ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿಯಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗೌರವ ನಮನ ಸಲ್ಲಿಸಿದ್ದಾರೆ. ಸರ್ದಾರ್ ಪಟೇಲ್ ಅವರಿಗಿದ್ದ ದೂರದೃಷ್ಟಿಯ ನಾಯಕತ್ವ ಮತ್ತು ರಾಷ್ಟ್ರದ ಏಕತೆಗಾಗಿ ಇದ್ದ ಅಚಲವಾದ ಬದ್ಧತೆಯು ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಬುನಾದಿ ಹಾಕಿದೆ ಎಂದು ಶ್ರೀ ಮೋದಿ ಸ್ಮರಿಸಿದರು.
ಈ ಕುರಿತು ಪ್ರಧಾನ ಮಂತ್ರಿ ಅವರು X ನಲ್ಲಿ ಪೋಸ್ಟ್ ಮಾಡಿದ್ದು;
“ದೇಶ ಕಂಡ ಮಹಾನ್ ನಾಯಕ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯ ತಿಥಿಯಂದು ಅವರಿಗೆ ಗೌರವ ನಮನಗಳು. ಅವರ ದೂರದೃಷ್ಟಿಯ ನಾಯಕತ್ವ ಮತ್ತು ರಾಷ್ಟ್ರದ ಏಕತೆಗೆ ಅವರು ಹೊಂದಿದ್ದ ಅಚಲವಾದ ಬದ್ಧತೆಯು ಆಧುನಿಕ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದೆ. ಅವರ ಅನುಕರಣೀಯ ಮತ್ತರ ಸ್ಮರಣೀಯ ಕೆಲಸಗಳು ನಮಗೆ ಬಲವಾದ, ಹೆಚ್ಚು ಏಕತೆಯ ದೇಶವನ್ನು ಕಟ್ಟಲು ಸ್ಪಷ್ಟ ಮಾರ್ಗದರ್ಶನ ನೀಡುತ್ತದೆ. ನಾವು ಅವರ ಜೀವನದಿಂದ ಸ್ಫೂರ್ತಿ ಪಡೆಯುವುದನ್ನು ಮುಂದುವರಿಸುತ್ತೇವೆ. ಅವರ ಸಮೃದ್ಧ ಭಾರತದ ಕನಸನ್ನು ನನಸಾಗಿಸಲು ಕೆಲಸ ಮಾಡುತ್ತೇವೆ ಎಂದಿದ್ದಾರೆ.
Tributes to the great Sardar Vallabhbhai Patel on his Punya Tithi. His visionary leadership and unwavering commitment to the nation's unity laid the foundations of modern India. His exemplary work guides us towards building a stronger, more united country. We continue to draw…
— Narendra Modi (@narendramodi) December 15, 2023