ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಜಪಾನ್ ಪ್ರಧಾನ ಮಂತ್ರಿ ಶ್ರೀ ಕಿಶಿದಾ ಫುಮಿಯೊ ಅವರು 14ನೇ ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಇಂದಿನಿಂದ 2 ದಿನಗಳ ಅಧಿಕೃತ ದೆಹಲಿ ಪ್ರವಾಸ ಕೈಗೊಂಡಿದ್ದಾರೆ. ಉಭಯ ನಾಯಕರು ನಡೆಸುತ್ತಿರುವ ಭಾರತದಲ್ಲಿನ ಚೊಚ್ಚಲ ಶೃಂಗಸಭೆ ಇದಾಗಿದೆ. ಈ ಮೊದಲಿನ ಭಾರತ-ಜಪಾನ್ ವಾರ್ಷಿಕ ಶೃಂಗಸಭೆ 2018 ಅಕ್ಟೋಬರ್ ನಲ್ಲಿ ಟೋಕಿಯೊದಲ್ಲಿ ಜರುಗಿತ್ತು.
ಭಾರತ ಮತ್ತು ಜಪಾನ್ ತಮ್ಮ 'ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ' ಕ್ಷೇತ್ರದಲ್ಲಿ ಬಹುಪಕ್ಷೀಯ ಸಹಕಾರ ಸಂಬಂಧ ಹೊಂದಿವೆ. ಶೃಂಗಸಭೆಯು ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರವನ್ನು ಪರಿಶೀಲಿಸಲು ಮತ್ತು ಬಲಪಡಿಸಲು, ಇಂಡೋ-ಪೆಸಿಫಿಕ್ ವಲಯದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗಾಗಿ ತಮ್ಮ ಪಾಲುದಾರಿಕೆಯನ್ನು ಮುನ್ನಡೆಸಲು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳಲು ಈ ಶೃಂಗಸಭೆ ಮುಕ್ತ ಅವಕಾಶ ಒದಗಿಸುತ್ತಿದೆ.