Quoteಪ್ರಧಾನಮಂತ್ರಿಯವರು ಆಯುಷ್ ವಲಯದ ಸಮಗ್ರ ಪರಿಶೀಲನೆ ಕೈಗೊಂಡು ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕಾರ್ಯತಂತ್ರದ ಮಧ್ಯಸ್ಥಿಕೆಗಳ ಅಗತ್ಯವನ್ನು ಒತ್ತಿ ಹೇಳಿದರು
Quoteಪ್ರಧಾನಮಂತ್ರಿಯವರು ವಿಶ್ವಾದ್ಯಂತ ಆಯುಷ್ ನ ಹೆಚ್ಚುತ್ತಿರುವ ಸ್ವೀಕಾರ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸುವ ಅದರ ಸಾಮರ್ಥ್ಯದ ಬಗ್ಗೆ ಚರ್ಚಿಸಿದರು
Quoteಪ್ರಧಾನಮಂತ್ರಿಯವರು ನೀತಿ ಬೆಂಬಲ, ಸಂಶೋಧನೆ ಮತ್ತು ನಾವೀನ್ಯತೆಯ ಮೂಲಕ ಆಯುಷ್ ವಲಯವನ್ನು ಬಲಪಡಿಸುವ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಿದರು
Quoteಪ್ರಧಾನಮಂತ್ರಿಯವರು ಸಮಗ್ರ ಮತ್ತು ಏಕೀಕೃತ ಆರೋಗ್ಯ ಮತ್ತು ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಔಷಧ ವಲಯದಲ್ಲಿ ಪ್ರಮಾಣಿತ ಪ್ರೋಟೋಕಾಲ್ ಗಳನ್ನು ಉತ್ತೇಜಿಸುವ ಅಗತ್ಯವನ್ನು ಒತ್ತಿ ಹೇಳಿದರು

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 7 ಲೋಕ ಕಲ್ಯಾಣ ಮಾರ್ಗದಲ್ಲಿ ಆಯುಷ್ ವಲಯದ ಪರಿಶೀಲನೆಗಾಗಿ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದರು. ಸಮಗ್ರ ಯೋಗಕ್ಷೇಮ ಮತ್ತು ಆರೋಗ್ಯ ರಕ್ಷಣೆ, ಸಾಂಪ್ರದಾಯಿಕ ಜ್ಞಾನದ ಸಂರಕ್ಷಣೆ ಮತ್ತು ರಾಷ್ಟ್ರದ ಸ್ವಾಸ್ಥ್ಯ ಪರಿಸರ ವ್ಯವಸ್ಥೆಗೆ ಅದರ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು.

2014ರಲ್ಲಿ ಆಯುಷ್ ಸಚಿವಾಲಯ ಸ್ಥಾಪನೆಯಾದಾಗಿನಿಂದ, ಪ್ರಧಾನಮಂತ್ರಿಯವರು ಅದರ ಅಪಾರ ಸಾಮರ್ಥ್ಯವನ್ನು ಮನಗಂಡು, ಬೆಳವಣಿಗೆಗೆ ಸ್ಪಷ್ಟವಾದ ಮಾರ್ಗಸೂಚಿಯನ್ನು ರೂಪಿಸಿದ್ದಾರೆ. ಆಯುಷ್ ವಲಯದ ಪ್ರಗತಿಯ ಸಮಗ್ರ ಪರಿಶೀಲನೆಯಲ್ಲಿ, ಅದರ ಸಂಪೂರ್ಣ ಸಾಮರ್ಥ್ಯವನ್ನು ಬಳಸಿಕೊಳ್ಳಲು ಕಾರ್ಯತಂತ್ರದ ಮಧ್ಯಸ್ಥಿಕೆಗಳ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿ ಹೇಳಿದರು. ಈ ಪರಿಶೀಲನೆಯು ಉಪಕ್ರಮಗಳನ್ನು ಸರಳಗೊಳಿಸುವುದು, ಸಂಪನ್ಮೂಲಗಳನ್ನು ಗರಿಷ್ಠಗೊಳಿಸುವುದು ಮತ್ತು ಆಯುಷ್ನ ಜಾಗತಿಕ ಉಪಸ್ಥಿತಿಯನ್ನು ಹೆಚ್ಚಿಸಲು ದೂರದೃಷ್ಟಿಯ ಹಾದಿಯನ್ನು ನಿರ್ಮಿಸುವುದರ ಮೇಲೆ ಕೇಂದ್ರೀಕರಿಸಿದೆ.

ಪರಿಶೀಲನೆಯ ಸಮಯದಲ್ಲಿ, ತಡೆಗಟ್ಟುವ ಆರೋಗ್ಯ ರಕ್ಷಣೆಯನ್ನು ಉತ್ತೇಜಿಸುವಲ್ಲಿ, ಔಷಧೀಯ ಸಸ್ಯಗಳ ಕೃಷಿಯ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಉತ್ತೇಜಿಸುವಲ್ಲಿ ಮತ್ತು ಸಾಂಪ್ರದಾಯಿಕ ಔಷಧದಲ್ಲಿ ಮುಂಚೂಣಿಯಲ್ಲಿರುವ ಭಾರತದ ಜಾಗತಿಕ ಸ್ಥಾನಮಾನವನ್ನು ಹೆಚ್ಚಿಸುವಲ್ಲಿ ಈ ವಲಯದ ಮಹತ್ವದ ಕೊಡುಗೆಗಳನ್ನು ಪ್ರಧಾನಿ ಒತ್ತಿ ಹೇಳಿದರು.ಈ ವಲಯದ ಸ್ಥಿತಿಸ್ಥಾಪಕತ್ವ ಮತ್ತು ಬೆಳವಣಿಗೆಯನ್ನು ಅವರು ಗಮನಿಸಿದರು, ಜಗತ್ತಿನಾದ್ಯಂತ ಇದಕ್ಕೆ ಹೆಚ್ಚುತ್ತಿರುವ ಮನ್ನಣೆ ಮತ್ತು ಸುಸ್ಥಿರ ಅಭಿವೃದ್ಧಿ ಹಾಗೂ ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುವ ಸಾಮರ್ಥ್ಯವನ್ನು ಗುರುತಿಸಿದರು.

ನೀತಿ ಬೆಂಬಲ, ಸಂಶೋಧನೆ ಮತ್ತು ನಾವೀನ್ಯತೆ ಮೂಲಕ ಆಯುಷ್ ವಲಯವನ್ನು ಬಲಪಡಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. ಯೋಗ, ಪ್ರಕೃತಿ ಚಿಕಿತ್ಸೆ ಮತ್ತು ಔಷಧ ಕ್ಷೇತ್ರದಲ್ಲಿ ಸಮಗ್ರ ಮತ್ತು ಏಕೀಕೃತ ಆರೋಗ್ಯ ಮತ್ತು ಪ್ರಮಾಣಿತ ಪ್ರೋಟೋಕಾಲ್ ಗಳನ್ನು ಉತ್ತೇಜಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.

ಪ್ರಧಾನಮಂತ್ರಿಯವರು ಸರ್ಕಾರದ ಎಲ್ಲಾ ವಲಯಗಳ ಕಾರ್ಯಾಚರಣೆಗಳಲ್ಲಿ ಪಾರದರ್ಶಕತೆಯು ಮೂಲಭೂತ ತತ್ವವಾಗಿರಬೇಕು ಎಂದು ಒತ್ತಿ ಹೇಳಿದರು. ಕಾನೂನಿನ ಚೌಕಟ್ಟಿನೊಳಗೆ ಮತ್ತು ಸಾರ್ವಜನಿಕ ಹಿತಾಸಕ್ತಿಗಾಗಿ ಮಾತ್ರ ಕಾರ್ಯನಿರ್ವಹಿಸುವ ಮೂಲಕ, ಉನ್ನತ ಮಟ್ಟದ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುವಂತೆ ಎಲ್ಲಾ ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.

ಆಯುಷ್ ವಲಯವು ಭಾರತದ ಆರೋಗ್ಯ ರಕ್ಷಣಾ ಕ್ಷೇತ್ರದಲ್ಲಿ ವೇಗವಾಗಿ ಪ್ರಮುಖ ಶಕ್ತಿಯಾಗಿ ಬೆಳೆದಿದೆ. ಶಿಕ್ಷಣ, ಸಂಶೋಧನೆ, ಸಾರ್ವಜನಿಕ ಆರೋಗ್ಯ, ಅಂತಾರಾಷ್ಟ್ರೀಯ ಸಹಯೋಗ, ವ್ಯಾಪಾರ, ಡಿಜಿಟಲೀಕರಣ ಮತ್ತು ಜಾಗತಿಕ ವಿಸ್ತರಣೆಯಲ್ಲಿ ಗಮನಾರ್ಹ ಮೈಲಿಗಲ್ಲುಗಳನ್ನು ಸಾಧಿಸಿದೆ. ಸರ್ಕಾರದ ಪ್ರಯತ್ನಗಳ ಮೂಲಕ, ಈ ವಲಯವು ಹಲವಾರು ಪ್ರಮುಖ ಸಾಧನೆಗಳನ್ನು ಕಂಡಿದೆ, ಅದರ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಸಭೆಯಲ್ಲಿ ಮಾಹಿತಿ ನೀಡಲಾಯಿತು.

•  ಆಯುಷ್ ವಲಯವು ಅಭೂತಪೂರ್ವ ಆರ್ಥಿಕ ಬೆಳವಣಿಗೆಯನ್ನು ಸಾಧಿಸಿದೆ, ಉತ್ಪಾದನಾ ಮಾರುಕಟ್ಟೆಯ ಗಾತ್ರವು 2014ರಲ್ಲಿ 2.85 ಶತಕೋಟಿ ಡಾಲರ್ಗಳಿಂದ 2023ರಲ್ಲಿ 23 ಶತಕೋಟಿ ಡಾಲರ್ಗಳಿಗೆ ಏರಿಕೆಯಾಗಿದೆ. 
•  ಸಾಕ್ಷ್ಯಾಧಾರಿತ ಸಾಂಪ್ರದಾಯಿಕ ಚಿಕಿತ್ಸೆಯಲ್ಲಿ ಭಾರತವು ಜಾಗತಿಕ ನಾಯಕನಾಗಿ ಹೊರಹೊಮ್ಮಿದೆ, ಆಯುಷ್ ಸಂಶೋಧನಾ ಪೋರ್ಟಲ್ ಈಗ 43,000 ಕ್ಕೂ ಹೆಚ್ಚು ಅಧ್ಯಯನಗಳನ್ನು ಒಳಗೊಂಡಿದೆ. 
•  ಕಳೆದ 10 ವರ್ಷಗಳಲ್ಲಿನ ಸಂಶೋಧನಾ ಪ್ರಕಟಣೆಗಳು ಹಿಂದಿನ 60 ವರ್ಷಗಳ ಪ್ರಕಟಣೆಗಳನ್ನು ಮೀರಿಸಿವೆ. 
•  ಸಮಗ್ರ ಆರೋಗ್ಯ ಪರಿಹಾರಗಳನ್ನು ಬಯಸುವ ಅಂತಾರಾಷ್ಟ್ರೀಯ ರೋಗಿಗಳನ್ನು ಆಕರ್ಷಿಸಲು, ವೈದ್ಯಕೀಯ ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಯುಷ್ ವೀಸಾ ನೆರವಾಗಲಿದೆ. 

•  ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಸಂಸ್ಥೆಗಳೊಂದಿಗಿನ ಸಹಯೋಗದ ಮೂಲಕ ಆಯುಷ್ ವಲಯವು ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. 
•  ಆಯುಷ್ ಗ್ರಿಡ್ ಅಡಿಯಲ್ಲಿ ಮೂಲಸೌಕರ್ಯಗಳನ್ನು ಬಲಪಡಿಸುವುದು ಮತ್ತು ಕೃತಕ ಬುದ್ಧಿಮತ್ತೆಯ ಏಕೀಕರಣದ ಮೇಲೆ ಹೊಸ ಗಮನ. 
•  ಯೋಗದ ಪ್ರಚಾರಕ್ಕಾಗಿ ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಿಕೊಳ್ಳಲಾಗುವುದು.
•  ಐಗಾಟ್ ವೇದಿಕೆಯು ಹೆಚ್ಚು ಸಮಗ್ರ ವೈ-ಬ್ರೇಕ್ ಯೋಗದಂತಹ ವಿಷಯವನ್ನು ಒಳಗೊಂಡಿರುತ್ತದೆ. 
• ಗುಜರಾತ್  ಜಾಮ್ ನಗರದಲ್ಲಿ WHO ಗ್ಲೋಬಲ್ ಟ್ರೆಡಿಷನಲ್ ಮೆಡಿಸಿನ್ ಸೆಂಟರ್ ಅನ್ನು ಸ್ಥಾಪಿಸುವುದು ಒಂದು ಮಹತ್ವದ ಸಾಧನೆಯಾಗಿದ್ದು, ಸಾಂಪ್ರದಾಯಿಕ ಔಷಧದಲ್ಲಿ ಭಾರತದ ನಾಯಕತ್ವವನ್ನು ಇದು ಮತ್ತಷ್ಟು ಗಟ್ಟಿಗೊಳಿಸುತ್ತದೆ. 
•  ವಿಶ್ವ ಆರೋಗ್ಯ ಸಂಸ್ಥೆಯ ಅಂತಾರಾಷ್ಟ್ರೀಯ ರೋಗ ವರ್ಗೀಕರಣ (ICD)-11 ರಲ್ಲಿ ಸಾಂಪ್ರದಾಯಿಕ ಔಷಧವನ್ನು ಸೇರಿಸಲಾಗಿದೆ. 
•  ರಾಷ್ಟ್ರೀಯ ಆಯುಷ್ ಮಿಷನ್ ಈ ವಲಯದ ಮೂಲಸೌಕರ್ಯ ಮತ್ತು ಪ್ರವೇಶವನ್ನು ವಿಸ್ತರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 
•  2024ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (IDY) 24.52 ಕೋಟಿಗೂ ಹೆಚ್ಚು ಜನರು ಭಾಗವಹಿಸಿದ್ದು, ಇದು ಈಗ ಜಾಗತಿಕ ವಿದ್ಯಮಾನವಾಗಿದೆ. 
•  2025ರ 10ನೇ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ (IDY) ವಿಶ್ವಾದ್ಯಂತ ಹೆಚ್ಚಿನ ಜನರ ಭಾಗವಹಿಸುವಿಕೆಯೊಂದಿಗೆ ಒಂದು ಮಹತ್ವದ ಮೈಲಿಗಲ್ಲಾಗಲಿದೆ.

ಸಭೆಯಲ್ಲಿ ಕೇಂದ್ರ ಆರೋಗ್ಯ ಸಚಿವರಾದ ಶ್ರೀ ಜಗತ್ ಪ್ರಕಾಶ್ ನಡ್ಡಾ, ಆಯುಷ್ ಸಚಿವಾಲಯದ ರಾಜ್ಯ ಸಚಿವ (ಸ್ವತಂತ್ರ ಮಾಹಿತಿ), ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ರಾಜ್ಯ ಸಚಿವರಾದ ಶ್ರೀ ಪ್ರತಾಪ್ ರಾವ್ ಜಾಧವ್, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಡಾ. ಪಿ. ಕೆ. ಮಿಶ್ರಾ, ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ -2 ಶ್ರೀ ಶಕ್ತಿಕಾಂತ ದಾಸ್, ಪ್ರಧಾನಮಂತ್ರಿಯವರ ಸಲಹೆಗಾರ ಶ್ರೀ ಅಮಿತ್ ಖರೆ ಮತ್ತು ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
PLI for textile catalyses investments of Rs 7,343 crore

Media Coverage

PLI for textile catalyses investments of Rs 7,343 crore
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 11 ಜುಲೈ 2025
July 11, 2025

Appreciation by Citizens in Building a Self-Reliant India PM Modi's Initiatives in Action