ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು 'ಭಾರತ್ ಕೋ ಜಾನಿಯೆ' (ಭಾರತವನ್ನು ತಿಳಿಯಿರಿ) ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅನಿವಾಸಿ ಭಾರತೀಯರು ಮತ್ತು ಇತರ ದೇಶಗಳ ಸ್ನೇಹಿತರನ್ನು ಆಹ್ವಾನಿಸಿದರು. ಈ ರಸಪ್ರಶ್ನೆಯು ಭಾರತ ಮತ್ತು ವಿಶ್ವಾದ್ಯಂತ ಇರುವ ವಲಸಿಗರ ನಡುವಿನ ಸಂಪರ್ಕವನ್ನು ಉತ್ತಮಗೊಳಿಸುವುದಲ್ಲದೆ ನಮ್ಮ ಭಾರತೀಯ ಶ್ರೀಮಂತ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಮರುಶೋಧಿಸುವ ಅದ್ಭುತ ಮಾರ್ಗವಾಗಿದೆ ಎಂದು ಅವರು ತಿಳಿಸಿದರು.
ಪ್ರಧಾನಮಂತ್ರಿಯವರು Xನ ಒಂದು ಸಂದೇಶವನ್ನು ಪೋಸ್ಟ್ ಮಾಡಿ:
"ನಮ್ಮ ವಲಸಿಗರೊಂದಿಗೆ ಬಂಧ ಬಲಪಡಿಸೋಣ!
#BharatKoJaniye ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ವಿದೇಶದಲ್ಲಿರುವ ಭಾರತೀಯ ಸಮುದಾಯ ಮತ್ತು ಇತರ ದೇಶಗಳ ಸ್ನೇಹಿತರನ್ನು ಒತ್ತಾಯಿಸುತ್ತೇನೆ!
ಈ ರಸಪ್ರಶ್ನೆಯು ಭಾರತ ಮತ್ತು ವಿಶ್ವಾದ್ಯಂತ ನಮ್ಮ ವಲಸಿಗರ ನಡುವಿನ ಸಂಪರ್ಕವನ್ನು ತೀವ್ರಗೊಳಿಸುತ್ತದೆ. ನಮ್ಮ ಶ್ರೀಮಂತ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಯನ್ನು ಮರುಶೋಧಿಸಲು ಇದು ಅದ್ಭುತ ಮಾರ್ಗವಾಗಿದೆ.
ವಿಜೇತರಿಗೆ #IncredibleIndia ಅದ್ಭುತಗಳನ್ನು ಅನುಭವಿಸುವ ಅವಕಾಶ ಕೂಡಾ ಲಭಿಸಲಿದೆ" ಎಂದು ಹೇಳಿದ್ದಾರೆ.
Strengthening the bond with our diaspora!
— Narendra Modi (@narendramodi) November 23, 2024
Urge Indian community abroad and friends from other countries to take part in the #BharatKoJaniye Quiz!https://t.co/lbezbGFmmF
This quiz deepens the connect between India and its diaspora worldwide. It’s also a wonderful way to…