ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಸತ್ತಿನಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮವನ್ನು ಉದ್ದೇಶಿಸಿ ಘನತೆವೆತ್ತ ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಮಂತ್ರಿ ಮತ್ತು ಲೋಕಸಭಾ ಸ್ಪೀಕರ್ ಮಾತನಾಡಿದರು. ತಮ್ಮ ಭಾಷಣದ ನಂತರ ಘನತೆವೆತ್ತ ರಾಷ್ಟ್ರಪತಿಗಳು, ಸಂವಿಧಾನದ ಪೀಠಿಕೆಯನ್ನು ಓದುವ ನೇರ ಕಾರ್ಯಕ್ರಮದಲ್ಲಿ ರಾಷ್ಟ್ರದ ಜೊತೆಗೂಡಿದರು. ಗೌರವಾನ್ವಿತ ರಾಷ್ಟ್ರಪತಿಗಳು ಸಂವಿಧಾನ ಸಭೆಯ ಚರ್ಚೆಗಳ ಡಿಜಿಟಲ್ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಭಾರತ ಸಂವಿಧಾನದ ಕ್ಯಾಲಿಗ್ರಾಫ್ ಮಾಡಿದ ಡಿಜಿಟಲ್ ಆವೃತ್ತಿ ಮತ್ತು ಈವರೆಗಿನ ಎಲ್ಲ ತಿದ್ದುಪಡಿಗಳನ್ನು ಒಳಗೊಂಡಿರುವ ಭಾರತದ ಸಂವಿಧಾನದ ಪರಿಷ್ಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದರು. ಅಲ್ಲದೆ, ಅವರು ‘ಸಾಂವಿಧಾನಿಕ ಪ್ರಜಾಪ್ರಭುತ್ವ ಕುರಿತಾದ ಆನ್ ಲೈನ್ ಕ್ವಿಜ್ ‘ಗೂ ಚಾಲನೆ ನೀಡಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ, ಇಂದು ದೂರದೃಷ್ಟಿಯ ಮಹಾನ್ ವ್ಯಕ್ತಿಗಳಾದ ಬಾಬಾಸಾಹೇಬ್ ಅಂಬೇಡ್ಕರ್, ಡಾ.ರಾಜೇಂದ್ರ ಪ್ರಸಾದ್, ಬಾಪು ಮತ್ತು ಸ್ವಾತಂತ್ರ್ಯ ಹೋರಾಟದಲ್ಲಿ ತ್ಯಾಗ ಬಲಿದಾನ ಮಾಡಿದ ಎಲ್ಲರಿಗೂ ಗೌರವ ಸಲ್ಲಿಸುವ ದಿನವಾಗಿದೆ ಎಂದರು. ಇಂದು ಸದನಕ್ಕೆ ಗೌರವ ಸಲ್ಲಿಸುವ ದಿನವಾಗಿದೆ. ಇಂತಹ ದಿಗ್ಗಜರ ನೇತೃತ್ವದಲ್ಲಿ, ಸಾಕಷ್ಟು ಚಿಂಥನ ಮಂಥನ ಮತ್ತು ಸಮಾಲೋಚನೆ ನಂತರ, ನಮ್ಮ ಸಂವಿಧಾನದ ಅಮೃತ ಹೊರಹೊಮ್ಮಿತು ಎಂದು ಅವರು ಹೇಳಿದರು. ಇಂದು ಪ್ರಜಾಪ್ರಭುತ್ವದ ಸದನಕ್ಕೆ ನಮಿಸುವ ದಿನವೂ ಆಗಿದೆ ಎಂದರು. ಪ್ರಧಾನಮಂತ್ರಿ ಅವರು 26/11ರ ಘಟನೆಯಲ್ಲಿ ಹುತಾತ್ಮರಾದವರಿಗೂ ಶ್ರದ್ಧಾಂಜಲಿ ಸಲ್ಲಿಸಿದರು. ಇಂದು 26/11, ದೇಶದ ಶತ್ರುಗಳು ದೇಶದೊಳಕ್ಕೆ ನುಗ್ಗಿದರು ಮತ್ತು ಮುಂಬೈನಲ್ಲಿ ಉಗ್ರರ ದಾಳಿ ನಡೆಸಿದ ಇದು ದುಃಖದ ದಿನವಾಗಿದೆ. ಭಯೋತ್ಪಾದಕರ ವಿರುದ್ಧ ಹೋರಾಡುವಾಗ ನಮ್ಮ ವೀರಯೋಧರು ಪ್ರಾಣತ್ಯಾಗ ಮಾಡಿದರು. ಇಂದು ನಾನು ಅವರ ತ್ಯಾಗಕ್ಕೆ ತಲೆಬಾಗುತ್ತೇನೆ “ಎಂದು ಪ್ರಧಾನಮಂತ್ರಿ ಹೇಳಿದರು.
ನಮ್ಮ ಸಂವಿಧಾನವು ಕೇವಲ ಹಲವು ವಿಧಿಗಳ ಸಂಗ್ರಹವಲ್ಲ, ನಮ್ಮ ಸಂವಿಧಾನದ ಸಹಸ್ರಾರು ವರ್ಷಗಳ ಶ್ರೇಷ್ಠ ಸಂಪ್ರದಾಯವಾಗಿದೆ. ಅದು ಅಖಂಡ ಧಾರೆಯ ಅಧುನಿಕ ಅಭಿವ್ಯಕ್ತಿ. ನಾವು ಸಂವಿಧಾನ ದಿನವನ್ನು ಆಚರಿಸಬೇಕು ಏಕೆಂದರೆ, ನಮ್ಮ ಹಾದಿ ಸರಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನಿರಂತರವಾಗಿ ಮೌಲ್ಯಮಾಪನ ಮಾಡಬೇಕು ಎಂದು ಪ್ರಧಾನಮಂತ್ರಿ ಹೇಳಿದರು.
ಸಂವಿಧಾನ ದಿನ’ ಆಚರಣೆಯ ಹಿಂದಿನ ಪ್ರೇರಣೆಯವನ್ನು ವಿವರಿಸಿದ ಪ್ರಧಾನಮಂತ್ರಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ 125ನೇ ಜಯಂತಿ ವೇಳೆ “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಲು ಇದಕ್ಕಿಂತ ಪವಿತ್ರ ಸುಸಂದರ್ಭ ಯಾವುದಿದೆ ಎಂದು ನಾವೆಲ್ಲಾ ಭಾವಿಸಿದ್ದೇವೆ. ನಾವು ಅವರ ಕೊಡುಗೆಯನ್ನು ಸ್ಮಾರಕ ಗ್ರಂಥ(ಸ್ಮೃತಿ ಗ್ರಂಥ)ದ ಮೂಲಕ ಸದಾ ಸ್ಮರಿಸಬೇಕು”ಎಂದು ಅವರು ಹೇಳಿದರು. ಜನವರಿ 26ರಂದು ಗಣರಾಜ್ಯೋತ್ಸವ ಸಂಪ್ರದಾಯವನ್ನು ಸ್ಥಾಪಿಸಿರುವುದರ ಜೊತೆಗೆ ಆ ಸಮಯದಲ್ಲಿಯೇ ನವೆಂಬರ್ 26ರಂದು ‘ಸಂವಿಧಾನ ದಿನ’ ಆಚರಣೆ ಆರಂಭಿಸಿದ್ದರೆ ಒಳ್ಳೆಯದಿತ್ತು ಎಂದರು.
ಕುಟುಂಬ ಆಧಾರಿತ ಪಕ್ಷಗಳ ರೂಪದಲ್ಲಿ ಭಾರತವು ಒಂದು ಬಗೆಯ ಬಿಕ್ಕಟ್ಟಿನತ್ತ ಸಾಗುತ್ತಿದ್ದು, ಇದು ಸಂವಿಧಾನಕ್ಕೆ ಬದ್ಧವಾದ ಜನರಿಗೆ ಕಾಳಜಿಯ ವಿಚಾರವಾಗಿದೆ ಮತ್ತು ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇರುವವರಿಗೆ ಕಾಳಜಿಯ ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. “ಒಂದು ಕುಟುಂಬದ ಒಂದಕ್ಕಿಂತ ಹೆಚ್ಚು ವ್ಯಕ್ತಿಗಳು ಅರ್ಹತೆಯ ಆಧಾರದ ಮೇಲೆ ಪಕ್ಷವನ್ನು ಸೇರುವುದರಿಂದ ಅದು ಪಕ್ಷವು ವಂಶ ಪಾರಂಪರ್ಯವಾಗುವುದಿಲ್ಲ. ಒಂದೇ ಕುಟುಂಬದವರು ಪೀಳಿಗೆಯಿಂದ ಪೀಳಿಗೆಗೆ ಪಕ್ಷವನ್ನು ಮುನ್ನಡೆಸಿದಾಗ ಸಮಸ್ಯೆಗಳು ಉದ್ಬವಿಸುತ್ತವೆ”ಎಂದರು. ರಾಜಕೀಯ ಪಕ್ಷಗಳು ಪ್ರಜಾಪ್ರಭುತ್ವದ ತಮ್ಮ ಗುಣಗಳನ್ನೇ ಕಳೆದುಕೊಂಡಾಗ ಸಂವಿಧಾನದ ಆಶಯಕ್ಕೂ ಧಕ್ಕೆಯಾಗುತ್ತದೆ, ಸಂವಿಧಾನದ ಪ್ರತಿಯೊಂದು ಭಾಗಕ್ಕೂ ಘಾಸಿಯಾಗುತ್ತದೆ ಎಂದು ಪ್ರಧಾನಮಂತ್ರಿ ಟೀಕಿಸಿದರು. “ತಮ್ಮ ಪ್ರಜಾಪ್ರಭುತ್ವ ಗುಣಗಳನ್ನು ಕಳೆದುಕೊಂಡಿರುವ ಪಕ್ಷಗಳಿಂದ ಪ್ರಜಾಪ್ರಭುತ್ವವನ್ನು ರಕ್ಷಿಸಲು ಹೇಗೆ ಸಾಧ್ಯ” ಎಂದು ಅವರು ಪ್ರಶ್ನಿಸಿದರು.
ಶಿಕ್ಷೆಗೆ ಒಳಗಾಗಿರುವ ಭ್ರಷ್ಟ ವ್ಯಕ್ತಿಗಳನ್ನು ಮರೆತು ವೈಭವೀಕರಿಸುವ ಪ್ರವೃತ್ತಿಯ ವಿರುದ್ಧ ಪ್ರಧಾನಮಂತ್ರಿ ಎಚ್ಚರಿಕೆ ನೀಡಿದರು. ಅಂತಹ ವ್ಯಕ್ತಿಗಳಿಗೆ ಸುಧಾರಣೆಗೆ ಅವಕಾಶ ನೀಡುವಾಗ ಅವರನ್ನು ಸಾರ್ವಜನಿಕ ಜೀವನದಲ್ಲಿ ವೈಭವೀಕರಿಸುವುದಕ್ಕೆ ನಿರ್ಬಂಧ ವಿಧಿಸಬೇಕು ಎಂದರು.
ಸ್ವಾತಂತ್ರ್ಯ ಚಳವಳಿಯಲ್ಲಿ ಹಕ್ಕುಗಳಿಗಾಗಿ ಹೋರಾಡುತ್ತಿದ್ದಾಗಲೂ ಸಹ ಮಹಾತ್ಮ ಗಾಂಧೀಜಿ ಅವರು ದೇಶವನ್ನು ಕರ್ತವ್ಯಗಳಿಗೆ ಸಜ್ಜುಗೊಳಿಸಲು ಪ್ರಯತ್ನಿಸಿದ್ದರು ಎಂದು ಪ್ರಧಾನಮಂತ್ರಿ ಹೇಳಿದರು. “ದೇಶಕ್ಕೆ ಸ್ವಾತಂತ್ರ್ಯ ನಂತರ ಕರ್ತವ್ಯಗಳಿಗೆ ಒತ್ತು ನೀಡಿದರೆ ಒಳ್ಳೆಯದಿತ್ತು”ಎಂದರು. ಆಜಾದಿ ಕಾ ಅಮೃತ ಮಹೋತ್ಸವದ ಈ ಸಮಯದಲ್ಲಿ ನಾವು ಹಕ್ಕುಗಳನ್ನು ರಕ್ಷಿಸಲು ನಮ್ಮ ಕರ್ತವ್ಯಗಳ ಪಾಲನೆ ಹಾದಿಯಲ್ಲಿ ಮುನ್ನಡೆಯುವುದು ಅತ್ಯವಶ್ಯಕ”ಎಂದು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
आज का दिवस बाबासाहेब अम्बेडकर, डॉ राजेन्द्र प्रसाद जैसे दुरंदेशी महानुभावों का नमन करने का है।
— PMO India (@PMOIndia) November 26, 2021
आज का दिवस इस सदन को प्रणाम करने का है: PM @narendramodi
आज पूज्य बापू को भी नमन करना है।
— PMO India (@PMOIndia) November 26, 2021
आजादी के आंदोलन में जिन-जिन लोगों ने बलिदान दिया, उन सबको भी नमन करने का है: PM @narendramodi
आज 26/11 हमारे लिए एक ऐसा दुखद दिवस है, जब देश के दुश्मनों ने देश के भीतर आकर मुंबई में आतंकवादी घटना को अंजाम दिया: PM @narendramodi
— PMO India (@PMOIndia) November 26, 2021
देश के वीर जवानों ने आतंकवादियों से लोहा लेते हुए अपना जीवन बलिदान कर दिया।
— PMO India (@PMOIndia) November 26, 2021
आज उन बलिदानियों को भी नमन करता हूं: PM @narendramodi
हमारा संविधान ये सिर्फ अनेक धाराओं का संग्रह नहीं है, हमारा संविधान सहस्त्रों वर्ष की महान परंपरा, अखंड धारा उस धारा की आधुनिक अभिव्यक्ति है: PM @narendramodi
— PMO India (@PMOIndia) November 26, 2021
इस संविधान दिवस को इसलिए भी मनाना चाहिए, क्योंकि हमारा जो रास्ता है, वह सही है या नहीं है, इसका मूल्यांकन करने के लिए मनाना चाहिए: PM @narendramodi
— PMO India (@PMOIndia) November 26, 2021
बाबासाहेब अम्बेडकर की 125वीं जयंती थी, हम सबको लगा इससे बड़ा पवित्र अवसर क्या हो सकता है कि बाबासाहेब अम्बेडकर ने जो इस देश को जो नजराना दिया है, उसको हम हमेशा एक स्मृति ग्रंथ के रूप में याद करते रहें: PM @narendramodi
— PMO India (@PMOIndia) November 26, 2021
योग्यता के आधार पर एक परिवार से एक से अधिक लोग जाएं, इससे पार्टी परिवारवादी नहीं बन जाती है।
— PMO India (@PMOIndia) November 26, 2021
लेकिन एक पार्टी पीढ़ी दर पीढ़ी राजनीति में है: PM @narendramodi
भारत एक ऐसे संकट की ओर बढ़ रहा है, जो संविधान को समर्पित लोगों के लिए चिंता का विषय है, लोकतंत्र के प्रति आस्था रखने वालों के लिए चिंता का विषय है और वो है पारिवारिक पार्टियां: PM @narendramodi
— PMO India (@PMOIndia) November 26, 2021
संविधान की भावना को भी चोट पहुंची है, संविधान की एक-एक धारा को भी चोट पहुंची है, जब राजनीतिक दल अपने आप में अपना लोकतांत्रिक कैरेक्टर खो देते हैं।
— PMO India (@PMOIndia) November 26, 2021
जो दल स्वयं लोकतांत्रिक कैरेक्टर खो चुके हों, वो लोकतंत्र की रक्षा कैसे कर सकते हैं: PM @narendramodi
महात्मा गांधी ने आजादी के आंदोलन में आधिकारों को लिए लड़ते हुए भी, कर्तव्यों के लिए तैयार करने की कोशिश की थी।
— PMO India (@PMOIndia) November 26, 2021
अच्छा होता अगर देश के आजाद होने के बाद कर्तव्य पर बल दिया गया होता: PM @narendramodi
आजादी के अमृत महोत्सव में हमारे लिए आवश्यक है कि कर्तव्य के पथ पर आगे बढ़ें ताकि अधिकारों की रक्षा हो: PM @narendramodi
— PMO India (@PMOIndia) November 26, 2021