Budget belied the apprehensions of experts regarding new taxes: PM
Earlier, Budget was just bahi-khata of the vote-bank calculations, now the nation has changed approach: PM
Budget has taken many steps for the empowerment of the farmers: PM
Transformation for AtmaNirbharta is a tribute to all the freedom fighters: PM

ಉತ್ತರ ಪ್ರದೇಶದ ಗೋರಖ್ ಪುರದ ಚೌರಿ ಚೌರಾದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು “ಚೌರಿ–ಚೌರ” ಶತಮಾನೋತ್ಸವ ಸಮಾರಂಭವನ್ನು ವಿಡಿಯೋ ಕಾನ್ಪರೆನ್ಸ್ ಮೂಲಕ ಉದ್ಘಾಟಿಸಿದರು. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ “ಚೌರಿ–ಚೌರ” ಪ್ರಮುಖವಾಗಿದ್ದು, 100 ನೇ ವರ್ಷವನ್ನು ಈ ಘಟನೆ ಸ್ಮರಿಸುತ್ತದೆ. ಚೌರಿ ಚೌರ ಸ್ಮರಣಾರ್ಥ ಪ್ರಧಾನಮಂತ್ರಿ ಅವರು ಅಂಚೆ ಚೀಟಿ ಲೋಕಾರ್ಪಣೆ ಮಾಡಿದರು. ಉತ್ತರ ಪ್ರದೇಶದ ರಾಜ್ಯಪಾಲರಾದ ಶ್ರೀಮತಿ ಆನಂದಿ ಬೆನ್ ಪಟೇಲ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರು ಸಹ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಚೌರಿ ಚೌರದಲ್ಲಿ ಆದ ತ್ಯಾಗ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಹೊದ ದಿಕ್ಕು ನೀಡಿದ್ದು. ಧೈರ್ಯಶಾಲಿ ಹುತಾತ್ಮರಿಗೆ ನಮನ ಸಲ್ಲಿಸುತ್ತಿದ್ದೇವೆ. ನೂರು ವರ್ಷಗಳ ಹಿಂದೆ ನಡೆದ ಚೌರಿ ಚೌರ ಕೇವಲ ಒಂದು ಅಗ್ನಿ ಸ್ಪರ್ಷ ಘಟನೆಯಲ್ಲ. ಆದರೆ ಇದರ ಸಂದೇಶ ಅತ್ಯಂತ ವಿಸ್ತಾರವಾಗಿದೆ. ಅಗ್ನಿ ಸ್ಪರ್ಷ ಯಾವ ಸನ್ನಿವೇಶದಲ್ಲಿ ಆಯಿತು ಎನ್ನುವುದು ಮುಖ್ಯವಲ್ಲ. ಯಾವ ಕಾರಣಕ್ಕೆ ಎನ್ನುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ದೇಶದಲ್ಲಿ ಚೌರಿ ಚೌರ ಐತಿಹಾಸಿಕ ಹೋರಾಟಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಚೌರಿ ಚೌರ ಬಗ್ಗೆ ಇಂದು ಕಾರ್ಯಕ್ರಮ ಆರಂಭವಾಗುತ್ತಿದ್ದು, ಪ್ರತಿಯೊಂದು ಹಳ್ಳಿಯಲ್ಲೂ ಬಲಿದಾನವಾದ ನಾಯಕರನ್ನು ವರ್ಷ ಪೂರ್ತಿ ಸ್ಮರಿಸಲಾಗುತ್ತಿದೆ. ಇಂತಹ ಕಾರ್ಯಕ್ರಮವನ್ನು ದೇಶ 75 ನೇ ಸ್ವಾತಂತ್ರ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಆಯೋಜಿಸುತ್ತಿರುವುದು ಅತ್ಯಂತ ಪ್ರಮುಖವಾಗಿದೆ. ಅಲ್ಲದೇ ಚೌರಿ ಚೌರ ಘಟನೆಯ ಹುತಾತ್ಮರ ಬಗ್ಗೆ ಚರ್ಚೆಯ ಕೊರತೆಯಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಹೇಳಿದರು. ಹುತಾತ್ಮರು ಇತಿಹಾಸದ ಪುಟದಲ್ಲಿ ಕಾಣಿಸಿಕೊಳ್ಳದೇ ಇರಬಹುದು, ಆದರೆ ಸ್ವಾತಂತ್ರ್ಯಕ್ಕಾಗಿ ಅವರು ರಕ್ತ ಚೆಲ್ಲಿರುವುದು ದೇಶದ ನೆಲದಲ್ಲಿದೆ ಎಂದರು.

ಇದೇ ದಿನದಂದು 150 ಮಂದಿ ಸ್ವಾತಂತ್ರ್ಯ ಹೋರಾಟಗಾರರನ್ನು ನೇಣಿಗೇರಿಸುವುದನ್ನು ಬಾಬಾ ರಾಘವದಾಸ್  ಮತ್ತು ಮಹಾಮನ ಮದನಮೋಹನ ಮಾಳವೀಯ ತಪ್ಪಿಸಿದ್ದು, ದೇಶದ  ಜನತೆ ಇವರ ಪ್ರಯತ್ನವನ್ನು ಸ್ಮರಿಸಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ಅವರು ಒತ್ತಾಯಿಸಿದರು.  ಈ ಅಭಿಯಾನದಲ್ಲಿ ವಿದ್ಯಾರ್ಥಿಗಳು ಸಹ ಭಾಗಿಯಾಗಿದ್ದು, ಸ್ವಾತಂತ್ರ್ಯ ಹೋರಾಟದ ನೇಪಥ್ಯದಲ್ಲಿನ ಹೇಳಲಾಗದ ಘಟನೆಗಳ ಕುರಿತು ಜಾಗೃತಿ ಮೂಡಿಸಲು ಮುಂದಾಗಿರುವುದು ಉತ್ತಮ ಬೆಳವಣಿಗೆ. 75 ನೇ ವರ್ಷದ ಸ್ವಾತಂತ್ರ್ಯ ಸಂಭ್ರಮದಲ್ಲಿ ಶಿಕ್ಷಣ ಸಚಿವಾಲಯ ಯುವ ಸಮೂಹಕ್ಕೆ ಲೇಖನ ಸ್ಪರ್ಧೆ ಏರ್ಪಡಿಸಿದ್ದು, ಇದರಿಂದ ಸ್ವಾತಂತ್ರ್ಯ ಹೋರಾಟಗಾರರ ಕುರಿತು ಪುಸ್ತಕ ಬರೆಯಲು ಸಹಕಾರಿಯಾಗಲಿದೆ. ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಲು ಉತ್ತರ ಪ್ರದೇಶ ಸರ್ಕಾರ ಸ್ಥಳೀಯ ಕಲೆ ಮತ್ತು ಸಂಸ್ಕೃತಿ ವಲಯದ ಕಲಾವಿದರನ್ನು ಬಳಸಿಕೊಳ್ಳುತ್ತಿರುವ ಪ್ರಯತ್ನ ಶ್ಲಾಘನೀಯ ಎಂದರು.

ಗುಲಾಮಗಿರಿಯ ಸಂಕೋಲೆಗಳನ್ನು ಮುರಿದ ಸಾಮೂಹಿಕ ಬಲ ಭಾರತವನ್ನು ವಿಶ್ವದ ಶ್ರೇಷ್ಠ ಶಕ್ತಿಯನ್ನಾಗಿ ಮಾಡುತ್ತಿದೆ. ಈ ಶಕ್ತಿ ಆತ್ಮ ನಿರ್ಭರ್ ಭಾರತದ ಸಾಮೂಹಿಕ ಶಕ್ತಿಯಾಗಿದೆ. ಕೊರೋನಾ ಸಂಕಷ್ಟ ಸಂದರ್ಭದಲ್ಲಿ ಭಾರತ 150 ಕ್ಕೂ ಹೆಚ್ಚು ದೇಶಗಳಿಗೆ ಅಗತ್ಯ ಔಷಧಗಳನ್ನು ಪೂರೈಸಿದೆ. ಜೀವಗಳನ್ನು ರಕ್ಷಿಸಲು ಭಾರತ ಹಲವು ದೇಶಗಳಿಗೆ ಲಸಿಕೆ ಪೂರೈಸಿದ್ದು, ಇದರಿಂದ ಸ್ವಾತಂತ್ರ್ಯ ಹೋರಾಟಗಾರರು ಹೆಮ್ಮೆಪಡುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಬಜೆಟ್ ಕುರಿತು ಮಾತನಾಡಿದ ಪ್ರಧಾನಮಂತ್ರಿಯವರು, ಕೋವಿಡ್ ಸಾಂಕ್ರಾಮಿಕ ಎಸೆದ ಸವಾಲುಗಳನ್ನು ಎದುರಿಸಲು ಬಜೆಟ್ ಹೊಸ ಪುಷ್ಠಿ ನೀಡಿದೆ. ಸಾಮಾನ್ಯ ಜನತೆಯ ಮೇಲೆ ಹೊಸ ತೆರಿಗೆಯ ಭಾರ ಹಾಕಲಾಗುತ್ತದೆ ಎಂಬ ತೆರಿಗೆ ತಜ್ಞರ ಆತಂಕಗಳನ್ನು ಸುಳ್ಳು ಮಾಡಿದೆ. ದೇಶದ ತ್ವರಿತ ಬೆಳವಣಿಗೆಗೆ ಸರ್ಕಾರ ಹೆಚ್ಚು ವೆಚ್ಚಮಾಡುತ್ತಿದೆ. ರಸ್ತೆ, ಸೇತುವೆ, ರೈಲ್ವೆ ಮಾರ್ಗಗಳು, ಹೊಸ ರೈಲುಗಳು ಮತ್ತು ಬಸ್ಸುಗಳು, ಮಾರುಕಟ್ಟೆಗಳು ಮತ್ತು ಮಂಡಿಗಳಿಗೆ ಸಂಪರ್ಕ ಕಲ್ಪಿಸಲು ಖರ್ಚು  ಮಾಡಲಾಗುತ್ತಿದೆ. ಯುವ ಸಮೂಹಕ್ಕೆ ಉತ್ತಮ ಶಿಕ್ಷಣ ಮತ್ತು ಅತ್ಯುತ್ತಮ ಅವಕಾಶಗಳನ್ನು ಬಜೆಟ್ ಒದಗಿಸುತ್ತಿದೆ. ಬಜೆಟ್ ಎಂದರೆ ಈ  ಹಿಂದೆ ಕಾರ್ಯಕ್ರಮಗಳನ್ನು ಘೋಷಿಸಲಾಗುತ್ತಿತ್ತು ಮತ್ತು ಅವುಗಳು ಎಂದಿಗೂ ಅನುಷ್ಠಾನಗೊಳ್ಳುತ್ತಿರಲಿಲ್ಲ. ಬಜೆಟ್ ಎಂದರೆ ಭಾಹಿ–ಖಾತ [ನೋಂದಣಿ ಪುಸ್ತಕ] ಆಗಿತ್ತು. ಅಂದರೆ ಮತಬ್ಯಾಂಕ್ ಲೆಕ್ಕಾಚಾರ ಹೊಂದಿತ್ತು. ಇದೀಗ ದೇಶ ಹೊಸ ಎಲೆಯನ್ನು ತಿರುಗಿಸಿದೆ ಮತ್ತು ತನ್ನ ವಿಧಾನವನ್ನೇ ಬದಲಿಸಿಕೊಂಡಿದೆ ಎಂದು ಪ್ರಧಾನಮಂತ್ರಿಯವರು ಅಭಿಪ್ರಾಯಪಟ್ಟರು.

ಕೋವಿಡ್ ಸಾಂಕ್ರಾಮಿಕವನ್ನು ದೇಶ ನಿಭಾಯಿಸಿದ ರೀತಿಗೆ ಜಾಗತಿಕ ಮೆಚ್ಚುಗೆ ದೊರೆತಿದ್ದು, ಹಳ್ಳಿಗಳು ಮತ್ತು ಸಣ್ಣ ಪಟ್ಟಗಳಲ್ಲೂ ಇದೀಗ ವೈದ್ಯಕೀಯ ಸೌಲಭ್ಯಗಳನ್ನು ಬಲಪಡಿಸಲಾಗಿದೆ. ಆರೋಗ್ಯ ವಲಯಕ್ಕೆ ಅತಿ ಹೆಚ್ಚು ಹಣವನ್ನು ನಿಗದಿಪಡಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.

ರೈತರ ಆಧಾರಿತ ರಾಷ್ಟ್ರೀಯ ಪ್ರಗತಿಗೆ ಕರೆ ನೀಡಿದ ಪ್ರಧಾನಮಂತ್ರಿ ಅವರು, ಕಳೆದ ಆರು ವರ್ಷಗಳಲ್ಲಿ ರೈತರ ಕಲ್ಯಾಣಕ್ಕಾಗಿ ಕೈಗೊಂಡಿರುವ ಕ್ರಮಗಳನ್ನು ಉಲ್ಲೇಖಿಸಿದರು. ಸಾಂಕ್ರಾಮಿಕದ ಸಂಕಷ್ಟದ ನಡುವೆಯೂ ರೈತರು ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಮಾಡಿದ್ದಾರೆ. ರೈತರ ಸಬಲೀಕರಣಕ್ಕಾಗಿ ಬಜೆಟ್ ನಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ರೈತರು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಲು ದೇಶದ ಒಂದು ಸಾವಿರ ಮಂಡಿಗಳನ್ನು ಇ–ನಾಮ್ ವ್ಯವಸ್ಥೆಗೆ ಜೋಡಿಸಲಾಗುತ್ತಿದೆ ಎಂದರು.

ಗ್ರಾಮೀಣ ಮೂಲ ಸೌಕರ್ಯ ನಿಧಿಯನ್ನು 40 ಸಾವಿರ ಕೋಟಿ ರೂಪಾಯಿಗೆ ಏರಿಕೆ ಮಾಡಲಾಗಿದೆ. ಈ ಕ್ರಮಗಳು ರೈತರನ್ನು ಸ್ವಾಲಂಬಿ ಮಾಡಲಿದ್ದು, ಕೃಷಿಗೆ ಸಂಭಾವನೆ ದೊರಕಿಸಿಕೊಡುವಂತೆ ಮಾಡುತ್ತದೆ ಎಂದು ಹೇಳಿದರು. ಹಳ್ಳಿಗಳಲ್ಲಿ ವಸತಿ ಆಸ್ತಿ ಮತ್ತು ಭೂಮಿಗೆ ಸ್ವಾಮಿತ್ವ ಯೋಜನೆ ಮಾಲೀಕತ್ವ ದೊರಕಿಸಿಕೊಡುತ್ತದೆ.  ಉತ್ತಮ ದಾಖಲೆಗಳ ಮೂಲಕ ಆಸ್ತಿಗೆ ಒಳ್ಳೆಯ ಬೆಲೆ ದೊರಯುವಂತೆ ಮಾಡುತ್ತದೆ ಮತ್ತು ರೈತ ಕುಟುಂಬಗಳಿಗೆ ಸಾಲ ಸೌಲಭ್ಯ ದೊರಕಿಸಿಕೊಡುತ್ತದೆ. ಒತ್ತುವರಿದಾರರಿಂದ ಭೂಮಿಯನ್ನು ರಕ್ಷಿಸುತ್ತದೆ ಎಂದು ಪ್ರಧಾನಮಂತ್ರಿ  ಅವರು ಹೇಳಿದರು.

ಈ ಎಲ್ಲಾ ಕ್ರಮಗಳು ಗೋರಖ್ ಪುರ್ ಜನರಿಗೂ ಸಹ ಸಹಕಾರಿಯಾಗಲಿದ್ದು, ಇಲ್ಲಿ ಗಿರಣಿಗಳನ್ನು ಮುಚ್ಚಲಾಗುತ್ತಿದೆ. ರಸ್ತೆಗಳು ಕೆಟ್ಟ ಸ್ಥಿತಿಯಲ್ಲಿದ್ದು, ಆಸ್ಪತ್ರೆಗಳು ಅನಾರೋಗ್ಯಕ್ಕೀಡಾಗಿವೆ. ರೈತರು ಮತ್ತು ಯುವ ಸಮೂಹಕ್ಕೆ ಲಾಭವಾಗುವಂತೆ ಮಾಡಲು ಸ್ಥಳೀಯ ರಸಗೊಬ್ಬರ ಕಾರ್ಖಾನೆಯನ್ನು ಪುನರಾರಂಭಿಸಲಾಗುತ್ತಿದೆ. ನಗರಕ್ಕೆ ಅಖಿಲ ಭಾರತ ವಿಜ್ಞಾನ ಸಂಸ್ಥೆ ಏಮ್ಸ್ ದೊರೆಯುತ್ತಿದ್ದು, ಇಲ್ಲಿನ ವೈದ್ಯಕೀಯ ಕಾಲೇಜು ಸಹಸ್ರಾರು ಮಕ್ಕಳ ಜೀವ ರಕ್ಷಿಸುತ್ತದೆ. ದಿಯೋರ, ಖುಷಿನಗರ್, ಬಸ್ತಿ ಮಹಾರಾಜ್ ನಗರ್ ಮತ್ತು ಸಿದ್ಧಾರ್ಥ್  ನಗರ್   ಪ್ರದೇಶಗಳಿಗೆ ವೈದ್ಯಕೀಯ ಕಾಲೇಜುಗಳು ದೊರೆಯುತ್ತಿವೆ. ಈ ವಲಯದಲ್ಲಿ ನಾಲ್ಕು ಪಥ, ಆರು  ಪಥ ರಸ್ತೆಗಳು ನಿರ್ಮಾಣವಾಗುತ್ತಿದ್ದು. ಸಂಪರ್ಕ ವ್ಯವಸ್ಥೆ ಸುಧಾರಣೆ ಕಾಣಲಿದೆ.  ಗೋರಖ್ ಪುರದಿಂದ 8 ನಗರಗಳಿಗೆ ವಿಮಾನ ಸೇವೆ ಪ್ರಾರಂಭಿಸಲಾಗಿದೆ. ಮುಂಬರುವ ಖುಷಿನಗರ್ ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರವಾಸೋದ್ಯಮ ಹೆಚ್ಚಾಗಲಿದೆ. “ಈ ಸ್ವಾವಲಂಬಿ ಭಾರತ ನಿರ್ಮಾಣದ ಪರಿವರ್ತನೆಯಿಂದಾಗಿ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ಧಾಂಜಲಿ ಸಲ್ಲಿಸಿದಂತಾಗುತ್ತದೆ”  ಎಂದು ಪ್ರಧಾನಮಂತ್ರಿ ಅವರು ಹೇಳಿದರು.

Click here to read PM's speech

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
5 Days, 31 World Leaders & 31 Bilaterals: Decoding PM Modi's Diplomatic Blitzkrieg

Media Coverage

5 Days, 31 World Leaders & 31 Bilaterals: Decoding PM Modi's Diplomatic Blitzkrieg
NM on the go

Nm on the go

Always be the first to hear from the PM. Get the App Now!
...
Prime Minister urges the Indian Diaspora to participate in Bharat Ko Janiye Quiz
November 23, 2024

The Prime Minister Shri Narendra Modi today urged the Indian Diaspora and friends from other countries to participate in Bharat Ko Janiye (Know India) Quiz. He remarked that the quiz deepens the connect between India and its diaspora worldwide and was also a wonderful way to rediscover our rich heritage and vibrant culture.

He posted a message on X:

“Strengthening the bond with our diaspora!

Urge Indian community abroad and friends from other countries  to take part in the #BharatKoJaniye Quiz!

bkjquiz.com

This quiz deepens the connect between India and its diaspora worldwide. It’s also a wonderful way to rediscover our rich heritage and vibrant culture.

The winners will get an opportunity to experience the wonders of #IncredibleIndia.”