ಶ್ರೀ ನರೇಂದ್ರ ಮೋದಿ ಅವರು ಸಂಘಟನೆಯ ಸರ್ವೋತ್ತಮ ನಾಯಕರಲ್ಲೊಬ್ಬರಾಗಿದ್ದಾರೆ. ಉತ್ತಮ ಆಡಳಿತಗಾರರಾಗಿ, ಸಂಘಟನಾ ಕಲೆ, ಏಕಾಗ್ರಚಿತ್ತದ ಮನಸ್ಸು, ಧೈರ್ಯ ಮತ್ತು ಸಾಮರ್ಥ್ಯದ ನಾಯಕ ವ್ಯಕ್ತಿತ್ವದೊಮದಿಗೆ ಬಿ.ಜೆ.ಪಿ ಪಕ್ಷದಲ್ಲಿ ಬೆಳೆದರು.
ಗುಜರಾತಿನ ಮುಖ್ಯಮಂತ್ರಿಯಾಗಿ ಅಕ್ಟೋಬರ್ 7, 2001ರಂದು ಪ್ರತಿಜ್ಞೆ ಸ್ವೀಕರಿದರು. ಒಬ್ಬ ಸಾಮಾನ್ಯ ರಾಜಕೀಯ ಕಾರ್ಯಕರ್ತನಿಂದ, ಬ್ಬ ಸಂಘಟನಕಾರನಿಂದ ಆಡಳಿಗಾರಾಗಿ ಪರಿವರ್ತಿತರಾಗಬೇಕಾಯಿತು. ಸರಕಾರದ ಚುಕ್ಕಾಣಿ ಹಿಡಿದು ಮುನ್ನಡೆಸುವ ಚತುರತೆ ಆ ಹುದ್ದೆಗೆ ಅಗತ್ಯವಿದ್ದು ಅದರ ತರಬೇತಿ ಮಾಡಿಕೊಳ್ಳಬೇಕಿತ್ತು. ಬಿ.ಜೆ.ಪಿ ಪಕ್ಷದ ಮತ್ತು ರಾಜಕೀಯ ವಾತಾವರಣದ ವಿರೋಧಾಭಾಸಗಳ ನಡುವೆಯೂ ಅವರು ಆಡಳಿತಾತ್ಮಕ ಮಾರ್ಗದರ್ಶನದ ಜವಾಬ್ದಾರಿ ಮೊದಲ ದಿನದಿಂದಲೇ ಪ್ರಾರಂಭಿಸಿದರು. ಪಕ್ಷದ ಸಹಕಾರ್ಯಕರ್ತರಿಗೆ ಕೂಡಾ ಇವರು ಅಧಿಕಾರಾತ್ಮಕ ಆಡಳಿತ ಅನುಭವ ಇಲ್ಲದ ಹೊರಗಿನವರಾಗಿದ್ದರು, ಇವರು ಸವಾಲುಗಳನ್ನೆಲ್ಲಾ ಮೆಟ್ಟಿನಿಂತು ಸಮರ್ಪಕವಾಗಿ ಸರಿಪಡಿಸಿ, ಬೆಳೆದರು, ಹಾಗೂ ಲ್ಲರನ್ನೂ ತನ್ನ ಚತುರತೆಯಲ್ಲಿ ಮೂಕವಿಸ್ಮಯಗೊಳಿಸಿದರು
ಮೊದಲ 100 ದಿನಗಳು
ಶ್ರೀ ನರೇಂದ್ರ ಮೋದಿ ಅವರ ಮೊದಲ ನೂ ದಿನಗಳು, ಗುಜರಾತಿನ ಮುಖ್ಯ ಮಂತ್ರಿಯಾಗಿ ಅವರು ಜವಾಬ್ದಾರಿಗಳನ್ನು ನಿರ್ವಹಿಸಿದ ಪ್ರಕ್ರಿಯೆಗಳು, ಸುಧಾರಣೆಯ ನಿಟ್ಟಿನಲ್ಲಿ ಕೈಗೊಂಡ ನಿರ್ಣಯಗಲು, ನಿರ್ಧಾರಗಳು ಬಿ.ಜೆ.ಪಿ ಪಕ್ಷದ ಚಿಂತನೆ-ಯೋಚನೆಗಳ ಹೊರತಾಗಿತ್ತು. ಇದು ರಾಜಕೀಯ ಪಕ್ಷಗಳ ವ್ಯವಹಾರಿಕ ಹೆಜ್ಜೆಗಳ ನಿಲುವು ಬದಲಾಯಿಸಿತು, ಬಿ.ಜೆ.ಪಿ ಪಕ್ಷದ ರಾಜಕೀಯ ಯಥಾಸ್ಥಿತಿಯನ್ನು ಕೂಡಾ ತಲ್ಲಣಗೊಳಿಸಿತು. ಮಹಾ ವಿಪತ್ತು ಕಚ್ಚ್ ಭೂಕಂಪದ ಅತಿವೇಗದ ಪುನರ್ವಸತಿ, ಯಾವುದೇ ಆಡಳಿತಾತ್ಮಕ ಅಡೆತಡೆಗಲಿಲ್ಲದೆ ಸರಳ ನಿಯಮ ಮೂಲಕ ಅಧಿಕಾರದ ಭೇದಭಾವ ವಿಲ್ಲದೆ ಸರಕಾರಿ ಅಧಿಕಾರಿಗಳ ಜೊತೆ ಸೇರಿ ನಿರ್ವಹಿಸಿದ ಹೆಗ್ಗಳಿಕೆ ಇವರ ಖ್ಯಾತಿಯನ್ನು ಹೆಚ್ಚಿಸಿತು.
ಮೊದಲ ನೂರು ದಿನಗಳ ಶ್ರೀ ನರೇಂದ್ರ ಮೋದಿ ಅವರ ಪಯಣ, ಉತ್ತಮ ಕೇಳುಗನಾಗಿ, ಅತಿವೇಗದಲ್ಲಿ ಅರ್ಥೈಸಿಕೊಳ್ಳುವ, ಅರ್ಥಮಾಡಿಕೊಳ್ಳುವ, ವ್ಯರ್ಥಮಾಡದೆ ವ್ಯಯಿಸುವ, ಮಾದರಿ ವ್ಯಕ್ತಿಯಾಗಿ ನಾಯಕತ್ವದಲ್ಲಿ ಜೀವನ ತತ್ವಗಳನ್ನು ಅಳವಡಿಸಿಕೊಂಡಿದ್ದಾರೆ ಎಂಬುದನ್ನು ಇತರರು ಅರಿಯಲು ಸಾಧ್ಯವಾಯಿತು. ಮೊದಲ 100 ದಿನಗಳಲ್ಲಿ, ಎಲ್ಲರನ್ನೂ ಮುಖ್ಯಪ್ರವಾಹದಲ್ಲಿ ಸೇರಿಸಿಕೊಂಡು ಸಾಗುವ ಅವರ ನಂಬಿಕೆಯಲ್ಲಿ ಗ್ರಾಮೀಣ ಅಭಿವೃದ್ದಿ ನಿಧಿಗಳ ಸಮರ್ಪಕ ಬಳಕೆಗಾಗಿ ಮನೋಭಾವ ಮೂಡಿಸುವ ಸ್ಪರ್ಧೆಗಳು ಮತ್ತು ಹೆಣ್ಣುಮಕ್ಕಳ ವಿದ್ಯಾಭ್ಯಾಸ ಯಲ್ಲಿ ಆಧ್ಯತೆತೋರಿರುವುದು ಕಂಡುಬಂತು.
ಕೊನೆಯದಾಗಿ, ಮೊದಲ ಮೂರುತಿಂಗಳ ಅಧಿಕಾರ ಅವಧಿಯಲ್ಲಿ ರಾಜ್ಯದ ಜನತೆ ಸರಕಾರದ ಆಡಳಿತಾತ್ಮಕ ಪ್ರಕ್ರಿಯೆಯಲ್ಲಿ ಸಹಭಾಗಿತ್ವದೊಂದಿಗೆ ಪಾಲ್ಗೊಳ್ಳುವ ವ್ಯವಸ್ಥೆ ಏರ್ಪಡಿಸಿದರು. ಭೂಕಂಪ ಪೀಡಿತರ ಪುನರ್ವಸತಿಗಾಗಿ ಅಹರ್ನಿಶಿ ದುಡಿವ ಇವರ ನಿಲುವು ದೀಪಾವಳಿಯನ್ನು ವಿಪತ್ತಿನ ಹತಭಾಗ್ಯರೊಂದಿಗೆ ಕಳೆಯಲು ಪ್ರೇರೇಪಿಸಿತು. ರಾಜ್ಯದ ಅಭಿವೃದ್ದಿಗಾಗಿ ರಾಜಕೀಯ ವ್ಯವಸ್ಥೆಯ ಇತಿಮಿತಿ ಮೀರಿ ಯಾವರೀತಿ ಉತ್ತಮ ಆಡಳಿತ ವ್ಯವಸ್ಥೆ ಸ್ಪಂದಿಸಬಹುದು ಎಂಬುದನ್ನು ಶ್ರೀ ನರೇಂದ್ರ ಮೋದಿ ತೋರಿಸಿಕೊಟ್ಟರು.
ಶ್ರೀ ನರೇಂದ್ರ ಮೋದಿ ಅವರು ಆಶಿಸಿದ, ಅಭಿವೃದ್ದ ಮತ್ತು ಆಡಳಿತಕ್ಕೆ ಉದಾಹರಣೆಯಾಗುವ ಉಜ್ವಲ ಗುಜರಾತ್ ರಾಜ್ಯದ ಹಾದಿ ಅಷ್ಟೇನು ಸುಲಭ ಸಾಧ್ಯವಲ್ಲ. ಅಡೆತಡೆಗಳು, ಸವಾಲು , ಕೆಲವೊಂದು ಅವರ ಪಕ್ಷದಿಂದಲೇ ಆಗಿದ್ದರೂ ಕೂಡಾ ಅವನ್ನೆಲ್ಲ ಮೆಟ್ಟಿನಿಲ್ಲಲು ಪ್ರಯತ್ನಿಸಿದರು. ಇವರ ಅನನ್ಯ ಯೋಜನೆ 2002 ಪ್ರಾರಂಭವಾದ ಇಂಧನ ಕ್ರಾಂತಿಯ ಯಶಸ್ಸು ಇದಕ್ಕೊಂದು ಉದಾಹರಣೆ.
ಹಾಗೂ ಅಲ್ಲೋದು ದೀಪವಿತ್ತು: ಜ್ಯೋತಿಗ್ರಾಮ್ ಯೋಜನಾ
ಇದು ಗುಜರಾತಿಗೆ 24 * 7 ವಿದ್ಯುತ್ ಪೂರೈಕೆ ಮಾಡುವ ಯೋಜನೆ. ಬೃಹತ್-ದೊಡ್ಡ ನಗರಗಳಿಂದ ಹಿಡಿದು, ದೂರದ ಅತಿ ಪುಟ್ಟ ಕುಗ್ರಾಮದ ತನಕ ಪ್ರತಿ ಯೊಂದೂ ಮೂಲೆಯಲ್ಲೂ ದಿನದ ಪ್ರತಿ ನಿಮಿಷವೂ ವಿದ್ಯುತ್ ನಿರಂತರವಾಗಿ ಪೂರೈಕೆಯ ನೂತನ ಯೋಜನೆ ಜ್ಯೋತಿಗ್ರಾಮ್ ಯಶಸ್ಸಾದಾಗ, ಜಗವೇ ಶ್ರೀ ನರೇಂದ್ರ ಮೋದಿ ಅವರಡೆಗೆ ನೋಡತೊಡಗಿತು.
ನಂತರದ ಹೆಜ್ಜೆ , ಪ್ರತಿಯೊಬ್ಬರನ್ನೂ ಅಭಿವೃದ್ಧಿಯ ಪಥದಲ್ಲಿ ಜೊತೆಯಾಗಿ ಸಾಗಿಸಲು, ಸರ್ವರೂ ಜೊತೆಯಾಗಿ, ಸರ್ವರ ಒಳಿತಿಗಾಗಿ (Sabka Saath Sabka Vikas) ಎಂಬ ಯೋಜನೆ ಅವರದ್ದಾಗಿತ್ತು
ರಾಜಕೀಯಕ್ಕಿಂತ ಆಡಳಿತ ಮುಖ್ಯ
ಶ್ರೀ ನರೇಂದ್ರ ಮೋದಿ ಅವರಿಗೆ, ರಾಜಕೀಯಕ್ಕಿಂತ ಸರಕಾರದ ಆಡಳಿತ ಮುಖ್ಯವಾಗಿತ್ತು. ಅಭಿವೃದ್ದಿಯ ಸವಾಲುಗಳು ರಾಜಕೀಯದಲ್ಲಿ ಗೌಣವಾಗುವುದಕ್ಕೆ ಅವರು ಬಯಸಿದ್ದರು. ಸರ್ದಾರ್ ಸರೋವರ ಯೋಜನೆ , ನರ್ಮದಾ ನೀರು ಗುಜರಾತ್ ಮೂಲಕ ಹರಿಯುವ ಪ್ರಯತ್ನ, ಇವರ ಬುದ್ದಿವಂತಿಕೆಗಳಿಗೆ ಸಾಕ್ಷಿಯಾಗಿದೆ. ಇವರು ನೆರೆಯ ಮಧ್ಯ ಪ್ರದೇಶ ಮತ್ತು ಮಹಾರಾಷ್ಟ್ರದ ಕಾಂಗ್ರೆಸ್ ಮುಖ್ಯಮಂತ್ರಿಗಳ ಜೊತೆ ಸಮಾಲೋಚಿಸಿ ಸಹಭಾಗಿತ್ವದ ನಿರ್ಧಾರದ ನಿರ್ಣಯಗಳ ಪರಿಪೂರ್ಣತೆಗೆ ಪ್ರಯತ್ನಿಸಿ ಯಶಸ್ಸು ಕಂಡರು.
ಬೆರಳತುದಿಯಲ್ಲಿ ಪ್ರಗತಿ:
ಶ್ರೀ ನರೇಂದ್ರ ಮೋದಿ ಅವರ ದೀರ್ಘಾವಧಿ ಚಿಂತನೆಯ ಪ್ರಯತ್ನಗಳು ಸೇವೆಗಳ ಅನುಷ್ಠಾನದಲ್ಲಿ ಕಾಣಬಹುದು. ಜನಸಾಮಾನ್ಯರಿಗೆ ಸೇವೆಗಳ ಲಭ್ಯತೆಗಾಗಿ ಇ-ನ್ಯಾಯಾಲಯಗಳು ಮತ್ತು ನಾಗರಿಕ-ಸರಕಾರ ಪಾಲುದಾರಿಕೆಗಳಿಗಾಗಿ ”ಸ್ವಾಗತ್” ಮತ್ತು “ಒಂದು ದಿನದ ಆಡಳಿತ” ಯೋಜನೆಗಳು ಮಾದರಿಯಾಗಿವೆ.
ಏಕ ಗವಾಕ್ಷಿ ವ್ಯವಸ್ಥೆ ಮೂಲಕ ತಾಲೂಕು ಹಂತದಲ್ಲಿ ಅಭಿವೃದ್ದಿ ಕಾರ್ಯಗಳಿಗೆ ಅನುಮತಿ. ಆಡಳಿತ ಧೃವೀಕರಣಮೂಲಕ ಗ್ರಾಮೀಣ ಜನತೆಗೆ ಸೇವೆ ತಲುಪಿಸಲು, ಮತ್ತು ಅವುಗಳ ಪ್ರಯೋಜನ ಲಭ್ಯವಾಗಲು ಪರಿಸರ ಅನುಮತಿಗಾಗಿ ಪಾರದರ್ಶಕತೆಗಾಗಿ ತಂತ್ರಜ್ಞಾನ ಬಳಕೆ ಮಾಡಿದರು.
ಯಶಸ್ಸಿನ 3 ಆಧಾರ ಸ್ಥಂಭಗಳು:
ಶ್ರೀ ನರೇಂದ್ರ ಮೋದಿ ಅವರು ಗುಜರಾತಿನ ಯಶಸ್ಸನ್ನು ಮೂರು ಪ್ರಧಾನ ಆಧಾರ ಸ್ಥಂಭಗಳ ಮೇಲೆ ಕಟ್ಟಿದ್ದಾರೆ. ಅವುಗಳೆಂದರೆ, ಕೃಷಿ, ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು. ಅತ್ಯಂತ ಬರ ಪೀಡಿತ ಕಾಲಾವಸ್ಥೆ ನಡುವೆಯೂ ಇವರ ಕಾಲಾವಧಿಯಲ್ಲಿ 10% ಕೃಷಿ ಉತ್ಪನ್ನ ಹೆಚ್ಚಳ ಕಂಡಿದೆ. ಕೃಷಿ ಮಹೋತ್ಸವ ಕೃಷಿಕರ ದಿಶೆ ಬದಲಾಯಿಸಿತು. ವೈಬ್ರಾಂಟ್ ಗುಜರಾತ್ ಸಮಾವೇಶಗಳ ಮೂಲಕ ಗುಜರಾತ್ ಹೂಡಿಕೆದಾರರ ಆಕರ್ಷಣಾ ಕೇಂದ್ರವಾಯಿತು. ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳು ವಿಫುಲ ಅವಕಾಶ ಪಡೆದು ಉತ್ತಮ ುದ್ಯೋಗಾವಕಾಶವನ್ನು ಗುಜರಾತಿನ ಯುವ ಜನತೆಗೆ ನೀಡಿದವು.
ಸಂಸ್ಥೆಗಳ ಪ್ರಾಮುಖ್ಯತೆಗಳು:
ಶ್ರೀ ನರೇಂದ್ರ ಮೋದಿ ಅವರ ಆಡಳಿತ ಚತುರತೆಯನ್ನು ಎರಡು ಬಾರಿ ಪರೀಕ್ಷಿಸಲಾಗಿದೆ. 2006ರಲ್ಲಿ ಸೂರತ್ ನಗರದ ಬೃಹತ್ ನೆರೆ, ಮತ್ತು 2008 ರಉಗ್ರಗಾಮಿಗಳ ದಾಳಿ, ಆಗ ಇವರು ಗುಜರಾತ್ ನಲ್ಲಿ ಸಂಸ್ಥೆಗಳ ಅತ್ಯುತ್ತಮ ವಿಧಿವಿಧಾನಗಳನ್ನು ಅನುಷ್ಠಾನಗೊಳಿಸಿದರು.
ಇವರಲ್ಲಿದ್ದ ಚಾಣಾಕ್ಷ ಆಡಳಿತಗಾರ, 2001-2002ರ ಕಚ್ಛ್ ಭೂಕಂಪದ ಪುನರ್ವಸತಿ ಪ್ರವಾಸೋಪಾದಿಯಲ್ಲಿ ಅತ್ಯುತ್ತಮ ರೀತಿ ಸಾಗಿಸಿ ಯಶಸ್ಸುಗೊಳಿಸಿತು. ಸುನಾಮಿ ಮತ್ತು ಉತ್ತರಾಖಂಡದ ನೆರೆಯಲ್ಲಿ ಪೀಡಿತರ ಸಹಾಯಕ್ಕೆ ಇದು ಅನುಕೂಲವಾಯಿತು. ಇವರು ಉತ್ತಮ ಸಮ್ಮೀಲನದ ಆಡಳಿತ ಬಯಸುತ್ತಾರೆ., ಅದರಲ್ಲೂ ಸಂಸ್ಥೆಗಳ ಸಾಂಘಿಕ ವ್ಯವಸ್ಥೆ ಬಯಸುತ್ತಾರೆ ಅನ್ನುವುದಕ್ಕೆ, ಇಂಧನ ವಿಷಯದ ಸಂಶೋಧನೆಗಾಗಿ ಪೆಟ್ರೋಲಿಯಮ್ ವಿಶ್ವವಿದ್ಯಾನಿಲಯ, ರಕ್ಷಣಾ ವಿಷಯದ ಸಂಶೋಧನೆಗಾಗಿ ರಕ್ಷಾ ವಿಶ್ವವಿದ್ಯಾನಿಲಯ ಸ್ಥಾಪನೆ ಇದಕ್ಕೆ ಸ್ಪಷ್ಟ ಉದಾಹರಣೆಗಳು.
ನಾಳಿನ ಕಠಣ ಸವಾಲಿಗೆ ಇಂದಿನ ನಿರೀಕ್ಷಿತ ಉತ್ತಮ ಆಡಳಿತ ಅನಿವಾರ್ಯ ಅನ್ನುವ ಮನೋಭಾವ ಶ್ರೀ ಮೋದಿ ಅವರದು.
ಸಮ್ಮಿಳನದಲ್ಲಿ ನಂಬಿಕೆಹೊತ್ತವರು:
ಶ್ರೀ ನರೇಂದ್ರ ಮೋದಿ ಅವರು, ಪಂಚ ಅಮೃತ್ ನಿರ್ಮಾಣ ಮಾದರಿಯಲ್ಲಿ ಅಧಿಕಾರಿಗಳು, ಮಂತ್ರಿಗಳು ಜನಸಾಮಾನ್ಯರುಗಳ ನಡುವೆ ಗೋಡೆ ಅಂತರ ರಹಿತ ಸಮ್ಮಿಳನದ ಯೋಚನೆ ಜೊತೆ, ಕನಿಷ್ಠ ಸರಕಾರ, ಗರಿಷ್ಠ ಆಡಳಿತ ನೀತಿ ಮೂಲಕ ಅವರು ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ತಯಾರಾಗಿದ್ದಾರೆ.
ಶ್ರೀ ಮೋದಿ ಅವರ ಪ್ರಕಾರ ಏಕೀಕೃತ ಮತ್ತು ಅನುಷ್ಠಾನ ಸರಕಾರದ ಮುಂದಿರುವ ಸವಾಲುಗಳು. ಮುಂದಿನ ಜನಾಂಗತ ಯುವ ಜನತೆಗೆ, ಮೂಲಸೌಕರ್ಯಕ್ಕೆ ಸಾಂಪ್ರದಾಯಿಕ ಇಂಧನ ಸಂಪನ್ಮೂಲಗಳಿಗೆ ಒತ್ತು ನೀಡಿ ಅಭಿವೃದ್ದಿ ಕಾರ್ಯ ನಡೆದರೆ ಮುಂಬರುವ ದಿನಗಳಲ್ಲಿ ಭಾರತಕ್ಕೆ ಉತ್ತಮ ದಿನಗಳು ಸಾಧ್ಯ ಎಂಬ ನಿಲುವು ಇವರದು.
2001 ರಿಂದ 2013 ತನಕ ಶ್ರೀ ನರೇಂದ್ರ ಮೋದಿ ಅವರ ಪುರೋಗಾಮಿ ಚಿಂತನೆಯಲ್ಲಿ ಅವರ ಸರಕಾರ ದೇಶ ಮತ್ತು ವಿದೇಶಗಳಲ್ಲಿ ಖ್ಯಾತಿ ಗಳಿಸಿತು.
Testimonials
“ಶ್ರೀ ನರೇಂದ್ರ ಮೋದಿ ಅವರು ಒಬ್ಬ ಬಲಿಷ್ಠ ನಾಯಕ ಮತ್ತು ಸಮರ್ಥ ಆಡಳಿತಗಾರ ಎಂದು ಪ್ರತಿಯೊಬ್ಬರೂ ಅರಿತಿದ್ದಾರೆ, ನನ್ನ ಶುಭಾಶಯಗಳು ಮತ್ತು ಪ್ರಾರ್ಥನೆ ಸದಾ ಅವರೊಂದಿಗಿರುತ್ತದೆ. ಅವರ ಉಜ್ವಲ ಭವಿಷ್ಯಕ್ಕಾಗಿ ಹಾರೈಸುತ್ತೇನೆ. ಭಾರತಕ್ಕಾಗಿ ಅವರು ಹೊಂದಿರುವ ಯೋಚನೆಗಳು, ಹಾಕಿರುವ ಯೋಜನೆಗಳು, ಅವರಲ್ಲಿರುವ ಚಿಂತನೆಗಳ ಕನಸೆಲ್ಲಾ ನಿಜವಾಗಲಿ ಎಂದು ಹಾರೈಸುತ್ತೇನೆ. ” - ರಜನೀಕಾಂತ್ , ಜನಪ್ರಿಯ ಚಲನಚಿತ್ರ ನಟ.
“ ನಾನು ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿಯಾದೆ. ಅವರು ಒಬ್ಬ ಉತ್ತಮ ವ್ಯಕ್ತಿಯಾಗಿದ್ದಾರೆ. ಅವರು ಗುಜರಾತಿಗಾಗಿ ಉತ್ತಮ ಕೆಲಸಗಳನ್ನು ಮಾಡಿದ್ದಾರೆ” - – ಪ.ಪೂ. ಶ್ರೀ ಶ್ರೀ ರವಿ ಶಂಕರ್ ಜಿ., ಆಧ್ಯಾತ್ಮಕ ಗುರು ಮತ್ತು ಸಂಸ್ಥಾಪಕರುಆರ್ಟ್ ಆಫ್ ಲೀವಿಂಗ್
“ ಶ್ರೀನರೇಂದ್ರ ಮೋದಿ ಅವರು ನನಗೆ ಸಹೋದರ ಇದ್ದಂತೆ. ನಾವೆಲ್ಲ ಅವರು ಪ್ರಧಾನ ಮಂತ್ರಿಯಾಗುವುದನ್ನು ಕಾಣ ಬಯಸಿದ್ದೇವೆ. ದೀಪಾವಳಿಯ ಶುಭ ಸಂದರ್ಭದಲ್ಲಿ, ನಾನು ಈ ನನ್ನ ಆಶಯ ನಿಜವಾಗಲಿ ಎಂದು ಬಯಸುತ್ತೇನೆ.” - ಶ್ರೀಮತಿ ಲತಾ ಮಂಗೇಷ್ಕರ್ , ಪ್ರಸಿದ್ದ ಗಾಯಕಿ
“ಈಗ ದೇಶಕ್ಕೆ ಕಚೇರಿಯ ಬದ್ಧತೆ ಇರುವ ವ್ಯಕ್ತಿಯ ಆವಶ್ಯವಿದೆ, ಇನ್ನೊಂದು ಮಾತಲ್ಲಿ ಹೇಳುವುದಾದರೆ, ನಮಗೆ ಶ್ರೀ ನರೇಂದ್ರ ಮೋದಿ ಅವರ ಅಗತ್ಯವಿದೆ.” -ಶ್ರೀ ಅರುಣ್ ಶೌರಿ, ಮಾಜಿ ಕೇಂದ್ರ ಸಚಿವರು, ಪತ್ರಕರ್ತರು ಮತ್ತು ಲೇಖಕರು
“ಶ್ರೀ ನರೇಂದ್ರ ಮೋದಿ ಅವರು ಅವರನ್ನು ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ದೇವರೇ ನಮಗಾಗಿ ಕಳುಹಿಸಿದ್ದಾರೆ. ಇವರು ಭಾರತದ ಮುಂದಿನ ಪ್ರಧಾನಿಯಾಗುತ್ತಾರೆ, ಇವರು ದೇಶಕ್ಕೆ ಹೆಮ್ಮ ತರುತ್ತಾರೆ” -ಶ್ರೀ ಚೋ. ರಾಮಸ್ವಾಮಿ , ಸಂಪಾದಕರು, “ತುಘ್ಲಕ್
ಭಾರತದ ಒಬ್ಬ ಅತ್ಯುತ್ತಮ ಯಶಸ್ವೀ ಮುಖ್ಯಮಂತ್ರಿಯಾಗಿ, ಮತ್ತು ಅತಿ ನಿಪುಣ ಆಡಳಿತಗಾರನಾಗಿ ಸಾಕಷ್ಟು ಅನುಭವಗಳನ್ನು ಹೊಂದಿರುವ ಶ್ರೀ ನರೇಂದ್ರ ಮೋದಿ ಅವರು ಭಾರತದ 14ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿದ್ದಾರೆ.