ಮೋದಿಯವರ ಇಂಗಿತ ಪ್ರತಿಬಿಂಬಿಸುತ್ತದೆ. ಸುಗಮ್ಯ ಭಾರತ್ ಅಭಿಯಾನದಂತಹ ಹಲವಾರು ಉಪಕ್ರಮಗಳಿಂದ ದಿಯಾ ಅವರಂತಹ ವೈಯಕ್ತಿಕ ಸಂಪರ್ಕಗಳವರೆಗೆ, ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ಪ್ರತಿಯೊಂದು ಪ್ರಯತ್ನವೂ ಮುಖ್ಯವೆಂದು ಸಾಬೀತುಪಡಿಸುವ ಮೂಲಕ ಸ್ಫೂರ್ತಿ ಮತ್ತು ಉನ್ನತಿಯನ್ನು ಮುಂದುವರೆಸಿದ್ದಾರೆ.