ಮನ್ ಕಿ ಬಾತ್: ಮಿಲ್ಖಾ ಸಿಂಗ್ ಅವರನ್ನು ಪ್ರಧಾನಿ ಮೋದಿ ನೆನಪಿಸಿಕೊಂಡರು
ಭಾರತದ ಲಸಿಕೆ ಕಾರ್ಯಕ್ರಮವು ಜಗತ್ತಿಗೆ ಒಂದು ಅಧ್ಯಯನವಾಗಬಹುದು: ಮನ್ ಕಿ ಬಾತ್ ಸಮಯದಲ್ಲಿ ಪ್ರಧಾನಿ ಮೋದಿ
ಜೂನ್ 21 ರಂದು ಭಾರತ 86 ಲಕ್ಷ ಜನರಿಗೆ ಲಸಿಕೆ ಹಾಕಿದ ದಾಖಲೆ ಮಾಡಿದೆ: ಪ್ರಧಾನಿ ಮೋದಿ
ಮಳೆನೀರಿನ ಸಂಗ್ರಹವು ಅಂತರ್ಜಲ ಕೋಷ್ಟಕವನ್ನು ಸುಧಾರಿಸುತ್ತದೆ; ಆದ್ದರಿಂದ, ನೀರಿನ ಸಂರಕ್ಷಣೆ ರಾಷ್ಟ್ರಕ್ಕೆ ಒಂದು ರೀತಿಯ ಸೇವೆಯಾಗಿದೆ: ಪ್ರಧಾನಿ ಮೋದಿ
ಕೊರೋನಾ ಅವಧಿಯಲ್ಲಿ ವೈದ್ಯರ ಕೊಡುಗೆಗಾಗಿ ನಾವೆಲ್ಲರೂ ಕೃತಜ್ಞರಾಗಿರುತ್ತೇವೆ. ಆದ್ದರಿಂದ, ಈ ಬಾರಿ ವೈದ್ಯರ ದಿನ ಇನ್ನಷ್ಟು ವಿಶೇಷವಾಗುತ್ತದೆ: ಪ್ರಧಾನಿ
ಆರ್ಥಿಕತೆಯಲ್ಲಿ ಪಾರದರ್ಶಕತೆ ತರುವಲ್ಲಿ ಚಾರ್ಟರ್ಡ್ ಅಕೌಂಟೆಂಟ್‌ಗಳಿಗೆ ದೊಡ್ಡ ಪಾತ್ರವಿದೆ: ಪ್ರಧಾನಿ ಮೋದಿ
ನಮ್ಮ ಮಂತ್ರವಾಗಿರಬೇಕು - ಭಾರತ ಮೊದಲು : ಪ್ರಧಾನಿ ಮೋದಿ

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಸಾಮಾನ್ಯವಾಗಿ ಮನದ ಮಾತಿನಲ್ಲಿ ನಿಮ್ಮ ಪ್ರಶ್ನೆಗಳ ಸುರಿಮಳೆಯೇ ಇರುತ್ತದೆ. ಈ ಬಾರಿ ಸ್ವಲ್ಪ ಭಿನ್ನವಾದದ್ದೇನಾದರೂ ಮಾಡೋಣ ಎಂದು ನಾನು ಯೋಚಿಸಿದೆ. ನಾನು ನಿಮಗೆ ಪ್ರಶ್ನೆ ಕೇಳುತ್ತೇನೆ. ಹಾಗಾದರೆ ಗಮನವಿಟ್ಟು ನನ್ನ ಪ್ರಶ್ನೆ ಕೇಳಿ.

....Olympic ನಲ್ಲಿ ವೈಯಕ್ತಿಕ ಚಿನ್ನದ ಪದಕ ಸಾಧಿಸಿದ ಪ್ರಥಮ ಭಾರತೀಯ ಯಾರು?

....Olympic ನ ಯಾವ ಕ್ರೀಡೆಯಲ್ಲಿ ಭಾರತ ಇಲ್ಲಿವರೆಗೆ ಅತಿ ಹೆಚ್ಚು ಪದಕಗಳನ್ನು ಗಳಿಸಿದೆ…

....Olympic ನಲ್ಲಿ ಯಾವ ಕ್ರೀಡಾಳು ಅತಿ ಹೆಚ್ಚು ಪದಕಗಳನ್ನು ಗೆದ್ದಿದ್ದಾರೆ

ಸ್ನೇಹಿತರೆ, ನೀವು ನನಗೆ ಉತ್ತರ ಕಳುಹಿಸಿ ಕಳುಹಿಸದೇ ಇರಿ ಆದರೆ ಮೈಗೌನಲ್ಲಿ ಒಲಿಂಪಿಕ್ಸ್ ಬಗ್ಗೆ ಇರುವ ರಸಪ್ರಶ್ನೆಯ ಪ್ರಶ್ನೆಗಳಿಗೆ ಉತ್ತರಿಸಿದರೆ ಬಹಳಷ್ಟು ಬಹುಮಾನಗಳನ್ನು ಗೆಲ್ಲುವಿರಿ. ಇಂತಹ ಬಹಳಷ್ಟು ಪ್ರಶ್ನೆಗಳ ಮೈ ಗೌ ನ ‘ರೋಡ್ ಟು ಟೊಕೊಯೋ ಕ್ವಿಜ್ ನಲ್ಲಿದೆ. ನೀವು ‘ರೋಡ್ ಟು ಟೊಕೊಯೋ ಕ್ವಿಜ್ ನಲ್ಲಿ ಭಾಗವಹಿಸಿ. ಈ ಹಿಂದೆ ಭಾರತದ ಪ್ರದರ್ಶನ ಹೇಗಿತ್ತು? ‘ಟೊಕೊಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ನಮ್ಮ ಸಿದ್ಧತೆಗಳೇನು- ಇದೆಲ್ಲವನ್ನು ನೀವು ತಿಳಿಯಿರಿ ಇತರರಿಗೂ ತಿಳಿಸಿ. ಖಂಡಿತ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಎಂದು ನಿಮ್ಮೆಲ್ಲರಿಗೆ ಆಗ್ರಹಿಸುತ್ತೇನೆ.

ಸ್ನೇಹಿತರೆ, ಟೊಕಿಯೋ ಒಲಿಂಪಿಕ್ಸ್ ಬಗ್ಗೆ ಮಾತನಾಡುತ್ತಿರುವಾಗ ಮಿಲ್ಕಾ ಸಿಂಗ್ ರಂತಹ ಭೂತಪೂರ್ವ ಆಟಗಾರನನ್ನು ಯಾರು ಮರೆಯಬಹುದು? ಕೆಲ ದಿನಗಳ ಹಿಂದೆಯೇ ಕೊರೊನಾ ಅವರನ್ನು ನಮ್ಮಿಂದ ಅಗಲಿಸಿತು. ಅವರು ಆಸ್ಪತ್ರೆಯಲ್ಲಿದ್ದಾಗ ಅವರೊಂದಿಗೆ ಮಾತನಾಡುವ ಅವಕಾಶ ನನಗೆ ಲಭಿಸಿತ್ತು. ಮಾತನಾಡುತ್ತಾ ನಾನು ಅವರನ್ನು ಆಗ್ರಹಿಸಿದ್ದೆ. ನೀವು 1964 ನಲ್ಲಿ ಟೊಕಿಯೋ ಒಲಿಂಪಿಕ್ಸ ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದಿರಿ. ಆದ್ದರಿಂದ ಈ ಬಾರಿ ನಮ್ಮ ಆಟಗಾರರು ಒಲಿಂಪಿಕ್ಸ್ ಗಾಗಿ ಟೊಕಿಯೋ ತೆರಳುತ್ತಿರುವುದರಿಂದ ನೀವು ನಮ್ಮ ಅಥ್ಲೀಟ್ ಗಳ ಆತ್ಮಸ್ಥೈರ್ಯವನ್ನು ವೃದ್ಧಿಸಬೇಕೆಂದು, ನಿಮ್ಮ ಸಂದೇಶದೊಂದಿಗೆ ಪ್ರೆರೇಪಿಸಬೇಕಿದೆ ಎಂದು ಕೇಳಿಕೊಂಡಿದ್ದೆ. ಅವರಿಗೆ ಕ್ರೀಡೆ ಬಗ್ಗೆ ಅದೆಷ್ಟು ಸಮರ್ಪಣಾ ಭಾವ ಮತ್ತು ಒಲವಿತ್ತೆಂದರೆ ಅನಾರೋಗ್ಯದಿಂದ ಬಳಲುತ್ತಿದ್ದರೂ ತಕ್ಷಣ ಒಪ್ಪಿಗೆ ಸೂಚಿಸಿದರು. ಆದರೆ ವಿಧಿಯ ವಿಧಾನ ಬೆರೆಯೇ ಆಗಿತ್ತು. ನನಗೆ ಇಂದಿಗೂ ನೆನಪಿದೆ. 2014 ರಲ್ಲಿ ಅವರು ಸೂರತ್ ಗೆ ಬಂದಿದ್ದರು. ನಾವು ಒಂದು ಇರುಳು ಮ್ಯಾರಾಥಾನ್ ಉದಘಾಟನೆ ಮಾಡಿದ್ದೆವು. ಆಗ ಅವರೊಂದಿಗೆ ನಡೆದ ಕ್ರೀಡೆ ಬಗ್ಗೆ ಮತ್ತು ಮಾತುಕತೆಯೊಂದಿಗೆ ನನಗೂ ಬಹಳ ಪ್ರೇರಣೆ ದೊರೆತಿತ್ತು. ಮಿಲ್ಕಾ ಸಿಂಗ್ ಅವರ ಸಂಪೂರ್ಣ ಕುಟುಂಬ ಕ್ರೀಡೆಗೆ ಸಮರ್ಪಿತವಾಗಿತ್ತು, ಭಾರತದ ಗೌರವವನ್ನು ವೃದ್ಧಿಸಿದೆ ಎಂದು ನಮಗೆಲ್ಲರಿಗೂ ತಿಳಿದಿದೆ.

ಸ್ನೇಹಿತರೆ, ಪ್ರತಿಭೆ, ಸಮರ್ಪಣಾಭಾವ, ಛಲ ಮತ್ತಿ ಕ್ರೀಡಾ ಮನೋಭಾವ ಒಗ್ಗೂಡಿದಾಗ ಮಾತ್ರ ಒಬ್ಬ ಚಾಂಪಿಯನ್ ಆಗಲು ಸಾಧ್ಯ. ನಮ್ಮ ದೇಶದಲ್ಲಿ ಹೆಚ್ಚಿನ ಕ್ರೀಡಾಳುಗಳು ಸಣ್ಣ ಪುಟ್ಟ ಗ್ರಾಮಗಳು, ಹೋಬಳಿಗಳು ಮತ್ತು ಪುಟ್ಟ ತಾಲೂಕುಗಳಿಂದಲೇ ಹೊರಹೊಮ್ಮುತ್ತಾರೆ. ಟೊಕೊಯೋಗೆ ತೆರಳುತ್ತಿರುವ ನಮ್ಮ ಒಲಿಂಪಿಕ್ ತಂಡದಲ್ಲೂ ಇಂತಹ ಹಲವಾರು ಕ್ರೀಡಾಳುಗಳಿದ್ದಾರೆ. ಇವರ ಜೀವನ ಪ್ರೇರಣಾದಾಯಕವಾಗಿದೆ. ನಮ್ಮ ಪ್ರವೀಣ್ ಜಾಧವ್ ಅವರ ಬಗ್ಗೆ ನೀವು ಕೇಳಿದರೆ ನಿಮಗೂ ಅವರು ಎಂಥ ಕಠಿಣ ಸಂಘರ್ಷವನ್ನು ಎದುರಿಸುತ್ತಾ ಇಲ್ಲಿಗೆ ತಲುಪಿದ್ದಾರೆ ಎಂದು ಅನ್ನಿಸುತ್ತದೆ. ಪ್ರವೀಣ್ ಜಾಧವ್ ಅವರು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಒಂದು ಗ್ರಾಮದನಿವಾಸಿಯಾಗಿದ್ದಾರೆ. ಅವರು ಬಿಲ್ಲುಗಾರಿಕೆಯ ಅದ್ಭುತ ಕ್ರೀಡಾಳು. ಅವರ ತಂದೆತಾಯಿ ಕೂಲಿ ಕೆಲಸ ಮಾಡಿ ಕುಟುಂಬ ಪಾಲನೆ ಮಾಡುತ್ತಾರೆ. ಈಗ ಅವರ ಪುತ್ರ ಪ್ರಥಮ ಬಾರಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲು ಟೊಕೊಯೋಗೆ ತೆರಳುತ್ತಿದ್ದಾರೆ. ಕೇವಲ ಅವರ ತಂದೆತಾಯಿಗೆ ಮಾತ್ರವಲ್ಲ ಇದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಇಂಥ ಇನ್ನೊಬ್ಬ ಕ್ರೀಡಾಪಟು ನಮ್ಮ ನೇಹಾ ಗೋಯಲ್ ಅವರು. ನೇಹಾ ಟೊಕೊಯೋಗೆ ತೆರಳುತ್ತಿರುವ ಮಹಿಳಾ ಹಾಕಿ ತಂಡದ ಸದಸ್ಯರಾಗಿದ್ದಾರೆ. ಅವರ ತಾಯಿ ಮತ್ತು ಸೋದರಿ ಸೈಕಲ್ ಕಾರ್ಖಾನೆಯಲ್ಲಿ ಕೆಲಸ ಮಾಡಿ ಕುಟುಂಬದ ಖರ್ಚು ನಿಭಾಯಿಸುತ್ತಾರೆ. ನೇಹಾ ಅವರಂತೆಯೇ ದೀಪಿಕಾ ಕುಮಾರಿ ಅವರ ಜೀವನ ಪಯಣವೂ ಏರಿಳಿತಗಳಿಂದ ತುಂಬಿದೆ. ದೀಪಿಕಾ ಅವರ ತಂದೆ ಅಟೋ ರಿಕ್ಷಾ ಓಡಿಸುತ್ತಾರೆ ಅವರ ತಾಯಿ ಸುಶ್ರೂಷಕಿಯಾಗಿದ್ದಾರೆ. ಈಗ ದೀಪಿಕಾ ಭಾರತದ ಪರವಾಗಿ ಟೊಕಿಟೋ ಒಲಿಂಪಿಕ್ಸ್ ನಲ್ಲಿ ಪಾಲ್ಗೊಳ್ಳುತ್ತಿರುವ ಏಕಮಾತ್ರ ಬಿಲ್ಲುಗಾರಿಕೆಯ ಸ್ಪರ್ಧಾಳು ಆಗಿದ್ದಾರೆ. ಒಂದೊಮ್ಮೆ ವಿಶ್ವದ ಮುಂಚೂಣಿಯ ಕ್ರೀಡಾಳು ಆಗಿದ್ದ ದೀಪಿಕಾ ಅವರಿಗೆ ನಮ್ಮೆಲ್ಲರ ಶುಭ ಹಾರೈಕೆಗಳು.

ಸ್ನೇಹಿತರೆ, ಜೀವನದಲ್ಲಿ ನಾವು ಯಾವ ಹಂತಕ್ಕೆ ತಲುಪಿದರೂ, ಎಷ್ಟೇ ಎತ್ತರಕ್ಕೇರಿದರೂ ತಾಯ್ನೆಲದೊಂದಿಗಿನ ಈ ಬಂಧ ನಮ್ಮ ಬೇರುಗಳೊಂದಿಗೆ ನಮ್ಮನ್ನು ಎಂದೆಂದಿಗೂ ಬಂಧಿಸಿಡುತ್ತದೆ. ಸಂಘರ್ಷದ ದಿನಗಳ ನಂತರ ದೊರೆಯುವ ಸಫಲತೆಯ ಆನಂದ ಬೆರೆಯೇ ರೀತಿಯದ್ದಾಗಿರುತ್ತದೆ. ಇಂದು ಟೊಕಿಯೋಗೆ ತೆರಳುತ್ತಿರುವ ನಮ್ಮ ಕ್ರೀಡಾಳುಗಳು ಬಾಲ್ಯದಲ್ಲಿ ಸಾಧನಗಳು ಇತರ ಅನಾನುಕೂಲತೆಗಳನ್ನು ಎದುರಿಸಿದ್ದಾರೆ ಆದರೂ ಅವರು ಅಚಲವಾಗಿದ್ದರು, ನಿರಂತರ ಶ್ರಮಿಸುತ್ತಿದ್ದರು. ಉತ್ತರ ಪ್ರದೇಶದ ಮುಜಫರ್ ನಗರದ ಪ್ರಿಯಾಂಕಾ ಗೋಸ್ವಾಮಿಯವರ ಜೀವನ ಕೂಡ ಬಹಳಷ್ಟು ಕಲಿಸುತ್ತದೆ. ಪ್ರೀಯಾಂಕಾ ಅವರ ತಂದೆ ಬಸ್ ಕಂಡಕ್ಟರ್ ಆಗಿದ್ದಾರೆ. ಪ್ರೀಯಾಂಕಾ ಅವರಿಗೆ ಪದಕಗಳಿಸುವ ಕ್ರೀಡಾಳುಗಳಿಗೆ ನೀಡುವ ಬ್ಯಾಗ್ ಬಗ್ಗೆ ತುಂಬಾ ಆಸಕ್ತಿಯಿತ್ತು. ಇದರ ಆಕರ್ಷಣೆಯಿಂದಲೇ ಅವರು ಮೊದಲ ಬಾರಿಗೆ Race-Walking ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಈಗ ಅವರು ಈ ನಿಟ್ಟಿನಲ್ಲಿ ಬಹುದೊಡ್ಡ ಚಾಂಪಿಯನ್ ಆಗಿದ್ದಾರೆ.

Javelin Throw ದಲ್ಲಿ ಭಾಗವಹಿಸುವ ಶಿವಪಾಲ್ ಸಿಂಹ ಻ವರು ಬನಾರಸ್ ನಿವಾಸಿಯಾಗಿದ್ದಾರೆ. ಶಿವಪಾಲ್ ಅ಻ವರ ಸಂಪೂರ್ಣ ಕುಟುಂಬ ಈ ಕ್ರೀಡೆಯಲ್ಲಿ ತೊಡಗಿದೆ. ಇವರ ತಂದೆ, ಚಿಕ್ಕಪ್ಪ ಮತ್ತು ಸೋದರ, ಎಲ್ಲರೂ ಭರ್ಚಿ ಎಸೆತದಲ್ಲಿ ಅಪ್ರತಿಮರಾಗಿದ್ದಾರೆ. ಕುಟುಂಬದ ಈ ಅಡಿಪಾಯ Tokyo Olympics ನಲ್ಲಿ ಉಪಯುಕ್ತವಾಗಲಿದೆ. Tokyo Olympics ಗೆ ಹೋಗುತ್ತಿರುವ ಚಿರಾಗ್ ಶೆಟ್ಟಿ ಮತ್ತು ಅವರ ಜೊತೆ ಆಟಗಾರ ಸಾತ್ವಿಕ್ ಸಾಯಿರಾಜ್ ಅವರ ಹುಮ್ಮಸ್ಸು ಪ್ರೇರಣಾದಾಯಕವಾಗಿದೆ. ಇತ್ತೀಚೆಗೆ ಚಿರಾಗ್ ಅವರ ತಾತ ಕೊರೊನಾದಿಂದ ಮೃತರಾದರು. ಸಾತ್ವಿಕ್ ಕೂಡಾ ಸ್ವತಃ ಕಳೆದ ವರ್ಷ ಕೊರೊನಾ ಪಾಸಿಟಿವ್ ಆಗಿದ್ದರು. ಆದರೆ ಈ ಸಂಕಷ್ಟದ ನಂತರವೂ ಈ ಇಬ್ಬರೂ Men’s Double Shuttle Competition ನಲ್ಲಿ ತಮ್ಮ ಸರ್ವಶ್ರೇಷ್ಠ ಾಟವನ್ನು ಪ್ರದರ್ಶಿಸಲು ಸಿದ್ಧರಾಗಿದ್ದಾರೆ.

ಮತ್ತೊಬ್ಬ ಕ್ರೀಡಾಳುವನ್ನು ನಿಮಗೆ ಪರಿಚಿಸಬಯಸುತ್ತೇನೆ. ಅವರು ಹರಿಯಾಣದ ಭಿವಾನಿಯ ಮನೀಷ್ ಕೌಶಿಕ್ ಅವರು. ಮನೀಷ್ ಅವರು ಕೃಷಿ ಕುಟುಂಬದ ಹಿನ್ನೆಲೆಯುಳ್ಳವರು. ಬಾಲ್ಯದಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಾ ಬಾಕ್ಸಿಂಗ್ ಬಗ್ಗೆ ಒಲವು ಮೂಡಿತು. ಇಂದು ಇದೇ ಆಸಕ್ತಿ ಅವರನ್ನು ಟೊಕಿಯೋಗೆ ಕರೆದೊಯ್ಯುತ್ತಿದೆ. ಇಂಥ ಮತ್ತೊಬ್ಬ ಕ್ರೀಡಾಪಟು ಇದ್ದಾರೆ ಅವರೇ ಸಿ ಎ ಭವಾನಿದೇವಿಯವರು. ಹೆಸರು ಭವಾನಿ ಅಂತೆಯೇ ಇವರು ಕತ್ತಿವರಸೆಯಲ್ಲಿ ಪರಿಣಿತರು. ಚೆನ್ನೈ ನಿವಾಸಿ ಭವಾನಿ ಒಲಿಂಪಿಕ್ ಗೆ ಅರ್ಹತೆಗಳಿಸಿರುವ ಭಾರತದ ಪ್ರಥಮ ಕತ್ತಿವರಸೆ ಪಟುವಾಗಿದ್ದಾರೆ. ಭವಾನಿಯವರ ತರಬೇತಿ ನಿರಂತವಾಗಿರಲೆಂದು ಅವರ ತಾಯಿ ತಮ್ಮ ಆಭರಣಗಳನ್ನು ಅಡವಿಟ್ಟಿದ್ದರು ಎಂದು ನಾನು ಓದಿದ್ದೆ.

ಸ್ನೇಹಿತರೆ, ಹೀಗೆ ಹೆಸರುಗಳ ಪಟ್ಟಿ ದೊಡ್ಡದಿದೆ ಆದರೆ ‘ಮನದ ಮಾತಿನಲ್ಲಿ’ ನಾನು ಕೆಲವು ಹೆಸರುಗಳನ್ನು ಮಾತ್ರ ಪ್ರಸ್ತಾಪಿಸಲಾಯಿತು. ಟೊಕಿಯೋಗೆ ತೆರಳುತ್ತಿರುವ ಪ್ರತಿಯೊಬ್ಬ ಕ್ರೀಡಾಪಟುವಿನ ಸಂಘರ್ಷ ವಿಭಿನ್ನವಾಗಿದೆ. ವರ್ಷಗಳ ಪರಿಶ್ರಮವಿದೆ. ಅವರು ಕೇವಲ ತಮಗಾಗಿ ಮಾತ್ರವಲ್ಲ ದೇಶಕ್ಕಾಗಿಯೂ ಭಾಗವಹಿಸುತ್ತಿದ್ದಾರೆ. ಭಾರತದ ಗೌರವವನ್ನು ಹೆಚ್ಚಿಸುವುದು, ಜನರ ಮನ ಗೆಲ್ಲಬೇಕಿರುವುದು ಈ ಕ್ರೀಡಾಳುಗಳ ಜವಾಬ್ದಾರಿಯಾಗಿದೆ. ಆದ್ದರಿಂದ ದೇಶಬಾಂಧವರೆ ತಿಳಿದೊ ತಿಳಿಯದೆಯೋ ಈ ಕ್ರೀಡಾಪಟುಗಳ ಮೇಲೆ ಒತ್ತಡ ಹೇರಬಾರದು ಎಂದು ನಿಮಗೆ ಸಲಹೆ ನೀಡಬಯಸುತ್ತೇನೆ. ಬದಲಾಗಿ ಸ್ವಚ್ಛ ಮನಸ್ಸಿನಿಂದ ಇವರಿಗೆ ಬೆಂಬಲಿಸಿ. ಪ್ರತಿಯೊಬ್ಬ ಕ್ರೀಡಾಳುವಿನ ಉತ್ಸಾಹ ಹೆಚ್ಚಿಸಿ.

ಸಾಮಾಜಿಕ ಜಾಲತಾಣದಲ್ಲಿ #Cheer4India ನೊಂದಿಗೆ ಈ ಕ್ರೀಡಾಳುಗಳಿಗೆ ಶುಭಕೋರಬಹುದು. ಬೇರೆ ಏನಾದರೂ ವಿಭಿನ್ನವಾಗಿ ಮಾಡಬಯಸಿದಲ್ಲಿ ಅದನ್ನೂ ಮಾಡಬಹುದು. ದೇಶ ಈ ಕ್ರೀಡಾಳುಗಳಿಗಾಗಿ ಏನಾದರೂ ಒಗ್ಗೂಡಿ ಮಾಡಬಲ್ಲದು ಎಂಬ ಯಾವುದೇ ಆಲೋಚನೆ ನಿಮಗೆ ಬಂದರೆ ನನಗೆ ಬರೆದು ಕಳಿಸಿ. ನಾವೆಲ್ಲ ಸೇರಿ ಟೊಕಿಯೋ ಪ್ರವಾಸ ಕೈಗೊಳ್ಳಲಿರುವ ನಮ್ಮ ಕ್ರೀಡಾಳುಗಳಿಗೆ ನಾವು ಬೆಂಬಲಿಸೋಣ Cheer4India!!!Cheer4India!!!Cheer4India!!!

ನನ್ನ ಪ್ರೀತಿಯ ದೇಶಬಾಂಧವರೇ, ಕೊರೋನಾ ವಿರುದ್ಧ ನಮ್ಮ ದೇಶವಾಸಿಗಳ ಹೋರಾಟ ಮುಂದುವರಿದಿದೆ, ಆದರೆ ಈ ಹೋರಾಟದಲ್ಲಿ ನಾವೆಲ್ಲರೂ ಒಂದುಗೂಡಿ ಅನೇಕ ಅಸಾಧಾರಣ ಮೈಲಿಗಲ್ಲುಗಳನ್ನು ಸಾಧಿಸುತ್ತಿದ್ದೇವೆ. ಈಗ ಕೆಲವು ದಿನಗಳ ಹಿಂದೆಯಷ್ಟೇ ನಮ್ಮ ದೇಶ ಒಂದು ಅಭೂತಪೂರ್ವ ಕೆಲಸ ಮಾಡಿದೆ. ಜೂನ್ 21 ರಂದು ಲಸಿಕೆ ನೀಡಿಕೆ ಅಭಿಯಾನದ ಮುಂದಿನ ಹಂತ ಆರಂಭವಾಯಿತು ಮತ್ತು ಅದೇ ದಿನದಂದು ದೇಶದ 86 ಲಕ್ಷಕ್ಕೂ ಅಧಿಕ ಜನರು ಉಚಿತವಾಗಿ ಲಸಿಕೆ ಪಡೆದುಕೊಂಡು ದಾಖಲೆ ಸೃಷ್ಟಿಸಿದರು ಮತ್ತು ಅದು ಕೂಡಾ ಒಂದೇ ದಿನದಲ್ಲಿ!ಇಷ್ಟು ದೊಡ್ಡ ಸಂಖ್ಯೆಯಲ್ಲಿ ಭಾರತ ಸರ್ಕಾರದ ವತಿಯಿಂದ ಉಚಿತ ಲಸಿಕೆ ನೀಡಿಕೆ ಮತ್ತು ಅದು ಕೂಡಾ ಒಂದೇ ದಿನದಲ್ಲಿ! ಇದರ ಬಗ್ಗೆ ಬಹಳಷ್ಟು ಚರ್ಚೆ ನಡೆದಿದ್ದು ಸ್ವಾಭಾವಿಕವಾಗಿತ್ತು.

ಸ್ನೇಹಿತರೇ, ಒಂದು ವರ್ಷಕ್ಕೆ ಮುನ್ನ ಲಸಿಕೆ ಯಾವಾಗ ಬರುತ್ತದೆ? ಎಂಬ ಪ್ರಶ್ನೆ ಎಲ್ಲರ ಮುಂದಿತ್ತು. ಇಂದು ನಾವು ಒಂದು ದಿನದಲ್ಲಿ ಲಕ್ಷಾಂತರ ಜನರಿಗೆ ‘ಭಾರತದಲ್ಲೇ ತಯಾರಿಸಿದ’ (‘Made in India’) ಲಸಿಕೆಯನ್ನು ಉಚಿತವಾಗಿ ನೀಡುತ್ತಿದ್ದೇವೆ ಮತ್ತು ಇದೇ ಅಲ್ಲವೇ ನವ ಭಾರತದ ಸಾಮರ್ಥ್ಯ.

ಸ್ನೇಹಿತರೇ, ಲಸಿಕೆಯ ಸುರಕ್ಷತೆ ದೇಶದ ಪ್ರತಿಯೊಬ್ಬ ನಾಗರಿಕನಿಗೂ ದೊರೆಯಬೇಕು, ಇದಕ್ಕಾಗಿ ನಾವು ನಿರಂತರವಾಗಿ ಪ್ರಯತ್ನ ಮಾಡುತ್ತಲೇ ಇರಬೇಕು. ಲಸಿಕೆ ಪಡೆಯುವುದಕ್ಕೆ ಅನೇಕ ಸ್ಥಳಗಳಲ್ಲಿ ಇರುವ ಹಿಂಜರಿಕೆಯನ್ನು ಹೋಗಲಾಡಿಸಲು ಅನೇಕ ಸಂಘಟನೆಗಳು, ನಾಗರಿಕ ಸಮಾಜದ ಜನರು ಮುಂದೆ ಬಂದಿದ್ದಾರೆ ಮತ್ತು ಎಲ್ಲರೂ ಸೇರಿ ಬಹಳ ಉತ್ತಮ ಕಾರ್ಯ ಮಾಡುತ್ತಿದ್ದಾರೆ. ಬನ್ನಿ, ನಾವು ಕೂಡಾ, ಇಂದು ಒಂದು ಗ್ರಾಮಕ್ಕೆ ಹೋಗೋಣ, ಮತ್ತು ಅಲ್ಲಿನ ಜನರೊಂದಿಗೆ ಲಸಿಕೆ ಕುರಿತು ಮಾತನಾಡೋಣ. ಮಧ್ಯಪ್ರದೇಶದ ಬೈತೂಲ್ ಜಿಲ್ಲೆಯ ಡುಲಾರಿಯಾ ಗ್ರಾಮಕ್ಕೆ ಹೋಗೋಣ

ಪ್ರಧಾನಮಂತ್ರಿ: ಹಲೋ

ರಾಜೇಶ್ : ನಮಸ್ಕಾರ!

ಪ್ರಧಾನ ಮಂತ್ರಿ : ನಮಸ್ತೆ |

ರಾಜೇಶ್ : ನನ್ನ ಹೆಸರು ರಾಜೇಶ್ ಹಿರಾವೇ. ಡುಲಾರಿಯಾ ಗ್ರಾಮಪಂಚಾಯಿತಿ, ಭೀಮಾಪುರ್ ಬ್ಲಾಕ್

ಪ್ರಧಾನಮಂತ್ರಿ : ರಾಜೇಶ್ ಅವರೇ, ಈಗ ನಿಮ್ಮ ಗ್ರಾಮದಲ್ಲಿ ಕೊರೋನಾ ಪರಿಸ್ಥಿತಿ ಹೇಗಿದೆ ಎಂದು ತಿಳಿಯಲು ನಾನು ಕರೆ ಮಾಡುತ್ತಿದ್ದೇನೆ

ರಾಜೇಶ್: ಸರ್, ಇಲ್ಲಿ ಕೊರೋನಾದ ಸ್ಥಿತಿಯಂತೂ ಹಾಗೇನೂ ಇಲ್ಲ ಸರ್

ಪ್ರಧಾನಮಂತ್ರಿ : ಈಗ ಜನರಿಗೆ ಅನಾರೋಗ್ಯವಿಲ್ಲವೇ?

ರಾಜೇಶ್ : ಸರ್

ಪ್ರಧಾನಮಂತ್ರಿ: ಗ್ರಾಮದಲ್ಲಿ ಜನಸಂಖ್ಯೆ ಎಷ್ಟಿದೆ? ಗ್ರಾಮದಲ್ಲಿ ಎಷ್ಟು ಜನರಿದ್ದಾರೆ?

ರಾಜೇಶ್ : ಗ್ರಾಮದಲ್ಲಿ 462 ಪುರುಷರು ಮತ್ತು 332 ಮಹಿಳೆಯರು ಇದ್ದಾರೆ ಸರ್.

ಪ್ರಧಾನಮಂತ್ರಿ:ಹೌದಾ! ರಾಜೇಶ್ ಅವರೇ, ನೀವು ಲಸಿಕೆ ಪಡೆದುಕೊಂಡಿರುವಿರಾ?

ರಾಜೇಶ್: ಇಲ್ಲ ಸರ್, ಇನ್ನೂ ತೆಗೆದುಕೊಂಡಿಲ್ಲ

ಪ್ರಧಾನಮಂತ್ರಿ: ಅರೆ! ಏಕೆ ತೆಗೆದುಕೊಂಡಿಲ್ಲ?

ರಾಜೇಶ್ : ಸರ್, ಇಲ್ಲಂತೂ ಕೆಲವರು, ಕೆಲವು ವಾಟ್ಸಾಪ್ ಗಳಲ್ಲಿ ಎಂತೆಂತಹ ಗೊಂದಲಗಳ ಸುದ್ದಿಯನ್ನು ಹಾಕಿಬಿಟ್ಟಿದ್ದಾರೆಂದರೆ ಅದರಿಂದ ಜನರು ಗೊಂದಲಕ್ಕೊಳಗಾಗಿದ್ದಾರೆ ಸರ್.

ಪ್ರಧಾನಮಂತ್ರಿ : ಹಾಗಿದ್ದರೆ ನಿಮ್ಮ ಮನಸ್ಸಿನಲ್ಲಿಯೋ ಭಯವಿದೆಯೇ?

ರಾಜೇಶ್ : ಹೌದು ಸರ್, ಸಂಪೂರ್ಣ ಗ್ರಾಮದಲ್ಲಿ ಇಂತಹ ಗೊಂದಲ ಹರಡಿಬಿಟ್ಟಿದ್ದಾರೆ ಸರ್.

ಪ್ರಧಾನಮಂತ್ರಿ : ಅರೆರೆ, ನೀವು ಏನು ಹೇಳುತ್ತಿದ್ದೀರಿ ?ನೋಡಿ ರಾಜೇಶ್ ಅವರೇ...

ರಾಜೇಶ್ : ಹೇಳಿ ಸರ್

ಪ್ರಧಾನಮಂತ್ರಿ : ನಿಮಗೆ ಮತ್ತು ಗ್ರಾಮದ ನನ್ನೆಲ್ಲಾ ಸೋದರ-ಸೋದರಿಯರಿಗೆ ನಾನು ಹೇಳುವುದೇನೆಂದರೆ, ಭಯವಿದ್ದರೆ ಅದನ್ನು ತೆಗೆದುಹಾಕಿಬಿಡಿ.

ರಾಜೇಶ್ : ಸರಿ ಸರ್

ಪ್ರಧಾನಮಂತ್ರಿ : ನಮ್ಮ ಸಂಪೂರ್ಣ ದೇಶದಲ್ಲಿ 31 ಕೋಟಿಗಿಂತಲೂ ಹೆಚ್ಚಿನ ಜನರು ಲಸಿಕೆಯ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.

ರಾಜೇಶ್ : ಸರ್

ಪ್ರಧಾನಮಂತ್ರಿ : ನಾನು ಸ್ವತಃ ಲಸಿಕೆಯ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದೇನೆಂದು ನಿಮಗೆ ತಿಳಿದಿದೆಯಲ್ಲವೇ.

ರಾಜೇಶ್ : ಹೌದು ಸರ್

ಪ್ರಧಾನಮಂತ್ರಿ : ಅರೆ ನನ್ನ ತಾಯಿ ಸುಮಾರು 100 ವರ್ಷದವರು, ಅವರು ಕೂಡಾ ಎರಡೂ ಡೋಸ್ ಗಳನ್ನು ಪಡೆದುಕೊಂಡಿದ್ದಾರೆ. ಕೆಲವೊಮ್ಮೆ ಕೆಲವರಿಗೆ ಇದರಿಂದ ಜ್ವರ ಇತ್ಯಾದಿ ಬರಬಹುದು, ಆದರೆ ಅದು ಸಾಧಾರಣವಾಗಿರುತ್ತದೆ, ಅದು ಕೆಲವೇ ಗಂಟೆಗಳ ಕಾಲ ಇರುತ್ತದಷ್ಟೇ. ನೋಡಿ ಲಸಿಕೆ ಪಡೆದುಕೊಳ್ಳದೇ ಇರುವುದು ಬಹಳ ಅಪಾಯಕಾರಿಯಾಗಿರುತ್ತದೆ.

ರಾಜೇಶ್ : ಸರ್

ಪ್ರಧಾನಮಂತ್ರಿ : ಇದರಿಂದಾಗಿ ನಿಮ್ಮನ್ನು ನೀವು ಅಪಾಯಕ್ಕೆ ಒಡ್ಡಿಕೊಳ್ಳುವುದು ಮಾತ್ರವಲ್ಲದೇ, ಕುಟುಂಬ ಮತ್ತು ಗ್ರಾಮವನ್ನು ಕೂಡಾ ಅಪಾಯದಲ್ಲಿ ಸಿಲುಕಿಸುತ್ತೀರಿ.

ರಾಜೇಶ್ : ಸರ್

ಪ್ರಧಾನಮಂತ್ರಿ : ಮತ್ತು ರಾಜೇಶ್ ಅವರೇ, ಆದ್ದರಿಂದ ಸಾದ್ಯವಾದಷ್ಟು ಶೀಘ್ರವಾಗಿ ಲಸಿಕೆ ಹಾಕಿಸಿಕೊಳ್ಳಿ ಮತ್ತು ಭಾರತ ಸರ್ಕಾರದ ವತಿಯಿಂದ ಉಚಿತವಾಗಿ ಲಸಿಕೆ ನೀಡಲಾಗುತ್ತಿದೆ ಮತ್ತು 18 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಇದು ಉಚಿತ ಲಸಿಕೆಯಾಗಿದೆ ಎಂಬುದನ್ನು ಗ್ರಾಮದಲ್ಲಿ ಎಲ್ಲರಿಗೂ ತಿಳಿಸಿ ಹೇಳಿ.

ರಾಜೇಶ್ : ಸರಿ ಸರ್. ಸರಿ

ಪ್ರಧಾನಮಂತ್ರಿ : ಸರಿ ಹಾಗಾದರೆ, ಗ್ರಾಮದಲ್ಲಿ ಭಯದ ಈ ವಾತಾವರಣಕ್ಕೆ ಯಾವುದೇ ಕಾರಣವಿಲ್ಲ ಎಂಬುದನ್ನು ನೀವೇ ಗ್ರಾಮದ ಜನರಿಗೆ ತಿಳಿಸಿಹೇಳಿ.

ರಾಜೇಶ್ :, ಜನರು ಬಹಳಷ್ಟು ಭಯಭೀತರಾಗಿದ್ದಾರೆ ಎನ್ನುವುದಕ್ಕೆ ಕಾರಣ ಕೆಲವು ಸುಳ್ಳು ವದಂತಿಯನ್ನು ಹರಡಿ ಬಿಟ್ಟಿರುವುದೇ ಆಗಿದೆ ಸರ್. ಉದಾಹರಣೆಗೆ ಲಸಿಕೆ ಹಾಕಿಸಿಕೊಂಡರೆ ಜ್ವರ ಬರುತ್ತದೆ, ಜ್ವರದಿಂದಾಗಿ ರೋಗ ಮತ್ತಷ್ಟು ಹರಡುತ್ತದೆ ಅಂದರೆ ಮನುಷ್ಯ ಸಾವನ್ನಪ್ಪುತ್ತಾನೆ ಎಂಬಂತಹ ವದಂತಿಗಳನ್ನು ಹರಡಿರುವುದು ಸರ್.

ಪ್ರಧಾನಮಂತ್ರಿ : ಓಹೋಹೋ... ನೋಡಿ, ಈಗಂತೂ ಎಷ್ಟೊಂದು ರೇಡಿಯೋ, ಎಷ್ಟೊಂದು ಟಿವಿ, ಎಷ್ಟೊಂದು ಸುದ್ದಿ ದೊರೆಯುತ್ತದೆ ಮತ್ತು ಆದ್ದರಿಂದಲೇ ಜನರಿಗೆ ಅರ್ಥವಾಗುವಂತೆ ತಿಳಿಸಿಹೇಳುವುದು ಬಹಳ ಸುಲಭವಾಗುತ್ತದೆ ಮತ್ತು ಭಾರತದ ಅನೇಕ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಅಂದರೆ ಶೇಕಡಾ ನೂರರಷ್ಟು ಜನರು ಲಸಿಕೆ ಪಡೆದುಕೊಂಡಿದ್ದಾರೆ ಎಂದು ನಾನು ನಿಮಗೆ ಹೇಳಲು ಇಚ್ಛಿಸುತ್ತೇನೆ. ಹಾಗೆಯೇ ನಾನು ನಿಮಗೊಂದು ಉದಾಹರಣೆ ನೀಡುತ್ತೇನೆ...

ರಾಜೇಶ್ : ಸರ್

ಪ್ರಧಾನಮಂತ್ರಿ : ಕಾಶ್ಮೀರದಲ್ಲಿ ಬಾಂದೀಪುರ ಎಂಬ ಜಿಲ್ಲೆಯಿದೆ, ಈ ಬಾಂದೀಪುರ ಜಿಲ್ಲೆಯಲ್ಲಿ ವ್ಯವನ್ (Weyan) ಗ್ರಾಮದ ಜನರೆಲ್ಲರೂ ಸೇರಿ ಶೇಕಡಾ 100 ರಷ್ಟು ಲಸಿಕೆ ಪಡೆಯುವ ಗುರಿ ಹೊಂದಿದರು ಮತ್ತು ಆ ಗುರಿಯನ್ನು ತಲುಪಿದರು. ಇಂದು ಕಾಶ್ಮೀರದ ಈ ಗ್ರಾಮದಲ್ಲಿ 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರೂ ಲಸಿಕೆ ಪಡೆದುಕೊಂಡಾಗಿದೆ. ನಾಗಾಲ್ಯಾಂಡಿನ ಮೂರು ಗ್ರಾಮಗಳಲ್ಲಿನ ಜನರು ಶೇಕಡಾ 100 ರಷ್ಟು ಲಸಿಕೆ ಪಡೆದುಕೊಂಡಿರುವ ಬಗ್ಗೆ ಕೂಡಾ ನನಗೆ ತಿಳಿದುಬಂದಿದೆ.

ರಾಜೇಶ್ : ಸರಿ ...ಸರ್...

ಪ್ರಧಾನಮಂತ್ರಿ : ರಾಜೇಶ್ ಅವರೇ, ನೀವು ಕೂಡಾ ನಿಮ್ಮ ಗ್ರಾಮದಲ್ಲಿ, ಅಕ್ಕ ಪಕ್ಕದ ಗ್ರಾಮಗಳಲ್ಲಿ ಈ ವಿಷಯವನ್ನು ತಲುಪಿಸಬೇಕು ಹಾಗೆಯೇ ನೀವು ಹೇಳಿದಂತೆ ಇದೊಂದು ಭ್ರಮೆ ಅಷ್ಟೇ.

ರಾಜೇಶ್ : ಸರಿ ಸರ್...

ಪ್ರಧಾನಮಂತ್ರಿ : ಹಾಗಿದ್ದಲ್ಲಿ ಭ್ರಮೆಯ ಉತ್ತರವೆಂದರೆ ನೀವು ಸ್ವತಃ ಲಸಿಕೆ ಪಡೆದುಕೊಂಡು ಎಲ್ಲರಿಗೂ ತಿಳಿಸಿ ಹೇಳಬೇಕು. ಹೀಗೆ ಮಾಡುತ್ತೀರಲ್ಲವೇ ನೀವು ?

ರಾಜೇಶ್ : ಮಾಡುತ್ತೇನೆ ಸರ್

ಪ್ರಧಾನಮಂತ್ರಿ : ಖಂಡಿತವಾಗಿಯೂ ಮಾಡುತ್ತೀರಲ್ಲವೇ ?

ರಾಜೇಶ್: ಹೌದು ಸರ್, ಹೌದು ಸರ್. ನಿಮ್ಮ ಮಾತುಗಳಿಂದ ಸ್ವತಃ ಲಸಿಕೆ ಪಡೆದುಕೊಳ್ಳಬೇಕೆಂದು ಮತ್ತು ಜನರನ್ನು ಈ ವಿಷಯವಾಗಿ ಮುಂದೆ ಬರುವಂತೆ ಮಾಡಬೇಕೆಂದು ಅನಿಸುತ್ತಿದೆ ಸರ್.

ಪ್ರಧಾನಮಂತ್ರಿ : ಸರಿ ಒಳ್ಳೆಯದು, ಗ್ರಾಮದಲ್ಲಿ ನಾನು ಮಾತನಾಡಬಹುದಾದಂತಹ ಇನ್ಯಾರಾದರೂ ಇದ್ದಾರೆಯೇ?

ರಾಜೇಶ್ : ಇದ್ದಾರೆ ಸರ್

ಪ್ರಧಾನಮಂತ್ರಿ : ಯಾರು ಮಾತನಾಡುತ್ತಾರೆ?

ಕಿಶೋರಿಲಾಲ್: ಹಲೋ ಸರ್, …. ನಮಸ್ಕಾರ

ಪ್ರಧಾನಮಂತ್ರಿ : ನಮಸ್ಕಾರ, ಯಾರು ಮಾತನಾಡುತ್ತಿರುವುದು?

ಕಿಶೋರಿಲಾಲ್: ಸರ್ ನನನ್ ಹೆಸರು ಕಿಶೋರಿಲಾಲ್ ದುರ್ವೆ.

ಪ್ರಧಾನಮಂತ್ರಿ : ಹಾಗಾದರೆ ಕಿಶೋರಿಲಾಲ್ ಅವರೇ, ಈಗಷ್ಟೇ ರಾಜೇಶ್ ಅವರೊಂದಿಗೆ ಮಾತುಕತೆ ನಡೆದಿತ್ತು.

ಕಿಶೋರಿಲಾಲ್: ಹೌದು ಸರ್

ಪ್ರಧಾನಮಂತ್ರಿ : ಲಸಿಕೆ ಬಗ್ಗೆ ಜನರು ಬಗೆಬಗೆಯಾಗಿ ಮಾತನಾಡುತ್ತಿದ್ದಾರೆ ಎಂದು ಅವರು ಬಹಳ ದುಖಿಃತರಾಗಿ ಹೇಳುತ್ತಿದ್ದರು,

ಕಿಶೋರಿಲಾಲ್: ಹೌದು

ಪ್ರಧಾನಮಂತ್ರಿ : ನೀವೂ ಈ ಬಗ್ಗೆ ಕೇಳಿದ್ದೀರಾ?

ಕಿಶೋರಿಲಾಲ್: ಹೌದು, ಕೇಳಿದ್ದೀನ ಸರ್…

ಪ್ರಧಾನಮಂತ್ರಿ : ಏನು ಕೇಳಿದ್ದೀರಿ

ಕಿಶೋರಿಲಾಲ್ : ಹತ್ತರದಲ್ಲೇ ಮಹಾರಾಷ್ಟ್ರ ಇದೆ. ಅಲ್ಲಿಂದ ಕೆಲವರು ಬಂಧು ಬಾಂಧವರು ಲಸಿಕೆ ಪಡೆಯುವುದರಿಂದ ಕೆಲ ಜನರು ಮರಣವನ್ನಪ್ಪುತ್ತಿದ್ದಾರೆ, ಕೆಲವರು ರೋಗಗ್ರಸ್ತರಾಗುತ್ತಿದ್ದಾರೆ ಎಂದು ಕೆಲ ಬಗೆಯ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಜನರ ಮನದಲ್ಲಿ ಭ್ರಮೆಯಿದೆ. ಆದ್ದರಿಂದ ಲಸಿಕೆ ತೆಗೆದುಕೊಳ್ಳುತ್ತಿಲ್ಲ.

ಪ್ರಧಾನಮಂತ್ರಿ : ಜನರು ಈಗ ಏನು ಮಾತನಾಡುತ್ತಿದ್ದಾರೆ? ಕೊರೊನಾ ಹೊರಟು ಹೋಯಿತು ಎಂದೆನ್ನುತ್ತಿದ್ದಾರೆಯೇ?

ಕಿಶೋರಿಲಾಲ್ : ಹೌದು..

ಪ್ರಧಾನಮಂತ್ರಿ : ಕೊರೊನಾದಿಂದ ಏನೂ ಆಗೋಲ್ಲ ಎನ್ನುತ್ತಿದ್ದಾರೆಯೇ?

ಕಿಶೋರಿಲಾಲ್ : ಇಲ್ಲ ಸರ್, ಕೊರೊನಾ ಹೊರಟು ಹೋಯಿತು ಎಂದು ಹೇಳುವುದಿಲ್ಲ. ಕೊರೊನಾ ಇದೆ ಎನ್ನುತ್ತಾರೆ ಆದರೆ ಲಸಿಕೆ ತೆಗೆದುಕೊಳ್ಳುವುದರಿಂದ ರೋಗ ಬರುತ್ತದೆ, ಎಲ್ಲರೂ ಸಾಯುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ.

ಪ್ರಧಾನಮಂತ್ರಿ : ಹೌದಾ, ಲಸಿಕೆಯಿಂದ ಮೃತರಾಗುತ್ತಿದ್ದಾರೆಯೇ?

ಕಿಶೋರಿಲಾಲ್ : ನಮ್ಮದು ಬುಡಕಟ್ಟು ಕ್ಷೇತ್ರವಾಗಿದೆ ಸರ್, ಅಲ್ಲಿ ಜನರು ಬಹು ಬೇಗ ಭೀತಿಗೊಳ್ಳುತ್ತಾರೆ. ಭ್ರಮೆಯಿಂದಾಗಿ ಜನರು ಲಸಿಕೆ ಪಡೆಯುತ್ತಿಲ್ಲ ಸರ್.

ಪ್ರಧಾನಮಂತ್ರಿ : ನೋಡಿ ಕಿಶೋರಿಲಾಲ್ ಅವರೇ,

ಕಿಶೋರಿಲಾಲ್ : ಹೇಳಿ ಸರ್….

ಪ್ರಧಾನಮಂತ್ರಿ : ಈ ವದಂತಿಗಳನ್ನು ಹಬ್ಬಿಸುವ ಜನರು ಆ ಕೆಲಸವನ್ನು ಮಾಡುತ್ತಲೇ ಇರುತ್ತಾರೆ

ಕಿಶೋರಿಲಾಲ್ : ಹೌದು ಸರ್

ಪ್ರಧಾನಮಂತ್ರಿ : ನಾವು ಜೀವನ ಉಳಿಸಬೇಕಿದೆ, ನಾವು ಗ್ರಾಮಸ್ಥರನ್ನು ಉಳಿಸಿಕೊಳ್ಳಬೇಕಿದೆ. ದೇಶವಾಸಿಗಳನ್ನು ಕಾಪಾಡಬೇಕಿದೆ. ಕೊರೊನಾ ಹೊರಟುಹೋಯ್ತು ಎಂದು ಯಾರೇ ಹೇಳಿದರೂ ಇದೊಂದು ಭ್ರಮೆ. ಭ್ರಮೆಯಲ್ಲಿರಬೇಡಿ.

ಕಿಶೋರಿಲಾಲ್ : ಹೌದು ಸರ್

ಪ್ರಧಾನಮಂತ್ರಿ : ಇದು ಬಹುರೂಪಿ ರೋಗವಾಗಿದೆ

ಕಿಶೋರಿಲಾಲ್ : ಹೌದು ಸರ್

ಪ್ರಧಾನಮಂತ್ರಿ : ಇದು ರೂಪವನ್ನು ಬದಲಿಸುತ್ತದೆ. ಹೊಸ ಹೊಸ ರೂಪದಲ್ಲಿ ಬಂದೆರಗುತ್ತದೆ.

ಕಿಶೋರಿಲಾಲ್ : ಹೌದು ಸರ್

ಪ್ರಧಾನಮಂತ್ರಿ : ಅದರಿಂದ ಪಾರಾಗಲು ನಮ್ಮ ಬಳಿ 2 ದಾರಿಗಳಿವೆ. ಒಂದು ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸುವುದು. ಮಾಸ್ಕ ಧರಿಸುವುದು, ಸಾಬೂನಿನಿಂದ ಪದೇ ಪದೇ ಕೈತೊಳೆಯುವುದು, ಸುರಕ್ಷಿತ ಅಂತರ ಕಾಯ್ದುಕೊಳ್ಳುವುದು. ಜೊತೆಗೆ ಲಸಿಕೆ ಹಾಕಿಸಿಕೊಳ್ಳುವುದು. ಇದು ಕೂಡಾ ತುಂಬಾ ಒಳ್ಳೆಯ ಸುರಕ್ಷಾ ಕವಚವಾಗಿದೆ. ಇದರ ಬಗ್ಗೆ ಚಿಂತಿಸಿ.

ಕಿಶೋರಿಲಾಲ್ : ಆಯ್ತು ಸರ್

ಪ್ರಧಾನಮಂತ್ರಿ : ಕಿಶೋರಿಲಾಲ್ ಅವರೇ ಒಂದು ವಿಷಯ ಹೇಳಿ

ಕಿಶೋರಿಲಾಲ್ : ಆಯ್ತು ಸರ್

ಪ್ರಧಾನಮಂತ್ರಿ : ಜನರು ಪರಸ್ಪರ ಮಾತನಾಡುವಾಗ ನೀವು ಅವರಿಗೆ ಹೇಗೆ ತಿಳಿ ಹೇಳುತ್ತೀರಿ? ಜನರಿಗೆ ಬುದ್ಧಿವಾದ ಹೇಳುತ್ತೀರಾ ಇಲ್ಲ ನೀವೂ ಭ್ರಮೆಗೊಳಗಾಗುತ್ತೀರಾ?

ಕಿಶೋರಿಲಾಲ್: ಬುದ್ಧಿವಾದ ಹೇಳುವಿದೆಲ್ಲಿಂದ ಸರ್, ಬಹಳ ಜನ ಮಾತನಾಡುವುದರಿಂದ ನಾನೂ ಭಯಭೀತನಾಗುತ್ತೇನೆ ಅಲ್ಲವೇ ಸರ್…

ಪ್ರಧಾನಮಂತ್ರಿ : ನೋಡಿ ಕಿಶೋರಿಲಾಲ್ ಅವರೇ ನಿಮ್ಮೊಂದಿಗೆ ಇಂದು ನಾನು ಮಾತನಾಡಿದ್ದೇನೆ, ನೀವು ನನ್ನ ಜೊತೆಗಾರರಾಗಿದ್ದೀರಿ..

ಕಿಶೋರಿಲಾಲ್: ಹೌದು ಸರ್

ಪ್ರಧಾನಮಂತ್ರಿ : ನೀವು ಹೆದರಬೇಡಿ, ಜನರ ಭಯವನ್ನೂ ನಿವಾರಿಸಿ, ನಿವಾರಿಸುವಿರಲ್ಲವೇ?

ಕಿಶೋರಿಲಾಲ್: ಹೌದು ಸರ್, ಖಂಡಿತ ಹೋಗಲಾಡಿಸುವೆ. ಜನರ ಭಯವನ್ನು ಹೋಗಲಾಡಿಸುವೆ. ನಾನು ಕೂಡಾ ಲಸಿಕೆ ಪಡೆಯುವೆ.

ಪ್ರಧಾನಮಂತ್ರಿ : ನೋಡಿ ವದಂತಿಗಳಿಗೆ ಖಂಡಿತ ಕಿವಿಗೊಡಬೇಡಿ…

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ : ನಮ್ಮ ವಿಜ್ಞಾನಿಗಳು ಬಹಳ ಶ್ರಮವಹಿಸಿ ೀ ಲಸಿಕೆ ಸಿದ್ಧಪಡಿಸಿದ್ದಾರೆ ಎಂಬುದು ನಿಮಗೆ ತಿಳಿದಿದೆ.

ಕಿಶೋರಿಲಾಲ್: ಹೌದು ಸರ್

ಪ್ರಧಾನಮಂತ್ರಿ : ದೊಡ್ಡ ದೊಡ್ಡ ವಿಜ್ಞಾನಿಗಳು ವರ್ಷವಿಡೀ, ಹಗಲಿರುಳು ಕೆಲಸ ಮಾಡಿದ್ದಾರೆ ಆದ್ದರಿಂದ ನಾವು ಅವರ ಮೇಲೆ ಭರವಸೆ ಇಡಬೇಕು ಮತ್ತು “ನೋಡಿ ಹೀಗಾಗುವುದಿಲ್ಲ. ಎಷ್ಟೊಂದು ಜನರು ಲಸಿಕೆ ಪಡೆದಿದ್ದಾರೆ ಏನೂ ಆಗುವುದಿಲ್ಲ” ಎಂದು ಸುಳ್ಳು ಸುದ್ದಿಗಳನ್ನು ಹರಡುವ ಜನರಿಗೆ ಪದೇ ಪದೇ ಬುದ್ಧಿ ಹೇಳಬೇಕು.

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ : ವದಂತಿಗಳಿಂದ ಜಾಗೃತರಾಗಿರಿ, ಗ್ರಾಮವನ್ನೂ ಸುರಕ್ಷಿತವಾಗಿಡಿ.

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ : ರಾಜೇಶ್ ಅವರೇ, ಕಿಶೋರಿಲಾಲ್ ಅವರೇ ನಿಮ್ಮಂತಹ ಸ್ನೇಹಿತರಿಗೆ ಹೇಳಬಯಸುವುದೇನೆಂದರೆ ನೀವು ನಿಮ್ಮ ಗ್ರಾಮದಲ್ಲಿ ಮಾತ್ರವಲ್ಲದೇ ಬೇರೆ ಗ್ರಾಮಗಳಲ್ಲೂ ವದಂತಿ ಹರಡುವುದನ್ನು ತಪ್ಪಿಸಿ, ಮತ್ತು ಅವರೆಲ್ಲರಿಗೂ ನನ್ನೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿ.

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ : ನನ್ನ ಹೆಸರು ಹೇಳಿ…

ಕಿಶೋರಿಲಾಲ್: ಹೇಳುತ್ತೇನೆ ಸರ್, ಜನರಿಗೂ ತಿಳಿಸುತ್ತೇನೆ.. ಸ್ವತಃ ಲಸಿಕೆ ಹಾಕಿಸಿಕೊಳ್ಳುವೆ.

ಪ್ರಧಾನಮಂತ್ರಿ: ನೋಡಿ, ನಿಮ್ಮ ಸಂಪೂರ್ಣ ಗ್ರಾಮಕ್ಕೆ ನನ್ನ ಪರವಾಗಿ ಶುಭಹಾರೈಕೆಗಳನ್ನು ತಿಳಿಸಿ

ಕಿಶೋರಿಲಾಲ್: ಆಯ್ತು ಸರ್…

ಪ್ರಧಾನಮಂತ್ರಿ: ಎಲ್ಲರಿಗೂ ತಿಳಿಸಿ ತಮ್ಮ ಸರದಿ ಬಂದಾಗ …

ಕಿಶೋರಿಲಾಲ್ : ಆಯ್ತು ಸರ್

ಪ್ರಧಾನಮಂತ್ರಿ : ಖಂಡಿತ ಲಸಿಕೆ ಹಾಕಿಸಿಕೊಳ್ಳಿ

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ: ಗ್ರಾಮದ ಮಹಿಳೆಯರಿಗೆ, ನಮ್ಮ ತಾಯಂದಿರಿಗೆ, ಸೋದರಿಯರಿಗೆ .

ಕಿಶೋರಿಲಾಲ್: ಹೇಳಿ ಸರ್

ಪ್ರಧಾನಮಂತ್ರಿ: ಈ ಕೆಲಸದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳಿ ಮತ್ತು ಸಕ್ರೀಯವಾಗಿ ಅವರನ್ನು ನಿಮ್ಮೊಂದಿಗೆ ಕೆಲಸದಲ್ಲಿ ನಿರತವಾಗಿಸಿ

ಕಿಶೋರಿಲಾಲ್: ಆಯ್ತು ಸರ್..

ಪ್ರಧಾನಮಂತ್ರಿ : ಕೆಲವೊಮ್ಮೆ ತಾಯಂದಿರು, ಸೋದರಿಯರು ಹೇಳಿದಾಗ ಜನರು ಮಾತು ಕೇಳುತ್ತಾರೆ.

ಕಿಶೋರಿಲಾಲ್ : ಆಯ್ತು ಸರ್

ಪ್ರಧಾನಮಂತ್ರಿ: ನಿಮ್ಮ ಗ್ರಾಮದಲ್ಲಿ ಲಸಿಕಾ ಅಭಿಯಾನ ಫೂರ್ಣಗೊಂಡ ನಂತರ ನನಗೆ ತಿಳಿಸುತ್ತೀರಾ?

ಕಿಶೋರಿಲಾಲ್: ತಿಳಿಸುತ್ತೇನೆ ಸರ್

ಪ್ರಧಾನಮಂತ್ರಿ : ಖಂಡಿತಾ ತಿಳಿಸುತ್ತೀರಾ?

ಕಿಶೋರಿಲಾಲ್: ಖಂಡಿತಾ ತಿಳಿಸುತ್ತೇನೆ ಸರ್

ಪ್ರಧಾನಮಂತ್ರಿ : ನಿಮ್ಮ ಪತ್ರಕ್ಕಾಗಿ ನಾನು ಕಾಯುತ್ತಿರುತ್ತೇನೆ

ಕಿಶೋರಿಲಾಲ್: ಆಯ್ತು ಸರ್

ಪ್ರಧಾನಮಂತ್ರಿ: ಸರಿ ರಾಜೇಶ್ ಅವರೇ.. ಕಿಶೋರಿಲಾಲ್ ಅವರೇ ನಿಮ್ಮೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ಅನಂತ ಧನ್ಯವಾದಗಳು ..

ಕಿಶೋರಿಲಾಲ್ : ಧನ್ಯವಾದಗಳು ಸರ್ ನೀವು ನಮ್ಮೊಂದಿಗೆ ಮಾತನಾಡಿದಿರಿ. ನಿಮಗೂ ಅನಂತ ಧನ್ಯವಾದಗಳು …

ಸ್ನೇಹಿತರೆ, ಒಂದಲ್ಲಾ ಒಂದು ದಿನ ಭಾರತದ ಗ್ರಾಮಜನತೆ, ನಮ್ಮ ಬುಡಕಟ್ಟು ಸೋದರ ಸೋದರಿಯರು ಕೊರೊನಾ ಕಾಘಟ್ಟದಲ್ಲಿ ಹೇಗೆ ತಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯನ್ನು ಪ್ರದರ್ಶಿಸಿದರು ಎಂಬುದು ವಿಶ್ವಕ್ಕೆ case study ವಿಷಯವೂ ಆಗಬಹುದು. ಗ್ರಾಮದ ಜನತೆ ಕ್ವಾರಂಟೈನ್ ಕೇಂದ್ರಗಳನ್ನು ನಿರ್ಮಿಸಿದರು. ಸ್ಥಳೀಯ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ಕೊವಿಡ್ ಮಾರ್ಗಸೂಚಿಗಳನ್ನು ಸಿದ್ಧಪಡಿಸಿದರು. ಗ್ರಾಮದ ಜನತೆ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಂಡರು, ಕೃಷಿ ಕೆಲಸ ನಿಲ್ಲದಂತೆ ನೋಡಿಕೊಂಡರು. ಹತ್ತರದ ನಗರಗಳಿಗೆ ಹಶಲು, ತರಕಾರಿ ನಿತ್ಯ ತಲುಪಿಸುತ್ತಿದ್ದರು. ಇದರತ್ತ ಕೂಡ ಗ್ರಾಮಗಳು ಗಮನಹರಿಸಿದವು. ಅಂದರೆ ತಮ್ಮನ್ನು ತಾವು ನಿಭಾಯಿಸಿದರು ಜೊತೆಗೆ ಇತರರ ಅವಶ್ಯಕತೆಗಳನ್ನೂ ಪೂರೈಸಿದರು. ಹೀಗೆ ಲಸಿಕಾ ಅಭಿಯಾನದಲ್ಲೂ ನಾವು ಪಾಲ್ಗೊಳ್ಳಬೇಕು. ನಾವು ಜಾಗರೂಕರಾಗಿರಬೇಕು ಮತ್ತು ಜಾಗೃತಿ ಮೂಡಿಸಲೂಬೇಕು. ಗ್ರಾಮಗಳಲ್ಲಿ ಪ್ರತಿಯೊಬ್ಬರಿಗೂ ಲಸಿಕೆ ದೊರೆಯಲಿ ಎಂಬುದು ಪ್ರತಿ ಗ್ರಾಮದ ಗುರಿಯಾಗಬೇಕು. ನೆನಪಿಡಿ, ನಾನು ನಿಮಗೆ ವಿಶೇಷವಾಗಿ ಹೆಳಬಯಸುತ್ತೇನೆ- ನೀವು ನಿಮಗೇ ಒಂದು ಪ್ರಶ್ನೆ ಹಾಕಿಕೊಳ್ಳಿ - ಎಲ್ಲರೂ ಸಫಲತೆ ಹೊಂದಬಯಸುತ್ತಾರೆ ಆದರೆ ನಿರ್ಣಾಯಕ ಸಫಲತೆಯ ಸೂತ್ರ ಏನು? ನಿರ್ಣಾಯಕ ಸಫಲತೆಯ ಸೂತ್ರವೇನೆಂದರೆ ನಿರಂತರತೆ. ಆದ್ದರಿಂದ ನಾವು ವಿರಮಿಸಬಾರದು, ಯಾವುದೇ ಭ್ರಮೆಗೊಳಗಾಗಬಾರದು. ಸತತ ಪ್ರಯತ್ನ ಮಾಡುತ್ತಲೇ ಇರಬೇಕು. ಕೊರೊನಾ ವಿರುದ್ಧ ಜಯಗಳಿಸಬೇಕು.

ನನ್ನ ಪ್ರಿಯ ದೇಶಬಾಂಧವರೆ, ನಮ್ಮ ದೇಶದಲ್ಲಿ ಈಗ ಮುಂಗಾರು ಆರಂಭವಾಗಿದೆ. ಮೋಡಗಳು ಮಳೆಸುರಿಸಿದಾಗ ಕೇವಲ ನಮಗಾಗಿ ಮಾತ್ರ ಸುರಿಸುವುದಿಲ್ಲ. ಻ವು ಮುಂಬರುವ ಪೀಳಿಗೆಗಳಿಗೂ ಸುರಿಸುತ್ತವೆ. ಮಳೆಯ ನೀರು ಭೂಮಿಯಲ್ಲಿ ಹೋಗಿ ಸಂಗ್ರಹಗೊಳ್ಳುತ್ತದೆ. ಭೂಮಿಯ ಅಂತರ್ಜಲ ಮಟ್ಟವನ್ನು ಸುಧಾರಿಸುತ್ತದೆ. ಆದ್ದರಿಂದ ಜಲ ಸಂರಕ್ಷಣೆಯನ್ನು ನಾನು ದೇಶ ಸೇವೆಯ ಒಂದು ರೂಪವೆಂದು ಭಾವಿಸುತ್ತೇನೆ. ನಮ್ಮಲ್ಲಿ ಅದೆಷ್ಟೋ ಜನ ಈ ಪುಣ್ಯದ ಕೆಲಸವನ್ನು ತಮ್ಮ ಜವಾಬ್ದಾರಿಯೆಂದು ಭಾವಿಸಿ ನಿಭಾಯಿಸುತ್ತಿರುವುದನ್ನ್ನು ನೀವೂ ನೋಡಿರಬಹುದು. ಹೀಗೆ ಒಬ್ಬ ವ್ಯಕ್ತಿಯಿದ್ದಾರೆ – ಅವರೇ ಉತ್ತರಾಖಂಡದ ಪೌಡಿ ಗಡ್ವಾಲದ ಸಚ್ಚಿದಾನಂದ ಭಾರತಿಯವರು. ಭಾರತಿಯವರು ಓರ್ವ ಶಿಕ್ಷಕರಾಗಿದ್ದಾರೆ ಅವರು ತಮ್ಮ ಕೆಲಸಗಳಿಂದ ಜನರಿಗೆ ಬಹಳ ಉತ್ತಮ ಶಿಕ್ಷಣ ನೀಡಿದ್ದಾರೆ. ಇಂದು ಅವರ ಪರಿಶ್ರಮದಿಂದ ಪೌಡಿ ಗಡ್ವಾಲದ ಉಫ್ರೆಂಖಾಲ್ ಕ್ಷೇತ್ರದಲ್ಲಿ ನೀರಿನ ಸಂಕಷ್ಟಕ್ಕೆ ಪರಿಹಾರ ದೊರೆತಿದೆ. ಜನರು ನೀರಿಗಾಗಿ ಪರಿತಪಿಸುತ್ತಿದ್ದ ಸ್ಥಳದಲ್ಲಿ ಇಂದು ವರ್ಷಪೂರ್ತಿ ನೀರಿನ ಲಭ್ಯತೆ ದೊರೆತಿದೆ.

ಸ್ನೇಹಿತರೆ, ಬೆಟ್ಟ ಪ್ರದೇಶಗಳಲ್ಲಿ ಜಲ ಸಂರಕ್ಷಣೆಯ ಪಾರಂಪರಿಕ ಪದ್ಧತಿಯಿದೆ. ಅದನ್ನು ಚಾಲ್ ಖಾಲ್ ಎಂದು ಕೂಡಾ ಕರೆಯುತ್ತಾರೆ. ಅಂದರೆ ನೀರಿನ ಶೇಖರಣೆಗೆ ದೊಡ್ಡ ಗುಂಡಿಯನ್ನು ತೋಡುವುದು. ಈ ಪರಂಪರೆಯಲ್ಲಿ ಭಾರತೀಯವರು ಕೆಲವು ಹೊಸ ರೀತಿನೀತಿಗಳನ್ನು ಸಂಯೋಜಿಸಿದರು. ಅವರು ನಿರಂತರವಾಗಿ ಕೆಲವು ಚಿಕ್ಕ ದೊಡ್ಡ ಹಳ್ಳ ಕೊಳ್ಳಗಳನ್ನು ನಿರ್ಮಿಸಿದರು. ಇದರಿಂದ ಕೇವಲ ಉಫ್ರೆಂಖಾಲ್ ಬೆಟ್ಟ ಪ್ರದೇಶ ಮಾತ್ರ ಹಸಿರಿನಿಂದ ಕಂಗೊಳಿಸುವುದಷ್ಟೇ ಅಲ್ಲ ಅಲ್ಲಿಯ ಜನರ ಕುಡಿಯುಬವ ನೀರಿನ ಸಮಸ್ಯೆ ಕೂಡಾ ಪರಿಹಾರವಾಯ್ತು. ಭಾರತಿಯವರು ಇಂಥ 30 ಸಾವಿರಕ್ಕೂ ಹೆಚ್ಚು ನೀರಿನ ಶೇಖರಣಾ ತಾಣಗಳನ್ನು ನಿರ್ಮಿಸಿದ್ದಾರೆಂದು ತಿಳಿದು ನಿಮಗೆ ಆಶ್ಚರ್ಯೆನ್ನಿಸಬಹುದು. ಅವರ ಈ ಭಗೀರಥ ಪ್ರಯತ್ನ ಇಂದಿಗೂ ಜಾರಿಯಲ್ಲಿದೆ. ಬಹಳಷ್ಟು ಜನರಿಗೆ ಪ್ರೇರಣಾದಾಯಕವಾಗಿದೆ.

ಸ್ನೇಹಿತರೇ, ಇದೇ ರೀತಿ ಉತ್ತರ ಪ್ರದೇಶದ ಬಾಂದಾ ಜಿಲ್ಲೆಯ ಅಂಧಾವಾ ಗ್ರಾಮದ ಜನರು ಕೂಡಾ ವಿಭಿನ್ನ ರೀತಿಯ ಪ್ರಯತ್ನ ಮಾಡಿದ್ದಾರೆ. ಅವರು ತಮ್ಮ ಅಭಿಯಾನಕ್ಕೆ ಬಹಳ ಆಸಕ್ತಿದಾಯಕ ಹೆಸರು ನೀಡಿದ್ದಾರೆ – ಹೊಲದ ನೀರು ಹೊಲದಲ್ಲಿ, ಗ್ರಾಮದ ನೀರು ಗ್ರಾಮದಲ್ಲಿ. ಈ ಅಭಿಯಾನದ ಮೂಲಕ ನೂರಾರು ದೊಡ್ಡ ಹೊಲಗಳಲ್ಲಿ ಎತ್ತರೆತ್ತರದ ಬದುಗಳನ್ನು ಮಾಡಲಾಗಿದೆ. ಇದರಿಂದಾಗಿ ಮಳೆಯ ನೀರು ಹೊಲದಲ್ಲಿ ಸಂಗ್ರಹವಾಗಲು ತೊಡಗಿತು ಮತ್ತು ಭೂಮಿಯೊಳಗೆ ಹೋಗತೊಡಗಿತು. ಈಗ ಎಲ್ಲರೂ ಹೊಲದ ಬದುಗಳ ಮೇಲೆ ಗಿಡಹನ್ನು ನೆಡಲು ಯೋಜಿಸುತ್ತಿದ್ದಾರೆ. ಅಂದರೆ ಈಗ ರೈತನಿಗೆ ನೀರು, ಮರ ಮತ್ತು ಹಣ ಮೂರೂ ದೊರೆಯುತ್ತದೆ. ಅವರ ಉತ್ತಮ ಕೆಲಸಗಳಿಂದ, ಅವರ ಗ್ರಾಮದ ಹೆಸರು ದೂರದೂರದವರೆಗೂ ಗುರುತಿಸಲ್ಪಟ್ಟಿದೆ.

ಸ್ನೇಹಿತರೇ, ಇವೆಲ್ಲವುಗಳಿಂದ ಪ್ರೇರಿತರಾಗುತ್ತಾ, ನಾವು ನಮ್ಮ ಸುತ್ತ ಮುತ್ತ ನೀರನ್ನು ಯಾವರೀತಿಯಲ್ಲಿ ಉಳಿಸಲು ಸಾಧ್ಯವೋ ಆ ರೀತಿಯಲ್ಲಿ ಖಂಡಿತಾ ಉಳಿಸಬೇಕು. ಮುಂಗಾರಿನ ಈ ಮಹತ್ವದ ಸಮಯವನ್ನು ನಾವು ವ್ಯರ್ಥ ಮಾಡಬಾರದು.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಪುರಾಣಗಳಲ್ಲಿ ಹೀಗೆ ಹೇಳಲಾಗಿದೆ.

“नास्ति मूलम् अनौषधम्” ||

ಅಂದರೆ , ಯಾವುದಾದರೊಂದು ಔಷಧೀಯ ಗುಣ ಹೊಂದಿರದ ಯಾವುದೇ ಸಸ್ಯ ಭೂಮಿಯ ಮೇಲೆ ಇಲ್ಲ ಎಂದು. ನಮ್ಮ ಸುತ್ತ ಮುತ್ತ ಅನೇಕ ಅದ್ಭುತ ಔಷಧೀಯ ಗುಣ ಹೊಂದಿದ ಅನೇಕ ಗಿಡ ಮರಗಳಿವೆ, ಆದರೆ, ಅನೇಕ ಸಲ ಅವುಗಳ ಬಗ್ಗೆ ತಿಳಿದೇ ಇರುವುದಿಲ್ಲ. ನೈನಿತಾಲ್ ನಿಂದ ಓರ್ವ ಸ್ನೇಹಿತ, ಸೋದರ ಪರಿತೋಷ್ ಈ ಕುರಿತಂತೆ ಒಂದು ಪತ್ರವನ್ನು ನನಗೆ ಕಳುಹಿಸಿದ್ದಾರೆ. ಅವರು ಬರೆದಿದ್ದಾರೆ, ಅವರಿಗೆ ಗಿಲೋಯ್ ಮತ್ತು ಇತರ ಅನೇಕ ಸಸ್ಯಗಳ ಇಂತಹ ಪವಾಡಸದೃಶ ವೈದ್ಯಕೀಯ ಗುಣಗಳ ಬಗ್ಗೆ ಕೊರೊನಾ ಬಂದ ನಂತರವೇ ತಮಗೆ ತಿಳಿದು ಬಂದಿತೆಂದು. ಜನರು ತಮ್ಮ ಸುತ್ತಮುತ್ತಲಿನ ಸಸ್ಯಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಅದರ ಬಗ್ಗೆ ಇತರರಿಗೂ ತಿಳಿಸಬೇಕೆಂದು ನಾನು ಮನ್ ಕಿ ಬಾತ್ ನಲ್ಲಿ ಎಲ್ಲಾ ಶ್ರೋತೃಗಳೊಂದಿಗೆ ಹೇಳಬೇಕೆಂದು ಕೂಡಾ ಪರಿತೋಷ್ ನನ್ನಲ್ಲಿ ಮನವಿ ಮಾಡಿದ್ದಾರೆ. ವಾಸ್ತವದಲ್ಲಿ, ಇದು ನಮ್ಮ ಯುಗಯುಗಗಳ ಪುರಾತನ ಪರಂಪರೆಯಾಗಿದೆ, ಇದನ್ನು ನಾವು ಕಾಪಾಡಬೇಕಾಗಿದೆ. ಇದೇ ನಿಟ್ಟಿನಲ್ಲಿ ಮಧ್ಯಪ್ರದೇಶದ ಸತನಾದ ಓರ್ವ ಸ್ನೇಹಿತ ಶ್ರೀಮಾನ್ ರಾಮಲೋಟನ್ ಕುಶ್ವಾಹಾ ಅವರು, ಅತ್ಯಂತ ಶ್ಲಾಘನೀಯ ಕೆಲಸವೊಂದನ್ನು ಮಾಡಿದ್ದಾರೆ. ರಾಮ ಲೋಟನ್ ಅವರು ತಮ್ಮ ಹೊಲದಲ್ಲಿ ಒಂದು ದೇಶೀಯ ಸಂಗ್ರಹಾಲಯ ಮಾಡಿದ್ದಾರೆ. ಈ ಸಂಗ್ರಹಾಲಯದಲ್ಲಿ ಅವರು ನೂರಾರು ಔಷಧೀಯ ಸಸ್ಯಗಳು ಮತ್ತು ಬೀಜಗಳನ್ನು ಸಂಗ್ರಹಿಸಿದ್ದಾರೆ. ಅವರು ಇವುಗಳನ್ನು ದೂರ ದೂರದ ಪ್ರಾಂತ್ಯಗಳಿಂದ ತೆಗೆದುಕೊಂಡು ಬಂದಿದ್ದಾರೆ. ಇಷ್ಟೇ ಅಲ್ಲದೇ ಅವರು ಪ್ರತಿ ವರ್ಷ ಅನೇಕ ರೀತಿಯ ಭಾರತೀಯ ತರಕಾರಿಗಳನ್ನು ಕೂಡಾ ಬೆಳೆಯುತ್ತಾರೆ. ರಾಮ್ ಲೋಟನ್ ಅವರ ಈ ತೋಟ, ಈ ದೇಶೀಯ ಸಂಗ್ರಹಾಲಯ ನೋಡಲು ಜನರು ಕೂಡಾ ಬರುತ್ತಾರೆ ಮತ್ತು ಅದರಿಂದ ಬಹಳಷ್ಟನ್ನು ಕಲಿಯುತ್ತಾರೆ ಕೂಡಾ. ವಾಸ್ತವದಲ್ಲಿ ಇದು ವಿವಿಧ ಕ್ಷೇತ್ರಗಳಲ್ಲಿ ಪುನರಾವರ್ತಿಸಬಹುದಾದ ಒಂದು ಬಹಳ ಉತ್ತಮವಾದ ಪ್ರಯೋಗ ಕೂಡಾ ಆಗಿದೆ. ನಿಮ್ಮಲ್ಲಿ ಇಂತಹ ಪ್ರಯತ್ನ ಮಾಡಲು ಯಾರಿಗೆ ಸಾಧ್ಯವಾಗುತ್ತದೋ ದಯವಿಟ್ಟು ಖಂಡಿತಾ ಮಾಡಿ ಎಂದು ನಾನು ಆಶಿಸುತ್ತೇನೆ. ಇದರಿಂದ ನಿಮ್ಮ ಆದಾಯದ ಹೊಸ ಮೂಲ ಕೂಡಾ ತೆರೆದುಕೊಳ್ಳಬಹುದು. ಸ್ಥಳೀಯ ಸಸ್ಯವರ್ಗದ ಮೂಲಕ ನಿಮ್ಮ ಪ್ರದೇಶದ ಹೆಸರು ಕೂಡಾ ಎಲ್ಲೆಡೆ ತಿಳಿದುಬರುತ್ತದೆ ಎಂಬ ಪ್ರಯೋಜನವೂ ಇದರಲ್ಲಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ಅಂದರೆ ಜುಲೈ 1 ರಂದು ನಾವು ’ರಾಷ್ಟ್ರೀಯ ವೈದ್ಯರ ದಿನ’ ಆಚರಿಸಲಿದ್ದೇವೆ. ಈ ದಿನವನ್ನು ದೇಶದ ಶ್ರೇಷ್ಠ ವೈದ್ಯ ಮತ್ತು ರಾಜಕಾರಣೆ ಡಾಕ್ಟರ್ ಬಿಸಿ ರಾಯ್ ಅವರ ಜನ್ಮ ಜಯಂತಿಗೆ ಸಮರ್ಪಿಸಲಾಗುತ್ತದೆ. ಕೊರೋನಾ ಸಮಯದಲ್ಲಿ ವೈದ್ಯರು ನೀಡಿದ ಕೊಡುಗೆಗಾಗಿ ನಾವೆಲ್ಲರೂ ಕೃತಜ್ಞರಾಗಿದ್ದೇವೆ. ನಮ್ಮ ವೈದ್ಯರು ತಮ್ಮ ಜೀವನದ ಬಗ್ಗೆ ಚಿಂತಿಸದೆ ನಮ್ಮ ಸೇವೆ ಮಾಡಿದ್ದಾರೆ. ಆದ್ದರಿಂದ ಈ ಬಾರಿಯ ರಾಷ್ಟ್ರೀಯ ವೈದ್ಯರ ದಿನ ಮತ್ತಷ್ಟು ಮಹತ್ವದ್ದೆನಿಸುತ್ತದೆ.

ಸ್ನೇಹಿತರೆ, ವೈದ್ಯಕೀಯ ಕ್ಷೇತ್ರದ ಅತ್ಯಂತ ಗೌರವಾನ್ವಿತರಲ್ಲಿ ಒಬ್ಬರಾದ Hippocrates ಹೀಗೆಂದು ಹೇಳಿದ್ದಾರೆ :

“Wherever the art of Medicine is loved, there is also a love of Humanity.”

ಅಂದರೆ ‘ಎಲ್ಲಿ ಔಷಧ ಕಲೆಯಲ್ಲಿ ಪ್ರೀತಿ ಇರುತ್ತದೆಯೇ ಅಲ್ಲಿ ಮಾನವೀಯತೆಯ ಬಗ್ಗೆ ಪ್ರೀತಿಯೂ ಇರುತ್ತದೆ.’ ವೈದ್ಯರು ಇಂತಹ ಪ್ರೀತಿಯಿಂದಲೇ ನಮ್ಮ ಸೇವೆ ಮಾಡಲು ಸಾಧ್ಯವಾಗುತ್ತದೆ, ನಾವು ಅಷ್ಟೇ ಪ್ರೀತಿಯಿಂದ ಅವರಿಗೆ ಧನ್ಯವಾದ ಅರ್ಪಿಸುವುದು, ಅವರ ಸ್ಥೈರ್ಯವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯವಾಗಿದೆ. ನಮ್ಮ ದೇಶದಲ್ಲಿ ತಾವಾಗಿಯೇ ಮುಂದೆ ಬಂದು ವೈದ್ಯರಿಗೆ ಸಹಾಯ ಮಾಡುವ ಅನೇಕರಿದ್ದಾರೆ. ಶ್ರೀನಗರದಲ್ಲಿ ಅಂತಹ ಒಂದು ಪ್ರಯತ್ನದ ಬಗ್ಗೆ ನನಗೆ ತಿಳಿದುಬಂತು. ಇಲ್ಲಿನ ದಾಲ್ ಸರೋವರದಲ್ಲಿ ಒಂದು ಬೋಟ್ ಆಂಬುಲೆನ್ಸ್ ಸೇವೆ ಆರಂಭಿಸಲಾಯಿತು. ಈ ಸೇವೆಯನ್ನು ಶ್ರೀನಗರದಲ್ಲಿ ಒಂದು ಹೌಸ್ ಬೋಟ್ ಮಾಲೀಕರಾದ ತಾರೀಖ್ ಅಹಮದ್ ಪಟ್ಲೂ ಅವರು ಆರಂಭಿಸಿದರು. ಅವರು ಸ್ವತಃ ಕೋವಿಡ್ -19 ರೊಂದಿಗೆ ಹೋರಾಡಿದ್ದಾರೆ ಮತ್ತು ಇದರಿಂದಾಗಿಯೇ ಅವರಿಗೆ ಆಂಬುಲೆನ್ಸ್ ಸೇವೆ ಆರಂಭಿಸುವ ಪ್ರೇರಣೆ ದೊರೆಯಿತು. ಅವರ ಈ ಆಂಬುಲೆನ್ಸ್ ನಿಂದ ಜನರಿಗೆ ಅರಿವು ಮೂಡಿಸುವ ಅಭಿಯಾನ ಕೂಡಾ ನಡೆಯುತ್ತಿದೆ, ಅವರು ಸತತವಾಗಿ ಆಂಬುಲೆನ್ಸ್ ನಿಂದ ಘೋಷಣೆ ಮಾಡುತ್ತಿದ್ದಾರೆ. ಜನರು ಮಾಸ್ಕ್ ಧರಿಸುವುದರಿಂದ ಹಿಡಿದು ಪ್ರತಿಯೊಂದು ಮುನ್ನೆಚ್ಚರಿಕೆಗಳನ್ನೂ ಕೈಗೊಳ್ಳುವುದಕ್ಕೆ ಪ್ರಯತ್ನ ಮಾಡುತ್ತಿದ್ದಾರೆ.

ಸ್ನೇಹಿತರೇ, ಜುಲೈ ಒಂದರಂದು ವೈದ್ಯರ ದಿನದೊಂದಿಗೆ Chartered Accountants ದಿನವನ್ನು ಕೂಡಾ ಆಚರಿಸಲಾಗುತ್ತದೆ. ನಾನು ಕೆಲವು ವರ್ಷಗಳ ಹಿಂದೆ ದೇಶದ ಚಾರ್ಟೆರ್ಡ್ ಅಕೌಂಟೆಂಟ್ ಗಳಿಂದ, ಜಾಗತಿಕ ಮಟ್ಟದ ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ಉಡುಗೊರೆಗಾಗಿ ಕೇಳಿದ್ದೆ. ಇಂದು ನಾನು ಅವರಿಗೆ ಇದರ ಬಗ್ಗೆ ನೆನಪಿಸಲು ಬಯಸುತ್ತೇನೆ. ಹಣಕಾಸು ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು Chartered Accountants ಬಹಳ ಉತ್ತಮ ಮತ್ತು ಸಕಾರಾತ್ಮಕ ಪಾತ್ರ ವಹಿಸಬಹುದು. ನಾನು ಎಲ್ಲಾ ಚಾರ್ಟೆರ್ಡ್ ಅಕೌಂಟೆಂಟ್ ಗಳು, ಅವರ ಕುಟುಂಬದ ಸದಸ್ಯರಿಗೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಕೊರೋನಾ ವಿರುದ್ಧದ ಭಾರತದ ಹೋರಾಟದಲ್ಲಿ ಒಂದು ದೊಡ್ಡ ವಿಶೇಷತೆಯಿದೆ. ಈ ಹೋರಾಟದಲ್ಲಿ ದೇಶದ ಪ್ರತಿಯೊಬ್ಬರೂ ತಮ್ಮ ಪಾತ್ರ ನಿಭಾಯಿಸಿದ್ದಾರೆ. ನಾನು “ಮನದ ಮಾತಿನಲ್ಲಿ” ಅನೇಕ ಬಾರಿ ಇದನ್ನು ಉಲ್ಲೇಖಿಸಿದ್ದೇನೆ. ಆದರೆ ತಮ್ಮ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದು ಕೆಲವರಿಂದ ದೂರು ಕೂಡಾ ಇದ್ದೇ ಇರುತ್ತದೆ. ಅನೇಕರು ಬ್ಯಾಂಕ್ ಸಿಬ್ಬಂದಿಯೇ ಆಗಿರಲಿ, ಶಿಕ್ಷಕರಿರಲಿ, ಸಣ್ಣ ವ್ಯಾಪಾರಿ ಅಥವಾ ಅಂಗಡಿ ಮಾಲೀಕರಾಗಿರಲಿ, ಅಂಗಡಿಯಲ್ಲಿ ಕೆಲಸ ಮಾಡುವ ಜನರಾಗಿರಲಿ, ಬೀದಿ ಬದಿ ತಳ್ಳುಗಾಡಿಯ ವ್ಯಾಪಾರಿಗಳಿರಲಿ, ಸೆಕ್ಯೂರಿಟಿ ವಾಚ್ ಮೆನ್ ಆಗಿರಲಿ ಅಥವಾ ಪೋಸ್ಟ್ ಮೆನ್ ಅಥವಾ ಅಂಚೆ ಕಚೇರಿಯ ಸಿಬ್ಬಂದಿಯೇ ಆಗಿರಲಿ, - ವಾಸ್ತವದಲ್ಲಿ ಈ ಪಟ್ಟಿ ಬಹಳ ದೊಡ್ಡದಿದೆ ಮತ್ತು ಪ್ರತಿಯೊಬ್ಬರೂ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ. ಆಡಳಿತ ವ್ಯವಸ್ಥೆಯಲ್ಲಿ ಕೂಡಾ ಎಷ್ಟೊಂದು ಜನರು ವಿಧ ವಿಧ ಹಂತದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಸ್ನೇಹಿತರೇ, ನೀವು ಬಹಶಃ ಭಾರತ ಸರ್ಕಾರದಲ್ಲಿ ಕಾರ್ಯದರ್ಶಿಯಾಗಿದ್ದ ಗುರು ಪ್ರಸಾದ್ ಮಹಾಪಾತ್ರ ಅವರ ಹೆಸರನ್ನು ಕೇಳಿರಬಹುದು. ನಾನು ಇಂದು “ಮನದ ಮಾತಿನಲ್ಲಿ” ಅವರನ್ನು ಉಲ್ಲೇಖಿಸಲು ಬಯಸುತ್ತೇನೆ. ಗುರು ಪ್ರಸಾದ್ ಅವರಿಗೆ ಕೊರೋನಾ ಸೋಂಕು ತಗುಲಿತು, ಅವರು ಆಸ್ಪತ್ರೆಗೆ ದಾಖಲಾಗಿದ್ದರು, ಮತ್ತು ತಮ್ಮ ಕರ್ತವ್ಯವನ್ನು ಕೂಡಾ ನಿಭಾಯಿಸುತ್ತಿದ್ದರು. ದೇಶದಲ್ಲಿ ಆಮ್ಲಜನಕದ ಉತ್ಪಾದನೆಯನ್ನು ಹೆಚ್ಚಿಸಲು, ದೂರ ದೂರದ ಪ್ರದೇಶಗಳಿಗೆ ಆಮ್ಲಜನಕ ತಲುಪಿಸುವುದಕ್ಕಾಗಿ ಅವರು ಹಗಲು-ರಾತ್ರಿ ಕೆಲಸ ಮಾಡಿದರು. ಒಂದೆಡೆ ಕೋರ್ಟ್, ಕಚೇರಿಗಳ ಕೆಲಸ, ಮಾಧ್ಯಮದ ಒತ್ತಡ, ಅವರು ಏಕಕಾಲದಲ್ಲಿ ಅನೇಕ ರಂಗಗಳಲ್ಲಿ ಹೋರಾಡುತ್ತಿದ್ದರು, ಕಾಯಿಲೆಯ ಕಾರಣದಿಂದ ಅವರು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಬೇಡವೆಂದು ಹೇಳಿದರೂ ಕೇಳದೆ, ಹಠ ಹಿಡಿದು ಆಮ್ಲಜನಕ ಸಂಬಂಧಿತ ವಿಡಿಯೋ ಕಾನ್ಫರೆನ್ಸ್ ನಲ್ಲಿ ಕೂಡಾ ಭಾಗಿಯಾಗುತ್ತಿದ್ದರು. ದೇಶದ ನಾಗರಿಕರ ಬಗ್ಗೆ ಅವರಿಗೆ ಅಷ್ಟೊಂದು ಕಾಳಜಿಯಿತ್ತು. ಅವರು ಆಸ್ಪತ್ರೆಯ ಹಾಸಿಗೆಯಲ್ಲಿದ್ದಾಗಲೂ ತಮ್ಮ ಬಗ್ಗೆ ಕಾಳಜಿ ವಹಿಸದೆ, ಅವರು ದೇಶದ ಜನರಿಗೆ ಆಮ್ಲಜನಕ ತಲುಪಿಸುವ ವ್ಯವಸ್ಥೆಯಲ್ಲಿ ತೊಡಗಿಕೊಂಡೇ ಇದ್ದರು. ಇಂತಹ ಕರ್ಮಯೋಗಿಯನ್ನು ಕೂಡಾ ದೇಶ ಕಳೆದುಕೊಂಡಿತು ಎನ್ನುವುದು ನಮ್ಮೆಲ್ಲರಿಗೂ ದುಃಖದ ಸಂಗತಿಯಾಗಿದೆ, ಕೊರೋನಾ ಅವರನ್ನು ನಮ್ಮೆಲ್ಲರಿಂದ ಕಸಿದುಕೊಂಡಿತು. ಎಂದಿಗೂ ಚರ್ಚೆ ಮಾಡಲಾಗದ ಇಂತಹ ಅಸಂಖ್ಯಾತ ಜನರಿದ್ದಾರೆ. ನಾವು ಕೋವಿಡ್ ಶಿಷ್ಟಾಚಾರವನ್ನು ಸರಿಯಾದ ರೀತಿಯಲ್ಲಿ ಪಾಲನೆ ಮಾಡುವುದು, ಲಸಿಕೆಯನ್ನು ತಪ್ಪದೇ ಹಾಕಿಸಿಕೊಳ್ಳುವುದು ಇಂತಹ ಪ್ರತಿಯೊಬ್ಬ ವ್ಯಕ್ತಿಗೂ ನಾವು ತೋರಬಹುದಾದ ಶ್ರದ್ಧಾಂಜಲಿಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, “ಮನದ ಮಾತಿನ’ ಅತ್ಯಂತ ಉತ್ತಮವಾದ ಮಾತೆಂದರೆ, ಇದರಲ್ಲಿ ನನಗಿಂತ ಹೆಚ್ಚಾಗಿ ನಿಮ್ಮೆಲ್ಲರ ಕೊಡುಗೆ ಇರುತ್ತದೆ. ನಾನು ಈಗ MyGovನಲ್ಲಿ ಒಂದು ಪೋಸ್ಟ್ ನೋಡಿದೆ, ಇದು ಬಂದಿರುವುದು ಚೆನ್ನೈನ ತಿರು ಆರ್ ಗುರುಪ್ರಸಾದ್ ಅವರಿಂದ. ಅವರು ಬರೆದಿರುವುದು ಏನೆಂದು ತಿಳಿದರೆ ನಿಮಗೆ ಕೂಡಾ ಸಂತೋಷವೆನಿಸುತ್ತದೆ. ಅವರು ಬರೆದಿದ್ದಾರೆ ತಾವು “ಮನದ ಮಾತು” ಕಾರ್ಯಕ್ರಮದ ನಿಯಮಿತ ಕೇಳುಗರು ಎಂದು. ಗುರುಪ್ರಸಾದ್ ಅವರ ಪೋಸ್ಟ್ ನಿಂದ ನಾನು ಈಗ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಿದ್ದೇನೆ. ಅವರು ಹೀಗೆ ಬರೆದಿದ್ದಾರೆ,

ನೀವು ತಮಿಳುನಾಡಿನ ಬಗ್ಗೆ ಮಾತನಾಡಿದಾಗಲೆಲ್ಲಾ, ನನ್ನ ಆಸಕ್ತಿ ಮತ್ತಷ್ಟು ಹೆಚ್ಚಾಗುತ್ತದೆ.

ನೀವು ತಮಿಳು ಭಾಷೆ, ತಮಿಳು ಸಂಸ್ಕೃತಿಯ ಶ್ರೇಷ್ಠತೆ, ತಮಿಳು ಹಬ್ಬಗಳು ಮತ್ತು ತಮಿಳು ನಾಡಿನ ಪ್ರಮುಖ ಸ್ಥಳಗಳ ಬಗ್ಗೆ ಚರ್ಚಿಸಿದ್ದೀರಿ.

ಗುರುಪ್ರಸಾದ್ ಅವರು ಹೀಗೆ ಬರೆಯುತ್ತಾರೆ– “ಮನದ ಮಾತು” ನಲ್ಲಿ, ತಾವು ತಮಿಳು ನಾಡಿನ ಜನರ ಸಾಧನೆಯ ಬಗ್ಗೆ ಕೂಡಾ ಅನೇಕ ಬಾರಿ ಹೇಳಿದ್ದೀರಿ. ತಿರುಕ್ಕುರಲ್ ಅವರ ಬಗ್ಗೆ ನಿಮ್ಮ ಪ್ರೀತಿ ಮತ್ತು ತಿರುಕ್ಕುರುಲ್ ಅವರ ಬಗ್ಗೆ ನಿಮಗಿರುವ ಗೌರವದ ಬಗ್ಗೆ ಏನೆಂದು ಹೇಳಲಿ. ಆದ್ದರಿಂದಲೇ ನಾನು ಮನದ ಮಾತಿನಲ್ಲಿ ನೀವು ತಮಿಳುನಾಡಿನ ಬಗ್ಗೆ ಏನೇ ಹೇಳಿದರೂ, ಅವುಗಳೆಲ್ಲವನ್ನೂ ಸಂಕಲಿಸುವ ಮೂಲಕ ಒಂದು ಇ-ಪುಸ್ತಕ ಸಿದ್ಧಪಡಿಸಿದ್ದೇನೆ. ನೀವು ಈ ಪುಸ್ತಕ ಬಗ್ಗೆ ಏನಾದರೂ ಹೇಳಲು ಬಯಸುತ್ತೀರಾ ಮತ್ತು ಇದನ್ನು NamoAppನಲ್ಲಿ ಪ್ರಕಟಿಸುತ್ತೀರಾ? ಧನ್ಯವಾದ.

‘ನಾನು ಗುರುಪ್ರಸಾದ್ ಅವರ ಈ ಪತ್ರವನ್ನು ನಿಮ್ಮ ಮುಂದೆ ಓದುತ್ತಿದ್ದೆ’

ಗುರುಪ್ರಸಾದ್ ಅವರೇ, ನಿಮ್ಮ ಈ ಪೋಸ್ಟ್ ಓದಿ ಬಹಳ ಸಂತೋಷವಾಯಿತು. ಈಗ ನೀವು ನಿಮ್ಮ ಇ-ಪುಸ್ತಕದಲ್ಲಿ ಮತ್ತೊಂದು ಪುಟ ಸೇರಿಸಿಬಿಡಿ.

..’ನಾನ್ ತಮಿಳ್ ಕಲಾ ಚಾರಾಕ್ತಿನ್ ಪೇರಿಯೇ ಅಭಿಮಾನಿ

ನಾನ್ ಉಲಗತಲಯೇ ಪಲಮಾಯಾಂ ತಮಿಳ್ ಮೋಲಿಯನ್ ಪೇರಿಯೇ ಅಭಿಮಾನಿ’

ಉಚ್ಚಾರಣೆಯಲ್ಲಿ ಲೋಪದೋಷ ಖಂಡಿತಾ ಇರಬಹುದು ಆದರೆ, ನನ್ನ ಪ್ರಯತ್ನ ಮತ್ತು ನನ್ನ ಪ್ರೀತಿ ಎಂದಿಗೂ ಕಡಿಮೆ ಆಗುವುದಿಲ್ಲ. ತಮಿಳು ಭಾಷಿಗರಲ್ಲದವರಿಗೆ ನಾನು ಹೇಳಬಯಸುತ್ತೇನೆ, ನಾನು ಗುರುಪ್ರಸಾದ್ ಅವರಿಗೆ ಹೇಳಿದ್ದು ಏನೆಂದರೆ –

ನಾನು ತಮಿಳು ಸಂಸ್ಕೃತಿಯ ಬಹು ದೊಡ್ಡ ಅಭಿಮಾನಿ.

ಪ್ರಪಂಚದ ಅತ್ಯಂತ ಪುರಾತನ ಭಾಷೆಯೆನಿಸಿದ ತಮಿಳು ಭಾಷೆಯ ಬಹು ದೊಡ್ಡ ಅಭಿಮಾನಿ.

ಸ್ನೇಹಿತರೇ, ಪ್ರಪಂಚದ ಅತ್ಯಂತ ಪುರಾತನ ಭಾಷೆ ನಮ್ಮ ದೇಶದ್ದಾಗಿದೆ ಎಂದು ಪ್ರತಿಯೊಬ್ಬ ಭಾರತೀಯನೂ ಗುಣಗಾನ ಮಾಡಬೇಕು ಮತ್ತು ಅದರ ಬಗ್ಗೆ ಹೆಮ್ಮೆ ಪಡಬೇಕು. ನಾನು ಕೂಡಾ ತಮಿಳು ಭಾಷೆಯ ಬಗ್ಗೆ ಬಹಳ ಹೆಮ್ಮೆ ಪಡುತ್ತೇನೆ. ಗುರುಪ್ರಸಾದ್ ಅವರೇ, ನಿಮ್ಮ ಈ ಪ್ರಯತ್ನ ನನಗೆ ಹೊಸದೊಂದು ದೃಷ್ಟಿಕೋನ ನೀಡಲಿದೆ. ಏಕೆಂದರೆ, ನಾನು ಮನದ ಮಾತು ಆಡುವಾಗ ಸಹಜ-ಸರಳ ರೀತಿಯಲ್ಲಿ ನನ್ನ ಮಾತನ್ನು ಆಡುತ್ತೇನೆ. ಇದು ಕೂಡಾ ಇದರ ಒಂದು ಎಲಿಮೆಂಟ್ ಎಂದು ನನಗೆ ತಿಳಿದಿರಲಿಲ್ಲ. ನೀವು ಯಾವಾಗ ಹಿಂದಿನ ಎಲ್ಲಾ ಮಾತುಗಳನ್ನು ಒಟ್ಟು ಮಾಡಿದಿರೋ, ಆಗ ನಾನು ಅದನ್ನು ಒಂದು ಬಾರಿಯಲ್ಲ ಅನೇಕ ಬಾರಿ ಓದಿದೆ. ಗುರುಪ್ರಸಾದ್ ಅವರೇ, ನಿಮ್ಮ ಈ ಪುಸ್ತಕವನ್ನು ನಾನು NamoAppನಲ್ಲಿ ಖಂಡಿತವಾಗಿಯೂ ಅಪ್ಲೋಡ್ ಮಾಡಿಸುತ್ತೇನೆ. ಭವಿಷ್ಯದ ಪ್ರಯತ್ನಗಳಿಗಾಗಿ ನಿಮಗೆ ಅನೇಕಾನೇಕ ಶುಭಾಕಾಂಕ್ಷೆಗಳು.

ನನ್ನ ಪ್ರೀತಿಯ ದೇಶವಾಸಿಗಳೇ, ನಾವು ಇಂದು ಕೊರೋನಾದಿಂದ ಉಂಟಾದ ತೊಂದರೆಗಳು ಮತ್ತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ಮಾತನಾಡಿದ್ದೇವೆ, ದೇಶ ಮತ್ತು ದೇಶವಾಸಿಗಳ ಸಾಧನೆಗಳ ಬಗ್ಗೆ ಕೂಡಾ ಚರ್ಚಿಸಿದ್ದೇವೆ. ಈಗ ಮತ್ತೊಂದು ದೊಡ್ಡ ಅವಕಾಶವೂ ನಮ್ಮ ಮುಂದಿದೆ. ಆಗಸ್ಟ್ 15 ಕೂಡಾ ಬರಲಿದೆ. ಸ್ವಾತಂತ್ರ್ಯದ 75 ನೇ ವರ್ಷದ ಅಮೃತ ಮಹೋತ್ಸವ ನಮಗೆ ಬಹು ದೊಡ್ಡ ಪ್ರೇರಣೆಯಾಗಿದೆ. ದೇಶಕ್ಕಾಗಿ ಬದುಕುವುದನ್ನು ನಾವು ಕಲಿಯೋಣ. ಸ್ವಾತಂತ್ರ್ಯದ ಸಂಗ್ರಾಮ - ದೇಶಕ್ಕಾಗಿ ಮಡಿದವರ ಕಥೆಯಾಗಿದೆ. ಸ್ವಾತಂತ್ರ್ಯ ನಂತರದ ಈ ಸಮಯವನ್ನು ನಾವು ದೇಶಕ್ಕಾಗಿ ಬದುಕುವವರ ಕಥೆಯನ್ನಾಗಿಸಬೇಕು. ಭಾರತ ಮೊದಲು - India First ಎನ್ನುವುದು ನಮ್ಮ ಮಂತ್ರವಾಗಬೇಕು. ಭಾರತ ಮೊದಲು - India First ಎಂಬುದು ನಮ್ಮ ಪ್ರತಿಯೊಂದು ನಿರ್ಧಾರ, ಪ್ರತಿಯೊಂದು ನಿರ್ಣಯದ ಆಧಾರವಾಗಿರಬೇಕು.

ಸ್ನೇಹಿತರೇ, ಅಮೃತ ಮಹೋತ್ಸವದಲ್ಲಿ ದೇಶವು ಅನೇಕ ಸಾಮೂಹಿಕ ಗುರಿಗಳನ್ನು ಕೂಡಾ ಹೊಂದಿದೆ. ಅಂದರೆ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸಿಕೊಳ್ಳುತ್ತಾ, ಅವರಿಗೆ ಸಂಬಂಧಿಸಿದ ಚರಿತ್ರೆಯನ್ನು ಪುನರುಜ್ಜೀವಗೊಳಿಸಬೇಕು. ನಿಮಗೆ ನೆನಪಿರಬಹುದು, ಮನದ ಮಾತಿನಲ್ಲಿ ನಾನು ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಸಂಶೋಧನೆ ಮಾಡಲು, ಚರಿತ್ರೆ ಬರೆಯಲು ಯುವಜನತೆಯಲ್ಲಿ ಮನವಿ ಮಾಡಿದ್ದೆ. ಯುವ ಪ್ರತಿಭೆಗಳು ಮುಂದೆ ಬರಬೇಕು, ಯುವ-ಚಿಂತನೆ, ಯುವ ವಿಚಾರಗಳು ಮುಂದೆ ಬರಬೇಕು, ಯುವ-ಲೇಖನಿ ಹೊಸ ಶಕ್ತಿಯೊಂದಿಗೆ ಬರವಣಿಗೆ ಮಾಡಬೇಕೆನ್ನುವುದು ಉದ್ದೇಶವಾಗಿತ್ತು. ಬಹಳ ಕಡಿಮೆ ಸಮಯದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಯುವ ಜನತೆ ಈ ಕೆಲಸ ಮಾಡಲು ಮುಂದೆ ಬಂದಿದ್ದಾರೆ. ಸ್ನೇಹಿತರೇ, ಆಸಕ್ತಿದಾಯಕ ವಿಷಯವೆಂದರೆ, 19ನೇ -20 ನೇ ಶತಮಾನದ ಸಂಗ್ರಾಮ ಕುರಿತ ಮಾತನ್ನು ಸಾಮಾನ್ಯವಾಗಿ ಆಡಲಾಗುತ್ತಿರುತ್ತದೆ ಆದರೆ, 21 ನೇ ಶತಮಾನದಲ್ಲಿ ಜನಿಸಿದ ಯುವಜನತೆ, 21 ನೇ ಶತಮಾನದಲ್ಲಿ ಜನಿಸಿದಂತಹ ನನ್ನ ಯುವ ಸ್ನೇಹಿತರು 19ನೇ ಮತ್ತು 20ನೇ ಶತಮಾನದ ಸ್ವಾತಂತ್ರ್ಯ ಸಂಗ್ರಾಮವನ್ನು ಜನರ ಮುಂದಿರಿಸುವ ಕಾರ್ಯ ನಿರ್ವಹಿಸಿದ್ದಾರೆ. ಇವರೆಲ್ಲರೂ MyGovನಲ್ಲಿ ಇದರ ಪೂರಾ ವಿವರವನ್ನು ಕಳುಹಿಸಿದ್ದಾರೆ. ಇವರು ಹಿಂದೀ, ಇಂಗ್ಲೀಷ್, ತಮಿಳು, ಕನ್ನಡ, ಬಂಗಾಳಿ, ತೆಲುಗು, ಮರಾಠಿ, ಮಲಯಾಳಂ, ಗುಜರಾತಿ, ಹೀಗೆ ದೇಶದ ವಿವಿಧ ಭಾಷೆಗಳಲ್ಲಿ ಸ್ವಾತಂತ್ರ್ಯ ಸಂಗ್ರಾಮ ಕುರಿತು ಬರೆಯುತ್ತಾರೆ. ಒಬ್ಬರು ಸ್ವಾತಂತ್ರ್ಯ ಸಂಗ್ರಾಮದ ನಂಟು ಹೊಂದಿರುವ, ತಮ್ಮ ಸುತ್ತಮುತ್ತಲಿನ ಸ್ಥಳಗಳ ಬಗ್ಗೆ ಮಾಹಿತಿ ಕಲೆ ಹಾಕಿದರೆ ಮತ್ತೊಬ್ಬರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಇದೊಂದು ಉತ್ತಮ ಆರಂಭವಾಗಿದೆ. ಅಮೃತ ಮಹೋತ್ಸವದೊಂದಿಗೆ ಯಾವ ರೀತಿಯಲ್ಲಿ ಸೇರಲು ಸಾಧ್ಯವಾಗುತ್ತದೆಯೋ ಖಂಡಿತವಾಗಿಯೂ ಸೇರಿಕೊಳ್ಳಿ ಎನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿಯಾಗಿದೆ. ನಾವು ಸ್ವಾತಂತ್ರ್ಯದ 75 ನೇ ವರ್ಷದ ಆಚರಣೆಯ ಸಾಕ್ಷಿಯಾಗುತ್ತಿರುವುದು ನಮ್ಮ ಸೌಭಾಗ್ಯವಾಗಿದೆ. ಆದ್ದರಿಂದ, ಮುಂದಿನ ಸಲ ಮನದ ಮಾತು ಕಾರ್ಯಕ್ರಮದಲ್ಲಿ ನಾವು ಭೇಟಿಯಾದಾಗ, ಅಮೃತ ಮಹೋತ್ಸವದ ಸಿದ್ಧತೆಯ ಬಗ್ಗೆ ಕೂಡಾ ಮಾತನಾಡೋಣ. ನೀವೆಲ್ಲರೂ ಆರೋಗ್ಯವಾಗಿರಿ, ಕೊರೋನಾ ಸಂಬಂಧಿತ ನಿಯಮಗಳ ಪಾಲನೆ ಮಾಡುತ್ತಾ ಮುಂದೆ ಸಾಗಿ, ನಿಮ್ಮ ಹೊಸ ಹೊಸ ಪ್ರಯತ್ನಗಳಿಂದ ದೇಶಕ್ಕೆ ಹೊಸ ವೇಗ ತುಂಬುತ್ತಿರಿ. ಈ ಶುಭಾಕಾಂಕ್ಷೆಗಳೊಂದಿಗೆ, ಅನೇಕಾನೇಕ ಧನ್ಯವಾದ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
List of Outcomes: Visit of Prime Minister to Kuwait (December 21-22, 2024)
December 22, 2024
Sr. No.MoU/AgreementObjective

1

MoU between India and Kuwait on Cooperation in the field of Defence.

This MoU will institutionalize bilateral cooperation in the area of defence. Key areas of cooperation include training, exchange of personnel and experts, joint exercises, cooperation in defence industry, supply of defence equipment, and collaboration in research and development, among others.

2.

Cultural Exchange Programme (CEP) between India and Kuwait for the years 2025-2029.

The CEP will facilitate greater cultural exchanges in art, music, dance, literature and theatre, cooperation in preservation of cultural heritage, research and development in the area of culture and organizing of festivals.

3.

Executive Programme (EP) for Cooperation in the Field of Sports
(2025-2028)

The Executive Programme will strengthen bilateral cooperation in the field of sports between India and Kuwait by promoting exchange of visits of sports leaders for experience sharing, participation in programs and projects in the field of sports, exchange of expertise in sports medicine, sports management, sports media, sports science, among others.

4.

Kuwait’s membership of International Solar Alliance (ISA).

 

The International Solar Alliance collectively covers the deployment of solar energy and addresses key common challenges to the scaling up of use of solar energy to help member countries develop low-carbon growth trajectories.