ಸೋಮನಾಥದಲ್ಲಿಂದು ಶ್ರೀ ಸೋಮನಾಥ ಟ್ರಸ್ಟ್ ನ ಟ್ರಸ್ಟಿಗಳ 116ನೇ ಸಭೆ ನಡೆಯಿತು.
ಈ ಸಭೆಯಲ್ಲಿ ಟ್ರಸ್ಟಿಗಳಾದ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ, ಶ್ರೀ ಲಾಲ್ ಕೃಷ್ಣ ಅಡ್ವಾಣಿ, ಶ್ರೀ ಅಮಿತ್ ಶಾ, ಶ್ರೀ. ಕೇಶುಭಾಯ್ ಪಟೇಲ್, ಶ್ರೀ. ಪಿ.ಕೆ. ಲಹೇರಿ, ಶ್ರೀ. ಜೆ.ಡಿ. ಪಾರ್ಮಾರ್ ಮತ್ತು ಶ್ರೀ. ಹರ್ಷ ನೆಯೋಟಿಯಾ ಅವರು ಪಾಲ್ಗೊಂಡಿದ್ದರು.
ಈ ಸಭೆಯಲ್ಲಿ ಶ್ರೀ. ನರೇಂದ್ರ ಮೋದಿ ಅವರು, ಇಡೀ ಸೋಮನಾಥ ದೇವಾಲಯ ಸಮುಚ್ಚಯವನ್ನು ನೀರು, ಹಸಿರು ಮತ್ತು ಇತರ ಸೌಲಭ್ಯಗಳೊಂದಿಗೆ ಮೇಲ್ದರ್ಜೆಗೇರಿಸಬೇಕು ಎಂಬ ಸಲಹೆ ನೀಡಿದರು. ವೆರಾವಾಲ್ ಮತ್ತು ಪ್ರಭಾಸ್ ಪಟಾನ್ ಗಳನ್ನು ನಗದುರಹಿತಗೊಳಿಸುವ ಪ್ರಯತ್ನದಲ್ಲಿ ಸಕ್ರಿಯವಾಗಿ ಟ್ರಸ್ಟ್ ಪಾಲ್ಗೊಳ್ಳುವಂತೆ ಶಿಫಾರಸು ಮಾಡಿದರು. ಟ್ರಸ್ಟ್ ಎಲ್ಲ ಪ್ರಮುಖ ನಗರಗಳಲ್ಲಿಯೂ ಮಹೋತ್ಸವಗಳನ್ನು ಆಯೋಜಿಸಬೇಕು ಎಂದೂ ಅವರು ಹೇಳಿದರು.
2017ನೇ ಸಾಲಿನಲ್ಲೂ ಶ್ರೀ. ಕೇಶೂಭಾಯ್ ಪಟೇಲ್ ಅವರು ಟ್ರಸ್ಟ್ ನ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.