"ಸುಧಾರಣೆ, ಕಾರ್ಯಕ್ಷಮತೆ(ಸಾಧನೆ) ಮತ್ತು ಪರಿವರ್ತನೆಯೇ ನಮ್ಮ ಆಡಳಿತ ಮಂತ್ರವಾಗಿದೆ"
"ಕಳೆದ ದಶಕದಲ್ಲಿ 25 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ, ಅವರು ನವ-ಮಧ್ಯಮ ವರ್ಗವನ್ನು ಸೃಷ್ಟಿಸಿದ್ದಾರೆ"
ಭಾರತವನ್ನು ಜಾಗತಿಕ ಉತ್ಪಾದನಾ ತಾಣವಾಗಿ ರೂಪಿಸುವುದು ಪ್ರತಿಯೊಬ್ಬ ಭಾರತೀಯನ ಆಶಯವಾಗಿದೆ
"ಮೂಲಸೌಕರ್ಯವು ನಮ್ಮ ನಾಗರಿಕರಿಗೆ ಅನುಕೂಲತೆ ಮತ್ತು ಜೀವನ ಸೌಕರ್ಯ ಸುಧಾರಿಸುವ ಸಾಧನವಾಗಿದೆ"
"21ನೇ ಶತಮಾನದ ಈ 3ನೇ ದಶಕವು ಭಾರತವನ್ನು ಮೇಲೆತ್ತುವ ದಶಕದಂತಿದೆ"
" ಭೂತಕಾಲ ಆಧರಿಸಿ ನಾವು ನಮ್ಮ ನೀತಿಗಳನ್ನು ರೂಪಿಸಿಲ್ಲ, ಆದರೆ ಭವಿಷ್ಯದ ಮೇಲೆ ಕಣ್ಣಿಟ್ಟು ರೂಪಿಸುತ್ತಿದ್ದೇವೆ"
“ಇಂದಿನ ಭಾರತ ಅವಕಾಶಗಳ ನಾಡು, ಇಂದಿನ ಭಾರತ ಸಂಪತ್ತಿನ ಸೃಷ್ಟಿಕರ್ತರನ್ನು ಗೌರವಿಸುತ್ತದೆ”
"ಸಮೃದ್ಧ ಭಾರತವು ಜಾಗತಿಕ ಸಮೃದ್ಧಿಗೆ ದಾರಿ ಮಾಡಿಕೊಡುತ್ತದೆ"

ನಮಸ್ಕಾರ,

ಶುಭ ಸಂಜೆ,

“ಎಕನಾಮಿಕ್ ಟೈಮ್ಸ್ ವರ್ಲ್ಡ್ ಲೀಡರ್ಸ್ ಫೋರಮ್” ನ ಈ ನೂತನ ಆವೃತ್ತಿಯಲ್ಲಿ ಭಾಗವಹಿಸುತ್ತಿರುವಾಗ, ಹಲವಾರು ಪರಿಚಿತ ಮುಖಗಳನ್ನು ನೋಡಲು ನನಗೆ ಸಂತೋಷವಾಗುತ್ತಿದೆ. ಭಾರತದ ಉಜ್ವಲ ಭವಿಷ್ಯದ ಬಗ್ಗೆ ಇಲ್ಲಿ ಅತ್ಯುತ್ತಮ ಚರ್ಚೆಗಳು ನಡೆದಿವೆ ಎಂದು ನನಗೆ ವಿಶ್ವಾಸವಿದೆ, ಅದರಲ್ಲೂ ವಿಶೇಷವಾಗಿ ಇಡೀ ಜಗತ್ತು ಭಾರತದ ಬಗ್ಗೆ ವಿಶ್ವಾಸ ಹೊಂದಿರುವ ಈ ಸಮಯದಲ್ಲಿ ಚರ್ಚೆಗಳು ನಡೆದಿವೆ ಎಂಬುದು ವಿಶೇಷ.

ಸ್ನೇಹಿತರೇ,

ಭಾರತ ಇಂದು ವಿಶಿಷ್ಟವಾದ ಯಶೋಗಾಥೆಯನ್ನು ರೂಪಿಸುತ್ತಿದೆ. ನಮ್ಮ ಆರ್ಥಿಕತೆಯ ಕಾರ್ಯಕ್ಷಮತೆಯಲ್ಲಿ ನಮ್ಮ ಸುಧಾರಣೆಗಳ ಪ್ರಭಾವವು ಸ್ಪಷ್ಟವಾಗಿದೆ. ವಾಸ್ತವವಾಗಿ, ಭಾರತವು ಆಗಾಗ್ಗೆ ಭವಿಷ್ಯವಾಣಿ ಸಂಕಲ್ಪಗಳನ್ನು ಮತ್ತು ಸಹವರ್ತಿದೇಶಗಳ ಜೊತೆ ಹೋಲಿಕೆಯ ನಿರೀಕ್ಷೆಯನ್ನು ಮೀರಿಸಿದೆ. ಉದಾಹರಣೆಗೆ, ಕಳೆದ ಹತ್ತು ವರ್ಷಗಳಲ್ಲಿ, ಜಾಗತಿಕ ಆರ್ಥಿಕತೆಯು 35 ಪ್ರತಿಶತದಷ್ಟು ಬೆಳೆದಿದೆ. ಆದರೆ ಅದೇ ಅವಧಿಯಲ್ಲಿ, ನಮ್ಮ ದೇಶದ ಆರ್ಥಿಕತೆಯು ಸುಮಾರು 90 ಪ್ರತಿಶತದಷ್ಟು ವಿಸ್ತರಿಸಿದೆ. ಇದುವೇ ನಾವು ಸಾಧಿಸಿದ ನಿರಂತರ ಬೆಳವಣಿಗೆ, ನಾವು ಭರವಸೆ ನೀಡುವ ನಿರಂತರ ಬೆಳವಣಿಗೆ.., ಮತ್ತು ಭವಿಷ್ಯದಲ್ಲಿ ಮುಂದುವರಿಯುವ ನಿರಂತರ ಬೆಳವಣಿಗೆ… ! 

 

ಸ್ನೇಹಿತರೇ,

ಕಳೆದ ಕೆಲವು ವರ್ಷಗಳಲ್ಲಿ, ಕೋಟಿಗಟ್ಟಲೆ ಭಾರತೀಯರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರುವಲ್ಲಿ ನಾವು ಯಶಸ್ವಿಯಾಗಿದ್ದೇವೆ. ನಮ್ಮ ಸರ್ಕಾರ ಅಸಂಖ್ಯಾತ ನಾಗರಿಕರ ಬದುಕನ್ನು ಮುಟ್ಟಿದೆ. ಈ ದೇಶದ ಜನತೆಗೆ ಉತ್ತಮ ಆಡಳಿತ ನೀಡಲು ನಾವು ಬದ್ಧರಾಗಿದ್ದೇವೆ. ಸುಧಾರಣೆ, ಸಾಧನೆ, ಪರಿವರ್ತನೆ ನಮ್ಮ ಮಂತ್ರವಾಗಿದೆ ಮತ್ತು ನಮ್ಮನ್ನು ಮುನ್ನಡೆಸುವ ಸೇವಾ ಮನೋಭಾವವನ್ನು ಭಾರತದ ಜನರು ಗುರುತಿಸಿದ್ದಾರೆ. ಕಳೆದ ದಶಕದಲ್ಲಿ ಅವರು ರಾಷ್ಟ್ರದ ಸಾಧನೆಗಳನ್ನು ವೀಕ್ಷಿಸಿದ್ದಾರೆ, ಅದಕ್ಕಾಗಿಯೇ ಇಂದು, ಭಾರತದ ಜನರು ಹೊಸ ಆತ್ಮವಿಶ್ವಾಸದಿಂದ ತುಂಬಿದ್ದಾರೆ. ತಮ್ಮಲ್ಲಿ, ದೇಶದ ಪ್ರಗತಿಯಲ್ಲಿ, ನಮ್ಮ ನೀತಿಗಳಲ್ಲಿ, ನಮ್ಮ ನಿರ್ಧಾರಗಳಲ್ಲಿ ಮತ್ತು ನಮ್ಮ ಉದ್ದೇಶಗಳಲ್ಲಿ ವಿಶ್ವಾಸವಿದೆ. ಜಾಗತಿಕ ಸನ್ನಿವೇಶವನ್ನು ನಾವು ಪರಿಗಣಿಸಿದಾಗ, ಈ ವರ್ಷ ಹಲವು ಪ್ರಮುಖ ದೇಶಗಳು ಚುನಾವಣೆಗಳನ್ನು ನಡೆಸಿವೆ ಮತ್ತು ಬದಲಾವಣೆಯತ್ತ ಪ್ರವೃತ್ತಿಯನ್ನು ಹೊಂದಿದೆ, ಸರ್ಕಾರಗಳು ಸವಾಲುಗಳನ್ನು ಎದುರಿಸುತ್ತಿವೆ, ಭಾರತವು ಸಂಪೂರ್ಣವಾಗಿ ತನ್ನದೇ ಆದ ಸಕಾರಾತ್ಮಕವಾದ ಮಾರ್ಗವನ್ನು ತೆಗೆದುಕೊಂಡಿದೆ. ಭಾರತದ ನಾಗರಿಕರು ಈ ಪ್ರವೃತ್ತಿಯನ್ನು ಪುರಸ್ಕರಿಸುವ ಆದೇಶವನ್ನು ನೀಡಿದ್ದಾರೆ. 60 ವರ್ಷಗಳಲ್ಲಿ ಮೊದಲ ಬಾರಿಗೆ, ಭಾರತೀಯ ಮತದಾರರು ಸತತ ಮೂರನೇ ಅವಧಿಯನ್ನು ಪಡೆಯಲು ಸರ್ಕಾರವೊಂದನ್ನು ಸಕ್ರಿಯಗೊಳಿಸಿ ಸುರಸ್ಕರಿಸಿದ್ದಾರೆ. ಭಾರತದ ಮಹತ್ವಾಕಾಂಕ್ಷೆಯ ಯುವಕರು ಮತ್ತು ಮಹಿಳೆಯರು ನಿರಂತರತೆ, ರಾಜಕೀಯ ಸ್ಥಿರತೆ ಮತ್ತು ಆರ್ಥಿಕ ಬೆಳವಣಿಗೆಗೆ ಮತ ಹಾಕಿದ್ದಾರೆ. ಇದಕ್ಕಾಗಿ ಭಾರತದ ಜನರಿಗೆ ಧನ್ಯವಾದ ಹೇಳಲು ಯಾವುದೇ ಕೃತಜ್ಞತೆಯ ಪದಗಳು ಸಾಕಾಗುವುದಿಲ್ಲ.

 

ಸ್ನೇಹಿತರೇ,

ಇಂದು, ಭಾರತದ ಪ್ರಗತಿಯು ಜಾಗತಿಕವಾಗಿ ಅನೇಕ ಪ್ರಧಾನ ಮತ್ತು ಮುಖ್ಯಾಂಶ ಕಾರ್ಯಗಳನ್ನು ಮಾಡುತ್ತಿದೆ. ಅಂಕಿಅಂಶಗಳು ಮುಖ್ಯವಾಗಿದ್ದರೂ, ರೂಪಾಂತರಗೊಳ್ಳುತ್ತಿರುವ ಜೀವನವನ್ನು ಪರಿಗಣಿಸುವುದು ಅಷ್ಟೇ ನಿರ್ಣಾಯಕ. ಭಾರತದ ಭವಿಷ್ಯದ ಕೀಲಿಕೈ ಈ ರೂಪಾಂತರದಲ್ಲಿದೆ. ಕಳೆದ ಒಂದು ದಶಕದಲ್ಲಿ 25 ಕೋಟಿ ಜನರನ್ನು ಬಡತನದಿಂದ ಮುಕ್ತಗೊಳಿಸಲಾಗಿದೆ. ಈ ವ್ಯಕ್ತಿಗಳು ಬಡತನದಿಂದ ಹೊರಬಂದಿರುವುದು ಮಾತ್ರವಲ್ಲ, ಅವರು ಆರ್ಥಿಕವಾಗಿ ನವ-ಮಧ್ಯಮ ವರ್ಗವನ್ನು ರೂಪಿಸಿದ್ದಾರೆ. ಈ ರೂಪಾಂತರದ ವೇಗ ಮತ್ತು ಪ್ರಮಾಣವು ಪ್ರಪಂಚದಾದ್ಯಂತ ಯಾವುದೇ ಪ್ರಜಾಪ್ರಭುತ್ವ ಸಮಾಜದಲ್ಲಿ ಅಭೂತಪೂರ್ವವಾಗಿದೆ. ಬಡವರ ಬಗೆಗಿನ ಸರ್ಕಾರದ ಧೋರಣೆಯನ್ನು ನಾವು ಬದಲಾಯಿಸಿದ್ದರಿಂದ ಇದು ಭಾರತದಲ್ಲಿ ಸಾಧ್ಯವಾಯಿತು. ಬಡವರು ಆಕಾಂಕ್ಷೆಗಳು ಮತ್ತು ಸ್ಥಿತಿಸ್ಥಾಪಕತ್ವವನ್ನು ಹೊಂದಿದ್ದರು, ಸಾಮಾನ್ಯವಾಗಿ ನಮಗಿಂತ ಹೆಚ್ಚಿನವರು, ಆದರೆ ಅನೇಕ ಅಡೆತಡೆಗಳು ಅವರ ದಾರಿಯಲ್ಲಿ ನಿಂತವು. ಅವರಿಗೆ ಬ್ಯಾಂಕ್ ಖಾತೆಗಳು ಮತ್ತು ಮೂಲಭೂತ ಸೌಕರ್ಯಗಳ ಪ್ರವೇಶದ ಕೊರತೆಯಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ ನಾವು ಬಡವರನ್ನು ಸಬಲೀಕರಣಗೊಳಿಸುವ ಮಾರ್ಗವನ್ನು ಆರಿಸಿಕೊಂಡಿದ್ದೇವೆ. ನಾವು ಅವರ ದಾರಿಯಲ್ಲಿನ ಅಡೆತಡೆಗಳನ್ನು ತೆಗೆದುಹಾಕಿದ್ದೇವೆ ಮತ್ತು ಅವರ ಜೊತೆಯಲ್ಲಿ, ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದೇವೆ. ಮತ್ತು ಸುಲಭದಲ್ಲಿ ಹೇಳುವುದಾದರೆ, ಈ ಕೆಲವೊಂದು ಬದಲಾವಣೆಯನ್ನು ನೋಡಿ: ದಶಕಗಳಿಂದ ಬ್ಯಾಂಕ್ ಖಾತೆಗಳ ಕೊರತೆಯಿರುವ ಜನರು ಈಗ ತಮ್ಮ ಖಾತೆಗಳಿಂದ ಡಿಜಿಟಲ್ ವಹಿವಾಟು ನಡೆಸುತ್ತಿದ್ದಾರೆ. ಒಂದು ಕಾಲದಲ್ಲಿ ಬ್ಯಾಂಕಿಂಗ್ ವ್ಯವಸ್ಥೆಯಿಂದ ಹೊರಗುಳಿದಿದ್ದವರು ಇಂದು ಯಾವುದೇ ಜಾಮೀನು ಇಲ್ಲದೆ ಬ್ಯಾಂಕ್ ಸಾಲ ಪಡೆದು ಉದ್ಯಮಿಗಳಾಗುತ್ತಿದ್ದಾರೆ. ಜಗತ್ತಿನಲ್ಲಿ ಸಂಭವಿಸುವ ಬದಲಾವಣೆಗಳ ಬಗ್ಗೆ ಏನೊಂದೂ ತಿಳಿಯದಿದ್ದವರು ಕೂಡಾ ಈಗ ಸಾಧನಗಳು ಮತ್ತು ಸಂಪರ್ಕವನ್ನು ಹೊಂದಿದ್ದಾರೆ, ಅವರನ್ನು ಉತ್ತಮ ತಿಳುವಳಿಕೆಯುಳ್ಳ ನಾಗರಿಕರನ್ನಾಗಿ ಇವುಗಳು ಮಾಡುತ್ತಿವೆ.

 

ಬಡತನದ ಹೋರಾಟದಿಂದ ಹೊರಬಂದವರು ಪ್ರಗತಿಯ ಹಸಿವಿನಿಂದ ನಡೆಸಲ್ಪಡುವ ಆರ್ಥಿಕವಾಗಿ ಸುಧಾರಿತ ನವ-ಮಧ್ಯಮ ವರ್ಗದ ಮಂದಿಗಳಾಗುತ್ತಾರೆ. ಅವರು ತಮ್ಮ ಮಕ್ಕಳಿಗೆ ಉಜ್ವಲ ಭವಿಷ್ಯವನ್ನು ಭದ್ರಪಡಿಸಲು ಬಯಸುತ್ತಾರೆ. ಅವರ ಆಕಾಂಕ್ಷೆಗಳು ಹೊಸ ಮೂಲಸೌಕರ್ಯಗಳ ಸೃಷ್ಟಿಗೆ ಉತ್ತೇಜನ ನೀಡುತ್ತಿವೆ, ಅವರ ಸೃಜನಶೀಲತೆ ನಾವೀನ್ಯತೆಯನ್ನು ಪ್ರೇರೇಪಿಸುತ್ತಿದೆ, ಅವರ ಕೌಶಲ್ಯಗಳು ಉದ್ಯಮದ ದಿಕ್ಕುಗಳನ್ನು ರೂಪಿಸುತ್ತಿವೆ, ಅವರ ಅಗತ್ಯತೆಗಳು ಮಾರುಕಟ್ಟೆ ಪ್ರವೃತ್ತಿಯನ್ನು ನಿರ್ಧರಿಸುತ್ತಿವೆ ಮತ್ತು ಅವರ ಬೆಳೆಯುತ್ತಿರುವ ಆದಾಯವು ಮಾರುಕಟ್ಟೆಯ ಬೇಡಿಕೆಯನ್ನು ಉತ್ತೇಜಿಸುತ್ತದೆ. ಭಾರತದ ಈ ನವ-ಮಧ್ಯಮ ವರ್ಗವು ದೇಶವನ್ನು ಮುನ್ನಡೆಸುವ ಮಹಾನ್ ಶಕ್ತಿಯಾಗಿದೆ ಎಂದು ಸಾಬೀತಾಗಿದೆ.

 

ಸ್ನೇಹಿತರೇ,

ಚುನಾವಣಾ ಫಲಿತಾಂಶ ಪ್ರಕಟವಾದಾಗ ನಮ್ಮ ಮೂರನೇ ಅವಧಿಯಲ್ಲಿ ಸರ್ಕಾರ ಮೂರು ಪಟ್ಟು ವೇಗದಲ್ಲಿ ಕೆಲಸ ಮಾಡುತ್ತದೆ ಎಂದು ಈ ಮೊದಲು ನಾನು ಹೇಳಿದ್ದೇನೆ. ನಾನು ನಿಮಗೆ ಭರವಸೆ ನೀಡುತ್ತೇನೆ, ನಮ್ಮ ಸಂಕಲ್ಪ ಮಾತ್ರ ಬಲಗೊಂಡಿದೆ. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯಂತೆ, ಸರ್ಕಾರವು ಭರವಸೆ ಮತ್ತು ವಿಶ್ವಾಸದಿಂದ ತುಂಬಿದೆ. ಈ ಮೂರನೇ ಅವಧಿಯ ಸರ್ಕಾರ ರಚನೆಯಾಗಿ 100 ದಿನಗಳು ಕೂಡ ಆಗಿಲ್ಲ, ಆದರೂ ನಾವು ಭೌತಿಕ ಮೂಲಸೌಕರ್ಯಗಳನ್ನು ಆಧುನೀಕರಿಸುವಲ್ಲಿ, ಸಾಮಾಜಿಕ ಮೂಲಸೌಕರ್ಯಗಳನ್ನು ವಿಸ್ತರಿಸುವಲ್ಲಿ ಮತ್ತು ಸ್ಥಿರವಾಗಿ ಸುಧಾರಣೆಗಳನ್ನು ಮುಂದುವರೆಸುವಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ. 

ಕಳೆದ ಮೂರು ತಿಂಗಳಲ್ಲಿ ಬಡವರು, ರೈತರು, ಯುವಕರು ಮತ್ತು ಮಹಿಳೆಯರ ಅನುಕೂಲಕ್ಕಾಗಿ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದ್ದೇವೆ. ನಾವು ಬಡವರಿಗೆ ಮೂರು ಕೋಟಿ ಹೊಸ ಮನೆಗಳನ್ನು ಮಂಜೂರು ಮಾಡಿದ್ದೇವೆ, ಏಕೀಕೃತ ಪಿಂಚಣಿ ಯೋಜನೆಯನ್ನು ಘೋಷಿಸಿದ್ದೇವೆ, ಕೃಷಿ ಮೂಲಸೌಕರ್ಯ ನಿಧಿಯನ್ನು 1 ಲಕ್ಷ ಕೋಟಿ ರೂಪಾಯಿಗೆ ವಿಸ್ತರಿಸಿದ್ದೇವೆ, 100 ಕ್ಕೂ ಹೆಚ್ಚು ವಿಧದ ಸುಧಾರಿತ ಬೀಜಗಳನ್ನು ಬಿಡುಗಡೆ ಮಾಡಿದ್ದೇವೆ ಮತ್ತು 2 ಲಕ್ಷ ಕೋಟಿ ರೂಪಾಯಿಗಳ ವಿಶೇಷ “ಪ್ರಧಾನಮಂತ್ರಿ ಪ್ಯಾಕೇಜ್“ ಅನ್ನು ಪ್ರಾರಂಭಿಸಿದ್ದೇವೆ, ನೇರವಾಗಿ ಹೆಚ್ಚು ಪ್ರಯೋಜನ ಪಡೆಯುತ್ತೇವೆ. 4 ಕೋಟಿಗೂ ಹೆಚ್ಚು ಯುವಕರು. ಹೆಚ್ಚುವರಿಯಾಗಿ, ಕೇವಲ 100 ದಿನಗಳಲ್ಲಿ, ಸಾಮಾನ್ಯ ಕುಟುಂಬದ 11 ಲಕ್ಷ ಗ್ರಾಮೀಣ ಮಹಿಳೆಯರು - ಆರ್ಥಿಕ ಪ್ರಗತಿಯಲ್ಲಿ ಗಮನಾರ್ಹ ಸಾಧನೆ ಮೂಲಕ - 'ಲಖ್ ಪತಿ( ಲಕ್ಷಾಧಿಪತಿ)' ಗಳಾಗಿದ್ದಾರೆ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi