ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಗುಜರಾತ್ ನ ಹೂಡಿಕೆದಾರರ ಶೃಂಗಸಭೆಯನ್ನುದ್ದೇಶಿಸಿ ಭಾಷಣ ಮಾಡಿದರು. ಸ್ವಯಂಪ್ರೇರಿತ ವಾಹನ ಆಧುನೀಕರಣ ಕಾರ್ಯಕ್ರಮ ಅಥವಾ ವಾಹನ ಗುಜರಿ ನೀತಿಯಡಿಯಲ್ಲಿ ವಾಹನ ಗುಜರಿ ಮೂಲಸೌಕರ್ಯ ಸ್ಥಾಪನೆಗೆ ಬಂಡವಾಳ ಆಕರ್ಷಿಸುವ ಉದ್ದೇಶದಿಂದ ಈ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಅಲ್ಲದೆ ಅಲ್ಲಂಗ್ ನಲ್ಲಿ ಸಮಗ್ರ ಗುಜರಿ ತಾಣ ಅಭಿವೃದ್ಧಿಗೆ ಹಡಗು ಒಡೆಯುವ ಉದ್ಯಮದ ಜತೆ ಸಮನ್ವಯ ಸಾಧಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಹಾಗೂ ಗುಜರಾತ್ ಮುಖ್ಯಮಂತ್ರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಾಹನ ಗುಜರಿ(ಸ್ಕ್ರ್ಯಾಪಿಂಗ್) ನೀತಿಗೆ ಇಂದು ಚಾಲನೆ ನೀಡಿರುವುದು ಭಾರತದ ಅಭಿವೃದ್ಧಿ ಪಯಣದಲ್ಲಿ ಅತ್ಯಂತ ಮಹತ್ವದ ಮೈಲುಗಲ್ಲಾಗಿದೆ. ವಾಹನ ಗುಜರಿ ಮೂಲಸೌಕರ್ಯ ಅಭಿವೃದ್ಧಿಗಾಗಿ ಗುಜರಾತ್ ನ ಹೂಡಿಕೆದಾರರ ಸಮಾವೇಶ ಹೊಸ ಸಾಧ್ಯತೆಗಳನ್ನು ತೆರೆದಿದೆ. ಅನರ್ಹ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಪರಿಸರಸ್ನೇಹಿ ವಿಧಾನದ ಮೂಲಕ ಹಂತ ಹಂತವಾಗಿ ತೊಡೆದು ಹಾಕುವುದು ವಾಹನ ಗುಜರಿ ನೀತಿಯಾಗಿದೆ. ನಮ್ಮ ಗುರಿ ಕಾರ್ಯಸಾಧುವಾದ ಚಲಾವಣೆಯ ಆರ್ಥಿಕತೆಯನ್ನು ಸೃಷ್ಟಿಸುವುದು ಮತ್ತು ಎಲ್ಲ ಪಾಲುದಾರರಿಗೆ ಮೌಲ್ಯವನ್ನು ತಂದು ಅವರನ್ನು ಪರಿಸರಕ್ಕೆ ಜವಾಬ್ದಾರರನ್ನಾಗಿ ಮಾಡುವುದು” ಎಂದು ಪ್ರಧಾನಮಂತ್ರಿ ಅವರು ಕಾರ್ಯಕ್ರಮಕ್ಕೂ ಮುನ್ನ ಮಾಡಿರುವ ಸರಣಿ ಟ್ವೀಟ್ ಗಳಲ್ಲಿ ಹೇಳಿದ್ದಾರೆ.
Vehicle scrapping will help phase out unfit & polluting vehicles in an environment friendly manner. Our aim is to create a viable #circulareconomy & bring value for all stakeholders while being environmentally responsible.
— Narendra Modi (@narendramodi) August 13, 2021
The launch of Vehicle Scrappage Policy today is a significant milestone in India’s development journey. The Investor Summit in Gujarat for setting up vehicle scrapping infrastructure opens a new range of possibilities. I would request our youth & start-ups to join this programme.
— Narendra Modi (@narendramodi) August 13, 2021
ರಾಷ್ಟ್ರೀಯ ಆಟೊಮೊಬೈಲ್ ಗುಜರಿ ನೀತಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ನೀತಿ ಆಟೊ ವಲಯ (ವಾಹನಗಳ ಬಿಡಿ ಭಾಗಗಳ)ಕ್ಕೆ ಮತ್ತು ನವಭಾರತದ ಸಾರಿಗೆಗೆ ಹೊಸ ಹೆಗ್ಗುರುತನ್ನು ತರಲಿದೆ. ಈ ನೀತಿ ದೇಶದ ವಾಹನಗಳ ಆಧುನೀಕರಣದಲ್ಲಿ ಹಾಗೂ ಅನರ್ಹ ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ರಸ್ತೆಯಿಂದ ತೊಡೆದು ಹಾಕುವಲ್ಲಿ ಅತ್ಯಂತ ಪಾತ್ರವನ್ನು ವಹಿಸಲಿದೆ ಎಂದರು. ಸಾರಿಗೆ ವ್ಯವಸ್ಥೆಯಲ್ಲಿ ಆಧುನೀಕರಣದಿಂದಾಗಿ ಪ್ರಯಾಣ ಮತ್ತು ಸಾರಿಗೆಯ ಹೊರೆ ತಗ್ಗುವುದು ಮಾತ್ರವಲ್ಲದೆ, ಆರ್ಥಿಕ ಅಭಿವೃದ್ಧಿಗೂ ಕೂಡ ಸಹಾಯಕವಾಗುತ್ತದೆ ಎಂಬುದು ಸಾಬೀತಾಗಿದೆ. ಶುದ್ಧ, ದಟ್ಟಣೆರಹಿತ ಮತ್ತು ಸುಗಮ ಸಂಚಾರ ಗುರಿ 21ನೇ ಶತಮಾನದ ಭಾರತದಲ್ಲಿ ಅತ್ಯಂತ ಸಕಾಲಿಕವಾಗಿದೆ.
ಹೊಸ ಗುಜರಿ ನೀತಿ ಆರ್ಥಿಕತೆ ಚಲಾವಣೆ ಹಾಗೂ ತ್ಯಾಜ್ಯದಿಂದ ಸಂಪತ್ತು ಅಭಿಯಾನದಲ್ಲಿ ಅತ್ಯಂತ ಪ್ರಮುಖ ಕೊಂಡಿಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಅಲ್ಲದೆ ಈ ನೀತಿ ದೇಶದ ನಗರಗಳಲ್ಲಿನ ಮಾಲಿನ್ಯ ಪ್ರಮಾಣ ತಗ್ಗಿಸುವುದು ಹಾಗೂ ನಮ್ಮ ಪರಿಸರ ರಕ್ಷಣೆ ಹಾಗು ವೇಗದ ಅಭಿವೃದ್ಧಿಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಮರು ಬಳಕೆ, ಮರು ಸಂಸ್ಕರಣೆ ಮತ್ತು ಮರು ಚೇತರಿಕೆ ತತ್ವಗಳನ್ನು ಆಧರಿಸಿ ಈ ನೀತಿ ರೂಪಿಸಲಾಗಿದ್ದು, ಇದು ವಾಹನ ವಲಯ ಹಾಗೂ ಲೋಹದ(ಮೆಟಲ್) ವಲಯದಲ್ಲಿ ದೇಶ ಸ್ವಾವಲಂಬನೆ ಸಾಧಿಸಲು ಉತ್ತೇಜನ ನೀಡುತ್ತದೆ. ಈ ನೀತಿ ಸುಮಾರು ಹತ್ತು ಸಾವಿರ ಕೋಟಿಗೂ ಅಧಿಕ ಹೊಸ ಬಂಡವಾಳ ಆಕರ್ಷಿಸುವ ಜೊತೆಗೆ ಸಾವಿರಾರು ಉದ್ಯೋಗಗಳನ್ನು ಸೃಷ್ಟಿಸಲಿವೆ.
ಭಾರತ ಇದೀಗ 75ನೇ ಸ್ವಾತಂತ್ರ್ಯೋತ್ಸವಕ್ಕೆ ಪ್ರವೇಶಿಸುತ್ತಿರುವ ಹಿನ್ನೆಲೆಯಲ್ಲಿ ಮುಂದಿನ 25 ವರ್ಷಗಳು ಅತ್ಯಂತ ಪ್ರಮುಖವಾದವು ಎಂದು ಪ್ರಧಾನಮಂತ್ರಿ ಹೇಳಿದರು. ಮುಂದಿನ 25 ವರ್ಷಗಳಲ್ಲಿ ಪ್ರತಿ ದಿನದ ಜೀವನದಲ್ಲಿ ಹಾಗೂ ದೈನಂದಿನ ವ್ಯಾಪಾರದ ವಿಧಾನಗಳಲ್ಲಿ ಹಲವು ಬದಲಾವಣೆಗಳನ್ನು ಕಾಣಬಹುದಾಗಿದೆ ಎಂದರು. ಈ ಬದಲಾವಣೆಯ ನಡುವೆಯೇ ನಮ್ಮ ಪರಿಸರ, ನಮ್ಮ ಭೂಮಿ, ನಮ್ಮ ಸಂಪನ್ಮೂಲ ಮತ್ತು ನಮ್ಮ ಕಚ್ಚಾ ಸಾಮಗ್ರಿಗಳನ್ನು ಸಂರಕ್ಷಿಸಬೇಕಾದ ಸಮಾನ ಅಗತ್ಯತೆ ಇದೆ ಎಂದು ಅವರು ಹೇಳಿದ್ದಾರೆ. ಭವಿಷ್ಯದಲ್ಲಿ ನಾವು ಆವಿಷ್ಕಾರ ಮತ್ತು ತಂತ್ರಜ್ಞಾನದ ಕುರಿತಂತೆ ಕಾರ್ಯ ನಿರ್ವಹಿಸಬಹುದಾಗಿದೆ. ಆದರೆ ನಾವು ಭೂತಾಯಿಯಿಂದ ಏನು ಪಡೆಯುತ್ತೇವೆ ಎನ್ನುವುದು ನಮ್ಮ ಕೈಯಲ್ಲಿಲ್ಲ ಎಂದರು.
ಒಂದೆಡೆ ಭಾರತ ಸಮುದ್ರದಾಳದ ಮಿಷನ್ ಮೂಲಕ ಹೊಸ ಸಾಧ್ಯತೆಗಳನ್ನು ಅನ್ವೇಷಿಸುತ್ತಿದೆ. ಮತ್ತೊಂದೆಡೆ ಅದು ಆರ್ಥಿಕತೆಯ ಚಲಾವಣೆಯನ್ನೂ ಸಹ ಉತ್ತೇಜಿಸುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಸುಸ್ಥಿರ ಮತ್ತು ಪರಿಸರಸ್ನೇಹಿ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಿವೆ ಎಂದು ಅವರು ಹೇಳಿದರು.
ಇಂಧನ ವಲಯದಲ್ಲಿ ಮಾಡಲಾಗಿರುವ ಅಪ್ರತಿಮ ಕಾರ್ಯದ ಕುರಿತು ಪ್ರಧಾನಮಂತ್ರಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದರು. ಭಾರತ, ಸೌರ ಮತ್ತು ಪವನ ವಿದ್ಯುತ್ ವಲಯದಲ್ಲಿ ಅಗ್ರ ಶ್ರೇಯಾಂಕದ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ತ್ಯಾಜ್ಯದಿಂದ ಸಂಪತ್ತು ಅಭಿಯಾನವನ್ನು ಸ್ವಚ್ಛತಾ ಮತ್ತು ಆತ್ಮನಿರ್ಭರ ಭಾರತದೊಂದಿಗೆ ಸಂಯೋಜಿಸಬೇಕಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಬಲವಾಗಿ ಪ್ರತಿಪಾದಿಸಿದರು.
ಈ ನೀತಿಯಿಂದಾಗಿ ಸಾಮಾನ್ಯ ಜನರಿಗೆ ಎಲ್ಲ ವಿಧದಲ್ಲೂ ಹೆಚ್ಚಿನ ಲಾಭವಾಗಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇದರ ಮೊದಲ ಲಾಭ ಎಂದರೆ ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರಿಗೆ ಅದಕ್ಕೆ ಪ್ರಮಾಣಪತ್ರಗಳನ್ನು ನೀಡಲಾಗುವುದು. ಅಂತಹ ಪ್ರಮಾಣಪತ್ರಗಳನ್ನು ಹೊಂದಿರುವ ಯಾವುದೇ ವ್ಯಕ್ತಿ, ಹೊಸ ವಾಹನ ಖರೀದಿ ನಂತರ ನೋಂದಣಿಗೆ ಯಾವುದೇ ಹಣ ಪಾವತಿಸುವಂತಿಲ್ಲ. ಅಲ್ಲದೆ ಅಂತಹವರಿಗೆ ರಸ್ತೆ ತೆರಿಗೆಯಲ್ಲೂ ಸಹ ಸ್ವಲ್ಪಮಟ್ಟಿನ ವಿನಾಯಿತಿ ಲಭ್ಯವಾಗಲಿದೆ. ಎರಡನೆಯ ಲಾಭವೆಂದರೆ ಇದರಿಂದ ಹಳೆಯ ವಾಹನಗಳ ನಿರ್ವಹನಾ ವೆಚ್ಚ, ದುರಸ್ಥಿ ವೆಚ್ಚ ಮತ್ತು ಇಂಧನ ದಕ್ಷತೆಯನ್ನೂ ಸಹ ಉಳಿಸಬಹುದಾಗಿದೆ. ಮೂರನೇ ಲಾಭ ನೇರವಾಗಿ ಜೀವನಕ್ಕೆ ಸಂಬಂಧಿಸಿದ್ದು. ಹಳೆಯ ವಾಹನಗಳು ಮತ್ತು ಹಳೆಯ ತಂತ್ರಜ್ಞಾನದಿಂದಾಗಿ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಹೆಚ್ಚಿನ ಅಪಾಯವಿದೆ. ಇದರಿಂದ ಜನರಿಗೆ ಸ್ವಲ್ಪಮಟ್ಟಿನ ನೆಮ್ಮದಿ ಮೂಡಲಿದೆ. ನಾಲ್ಕನೆಯದಾಗಿ ನಮ್ಮ ಆರೋಗ್ಯದ ಮೇಲೆ ಮಾಲಿನ್ಯದಿಂದ ಆಗುವ ಹಾನಿಕಾರಕ ಪರಿಣಾಮಗಳು ತಗ್ಗುತ್ತವೆ.
ಹೊಸ ನೀತಿಯಡಿ ವಾಹನಗಳನ್ನು ಅವುಗಳು ಖರೀದಿಸಿರುವ ವರ್ಷವನ್ನು ಆಧರಿಸಿ ಸುಮ್ಮನೆ ಗುಜರಿಗೆ ಹಾಕುವುದಿಲ್ಲ ಎಂದು ಪ್ರಧಾನಮಂತ್ರಿ ಒತ್ತಿ ಹೇಳಿದರು. ವಾಹನಗಳನ್ನು ವೈಜ್ಞಾನಿಕ ರೀತಿಯಲ್ಲಿ ಅಧಿಕೃತ, ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳ ಮೂಲಕ ತಪಾಸಣೆ ನಡೆಸಲಾಗುವುದು. ಅನರ್ಹ ವಾಹನಗಳನ್ನು ಮಾತ್ರ ವೈಜ್ಞಾನಿಕ ರೀತಿಯಲ್ಲಿ ಗುಜರಿಗೆ ಹಾಕಲಾಗುವುದು. ದೇಶಾದ್ಯಂತ ನೋಂದಾಯಿತ ವಾಹನಗಳ ಗುಜರಿ ಸೌಕರ್ಯ ತಂತ್ರಜ್ಞಾನ ಆಧಾರಿತವಾಗಿದೆ ಮತ್ತು ಪಾರದರ್ಶಕತೆ ಖಾತ್ರಿಪಡಿಸಲಾಗುವುದು.
ಹೊಸ ನೀತಿಯಡಿ ಗುಜರಿಗೆ ಸಂಬಂಧಿಸಿದ ವಲಯಕ್ಕೆ ಹೊಸ ಶಕ್ತಿ ಮತ್ತು ಭದ್ರತೆ ದೊರಕಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಉದ್ಯೋಗಿಗಳು ಹಾಗು ಸಣ್ಣ ಉದ್ದಿಮೆದಾರರಿಗೆ ಸುರಕ್ಷಿತ ವಾತಾವರಣ ಲಭಿಸಲಿದೆ. ಅವರೂ ಸಹ ಸಂಘಟಿತ ವಲಯದ ಉದ್ಯೋಗಿಗಳಂತೆ ಎಲ್ಲ ಅನುಕೂಲಗಳನ್ನು ಪಡೆಯಬಹುದಾಗಿದೆ. ಅಧಿಕೃತ ಗುಜರಿ ಕೇಂದ್ರಗಳಲ್ಲಿ ಸಂಗ್ರಹಣಾ ಏಜೆಂಟ್ ಗಳಾಗಿ ಅವರು ಕಾರ್ಯನಿರ್ವಹಿಸಬಹುದು. ಕಳೆದ ವರ್ಷದಲ್ಲಿ ನಾವು 23,000 ಕೋಟಿ ರೂ. ಮೌಲ್ಯದ ಸ್ಕ್ರ್ಯಾಪ್ ಸ್ಟೀಲ್ ಅನ್ನು ಆಮದು ಮಾಡಿಕೊಳ್ಳಬೇಕಾಗಿತ್ತು ಮತ್ತು ನಮ್ಮ ಗುಜರಿ ಉತ್ಪಾದಕವಾಗಿಲಕ್ಲ, ನಾವು ಶಕ್ತಿ ಹಾಗೂ ಅಪರೂಪದ ಭೂಮಿಯ ಲೋಹಗಳನ್ನು ಮತ್ತೆ ಪಡೆಯುವುದು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ವಿಷಾಧಿಸಿದರು.
ಭಾರತೀಯ ಉದ್ಯಮವನ್ನು ಸುಸ್ಥಿರ ಮತ್ತು ಉತ್ಪಾದಕವನ್ನಾಗಿ ಮಾಡಲು ಹಾಗೂ ಆತ್ಮನಿರ್ಭರ ಭಾರತ ಪ್ರಕ್ರಿಯೆಗೆ ವೇಗ ನೀಡಲು ನಿರಂತರ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆಟೋ ಮ್ಯಾನ್ಯುಫ್ಯಾಕ್ಚರಿಂಗ್ ಮೌಲ್ಯ ಸರಣಿಗೆ ಸಂಬಂಧಿಸಿದಂತೆ ಆಮದು ಅವಲಂಬನೆ ತಗ್ಗಿಸುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಬಲವಾಗಿ ಪ್ರತಿಪಾದಿಸಿದರು.
ಎಥೆನಾಲ್, ಹೈಡ್ರೋಜನ್ ಇಂಧನ ಅಥವಾ ವಿದ್ಯುತ್ ವಾಹನಗಳಿಗೆ ಸರ್ಕಾರ ಆದ್ಯತೆ ನೀಡುತ್ತಿದೆ. ಉದ್ಯಮದ ಸಕ್ರಿಯ ಪಾಲ್ಗೊಳ್ಳುವಿಕೆ ಇದಕ್ಕೆ ಅತ್ಯಂತ ಪ್ರಮುಖವಾಗಿದೆ. ಸಂಶೋಧನೆ ಮತ್ತು ಅಭಿವೃದ್ಧಿಯಿಂದ ಮೂಲಸೌಕರ್ಯದವರೆಗೆ ಉದ್ಯಮ ತನ್ನ ಪಾಲುದಾರಿಕೆಯನ್ನು ಹೆಚ್ಚಿಸಿಕೊಳ್ಳಬೇಕಿದೆ. ಮುಂದಿನ 25 ವರ್ಷಗಳಿಗೆ ಆತ್ಮನಿರ್ಭರ ಭಾರತದ ನೀಲನಕ್ಷೆಯನ್ನು ಹೊಂದುವಂತೆ ಅವರು ಕರೆ ನೀಡಿದರು. ಅದಕ್ಕಾಗಿ ನೀವು ಯಾವ ರೀತಿಯ ಸಹಾಯವನ್ನು ಬಯಸುತ್ತೀರೋ ಅದೆಲ್ಲವನ್ನು ನೀಡಲು ಸರ್ಕಾರ ಸಿದ್ಧವಿದೆ ಎಂದು ಅವರು ಭರವಸೆ ನೀಡಿದರು.
ದೇಶ ಇಂದು ಶುದ್ಧ, ದಟ್ಟಣೆರಹಿತ ಮತ್ತು ಸುಗಮ ಸಾರಿಗೆ ನಿಟ್ಟಿನಲ್ಲಿ ಸಾಗುತ್ತಿದ್ದು, ಹಳೆಯ ವಿಧಾನ ಹಾಗೂ ಪದ್ದತಿಗಳನ್ನು ಬದಲಾವಣೆ ಮಾಡಿಕೊಳ್ಳುವ ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಭಾರತ ತನ್ನ ಪ್ರಜೆಗಳಿಗೆ ಜಾಗತಿಕ ನಿರ್ದಿಷ್ಟ ಗುಣಮಟ್ಟ ಮತ್ತು ಸುರಕ್ಷತೆಯನ್ನು ಒದಗಿಸಲು ಬದ್ಧವಾಗಿದೆ. ಭಾರತ್ ಸ್ಟೇಜ್-4ರಿಂದ ಭಾರತ್ ಸ್ಟೇಟ್-6ಕ್ಕೆ ಪರಿವರ್ತನೆಗೊಳ್ಳುತ್ತಿರುವುದರ ಹಿಂದಿನ ಆಲೋಚನೆಯು ಇದೆ ಆಗಿದೆ ಎಂದು ಪ್ರಧಾನಮಂತ್ರಿ ಅವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು.
देश National Automobile Scrappage Policy लॉन्च कर रहा है। ये पॉलिसी नए भारत की मोबिलिटी को,ऑटो सेक्टर को नई पहचान देने वाली है।
— PMO India (@PMOIndia) August 13, 2021
देश में vehicular population के modernization को, unfit vehicles को एक scientific manner में सड़कों से हटाने में ये policy बहुत बड़ी भूमिका निभाएगी: PM
Mobility में आई आधुनिकता, travel और transportation का बोझ तो कम करती ही है, आर्थिक विकास के लिए भी मददगार साबित होती है।
— PMO India (@PMOIndia) August 13, 2021
21वीं सदी का भारत Clean, Congestion Free और Convenient Mobility का लक्ष्य लेकर चले, ये आज समय की मांग है: PM @narendramodi
नई स्क्रैपिंग पॉलिसी, Waste to Wealth- कचरे से कंचन के अभियान की, circular economy की एक अहम कड़ी है।
— PMO India (@PMOIndia) August 13, 2021
ये पॉलिसी, देश के शहरों से प्रदूषण कम करने और पर्यावरण की सुरक्षा के साथ तेज़ विकास की हमारे कमिटमेंट को भी दर्शाती है: PM @narendramodi
आज एक तरफ भारत डीप ओशीन मिशन के माध्यम से नई संभावनाओं को तलाश रहा है, तो वहीं सर्कुलर इकॉनॉमी को भी प्रोत्साहित कर रहा है।
— PMO India (@PMOIndia) August 13, 2021
कोशिश ये है कि विकास को हम sustainable बनाएं, environment friendly बनाएं: PM @narendramodi
तीसरा लाभ सीधा जीवन से जुड़ा है।
— PMO India (@PMOIndia) August 13, 2021
पुरानी गाड़ियों, पुरानी टेक्नॉलॉजी के कारण रोड एक्सीडेंट का खतरा बहुत अधिक रहता है, जिससे मुक्ति मिलेगी।
चौथा, इससे हमारे स्वास्थ्य प्रदूषण के कारण जो असर पड़ता है, उसमें कमी आएगी: PM @narendramodi
इसके साथ ही उसे रोड टैक्स में भी कुछ छूट दी जाएगी।
— PMO India (@PMOIndia) August 13, 2021
दूसरा लाभ ये होगा कि पुरानी गाड़ी की मैंटेनेंस कॉस्ट, रिपेयर कॉस्ट, fuel efficiency, इसमें भी बचत होगी: PM @narendramodi
इस पॉलिसी से सामान्य परिवारों को हर प्रकार से बहुत लाभ होगा।
— PMO India (@PMOIndia) August 13, 2021
सबसे पहला लाभ ये होगा कि पुरानी गाड़ी को स्क्रैप करने पर एक सर्टिफिकेट मिलेगा।
ये सर्टिफिकेट जिसके पास होगा उसे नई गाड़ी की खरीद पर रजिस्ट्रेशन के लिए कोई पैसा नहीं देना होगा: PM @narendramodi
आत्मनिर्भर भारत को गति देने के लिए, भारत में इंडस्ट्री को Sustainable और Productive बनाने के लिए निरंतर कदम उठाए जा रहे हैं।
— PMO India (@PMOIndia) August 13, 2021
हमारी ये पूरी कोशिश है कि ऑटो मैन्यूफैक्चरिंग से जुड़ी वैल्यू चेन के लिए जितना संभव हो, उतना कम हमें इंपोर्ट पर निर्भर रहना पड़े: PM @narendramodi
इथेनॉल हो, हाइड्रोजन फ्यूल हो या फिर इलेक्ट्रिक मोबिलिटी, सरकार की इन प्राथमिकताओं के साथ इंडस्ट्री की सक्रिय भागीदारी बहुत ज़रूरी है।
— PMO India (@PMOIndia) August 13, 2021
R&D से लेकर इंफ्रास्ट्रक्चर तक, इंडस्ट्री को अपनी हिस्सेदारी बढ़ानी होगी।
इसके लिए जो भी मदद आपको चाहिए, वो सरकार देने के लिए तैयार है: PM