ನಮಸ್ಕಾರ, ನನ್ನ ಪ್ರೀತಿಯ ದೇಶವಾಸಿಗಳೇ!
ಇಂದು ನಾನು ಸಣ್ಣ ವೇದ ಪಠ್ಯದೊಂದಿಗೆ ಆರಂಭಿಸಲು ಬಯಸುತ್ತೇನೆ.
मे्मे मे्षिणे षिणे्ते,
जयो मे सव्य आहितः।
ನಾವು ಇದನ್ನು ಭಾರತದ ಸಂದರ್ಭದಲ್ಲಿ ಹೋಲಿಸಿ ನೋಡಿದರೆ, ಒಂದು ಕಡೆ ನಮ್ಮ ದೇಶವು ಕರ್ತವ್ಯವನ್ನು ನಿರ್ವಹಿಸಿತು ಮತ್ತು ಮತ್ತೊಂದೆಡೆ ಅದು ಉತ್ತಮ ಯಶಸ್ಸನ್ನು ಪಡೆಯಿತು ಎಂದರ್ಥ.
ನಿನ್ನೆ, ಅಕ್ಟೋಬರ್ 21 ರಂದು, ಭಾರತವು ಒಂದು ಶತಕೋಟಿ, ಅಂದರೆ, 100 ಕೋಟಿ ಲಸಿಕೆ ಪ್ರಮಾಣಗಳ ಕಷ್ಟಕರವಾದ ಆದರೆ ಅಸಾಧಾರಣ ಗುರಿಯನ್ನು ಸಾಧಿಸಿತು. ಈ ಸಾಧನೆಯ ಹಿಂದೆ 130 ಕೋಟಿ ದೇಶವಾಸಿಗಳ ಕರ್ತವ್ಯವಿದೆ, ಆದ್ದರಿಂದ ಈ ಯಶಸ್ಸು ಭಾರತದ ಯಶಸ್ಸು, ಪ್ರತಿಯೊಬ್ಬ ದೇಶವಾಸಿಗಳ ಯಶಸ್ಸು. ಇದಕ್ಕಾಗಿ ಎಲ್ಲ ದೇಶವಾಸಿಗಳನ್ನು ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.
ಸ್ನೇಹಿತರೇ,
100 ಕೋಟಿ ಲಸಿಕೆ ಕೇವಲ ಸಂಖ್ಯೆಯಲ್ಲ. ಇದು ದೇಶದ ಸಾಮರ್ಥ್ಯದ ಪ್ರತಿಬಿಂಬವಾಗಿದೆ; ಇದು ಇತಿಹಾಸದ ಹೊಸ ಅಧ್ಯಾಯ. ಕಷ್ಟಕರವಾದ ಗುರಿಗಳನ್ನು ಹೊಂದಿಸುವುದು ಮತ್ತು ಅವುಗಳನ್ನು ಸಾಧಿಸುವುದು ಹೇಗೆ ಎಂದು ತಿಳಿದಿರುವ ಆ ಹೊಸ ಭಾರತದ ಚಿತ್ರಣವಿದು. ಇದು ಹೊಸ ಭಾರತದ ಚಿತ್ರವಾಗಿದ್ದು ಅದು ತನ್ನ ನಿರ್ಣಯಗಳ ಈಡೇರಿಕೆಗೆ ಶ್ರಮಿಸುತ್ತದೆ ಎಂಬುದನ್ನು ತೋರಿಸಿಕೊಡುತ್ತದೆ.
ಸ್ನೇಹಿತರೇ,
ಇಂದು ಅನೇಕ ಜನರು ಭಾರತದ ಲಸಿಕೆ ಕಾರ್ಯಕ್ರಮವನ್ನು ವಿಶ್ವದ ಇತರ ದೇಶಗಳೊಂದಿಗೆ ಹೋಲಿಕೆ ಮಾಡುತ್ತಿದ್ದಾರೆ. ಭಾರತವು ಒಂದು ಬಿಲಿಯನ್ ಗಡಿ ದಾಟಿದ ವೇಗವನ್ನು ಸಹ ಪ್ರಶಂಸಿಸಲಾಗುತ್ತಿದೆ. ಆದಾಗ್ಯೂ, ಈ ವಿಶ್ಲೇಷಣೆಯಲ್ಲಿ ಒಂದು ವಿಷಯವು ತಪ್ಪಿಹೋಗುತ್ತದೆ ಮತ್ತು ಅದರಿಂದ ನಾವು ಎಲ್ಲಿಂದ ಆರಂಭಿಸಿದೆವು? ಅಭಿವೃದ್ಧಿ ಹೊಂದಿದ ದೇಶಗಳು ಲಸಿಕೆಗಳ ಸಂಶೋಧನೆ ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ದಶಕಗಳಷ್ಟು ಹಳೆಯ ಪರಿಣತಿಯನ್ನು ಹೊಂದಿದ್ದವು. ಭಾರತವು ಹೆಚ್ಚಾಗಿ ಈ ದೇಶಗಳು ಅಭಿವೃದ್ಧಿಪಡಿಸಿದ ಲಸಿಕೆಗಳನ್ನು ಅವಲಂಬಿಸಿದೆ. ನಾವು ಅವುಗಳನ್ನು ಆಮದು ಮಾಡಿಕೊಳ್ಳುತ್ತಿದ್ದೆವು ಮತ್ತು ಆದ್ದರಿಂದ, 100 ವರ್ಷಗಳ ಅತಿದೊಡ್ಡ ಸಾಂಕ್ರಾಮಿಕ ರೋಗವು ಬಂದಾಗ ಭಾರತದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಯಿತು. ಈ ಜಾಗತಿಕ ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಸಾಧ್ಯವಾಗುತ್ತದೆಯೇ? ಬೇರೆ ದೇಶಗಳಿಂದ ಅನೇಕ ಲಸಿಕೆಗಳನ್ನು ಖರೀದಿಸಲು ಭಾರತಕ್ಕೆ ಹಣ ಎಲ್ಲಿಂದ ಬರುತ್ತದೆ? ಭಾರತ ಯಾವಾಗ ಲಸಿಕೆ ಪಡೆಯುತ್ತದೆ? ಭಾರತದ ಜನರು ಲಸಿಕೆ ಪಡೆಯುತ್ತಾರೋ ಇಲ್ಲವೋ? ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಭಾರತವು ಸಾಕಷ್ಟು ಜನರಿಗೆ ಲಸಿಕೆ ಹಾಕಲು ಸಾಧ್ಯವೇ? ವಿವಿಧ ಪ್ರಶ್ನೆಗಳಿದ್ದವು, ಆದರೆ ಇಂದು ಈ 100 ಕೋಟಿ ಅಂಕಿ ಇಂತಹ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸುತ್ತದೆ. ಭಾರತವು ತನ್ನ ನಾಗರಿಕರಿಗೆ 100 ಕೋಟಿ ಲಸಿಕೆ ಪ್ರಮಾಣವನ್ನು ನೀಡಿದೆ ಮತ್ತು ಅದನ್ನುಉಚಿತವಾಗಿಯೇ ನೀಡಿದೆ.
ಸ್ನೇಹಿತರೇ,
100 ಕೋಟಿ ಲಸಿಕೆ ಡೋಸ್ ಗಳ ಒಂದು ಪರಿಣಾಮವೆಂದರೆ, ಭಾರತವು ಈಗ ಕೊರೋನಾ ವಿಷಯದಲ್ಲಿ ಹೆಚ್ಚು ಸುರಕ್ಷಿತವೆಂದು ಪರಿಗಣಿಸುತ್ತದೆ. ಭಾರತವು ಫಾರ್ಮಾ ಹಬ್ ಆಗಿ ಜಗತ್ತಿನಲ್ಲಿ ಆನಂದಿಸುವ ಸ್ವೀಕಾರವನ್ನು ಮತ್ತಷ್ಟು ಬಲಪಡಿಸಲಾಗುವುದು. ಇಂದು ಇಡೀ ವಿಶ್ವವೇ ಭಾರತದ ಶಕ್ತಿಯನ್ನು ನೋಡುತ್ತಿದೆ ಮತ್ತು ಅನುಭವಿಸುತ್ತಿದೆ.
ಸ್ನೇಹಿತರೇ,
ಭಾರತದ ಲಸಿಕೆ ಅಭಿಯಾನವು 'ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್' ನ ಜೀವಂತ ಉದಾಹರಣೆಯಾಗಿದೆ. ಕರೋನಾ ಸಾಂಕ್ರಾಮಿಕದ ಆರಂಭಿಕ ಹಂತಗಳಲ್ಲಿ, ಭಾರತದಂತಹ ಪ್ರಜಾಪ್ರಭುತ್ವದಲ್ಲಿ ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದು ತುಂಬಾ ಕಷ್ಟಕರವಾದುದು ಎಂಬ ಭಯವೂ ವ್ಯಕ್ತವಾಗುತ್ತಿತ್ತು. ಭಾರತಕ್ಕೆ ಮತ್ತು ಭಾರತದ ಜನರಿಗೆ ಇದಕ್ಕಾಗಿ ಅಗತ್ಯವಿರುವ ಸಂಯಮ ಮತ್ತು ಶಿಸ್ತಿನ ಬಗ್ಗೆಯೂ ಹೇಳಲಾಗುತ್ತಿತ್ತು. ಆದರೆ ನಮಗೆ ಪ್ರಜಾಪ್ರಭುತ್ವ ಎಂದರೆ ‘ಸಬ್ ಕಾ ಸಾಥ್ (ಎಲ್ಲರಿಂದ ಸಹಕಾರ)’. ಎಲ್ಲರನ್ನೂ ಕರೆದುಕೊಂಡು ದೇಶವು 'ಎಲ್ಲರಿಗೂ ಲಸಿಕೆ', 'ಉಚಿತ ಲಸಿಕೆ' ಅಭಿಯಾನವನ್ನು ಆರಂಭಿಸಿತು. ಬಡವರಾಗಲಿ ಅಥವಾ ಶ್ರೀಮಂತರಾಗಲಿ, ಹಳ್ಳಿಯಾಗಲಿ ಅಥವಾ ನಗರವಾಗಲಿ, ಸನಿಹದಲ್ಲಾಗಲಿ ಅಥವಾ ದೂರದಲ್ಲಾಗಲಿ, ದೇಶವು ಒಂದೇ ಒಂದು ಮಂತ್ರವನ್ನು ಹೊಂದಿತ್ತು, ರೋಗವು ತಾರತಮ್ಯ ಮಾಡದಿದ್ದರೆ, ಲಸಿಕೆಯಲ್ಲಿ ಯಾವುದೇ ತಾರತಮ್ಯವಿರುವುದಿಲ್ಲ. ಆದ್ದರಿಂದ, ಅತಿಗಣ್ಯರು(ವಿ.ಐ.ಪಿ) ಸಂಸ್ಕೃತಿಯು ವ್ಯಾಕ್ಸಿನೇಷನ್ ಅಭಿಯಾನದಲ್ಲಿ ಪ್ರಾಬಲ್ಯ ಹೊಂದಿಲ್ಲ ಎಂದು ಖಾತ್ರಿಪಡಿಸಲಾಯಿತು. ಯಾರಾದರೂ ಎಷ್ಟೇ ಮಹತ್ವದ ಹುದ್ದೆಯಲ್ಲಿದ್ದರೂ, ಅವರು ಎಷ್ಟೇ ಶ್ರೀಮಂತರಾಗಿದ್ದರೂ, ಅವರು ಸಾಮಾನ್ಯ ನಾಗರಿಕರಂತೆ ಲಸಿಕೆಗಳನ್ನು ಪಡೆಯುತ್ತಾರೆ.
ಸ್ನೇಹಿತರೇ,
ನಮ್ಮ ದೇಶಕ್ಕೆ ಹೆಚ್ಚಿನ ಜನರು ಲಸಿಕೆ ಹಾಕಲು ಬರುವುದಿಲ್ಲ ಎಂದು ಹೇಳಲಾಗುತ್ತಿದೆ. ಲಸಿಕೆ ಹಿಂಜರಿಕೆಯು ಪ್ರಪಂಚದ ಹಲವು ಪ್ರಮುಖ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂದಿಗೂ ಒಂದು ಪ್ರಮುಖ ಸವಾಲಾಗಿದೆ. ಆದರೆ ಭಾರತದ ಜನರು ಇಂತಹ ಟೀಕಾಕಾರರಿಗೆ 100 ಕೋಟಿ ಲಸಿಕೆ ಡೋಸ್ ತೆಗೆದುಕೊಳ್ಳುವ ಮೂಲಕ ಉತ್ತರಿಸಿದ್ದಾರೆ.
ಸ್ನೇಹಿತರೇ,
ಯಾವಾಗ 'ಸಬ್ ಕಾ ಪ್ರಯಾಸ್' (ಎಲ್ಲರ ಪ್ರಯತ್ನ) ವನ್ನು ಈ ಒಂದು ಮಹಾ ಅಭಿಯಾನಕ್ಕೆ ಸೇರಿಸಿದಾಗ ಫಲಿತಾಂಶಗಳು ಅದ್ಭುತವಾಗಿವೆ. ಸಾಂಕ್ರಾಮಿಕ ರೋಗದ ವಿರುದ್ಧ ದೇಶದ ಹೋರಾಟದಲ್ಲಿ ನಮ್ಮ ಮೊದಲ ಶಕ್ತಿಯಾಗಿ ನಾವು ಸಾರ್ವಜನಿಕ ಭಾಗವಹಿಸುವಿಕೆಯನ್ನು ಮಾಡಿದ್ದೇವೆ, ಅವರನ್ನು ರಕ್ಷಣೆಯ ಮೊದಲ ಸಾಲನ್ನಾಗಿ ಮಾಡಿದ್ದೇವೆ. ದೇಶವು ತನ್ನ ಒಗ್ಗಟ್ಟಿಗೆ ಶಕ್ತಿಯನ್ನು ನೀಡಲು ಚಪ್ಪಾಳೆ ತಟ್ಟಿತು, ಬಟ್ಟಲು(ಥಾಲಿ)ಗಳನ್ನು ಬಾರಿಸಿತು ಮತ್ತು ದೀಪಗಳನ್ನು ಬೆಳಗಿಸಿತು. ನಂತರ ಈ ಎಲ್ಲಾ ಕೆಲಸಗಳನ್ನು ಮಾಡುವುದರಿಂದ ಈ ರೋಗವು ದೂರ ಹೋಗುತ್ತದೆಯೇ ಎಂದು ಕೆಲವರು ಪ್ರಶ್ನಿಸಿದರು. ಆದರೆ ನಾವೆಲ್ಲರೂ ಅದರಲ್ಲಿ ದೇಶದ ಏಕತೆಯನ್ನು, ಸಾಮೂಹಿಕ ಶಕ್ತಿಯ ಜಾಗೃತಿಯನ್ನು ನೋಡಿದ್ದೇವೆ. ಈ ಸಾಮೂಹಿಕ ಶಕ್ತಿಯು ದೇಶವನ್ನು ಕಡಿಮೆ ಸಮಯದಲ್ಲಿ 100 ಕೋಟಿ ಲಸಿಕೆ ಪ್ರಮಾಣಗಳ ಮೈಲಿಗಲ್ಲುಗೆ ಕೊಂಡೊಯ್ದಿದೆ. ಎಷ್ಟೋ ಬಾರಿ ನಮ್ಮ ದೇಶವು ಒಂದು ದಿನದಲ್ಲಿ ಒಂದು ಕೋಟಿ ವ್ಯಾಕ್ಸಿನೇಷನ್ ಗಡಿ ದಾಟಿದೆ. ಇದು ದೊಡ್ಡ ಸಾಮರ್ಥ್ಯ, ನಿರ್ವಹಣಾ ಕೌಶಲ್ಯ ಮತ್ತು ತಂತ್ರಜ್ಞಾನದ ಅತ್ಯುತ್ತಮ ಬಳಕೆ, ಇದನ್ನು ಪ್ರಮುಖ ದೇಶಗಳು ಸಹ ಹೊಂದಿಲ್ಲ.
ಸ್ನೇಹಿತರೇ,
ಭಾರತದ ಸಂಪೂರ್ಣ ಲಸಿಕೆ ಕಾರ್ಯಕ್ರಮವು ವಿಜ್ಞಾನದ ಗರ್ಭದಲ್ಲಿ ಹುಟ್ಟಿ, ವೈಜ್ಞಾನಿಕ ಆಧಾರದಲ್ಲಿ ಬೆಳೆದಿದೆ ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ಎಲ್ಲಾ ನಾಲ್ಕು ದಿಕ್ಕುಗಳನ್ನು ತಲುಪಿದೆ. ಭಾರತದ ಇಡೀ ಲಸಿಕೆ ಕಾರ್ಯಕ್ರಮವು ವಿಜ್ಞಾನದಿಂದ ಹುಟ್ಟಿದ, ವಿಜ್ಞಾನ-ಚಾಲಿತ ಮತ್ತು ವಿಜ್ಞಾನ ಆಧಾರಿತವಾಗಿದೆ ಎಂಬುದು ನಮಗೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ. ಇಡೀ ಅಭಿಯಾನವು ಲಸಿಕೆಗಳ ಅಭಿವೃದ್ಧಿಯಿಂದ ಚುಚ್ಚುಮದ್ದಿನವರೆಗೆ ಎಲ್ಲೆಡೆ ವಿಜ್ಞಾನ ಮತ್ತು ವೈಜ್ಞಾನಿಕ ವಿಧಾನಗಳನ್ನು ಒಳಗೊಂಡಿತ್ತು. ನಮ್ಮ ಮುಂದಿರುವ ಸವಾಲು ಎಂದರೆ ತಯಾರಿಕೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವುದು. ಇಷ್ಟು ದೊಡ್ಡ ದೇಶ ಮತ್ತು ಇಷ್ಟು ದೊಡ್ಡ ಜನಸಂಖ್ಯೆ! ಅದರ ನಂತರ, ಲಸಿಕೆಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ಮತ್ತು ದೂರದವರೆಗೆ ತಲುಪಿಸಲು ಸಮಯಕ್ಕೆ ಸರಿಯಾಗಿ ಪ್ರದೇಶಗಳು! ಇದೂ ಕೂಡ ಒಂದು ಬೃಹತ್ ಕೆಲಸಕ್ಕಿಂತ ಕಡಿಮೆಯಿಲ್ಲ. ಆದರೆ, ದೇಶವು ವೈಜ್ಞಾನಿಕ ವಿಧಾನಗಳು ಮತ್ತು ಹೊಸ ಆವಿಷ್ಕಾರಗಳೊಂದಿಗೆ ಈ ಸವಾಲುಗಳಿಗೆ ಪರಿಹಾರಗಳನ್ನು ಕಂಡುಕೊಂಡಿದೆ. ಸಂಪನ್ಮೂಲಗಳನ್ನು ಅಸಾಧಾರಣ ವೇಗದಲ್ಲಿ ಹೆಚ್ಚಿಸಲಾಯಿತು. ವೈಜ್ಞಾನಿಕ ಸೂತ್ರವನ್ನು ಯಾವ ರಾಜ್ಯವು ಎಷ್ಟು ಲಸಿಕೆಗಳನ್ನು ಪಡೆಯಬೇಕು ಮತ್ತು ಯಾವ ಪ್ರದೇಶದಲ್ಲಿ ಎಷ್ಟು ಲಸಿಕೆಗಳನ್ನು ತಲುಪಬೇಕು ಇತ್ಯಾದಿಗಳನ್ನು ಬಳಸಲಾಯಿತು. ಮೇಡ್ ಇನ್ ಇಂಡಿಯಾ ಕೋವಿನ್ ಪ್ಲಾಟ್ ಫಾರ್ಮ್ ಸಾಮಾನ್ಯ ಜನರಿಗೆ ಅಷ್ಟಾಗಿ ಅನುಕೂಲವನ್ನು ತಂದಿಲ್ಲ, ಆದರೆ ನಮ್ಮ ವೈದ್ಯಕೀಯ ಸಿಬ್ಬಂದಿಯ ಕೆಲಸವನ್ನು ಸುಲಭವಾಗಿಸಿದೆ.
ಸ್ನೇಹಿತರೇ,
ಇಂದು ಸುತ್ತಲೂ ನಂಬಿಕೆ, ಉತ್ಸಾಹ ಮತ್ತು ಹುಮ್ಮಸ್ಸು ಇದೆ. ಸಮಾಜದಿಂದ ಆರ್ಥಿಕತೆಯವರೆಗೆ ಪ್ರತಿಯೊಂದು ವಿಭಾಗದಲ್ಲೂ ಆಶಾವಾದವಿದೆ. ದೇಶ ಮತ್ತು ವಿದೇಶದಲ್ಲಿರುವ ತಜ್ಞರು ಮತ್ತು ಅನೇಕ ಏಜೆನ್ಸಿಗಳು ಭಾರತದ ಆರ್ಥಿಕತೆಯ ಬಗ್ಗೆ ಬಹಳ ಧನಾತ್ಮಕವಾಗಿವೆ. ಇಂದು ಕೇವಲ ಭಾರತೀಯ ಕಂಪನಿಗಳು ದಾಖಲೆಯ ಹೂಡಿಕೆಯನ್ನು ಆಕರ್ಷಿಸುತ್ತಿಲ್ಲ, ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಾಗುತ್ತಿದೆ. ದಾಖಲೆಯ ಹೂಡಿಕೆಯೊಂದಿಗೆ, ಸ್ಟಾರ್ಟ್ ಅಪ್ ಗಳು ಯೂನಿಕಾರ್ನ್ ಗಳಾಗುತ್ತಿವೆ. ವಸತಿ ವಲಯದಲ್ಲಿಯೂ ಹೊಸ ಶಕ್ತಿ ಗೋಚರಿಸುತ್ತದೆ. ಕಳೆದ ಕೆಲವು ತಿಂಗಳುಗಳಲ್ಲಿ ಕೈಗೊಂಡ ವಿವಿಧ ಸುಧಾರಣೆಗಳು ಮತ್ತು ಉಪಕ್ರಮಗಳು - ಗತಿಶಕ್ತಿಯಿಂದ ಹೊಸ ಡ್ರೋನ್ ನೀತಿಯವರೆಗೆ - ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಕರೋನಾ ಅವಧಿಯಲ್ಲಿ ಕೃಷಿ ವಲಯವು ನಮ್ಮ ಆರ್ಥಿಕತೆಯನ್ನು ದೃಢವಾಗಿ ಇರಿಸಿದೆ. ಇಂದು, ಸರ್ಕಾರದ ಆಹಾರ ಧಾನ್ಯಗಳ ಸಂಗ್ರಹಣೆಯು ದಾಖಲೆ ಮಟ್ಟದಲ್ಲಿ ನಡೆಯುತ್ತಿದೆ ಮತ್ತು ಹಣವು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಹೋಗುತ್ತಿದೆ. ಲಸಿಕೆಗಳ ಹೆಚ್ಚುತ್ತಿರುವ ವ್ಯಾಪ್ತಿಯ ಜೊತೆಗೆ, ಆರ್ಥಿಕ-ಸಾಮಾಜಿಕ ಚಟುವಟಿಕೆಗಳು, ಕ್ರೀಡೆಗಳು, ಪ್ರವಾಸೋದ್ಯಮ ಅಥವಾ ಮನರಂಜನೆಯಾಗಲಿ ಧನಾತ್ಮಕ ಚಟುವಟಿಕೆಗಳು ತೀವ್ರಗೊಂಡಿವೆ. ಮುಂಬರುವ ಹಬ್ಬದ ಋತುವಿನಲ್ಲಿ ಇದು ಹೆಚ್ಚಿನ ತೀವ್ರತೆಯ ಶಕ್ತಿಯನ್ನು ಖಂಡಿತಾ ಪಡೆಯುತ್ತದೆ.
ಸ್ನೇಹಿತರೇ,
ಅದೊಂದು ಕಾಲದಲ್ಲಿ 'ಮೇಡ್ ಇನ್' ಮತ್ತು ಆ ದೇಶವು ಕ್ರೇಜ್ ಆಗಿತ್ತು. ಆದರೆ ಇಂದು ಪ್ರತಿಯೊಬ್ಬ ದೇಶವಾಸಿಗೂ ‘ಮೇಡ್ ಇನ್ ಇಂಡಿಯಾ’ದ ಶಕ್ತಿ ದೊಡ್ಡದು ಎಂದು ಅರಿವಾಗುತ್ತಿದೆ. ಹಾಗಾಗಿ, ಭಾರತದಲ್ಲಿ ತಯಾರಿಸಿದ ಪ್ರತಿಯೊಂದು ಸಣ್ಣ ವಸ್ತುವನ್ನು ಖರೀದಿಸಲು ನಾವು ಒತ್ತಾಯಿಸಬೇಕು ಎಂದು ನಾನು ಮತ್ತೊಮ್ಮೆ ನಿಮ್ಮನ್ನು ಒತ್ತಾಯಿಸುತ್ತೇನೆ ಮತ್ತು ಅದನ್ನು ತಯಾರಿಸುವ ಹಿಂದೆ ಭಾರತೀಯರ ಬೆವರು ಇದೆ. ಮತ್ತು ಇದು ಎಲ್ಲರ ಪ್ರಯತ್ನದಿಂದ ಮಾತ್ರ ಸಾಧ್ಯ. ಸ್ವಚ್ಛ ಭಾರತ ಅಭಿಯಾನವು ಒಂದು ಬೃಹತ್ ಚಳವಳಿಯಾಗಿರುವುದರಿಂದ, ಅಂತೆಯೇ, ನಾವು ಭಾರತದಲ್ಲಿ ತಯಾರಿಸಿದ ಉತ್ಪನ್ನಗಳನ್ನು ಖರೀದಿಸಬೇಕು ಮತ್ತು ಸ್ಥಳೀಯವಾಗಿ ಧ್ವನಿಯಾಗಬೇಕು. ನಾವು ಇದನ್ನು ಆಚರಣೆಗೆ ತರಬೇಕು. ಮತ್ತು, ನಾನು ನಂಬುತ್ತೇನೆ, ಪ್ರತಿಯೊಬ್ಬರ ಪ್ರಯತ್ನದಿಂದ ನಾವು ಇದನ್ನು ಮಾಡಲು ಸಾಧ್ಯವಾಗುತ್ತದೆ. ಕಳೆದ ದೀಪಾವಳಿಯನ್ನು ನೀವು ನೆನಪಿಸಿಕೊಳ್ಳುತ್ತೀರಿ, ಆಗ ಎಲ್ಲರ ಮನಸ್ಸಿನಲ್ಲಿ ಒತ್ತಡವಿತ್ತು. ಆದರೆ ಈ ದೀಪಾವಳಿಯಲ್ಲಿ, 100 ಕೋಟಿ ಲಸಿಕೆ ಪ್ರಮಾಣಗಳಿಂದಾಗಿ ಆತ್ಮವಿಶ್ವಾಸವಿದೆ. ನನ್ನ ದೇಶದ ಲಸಿಕೆಗಳು ನನಗೆ ರಕ್ಷಣೆ ನೀಡಿದರೆ, ನನ್ನ ದೇಶದ ಉತ್ಪನ್ನಗಳು ನನ್ನ ದೀಪಾವಳಿಯನ್ನು ಭವ್ಯವಾಗಿಸಬಹುದು. ದೀಪಾವಳಿ ಮಾರಾಟ ಬೇರೆ ಆಯಾಮ ಪಡೆಯುತ್ತಿದೆ. ದೀಪಾವಳಿ ಮತ್ತು ಹಬ್ಬದ ಸಮಯದಲ್ಲಿ ಮಾರಾಟವು ಹೆಚ್ಚಾಗುತ್ತದೆ. ನಮ್ಮ ಸಣ್ಣ ಅಂಗಡಿಯವರು, ಉದ್ಯಮಿಗಳು ಮತ್ತು ಬೀದಿ ಬದಿ ವ್ಯಾಪಾರಿಗಳು ಸೇರಿದಂತೆ ಎಲ್ಲರಿಗೂ 100 ಕೋಟಿ ಲಸಿಕೆ ಪ್ರಮಾಣವು ಭರವಸೆಯ ಕಿರಣವಾಗಿದೆ.
ಸ್ನೇಹಿತರೇ,
ಇಂದು ನಮ್ಮ ಮುಂದೆ ಅಮೃತ್ ಮಹೋತ್ಸವದ ನಿರ್ಣಯಗಳಿವೆ, ಮತ್ತು ಈ ಯಶಸ್ಸು ನಮಗೆ ಹೊಸ ಆತ್ಮವಿಶ್ವಾಸವನ್ನು ನೀಡುತ್ತದೆ. ದೊಡ್ಡ ಗುರಿಗಳನ್ನು ಹೊಂದಿಸಲು ಮತ್ತು ಅವುಗಳನ್ನು ಸಾಧಿಸಲು ದೇಶವು ಚೆನ್ನಾಗಿ ತಿಳಿದಿದೆ ಎಂದು ನಾವು ಇಂದು ಹೇಳಬಹುದು. ಆದರೆ ನಾವು ಯಾವಾಗಲೂ ಜಾಗರೂಕರಾಗಿರಬೇಕು. ನಾವು ಅಜಾಗರೂಕರಾಗಿರಬಾರದು. ರಕ್ಷಾಕವಚ ಎಷ್ಟು ಉತ್ತಮವಾಗಿದ್ದರೂ, ರಕ್ಷಾಕವಚವು ಎಷ್ಟೇ ಆಧುನಿಕವಾಗಿದ್ದರೂ, ರಕ್ಷಾಕವಚವು ಸಂಪೂರ್ಣ ರಕ್ಷಣೆಯ ಖಾತರಿಯನ್ನು ನೀಡಿದ್ದರೂ, ಯುದ್ಧ ನಡೆಯುತ್ತಿರುವಾಗ ಶಸ್ತ್ರಾಸ್ತ್ರಗಳನ್ನು ಬಿಟ್ಟುಕೊಡುವುದಿಲ್ಲ. ನಾವು ನಮ್ಮ ಹಬ್ಬಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಚರಿಸಬೇಕು ಎಂಬುದು ನನ್ನ ಕೋರಿಕೆ. ಮತ್ತು ಮುಖಗವಸಿಗೆ ಸಂಬಂಧಿಸಿದಂತೆ, ಈಗ ಡಿಸೈನರ್ ಮುಖಗವಸುಗಳು ಸಹ ಇವೆ, ನಾವು ಹೊರಬಂದಾಗ ನಾವು ಶೂಗಳನ್ನು ಧರಿಸುವಂತೆಯೇ ನಾವು ಮುಖಗವಸುಗಳನ್ನು ಧರಿಸಬೇಕು. ಲಸಿಕೆ ಹಾಕಿಸದವರು ಇದಕ್ಕೆ ಮೊದಲ ಆದ್ಯತೆ ನೀಡಬೇಕು. ಲಸಿಕೆ ಹಾಕಿಸಿಕೊಂಡವರು ಇತರರಿಗೆ ಸ್ಫೂರ್ತಿ ನೀಡಬೇಕು. ನಾವೆಲ್ಲರೂ ಒಟ್ಟಾಗಿ ಪ್ರಯತ್ನಿಸಿದರೆ, ನಾವು ಬೇಗನೆ ಕೊರೊನಾವನ್ನು ಸೋಲಿಸಬಹುದು ಎಂದು ನನಗೆ ಖಾತ್ರಿಯಿದೆ. ಮುಂಬರುವ ಹಬ್ಬಗಳಿಗೆ ನಿಮ್ಮೆಲ್ಲರಿಗೂ ಅನೇಕ ಶುಭಾಶಯಗಳು ಮತ್ತು ಅನೇಕ ಧನ್ಯವಾದಗಳು!