ಆಫ್ರಿಕಾದಲ್ಲಿ ಬ್ರಿಕ್ಸ್ ರಾಷ್ಟ್ರಗಳು: 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಸಮಗ್ರ ಬೆಳವಣಿಗೆ ಮತ್ತು ಸಹಭಾಗಿತ್ವದ ಪ್ರಗತಿ'. ಸ್ಯಾಂಡ್ಟನ್ ಸಮಾವೇಶ ಕೇಂದ್ರ, ಜೊಹಾನ್ಸ್ ಬರ್ಗ್, ದಕ್ಷಿಣ ಆಫ್ರಿಕಾ, 2018ರ ಜುಲೈ 25, 26 ಮತ್ತು 27.
I. ಪೀಠಿಕೆ
1. ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾದ ಪ್ರಧಾನಮಂತ್ರಿ/ರಾಷ್ಟ್ರಾಧ್ಯಕ್ಷರಾದ ನಾವುಗಳು ಜೊಹಾನ್ಸ್ ಬರ್ಗ್ನಲ್ಲಿ ಜುಲೈ 25ರಿಂದ 27ರವರೆಗೆ ಸಮಾವೇಶಗೊಂಡಿದ್ದ 10ನೇ ಬ್ರಿಕ್ಸ್ (ಬ್ರಿಕ್ಸ್= ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ಸೌತ್ ಆಫ್ರಿಕಾ) ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದೆವು. ಬ್ರಿಕ್ಸ್ ರಾಷ್ಟ್ರಗಳ ಇತಿಹಾಸದಲ್ಲಿ ಒಂದು ಮೈಲುಗಲ್ಲಾದ ಈ ಸಮಾವೇಶವು `ಆಫ್ರಿಕಾದಲ್ಲಿ ಬ್ರಿಕ್ಸ್ ಒಕ್ಕೂಟ: 4ನೇ ಕೈಗಾರಿಕಾ ಕ್ರಾಂತಿಯಲ್ಲಿ ಸಮಗ್ರ ಬೆಳವಣಿಗೆ ಮತ್ತು ಪರಸ್ಪರ ಪ್ರಗತಿ' ಎನ್ನುವ ಧ್ಯೇಯವನ್ನು ಒಳಗೊಂಡಿತ್ತು.
2. ವಿಶ್ವದ ಧೀಮಂತ ನಾಯಕರಲ್ಲಿ ಒಬ್ಬರಾದ ಶ್ರೀ ನೆಲ್ಸನ್ ಮಂಡೇಲಾ ಅವರ ಜನ್ಮಶತಾಬ್ದಿಯ ಸಂದರ್ಭದಲ್ಲೇ ನಾವೆಲ್ಲರೂ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದೇವೆ. ಮಂಡೇಲಾ ಅವರು ಪ್ರತಿನಿಧಿಸಿದ ಮೌಲ್ಯಗಳನ್ನು, ತತ್ತ್ವ ಮತ್ತು ಶ್ರದ್ಧೆಯನ್ನು, ಮನುಕುಲಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಅವರು ಪ್ರಜಾಪ್ರಭುತ್ವದ ಸಲುವಾಗಿ ನೀಡಿದ ಕೊಡುಗೆಯನ್ನು ಹಾಗೂ ವಿಶ್ವದೆಲ್ಲೆಡೆ ಶಾಂತಿಯನ್ನು ಪ್ರಚುರಪಡಿಸಲು ಅವರು ನೀಡಿದ ಕಾಣಿಕೆಯನ್ನು ನಾವು ಮನ್ನಿಸುತ್ತೇವೆ.
3. ಇದು ತಂತ್ರಜ್ಞಾನವೇ ನಿರ್ಣಾಯಕ ಶಕ್ತಿಯಾಗಿರುವ ಕೈಗಾರಿಕೀಕರಣದ ಮತ್ತು ಬೆಳವಣಿಗೆಯ ಯುಗವಾಗಿದೆ. ಇಂತಹ ಸಂದರ್ಭದಲ್ಲಿ ಅಭಿವೃದ್ಧಿ, ಎಲ್ಲರನ್ನೂ ಒಳಗೊಳ್ಳುವ ಆಶಯ ಮತ್ತು ಪರಸ್ಪರ ಪ್ರಗತಿಯಂತಹ ಆಶಯಗಳನ್ನು ಪ್ರಧಾನವಾಗಿ ಇಟ್ಟುಕೊಂಡಿರುವ ಇಂತಹ ಶೃಂಗಸಭೆಯನ್ನು ಏರ್ಪಡಿಸಿರುವುದಕ್ಕಾಗಿ ಆಫ್ರಿಕಾವನ್ನು ಶ್ಲಾಘಿಸುತ್ತೇವೆ.
4. ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳು ಕಳೆದ ಹತ್ತು ವರ್ಷಗಳಲ್ಲಿ ಶಾಂತಿ, ಸೌಹಾರ್ದ ಮತ್ತು ಪರಸ್ಪರ ಸಹಭಾಗಿತ್ವದಡಿ ಅಭಿವೃದ್ಧಿಯನ್ನು ಸಾಧಿಸಲು ಮತ್ತು ಇವುಗಳನ್ನು ಮತ್ತಷ್ಟು ವಿಸ್ತರಿಸಲು ತೋರಿರುವ ಪರಸ್ಪರ ಸಹಕಾರದ ಬಗ್ಗೆ ಈ ದೇಶಗಳ ಮುಖ್ಯಸ್ಥರಾದ ನಮಗೆ ತೃಪ್ತಿ ಇದೆ.
5. ಪರಸ್ಪರ ಸಹಕಾರ, ಸಾರ್ವಭೌಮ ಸಮಾನತೆ, ಪ್ರಜಾಪ್ರಭುತ್ವ, ಎಲ್ಲರನ್ನೂ ಒಳಗೊಳ್ಳುವುದು ಮತ್ತು ಮತ್ತಷ್ಟು ಶಕ್ತಿಶಾಲಿಯಾದ ಸಹಭಾಗಿತ್ವದಂತಹ ತತ್ತ್ವಗಳಿಗೆ ನಾವು ಇದುವರೆಗೂ ತೋರಿಸಿಕೊಂಡು ಬಂದಿರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ. ನಾವು ಇದುವರೆಗೂ ನಡೆಸಿಕೊಂಡು ಬಂದಿರುವ ಶೃಂಗಸಭೆಗಳ ಮೂಲಕ ಜನರಿಗೆ ಲಾಭವಾಗುವಂತಹ ಅಂಶಗಳನ್ನು ಸಾಧಿಸಿದ್ದೇವೆ. ಈಗ ಮತ್ತೊಮ್ಮೆ ನಾವು ಶಾಂತಿ ಸ್ಥಾಪನೆಗೆ ಉತ್ತೇಜನ, ಸುಗಮ ಅಂತಾರಾಷ್ಟ್ರೀಯ ವ್ಯವಸ್ಥೆ, ಸುಸ್ಥಿರ ಅಭಿವೃದ್ಧಿ ಮತ್ತು ಸಕಲರನ್ನೂ ಒಳಗೊಂಡಿರುವಂತಹ ಬೆಳವಣಿಗೆಗೆ ಹಾಗೂ ಆರ್ಥಿಕ, ಶಾಂತಿ ಹಾಗೂ ಭದ್ರತೆ ಮತ್ತು ಜನರ ನಡುವೆ ಪರಸ್ಪರ ವಿನಿಮಯ ವರ್ಧನೆಗೆ ಒತ್ತು ಕೊಡುವಂತಹ ಸಹಕಾರಕ್ಕೆ ಬದ್ಧರಾಗಿದ್ದೇವೆ.
6. ಶಾಂತಿ ಮತ್ತು ಸ್ಥಿರತೆಯಿಂದ ಕೂಡಿರುವ ಜಗತ್ತಿನ ನಿರ್ಮಾಣಕ್ಕೆ ಮತ್ತು ವಿಶ್ವಸಂಸ್ಥೆಯ ಪ್ರಧಾನ ಆಶಯಕ್ಕೆ ನಾವು ಪುನಃ ನಮ್ಮ ಬದ್ಧತೆಯನ್ನು ವ್ಯಕ್ತಪಡಿಸುತ್ತಿದ್ದೇವೆ. ಜತೆಗೆ ವಿಶ್ವಸಂಸ್ಥೆಯ ನಿಯಮಾವಳಿಗಳಲ್ಲಿ ಹೇಳಿರುವಂತೆ ಅಂತಾರಾಷ್ಟ್ರೀಯ ಕಾನೂನು, ಪ್ರಜಾಸತ್ತೆಗೆ ಪ್ರೋತ್ಸಾಹ ಮತ್ತು ಶಾಸನಬದ್ಧ ಆಡಳಿತಕ್ಕೆ ಕೂಡ ನಮ್ಮ ಬದ್ಧತೆ ಮುಂದುವರಿಯಲಿದೆ. ಹಾಗೆಯೇ, ವೈವಿಧ್ಯವನ್ನುಳ್ಳ ವೈವಿಧ್ಯಮಯ ಜಗತ್ತಿಗೆ ಮತ್ತು 2030ರ ಹೊತ್ತಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕೆಂಬ ಗುರಿಯ ಸಾಕಾರಕ್ಕೆ ಕೂಡ ನಾವು ದುಡಿಯಲಿದ್ದೇವೆ. ಹೆಚ್ಚುಹೆಚ್ಚು ಪ್ರಾತಿನಿಧ್ಯವನ್ನುಳ್ಳ, ಪ್ರಜಾಸತ್ತಾತ್ಮಕವಾದ, ಸಮಾನತೆಯಿಂದ ಕೂಡಿದ, ನ್ಯಾಯಬದ್ಧವಾದ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ನಾವು ಹೆಚ್ಚು ಹೆಚ್ಚು ಬಯಸುತ್ತ ಹೋದಂತೆ ಇದು ಸಹಜವಾಗಿರಲಿದೆ.
7. ಜಾಗತಿಕ ವೈವಿಧ್ಯವನ್ನು ಮತ್ತಷ್ಟು ಬಲಪಡಿಸಲು ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಲ್ಲಿ ಕಾನೂನುಬದ್ಧ ಆಡಳಿತಕ್ಕೆ ಮಾನ್ಯತೆ ನೀಡಲು ಹಾಗೂ ಪ್ರಾತಿನಿಧ್ಯವನ್ನುಳ್ಳ, ಸಮಾನತೆಯ ತತ್ತ್ವದಲ್ಲಿ ನಂಬಿಕೆಯನ್ನು ಇಟ್ಟುಕೊಂಡಿರುವ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಉತ್ತೇಜಿಸಲು ಜತೆಗೂಡಿ ಕೆಲಸ ಮಾಡಲು ನಾವು ಕಂಕಣಬದ್ಧರಾಗಿದ್ದೇವೆ ಎನ್ನುವುದನ್ನು ಮತ್ತೊಮ್ಮೆ ಘೋಷಿಸುತ್ತಿದ್ದೇವೆ.
8. ವೈವಿಧ್ಯವನ್ನು ಬೆಂಬಲಿಸಲು, ಅಂತಾರಾಷ್ಟ್ರೀಯ ವಿಚಾರಗಳಲ್ಲಿ ವಿಶ್ವಸಂಸ್ಥೆಯು ಹೊಂದಿರುವ ಪ್ರಧಾನವಾದ ಪಾತ್ರಕ್ಕೆ, ನ್ಯಾಯಬದ್ಧವಾದ ಮತ್ತು ಸಮಾನತೆಯಿಂದ ಕೂಡಿದ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಸಾಕಾರಗೊಳಿಸಲು ನಮ್ಮ ಬೆಂಬಲ ಇದ್ದೇಇದೆ. ಆದರೆ, ಈ ಗುರಿ ಸಾಧನೆಯು ವಿಶ್ವಸಂಸ್ಥೆಯು ಒಳಗೊಂಡಿರುವ ನೀತಿನಿಯಮಗಳು, ಅಂತಾರಾಷ್ಟ್ರೀಯ ಕಾನೂನಿಗೆ ಗೌರವ, ಪ್ರಜಾಪ್ರಭುತ್ವಕ್ಕೆ ಉತ್ತೇಜನ, ಅಂತಾರಾಷ್ಟ್ರೀಯ ಬಾಂಧವ್ಯಗಳಲ್ಲಿ ಶಾಸನಬದ್ಧ ಆಡಳಿತ ಮತ್ತು ಭದ್ರತೆಯ ದೃಷ್ಟಿಯಿಂದ ಎದುರಾಗಿರುವ ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ಬೆದರಿಕೆಗಳಿಗೆ ಪರಿಹಾರ ಕಂಡುಕೊಳ್ಳುವುದನ್ನು ಅವಲಬಿಸಿದೆ.
9. ಜೊಹಾನ್ಸ್ ಬರ್ಗ್ ನಲ್ಲಿ ನಡೆಯುತ್ತಿರುವ ಈ ಬ್ರಿಕ್ಸ್ ಸಮಾವೇಶದ ಭಾಗವಾಗಿ, ಮಾರುಕಟ್ಟೆ ದೃಷ್ಟಿಯಿಂದ ಪ್ರವರ್ಧಮಾನಕ್ಕೆ ಬರುತ್ತಿರುವ ದೇಶಗಳು ಮತ್ತು ಅಭಿವೃದ್ಧಿಶೀಲ ದೇಶಗಳೊಂದಿಗೆ `ಬ್ರಿಕ್ಸ್-ಆಫ್ರಿಕಾ ಔಟ್ ರೀಚ್' ಮತ್ತು ಎರಡನೇ ವರ್ಷದ `ಬ್ರಿಕ್ಸ್ ಪ್ಲಸ್ ಕೋಆಪರೇಷನ್' ಶೃಂಗಸಭೆಯನ್ನು ಏರ್ಪಡಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.
10. ಬ್ರಿಕ್ಸ್ ರಾಷ್ಟ್ರಗಳ ನಾನಾ ಸಚಿವಾಲಯಗಳ ನಡುವೆ ನಡೆದಿರುವ ಸಭೆಗಳು ನೀಡಿರುವ ಫಲಿತಾಂಶವು ನಮಗೆ ತೃಪ್ತಿಯನ್ನು ನೀಡಿದೆ (ನೋಡಿ: ಅನುಬಂಧ 1). ಜೊತೆಗೆ, 2018ರಲ್ಲಿ ಬ್ರಿಕ್ಸ್ ಒಕ್ಕೂಟದ ವತಿಯಿಂದ ನಡೆಯಲಿರುವ ಸಭೆಗಳನ್ನು ನಾವು ಎದುರು ನೋಡುತ್ತಿದ್ದೇವೆ.
II. ವೈವಿಧ್ಯದ ಬಲವರ್ಧನೆ, ಜಾಗತಿಕ ಆಡಳಿತ ವ್ಯವಸ್ಥೆಯ ಸುಧಾರಣೆ ಮತ್ತು ಎಲ್ಲರೂ ಸಮಾನವಾಗಿ ಎದುರಿಸುತ್ತಿರುವ ಸಮಸ್ಯೆ/ಸವಾಲುಗಳಿಗೆ ಪರಿಹಾರ.
11. ಅಂತಾರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಮತ್ತು ಸುಭದ್ರತೆ, ಸುಧಾರಿತ ಜಾಗತಿಕ ಅಭಿವೃದ್ಧಿ ಮತ್ತು ಮಾನವ ಹಕ್ಕುಗಳಿಗೆ ಉತ್ತೇಜನ ನೀಡಲು ಮತ್ತು ಈ ಹಕ್ಕುಗಳನ್ನು ರಕ್ಷಿಸಲು ಕಟಿಬದ್ಧವಾಗಿರುವ ವಿಶ್ವಸಂಸ್ಥೆಗೆ ನಾವು ನಮ್ಮ ಬದ್ಧತೆಯನ್ನು ಪುನಃ ದೃಢಪಡಿಸುತ್ತಿದ್ದೇವೆ.
12. ವಿಶ್ವಸಂಸ್ಥೆಯು ಅಳವಡಿಸಿಕೊಂಡಿರುವ ತತ್ತ್ವಾದರ್ಶಗಳು ಮತ್ತು ಆಶಯಗಳಿಗೆ ನಾವು ಬದ್ಧರಾಗಿದ್ದೇವೆ. ಜತೆಗೆ, ಅಂತರ್-ಸರಕಾರಿ ಸಂಸ್ಥೆಯಾಗಿರುವ ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಶಾಂತಿ ಮತ್ತು ಸುಭದ್ರತೆ, ಸುಸ್ಥಿರ ಅಭಿವೃದ್ಧಿಯಗೆ ಪ್ರೋತ್ಸಾಹ ಮತ್ತು ಮಾನವ ಹಕ್ಕುಗಳು ಹಾಗೂ ಮೂಲಭೂತ ಸ್ವಾತಂತ್ರ್ಯದ ಸಂರಕ್ಷಣೆಯ ಬಗ್ಗೆ ಹೊಂದಿರುವ ಕಳಕಳಿಯನ್ನು ನಾವು ಬೆಂಬಲಿಸುತ್ತೇವೆ.
13. ಜಾಗತಿಕ ಆಡಳಿತಕ್ಕೆ ಸಂಬಂಧಪಟ್ಟ ಸಂಸ್ಥೆಗಳು ಜಾಗತಿಕ ಮಟ್ಟದ ಸವಾಲುಗಳನ್ನು ಎದುರಿಸಲು ಸಮರ್ಥವಾಗಿರುವಂತೆ ಅವುಗಳನ್ನು ಬಲಪಡಿಸಲು ನಾವು ಕಟಿಬದ್ಧರಾಗಿದ್ದೇವೆ ಎಂದು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ.
14. ವಿಶಾಲವಾದ ಬಹುಪಕ್ಷೀಯ ವ್ಯವಸ್ಥೆಯ/ ಅಥವಾ ವೈವಿಧ್ಯಮಯ ವ್ಯವಸ್ಥೆಯ ಆಶಯಗಳನ್ನು ಬೆಂಬಲಿಸಲು ಪ್ರಾದೇಶಿಕ ಮಟ್ಟದಲ್ಲಿ ಕೈಗೊಳ್ಳುವ ಕ್ರಮಗಳಲ್ಲಿ ಅಡಗಿರುವ ಶಕ್ತಿಯನ್ನು ಕೂಡ ನಾವು ಮನ್ನಿಸುತ್ತೇವೆ.
15. ವಿಶ್ವಸಂಸ್ಥೆಯು ಜಾಗತಿಕ ಮಟ್ಟದಲ್ಲಿ ಸಾಮೂಹಿಕ ಭದ್ರತಾ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರಬೇಕೆಂದು ಹೊಂದಿರುವ ಪ್ರಧಾನ ಆಶಯಕ್ಕೆ ನಾವು ಬದ್ಧರಾಗಿದ್ದೇವೆಂದು ಮತ್ತೊಮ್ಮೆ ಹೇಳುತ್ತಿದ್ದೇವೆ. ಅಲ್ಲದೆ, ಅಂತಾರಾಷ್ಟ್ರೀಯ ಕಾನೂನುಗಳನ್ನು ಆಧರಿಸಿದ ಒಂದು ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ರೂಪಿಸುವುದು ಎಷ್ಟು ಅಗತ್ಯವೆನ್ನುವುದನ್ನು ನಾವು ಬಲ್ಲವರಾಗಿದ್ದೇವೆ. ವಿಶ್ವಸಂಸ್ಥೆಯ ತತ್ತ್ವಾದರ್ಶಗಳನ್ನು ಆಧಾರಸ್ತಂಭವನ್ನಾಗಿ ಹೊಂದಿರುವ ಈ ಆಶಯವು ಬಹುಧ್ರುವೀಯವಾದ ಈ ಜಗತ್ತಿನಲ್ಲಿ ಸಹಕಾರ ಮತ್ತು ಸ್ಥಿರತೆಗಳನ್ನು ತರಲು ಸಹಕಾರಿಯಾಗಲಿದೆ. ಹಾಗೆಯೇ, ವಿಶ್ವಸಂಸ್ಥೆಯಲ್ಲಿ ಬಹುಕಾಲದಿಂದಲೂ ಆಫ್ರಿಕಾದ ರಾಷ್ಟ್ರಗಳಿಗೆ ಸೂಕ್ತ ಪ್ರಾತಿನಿಧ್ಯ ಸಿಗದೆ ಇರುವುದನ್ನು, ಅದರಲ್ಲೂ ಶಾಂತಿ ಮತ್ತು ಭದ್ರತೆಯ ವಿಚಾರಗಳಿಗೆ ಸಂಬಂಧಿಸಿದಂತೆ ಈ ರಾಷ್ಟ್ರಗಳು ಅವಕಾಶವಂಚಿತರಾಗಿರುವುದು ನಮ್ಮ ಗಮನಕ್ಕೆ ಬಂದಿದೆ.
16. ಜಾಗತಿಕ ಸಮುದಾಯವು ಅಂತಾರಾಷ್ಟ್ರೀಯ ಮಟ್ಟದ ಸವಾಲುಗಳನ್ನು ಎದುರಿಸುತ್ತಿದೆ ಎನ್ನುವುದು ನಿಜ. ಇದನ್ನು ಪರಿಹರಿಸಲು ಸಾಮೂಹಿಕ ಸಹಕಾರದಿಂದ ಕೂಡಿದ ಪ್ರಯತ್ನಗಳು ಮುಖ್ಯವೆನ್ನುವ ತತ್ತ್ವಕ್ಕೆ ನಾವು ಬದ್ಧರಾಗಿದ್ದೇವೆ. ಅದರಲ್ಲೂ ಮನುಕುಲಕ್ಕೆ ಒಳಿತು ಮಾಡುವಂತಹ ಮುಕ್ತ ಮತ್ತು ನ್ಯಾಯಸಮ್ಮತವಾದ ಹಾಗೂ ಎಲ್ಲರ ಪ್ರಾತಿನಿಧ್ಯಕ್ಕೂ ಅವಕಾಶವಿರುವ ಬಹುಧ್ರುವೀಯ ಅಂತಾರಾಷ್ಟ್ರೀಯ ವ್ಯವಸ್ಥೆಯನ್ನು ಸ್ಥಾಪಿಸಲು ನಾವು ಎಂದಿನಂತೆಯೇ ಬದ್ಧರಾಗಿದ್ದೇವೆ. ಜೊತೆಗೆ, ಯಾವುದೇ ದೇಶದ ಮೇಲಾಗಲಿ ಸೇನೆಯನ್ನು ಬಳಸಬಾರದು ಎನ್ನುವ ಎಂದಿನ ಸಂಕಲ್ಪಕ್ಕೆ ಮತ್ತು ವಿಶ್ವಸಂಸ್ಥೆಯ ಚೌಕಟ್ಟಿನಾಚೆಗೆ ಹೋಗಿ ಏಕಪಕ್ಷೀಯವಾಗಿ ಕಠಿಣ ಕ್ರಮಗಳನ್ನು ಹೇರುವುದನ್ನು ಕೂಡ ನಾವು ಹಿಂದಿನಂತೆಯೇ ವಿರೋಧಿಸುತ್ತೇವೆ. ಮಿಗಿಲಾಗಿ, ಎಲ್ಲರನ್ನೂ ಒಟ್ಟುಗೂಡಿಸುವಂತಹ ಶಾಂತಿ ಮತ್ತು ಭದ್ರತೆಗೆ ನಾವು ಒತ್ತು ನೀಡುತ್ತೇವೆ. ಅಂತಿಮವಾಗಿ, ಯಾವುದೇ ದೇಶವಾಗಲಿ ಇನ್ನೊಂದು ದೇಶದ ಮೇಲೆ ಆಕ್ರಮಣ ಮಾಡುವುದನ್ನು ನಾವು ಒಪ್ಪುವುದಿಲ್ಲ.
17. ಈ ಸಂದರ್ಭದಲ್ಲಿ ನಾವು, 2005ರ ವಿಶ್ವ ಶೃಂಗಸಭೆಯಲ್ಲಿ ಅನುಮೋದಿಸಿದ ನಿರ್ಣಯಗಳನ್ನು ನೆನಪಿಸುತ್ತಿದ್ದೇವೆ. ಅಂದರೆ, ಭದ್ರತಾ ಸಂಸ್ಥೆಯೂ ಸೇರಿದಂತೆ ವಿಶ್ವಸಂಸ್ಥೆಯ ಸಮಗ್ರ ಸುಧಾರಣೆಯಾಗಬೇಕು ಮತ್ತು ಇದರಲ್ಲಿ ಹೆಚ್ಚು ದೇಶಗಳಿಗೆ ಪ್ರಾತಿನಿಧ್ಯವಿರಬೇಕು, ಇದು ಪರಿಣಾಮಕಾರಿಯಾಗಿ ಕೆಲಸ ಮಾಡುವಂತಾಗಬೇಕು ಮತ್ತು ಇದು ಹೆಚ್ಚು ದಕ್ಷವಾಗಬೇಕು ಎನ್ನುವುದನ್ನು ಮತ್ತೊಮ್ಮೆ ಹೇಳುತ್ತಿದ್ದೇವೆ. ಅಲ್ಲದೆ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಹೆಚ್ಚು ಪ್ರಾತಿನಿಧ್ಯ ನೀಡುವುದರಿಂದ ವಿಶ್ವಸಂಸ್ಥೆಯು ಜಾಗತಿಕ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು. ಚೀನಾ ಮತ್ತು ರಷ್ಯಾಗಳು ಈಗಾಗಲೇ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಬ್ರೆಜಿಲ್, ಭಾರತ ಮತ್ತು ದಕ್ಷಿಣ ಆಫ್ರಿಕಾಗಳಿಗಿರುವ ಪಾತ್ರದ ಬಗ್ಗೆ ಮತ್ತೆಮತ್ತೆ ಹೇಳುತ್ತಲೇ ಇದ್ದು, ವಿಶ್ವಸಂಸ್ಥೆಯಲ್ಲಿ ತಾವು ಮಹತ್ತ್ವದ ಪಾತ್ರವನ್ನು ವಹಿಸಬೇಕೆಂಬ ಈ ರಾಷ್ಟ್ರಗಳ ಆಕಾಂಕ್ಷೆಗೆ ಬೆಂಬಲ ವ್ಯಕ್ತಪಡಿಸಿವೆ.
18. ತನ್ನ ಕಾರ್ಯಕ್ರಮಗಳನ್ನು ಮತ್ತಷ್ಟು ಪರಿಣಾಮಕಾರಿಯನ್ನಾಗಿಯೂ ಸಮರ್ಥವನ್ನಾಗಿಯೂ ಮಾಡುವ ನಿಟ್ಟಿನಲ್ಲಿ ವಿಶ್ವಸಂಸ್ಥೆಯು ಇದುವರೆಗೂ ಕೈಗೊಂಡಿರುವ ಅರ್ಥಪೂರ್ಣ ಪ್ರಯತ್ನಗಳನ್ನು ನಾವು ಮನಗಂಡಿದ್ದೇವೆ. ಈ ಸಂಸ್ಥೆಯನ್ನು ಆಡಳಿತ ಮತ್ತು ಅದರ ಆಯವ್ಯಯದ ದೃಷ್ಟಿಯಿಂದ ಮತ್ತಷ್ಟು ಬಲಪಡಿಸಲು ಮತ್ತು ಇದರ ಸದಸ್ಯ ರಾಷ್ಟ್ರಗಳ ಹಿತವನ್ನು ಕಾಪಾಡಲು ಬ್ರಿಕ್ಸ್ ಒಕ್ಕೂಟದ ರಾಷ್ಟ್ರಗಳ ನಡುವೆ ಮತ್ತಷ್ಟು ಹೆಚ್ಚಿನ ಸಹಭಾಗಿತ್ವವನ್ನು ನಾವು ಪ್ರೋತ್ಸಾಹಿಸುತ್ತೇವೆ.
19. ತಮ್ಮ ಪರಸ್ಪರ ಹಿತಾಸಕ್ತಿಗಳು ಅಡಗಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಮತ್ತು ತಾವು ಹೊಂದಿರುವ ಬಹುಪಕ್ಷೀಯ ಕಾರ್ಯಕ್ರಮಗಳಿಗೆ ಸಂಬಂಧಿಸಿದಂತೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರದ ಮುಂದುವರಿಕೆಗೆ ನಾವು ಬೆಂಬಲ ನೀಡುತ್ತೇವೆ.
20. ಇನ್ನು 12 ವರ್ಷಗಳಲ್ಲಿ, ಅಂದರೆ 2030ನೇ ಇಸವಿಯ ಹೊತ್ತಿಗೆ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸುವ ಮೂಲಕ ಜಗತ್ತಿನೆಲ್ಲೆಡೆ ಬಡತನವನ್ನು ನಿರ್ಮೂಲ ಮಾಡಬೇಕೆಂಬ ಗುರಿಯನ್ನು ಈಡೇರಿಸಲು ಮತ್ತು ಈ ಮೂಲಕ ಸಮಾನತೆಯಿಂದ ಕೂಡಿದ, ಸಮಸ್ತರನ್ನೂ ಒಳಗೊಂಡಂತಹ, ಮುಕ್ತವಾದ ಮತ್ತು ಸಂಶೋಧನೆಯನ್ನು ಆಧರಿಸಿದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ನಾವು ಬದ್ಧರಾಗಿದ್ದೇವೆ. ಇದು ಸಮತೋಲನದಿಂದ ಕೂಡಿದ ಆರ್ಥಿಕ, ಸಾಮಾಜಿಕ ಮತ್ತು ಪಾರಿಸರಿಕ ಆಯಾಮಗಳನ್ನು ಒಳಗೊಂಡಿರುತ್ತದೆ. ಜೊತೆಗೆ, 2030ರ ಹೊತ್ತಿಗೆ ಸಾಧಿಸಬೇಕೆಂದುಕೊಂಡಿರುವ ಈ ಗುರಿಯ ಸಾಕಾರಕ್ಕೆ ಅಗತ್ಯವಾದ ಸಮನ್ವಯದ ಮತ್ತು ಅನುಷ್ಠಾನದ ಪರಾಮರ್ಶೆಯ ನಿಗಾ ಹೊತ್ತಿರುವ ವಿಶ್ವಸಂಸ್ಥೆಯು ಹೊತ್ತಿರುವ ಹೊಣೆಗಾರಿಕೆಗೆ ಮತ್ತು ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿದ ಉನ್ನತ ಮಟ್ಟದ ರಾಜಕೀಯ ವೇದಿಕೆ (ಹೈ ಲೆವೆಲ್ ಪೊಲಿಟಿಕಲ್ ಫೋರಂ- ಎಚ್ಎಲ್ ಪಿಎಫ್)ಗೆ ಕೂಡ ನಮ್ಮಬೆಂಬಲವಿದೆ. ವಿಶ್ವಸಂಸ್ಥೆಯ ಅಭಿವೃದ್ಧಿ ವ್ಯವಸ್ಥೆಯನ್ನು ಸದಸ್ಯ ರಾಷ್ಟ್ರಗಳಿಗೆ ತಾನು ವಿಸ್ತಾರವಾಗಿ ನೀಡುವಂತೆ ಸುಧಾರಿಸುವುದು 2030ರ ಕಾರ್ಯಸೂಚಿಯ ಉದ್ದೇಶವಾಗಿದೆ. ಹಾಗೆಯೇ, ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಹೆಚ್ಚುವರಿ ಸಂಪನ್ಮೂಲವನ್ನು ಕಾಲಮಿತಿಯೊಳಗೆ ಮತ್ತು ಪೂರ್ಣ ಪ್ರಮಾಣದಲ್ಲಿ ಕೊಡುವ ಆಶಯವುಳ್ಳ `ಅಧಿಕೃತ ಅಭಿವೃದ್ಧಿ ಸಹಾಯ'ವನ್ನು ಪ್ರಾಮಾಣಿಕವಾಗಿ ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ.
21. ಹವಾಮಾನ ಬದಲಾವಣೆಯ ಸಮಸ್ಯೆಗೆ ಸಂಬಂಧಿಸಿದಂತೆ ಹೇಳುವುದಾದರೆ, `ಪ್ಯಾರಿಸ್ ಒಪ್ಪಂದ'ದ ಅಡಿಯಲ್ಲಿ ಕೈಗೆತ್ತಿಕೊಳ್ಳಬೇಕಾದ ಕಾರ್ಯಕ್ರಮಗಳನ್ನು ಆಖೈರುಗೊಳಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಜೊತೆಗೆ, ವಿಶ್ವಸಂಸ್ಥೆಯ `ಹವಾಮಾನ ಬದಲಾವಣೆಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕಾರ್ಯಸೂಚಿ ಸಮಾವೇಶ'ದಲ್ಲಿ ಇದಕ್ಕೆ ಸಂಬಂಧಿಸಿದ ಮಾತುಕತೆಗಳನ್ನು 2018ರ ಡಿಸೆಂಬರ್ ತಿಂಗಳಿನಲ್ಲಿ ಪೋಲೆಂಡ್ನ ಕ್ಯಾಟೋವೈಸ್ ನಲ್ಲಿ ನಡೆಯಲಿರುವ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ 24ನೇ ಸಮಾವೇಶದಲ್ಲಿ ಪೂರ್ಣಗೊಳಿಸಲು ಅಗತ್ಯವಾದ ರಚನಾತ್ಮಕವಾಗಿ ಪ್ರಯತ್ನಿಸಬೇಕು ಎನ್ನುವುದಕ್ಕೆ ನಮ್ಮ ಒಪ್ಪಿಗೆಯಿದೆ. ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಸಮಾವೇಶದಲ್ಲಿ ಕೈಗೊಂಡ ನಿರ್ಣಯಗಳಿಗೆ ಅನುಸಾರವಾಗಿ ಎಲ್ಲ ದೇಶಗಳೂ `ಪ್ಯಾರಿಸ್ ಒಪ್ಪಂದ'ವನ್ನು ಜಾರಿಗೊಳಿಸುವಂತೆ ನಾವು ಕರೆ ನೀಡುತ್ತಿದ್ದೇವೆ. ಅಲ್ಲದೆ, ಈಗಾಗಲೇ ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳು ಇನ್ನೂ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಆರ್ಥಿಕ, ತಾಂತ್ರಿಕ ಮತ್ತು ಇತರ ಸೌಲಭ್ಯಗಳನ್ನು ದಕ್ಕಿಸಿಕೊಳ್ಳಲು ಬೇಕಾದ ನೆರವನ್ನು ನೀಡಬೇಕೆಂದು ನಾವು ಆಗ್ರಹಿಸುತ್ತೇವೆ.
22. ಜಾಗತಿಕ ಮಟ್ಟದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಬೇಕೆನ್ನುವ ಗುರಿಗೆ, ಸಮತೋಲನದಿಂದ ಕೂಡಿದ ಆರ್ಥಿಕ ಅಭಿವೃದ್ಧಿಯನ್ನು ಸಾಧಿಸುವುದಕ್ಕೆ ಮತ್ತು ಸಾಮೂಹಿಕವಾಗಿ ನಮ್ಮ ಜನರ ಸಾಮಾಜಿಕ-ಆರ್ಥಿಕ ಕ್ಷೇಮಕ್ಕೆ ಅನುವು ಮಾಡಿಕೊಡುವಂತಹ, ಪರಿಸರಕ್ಕೆ ಪೂರಕವಾದ ಸುಸ್ಥಿರ ಇಂಧನ ಮಾದರಿಗಳನ್ನು ಅಭಿವೃದ್ಧಿಪಡಿಸಲು ಬ್ರಿಕ್ಸ್ ರಾಷ್ಟ್ರಗಳ ನಡುವೆ ಇರುವ ಸಹಕಾರವನ್ನು ನಾವು ಮತ್ತಷ್ಟು ಬಲಪಡಿಸಲಿದ್ದೇವೆ. ಜಾಗತಿಕ ಮಟ್ಟದಲ್ಲಿ ಇಂಧನಗಳ ಬಳಕೆಗೆ ಸುಲಭ ಅವಕಾಶ, ಇಂಧನ ಭದ್ರತೆ, ಇಂಧನಗಳು ಎಲ್ಲರ ಕೈಗೂ ಎಟುಕುವಂತೆ ಮಾಡುವುದು, ಮಾಲಿನ್ಯವನ್ನು ಕಡಿಮೆ ಮಾಡುವುದು ಮತ್ತು ಪರಿಸರವನ್ನು ಸಂರಕ್ಷಿಸುವುದು- ಇವೆಲ್ಲವನ್ನೂ ಸಾಧಿಸಲು ನಾವು ಪ್ರಯತ್ನಿಸಲಿದ್ದೇವೆ. ಮರುಬಳಕೆ ಮಾಡಬಹುದಾದ ಮತ್ತು ಆದಷ್ಟೂ ಕಡಿಮೆ ಇಂಗಾಲವಿರುವ ಇಂಧನಮೂಲಗಳು ಸೇರಿದಂತೆ ವೈವಿಧ್ಯಮಯ ಇಂಧನಮೂಲಗಳು, ಇಂಧನ ಮತ್ತು ಇಂಧನ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮೂಲಸೌಲಭ್ಯಗಳ ಅಭಿವೃದ್ಧಿ, ಇಂಧನೋದ್ಯಮ, ಮಾರುಕಟ್ಟೆ ಅಭಿವೃದ್ಧಿ ಮತ್ತು ಬ್ರಿಕ್ಸ್ ರಾಷ್ಟ್ರಗಳ ನಡುವೆ ಇರುವ ಸಹಭಾಗಿತ್ವದ ಮೂಲಕ ಪ್ರಾಥಮಿಕ ಇಂಧನ ಮೂಲಗಳು ಎಲ್ಲರಿಗೂ ಸುಲಭವಾಗಿ ಸಿಗುವಂತೆ ಮಾಡಬೇಕೆನ್ನುವ ತತ್ತ್ತವು ನಮ್ಮ ಇಂಧನ ಭದ್ರತೆಯ ಪ್ರಧಾನ ಅಂಶವಾಗಿ ಮುಂದುವರಿಯಲಿದೆ. ಇಂಧನ ಸಾಗಣೆ ಮತ್ತು ಉದ್ಯಮಗಳಲ್ಲಿ ಇಂಧನ ಬಳಕೆಯೂ ಸೇರಿದಂತೆ ಈಗ ಇರುವ ಸಂಕ್ರಮಣ ಸ್ಥಿತಿಗೆ ಕ್ಷಿಪ್ರಗತಿಯನ್ನು ಒದಗಿಸಬೇಕಾದ ಅಗತ್ಯವಿದೆ ಎನ್ನುವುದನ್ನು ನಾವು ಗುರುತಿಸಿದ್ದೇವೆ.
23. ಇಂಧನ ಸುರಕ್ಷತೆ, ಔದ್ಯಮಿಕ ಸ್ಪರ್ಧಾತ್ಮಕತೆ, ಮಾಲಿನ್ಯದಲ್ಲಿ ಇಳಿಕೆ, ಆರ್ಥಿಕ ಬೆಳವಣಿಗೆ, ಉದ್ಯೋಗಸೃಷ್ಟಿ ಮತ್ತು ಇತರ ಅಂಶಗಳನ್ನು ಸಾಕಾರಗೊಳಿಸಬೇಕೆಂದರೆ ಇಂಧನ ದಕ್ಷತೆ ಮತ್ತು ಇಂಧನ ದಕ್ಷತೆಯಿಂದ ಕೂಡಿರುವ ಜೀವನಶೈಲಿಯನ್ನು ಜನಪ್ರಿಯಗೊಳಿಸಬೇಕಾದ್ದು ತುಂಬಾ ಮುಖ್ಯವೆನ್ನುವುದನ್ನು ನಾವು ಒಪ್ಪುತ್ತೇವೆ.
24. ಬ್ರಿಕ್ಸ್ ಒಕ್ಕೂಟದಲ್ಲಿರುವ ರಾಷ್ಟ್ರಗಳ ಇಂಧನ ಸಚಿವರೆಲ್ಲರೂ `ಬ್ರಿಕ್ಸ್ ಇಂಧನ ಸಂಶೋಧನಾ ಸಹಕಾರ ವೇದಿಕೆ'ಯನ್ನು ಸ್ಥಾಪಿಸಲು ಒಪ್ಪಿದ್ದಾರೆಂದೂ, ಇದಕ್ಕಾಗಿ ಅಗತ್ಯವಿರುವ ನೀತಿ-ನಿಯಮಾವಳಿಗಳನ್ನು ಅವರು ರೂಪಿಸಲಿದ್ದಾರೆಂದೂ, ಜತೆಗೆ ಇಲ್ಲಿ ಈ ಸಂಬಂಧವಾಗಿ ನಡೆಯುತ್ತಿರುವ ಚರ್ಚೆಗಳನ್ನು ಅವರು ಗಮನಿಸಲಿದ್ದಾರೆಂದೂ ನಾವು ಹೇಳುತ್ತಿದ್ದೇವೆ.
25. ಭಾರತವು 2016ರಲ್ಲಿ ಪ್ರಸ್ತಾಪಿಸಿದ `ಬ್ರಿಕ್ಸ್ ಕೃಷಿ ಸಂಶೋಧನಾ ಸಂಸ್ಥೆ' (ಎಆರ್ ಪಿ)ಯನ್ನು ಸ್ಥಾಪಿಸುವುದಕ್ಕೆ ನಮ್ಮ ಬೆಂಬಲವಿದೆ ಎಂದು ನಾವು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ. ಜಾಗತಿಕ ಸುಸ್ಥಿರತೆ ಮತ್ತು ಸ್ಪರ್ಧಾತ್ಮಕತೆಗಳಿಗೆ ಸಂಬಂಧಿಸಿದಂತೆ ಸಂಶೋಧನೆ, ಅಭಿವೃದ್ಧಿ ಮತ್ತು ಅನ್ವೇಷಣೆಗಳಿಗೆ ಎಷ್ಟೊಂದು ಮಹತ್ತ್ವವಿದೆ ಎನ್ನುವುದನ್ನು ನಾವು ಮನಗಂಡಿದ್ದೇವೆ. ಹವಾಮಾನ ಬದಲಾವಣೆಯಂತಹ ಸಮಸ್ಯೆ ನಮ್ಮೆದುರು ಇರುವಾಗ, ಸಾಮುದಾಯಿಕ ಕೃಷಿ ಮತ್ತು ಆಹಾರ ಪದ್ಧತಿಗಳನ್ನು ಸ್ಥಿರವಾಗಿ ಇಟ್ಟುಕೊಳ್ಳುವುದಕ್ಕಾಗಿ ಬ್ರಿಕ್ಸ್ ರಾಷ್ಟ್ರಗಳ ನಡುವೆ ಕೃಷಿ ಸಂಶೋಧನೆಗೆ ಸಂಬಂಧಿಸಿದಂತೆ ಸಹಭಾಗಿತ್ವವನ್ನು ಬಲಪಡಿಸಲು ನಾವು ಬದ್ಧರಾಗಿದ್ದೇವೆ. ಹೀಗಾಗಿ, ಕೃಷಿ ಸಂಶೋಧನಾ ಸಂಸ್ಥೆಯ ಗುರಿಗಳನ್ನು ಮತ್ತು ಉದ್ದೇಶಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯವಾದ ಅನುಸರಣಾ ಕಾರ್ಯದ ಅಗತ್ಯ ಎಷ್ಟೆಂಬುದನ್ನು ನಾವು ಅರಿತಿದ್ದೇವೆ. ಕೃಷಿ ಸಂಶೋಧನಾ ಸಂಸ್ಥೆ ಮತ್ತು ಪ್ರಾಥಮಿಕ ಕೃಷಿ ಮಾಹಿತಿ ವಿನಿಮಯ ವ್ಯವಸ್ಥೆಯ ಚೌಕಟ್ಟಿನಲ್ಲೇ ಬ್ರಿಕ್ಸ್ ರಾಷ್ಟ್ರಗಳ ನಡುವೆ ಪರಸ್ಪರ ಸಹಭಾಗಿತ್ವವವನ್ನು ಮತ್ತಷ್ಟು ಹೆಚ್ಚಿಸಲು ನಾವು ಬದ್ಧರಾಗಿದ್ದೇವೆ.
26. `ಸುಸ್ಥಿರ ಬಳಕೆ ಮತ್ತು ಉತ್ಪಾದನೆಯ ಹಿನ್ನೆಲೆಯಲ್ಲಿ ಅನ್ಯೋನ್ಯಾಶ್ರಯವಿರುವ ಆರ್ಥಿಕ ವ್ಯವಸ್ಥೆಗೆ ಸಂಬಂಧಿಸಿದಂತೆ ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಹಕಾರ ವರ್ಧನೆ' ಎನ್ನುವ ಧ್ಯೇಯದೊಂದಿಗೆ ನಡೆದ ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ 4ನೇ ಸಮಾವೇಶದ ಫಲಿತಾಂಶಗಳು ಸಕಾರಾತ್ಮಕವಾಗಿವೆ ಎನ್ನುವುದನ್ನು ನಾವು ಸಮ್ಮತಿಸುತ್ತೇವೆ. ಅನ್ಯೋನ್ಯಾಶ್ರಯದ ಆಶಯವುಳ್ಳ ಆರ್ಥಿಕ ವ್ಯವಸ್ಥೆಯಿಂದ ತ್ಯಾಜ್ಯದ ಉತ್ಪತ್ತಿಯನ್ನು ಕಡಿಮೆ ಮಾಡುವುದು, ಪರಿಸರದ ದೃಷ್ಟಿಯಿಂದ ಹೆಚ್ಚು ಸುಸ್ಥಿರವಾದ ಪ್ರಕ್ರಿಯೆಗಳನ್ನು ಕೈಗೆತ್ತಿಕೊಳ್ಳುವುದು, ನಮ್ಮ ಆರ್ಥಿಕ ವ್ಯವಸ್ಥೆಗಳಲ್ಲಿ ವೈವಿಧ್ಯವನ್ನು ತರುವುದು ಮತ್ತು ಇದರ ಜತೆಗೆ ಆರ್ಥಿಕ ಬೆಳವಣಿಗೆ ಹಾಗೂ ಉದ್ಯೋಗ ಸೃಷ್ಟಿಗೆ ಗಮನಾರ್ಹ ಕೊಡುಗೆ ನೀಡುವುದು ಸಾಧ್ಯವಿದೆ.
27. ಪರಿಸರಸ್ನೇಹಿ ತಂತ್ರಜ್ಞಾನ ವೇದಿಕೆ, ನದಿಗಳ ಸ್ವಚ್ಛತೆ ಯೋಜನೆ ಮತ್ತು ನಗರ ಪರಿಸರ ಸುಸ್ಥಿರತಾ ಉಪಕ್ರಮಗಳು ಸೇರಿದಂತೆ ಹಲವು ಫಲಿತಾಂಶಗಳು ನಾವು ಪ್ರತೀವರ್ಷವೂ ನಡೆಸುತ್ತಿರುವ ಬ್ರಿಕ್ಸ್ ರಾಷ್ಟ್ರಗಳ ಪರಿಸರ ಸಚಿವರ ಸಮಾವೇಶಗಳಿಂದ ಸಿಕ್ಕಿವೆ. ಹಾಗೆಯೇ, `ಬ್ರಿಕ್ಸ್ ಪರಿಸರಸ್ನೇಹಿ ತಂತ್ರಜ್ಞಾನ ಸಹಕಾರ ವೇದಿಕೆ'ಯ ರಚನೆಯ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನೂ ನಾವು ಗಮನಿಸಿದ್ದೇವೆ. ಈ ವೇದಿಕೆಯು ಪ್ರಾಯೋಗಿಕ ಮತ್ತು ಫಲಿತಾಂಶ ಕೇಂದ್ರಿತವಾಗಿದೆ. ಜತೆಗೆ ಇದು ಸೂಕ್ತ ಸಹಭಾಗಿಗಳನ್ನು, ವೈಜ್ಞಾನಿಕ ಸಂಸ್ಥೆಗಳನ್ನು, ನಾಗರಿಕ ಸಮಾಜವನ್ನು, ಖಾಸಗಿ ವಲಯವನ್ನು ಮತ್ತು ಆರ್ಥಿಕ ಸಂಸ್ಥೆಗಳನ್ನು ಒಳಗೊಳ್ಳಲಿದೆ.
28. ಜಲಸಂಪನ್ಮೂಲಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಸುಸ್ಥಿರ ಅಭಿವೃದ್ಧಿ ತತ್ತ್ವವನ್ನು ಆಧರಿಸಿ, ಸಹಕಾರವನ್ನು ವಿಸ್ತರಿಸುವ ಆಶಯದೆಡೆಗಿನ ಬದ್ಧತೆಯನ್ನು ನಾವು ಸ್ವಾಗತಿಸುತ್ತೇವೆ. ಇದು ಪ್ರವಾಹದಿಂದ ಸಂರಕ್ಷಣೆ, ಬರ ನಿರ್ವಹಣೆ, ನೀರು ಪೂರೈಕೆ ಮತ್ತು ನೈರ್ಮಲ್ಯ, ನೀರು ಮತ್ತು ಹವಾಮಾನ, ಅತ್ಯಂತ ವ್ಯವಸ್ಥಿತ ರೀತಿಯಲ್ಲಿ ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ, ನದಿ ಮತ್ತು ಸರೋವರಗಳ ಪಾರಿಸರಿಕ ವ್ಯವಸ್ಥೆಯ ಪುನರುಜ್ಜೀವನ ಹಾಗೂ ಸಂರಕ್ಷಣೆ ಮತ್ತು ಜಲಸಂಪನ್ಮೂಲಗಳ ನಿರ್ವಹಣೆಯ ವಿಚಾರಗಳನ್ನು ಒಳಗೊಂಡಿದೆ.
29. ಬಫೆಲೋ ನಗರದಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಪ್ರಕೃತಿ ವಿಕೋಪ ನಿರ್ವಹಣಾ ಮುಖ್ಯಸ್ಥರ ಸಭೆಯನ್ನು ನಾವು ಸ್ಮರಿಸುತ್ತೇವೆ. ಈ ಸಭೆಯಲ್ಲಿ 2018-2020ರ ಅವಧಿಯ ಕ್ರಿಯಾ ಯೋಜನೆಯನ್ನು ಅಂಗೀಕರಿಸಲಾಗಿದೆ. ಅಲ್ಲದೆ, ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮತ್ತಷ್ಟು ಸಹಕಾರವರ್ಧನೆಗೆ `ಬ್ರಿಕ್ಸ್ ರಾಷ್ಟ್ರಗಳ ಜಂಟಿ ಕಾರ್ಯಪಡೆ'ಯ ಮೊದಲ ಸಭೆಯೂ ನಡೆದಿದೆ.
30. ಜೀವವೈವಿಧ್ಯ ಸಂರಕ್ಷಣೆ, ಸಹಭಾಗಿತ್ವದ ತತ್ತ್ವದಡಿ ಪರಸ್ಪರ ಪ್ರಯೋಜನಕಾರಿಯಾದ ನೆಲೆಯಲ್ಲಿ ಜೈವಿಕ ಸಂಪನ್ಮೂಲಗಳ ಸುಸ್ಥಿರ ಬಳಕೆ ಮತ್ತು ಬಳಕೆಗೆ ಸಮಾನ ಅವಕಾಶ, ಜೀವವೈವಿಧ್ಯಕ್ಕೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮಾವೇಶಗಳಲ್ಲಿ ಪರಸ್ಪರ ಸಹಕಾರ, ಅಳಿವಿನ ಅಂಚಿನಲ್ಲಿರುವ ಜೀವಿಗಳು ಹಾಗೂ ನಮ್ಮನಮ್ಮ ರಾಷ್ಟ್ರೀಯ ಉದ್ಯಾನ ಪ್ರಾಧಿಕಾರಗಳ ಸಂರಕ್ಷಣೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳು ಮತ್ತಷ್ಟು ಸಹಕಾರವನ್ನು ಸ್ಥಾಪಿಸಿಕೊಳ್ಳಲು ಬದ್ಧವಾಗಿವೆ.
31. ಬ್ರಿಕ್ಸ್ ರಾಷ್ಟ್ರಗಳು `ಸಾಗರಾಧಾರಿತ ಆರ್ಥಿಕತೆ'ಯ ಕ್ಷೇತ್ರದಲ್ಲಿ ಸಹಕಾರ ಮತ್ತು ಸಹಭಾಗಿತ್ವವನ್ನು ಹೊಂದುವುದರಿಂದ ಬೆಳವಣಿಗೆ ಮತ್ತು ಅಭಿವೃದ್ಧಿಯ ಅಗಾಧ ಸಾಧ್ಯತೆ ಇದೆ ಎನ್ನುವುದನ್ನು ನಾವು ಮನಗಂಡಿದ್ದೇವೆ. ಈ ಬಗೆಯ ಸಹಕಾರವು ನೌಕಾಯಾನ, ಹಡಗು ನಿರ್ಮಾಣ, ಕಡಲಾಚೆಗೂ ತೈಲ ಸಂಶೋಧನೆ, ಜಲಕೃಷಿ, ಬಂದರುಗಳ ಅಭಿವೃದ್ಧಿ, ಸಂಶೋಧನೆ ಮತ್ತು ತಂತ್ರಜ್ಞಾನ, ಸಾಗರ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ, ಸಾಗರ ಮತ್ತು ಕರಾವಳಿ ಪ್ರವಾಸೋದ್ಯಮ, ಆರ್ಥಿಕ ಮತ್ತು ವಿಮಾ ಸೇವೆಗಳು, ಹಾಗೂ ಕರಾವಳಿ ಉದ್ಯಮ ವಲಯದ ಅಭಿವೃದ್ಧಿಗೆ ದಾರಿ ಮಾಡಿಕೊಡಲಿದೆ.
32. ಬ್ರಿಕ್ಸ್ ರಾಷ್ಟ್ರಗಳು ಜನಸಂಖ್ಯೆಯ ನಿರ್ವಹಣೆಗೆ ಸಂಬಂಧಿಸಿದಂತೆ 2015-2020ರ ನಡುವೆ ಕೈಗೊಳ್ಳಬೇಕಾದ ಕ್ರಮಗಳಿಗೆ ಸಂಬಂಧಿಸಿದಂತೆ ಅಂಗೀಕರಿಸಿರುವ ಕಾರ್ಯಸೂಚಿಗೆ ನಾವು ಹಿಂದಿನಂತೆಯೇ ಈಗಲೂ ಬದ್ಧರಾಗಿದ್ದೇವೆ. ಇದಕ್ಕೆ, ಬ್ರಿಕ್ಸ್ ರಾಷ್ಟ್ರಗಳ ಸಂಬಂಧಿತ ಸಚಿವರುಗಳು 2014ರಲ್ಲೇ ಒಪ್ಪಿಗೆ ನೀಡಿದ್ದಾರೆ. ಏಕೆಂದರೆ, ಬ್ರಿಕ್ಸ್ ರಾಷ್ಟ್ರಗಳಲ್ಲಿ ಜನಸಂಖ್ಯೆಯ ವಯೋಮಾನ ಸಂರಚನೆಯು ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಭಿನ್ನವಾಗಿದ್ದು, ಇದು ನಮಗೆ ಲಭ್ಯವಾಗುವ ಅವಕಾಶಗಳ ದೃಷ್ಟಿಯಿಂದ ಸವಾಲಾಗಿ ಪರಿಣಮಿಸಿದೆ. ಅದರಲ್ಲೂ ಲಿಂಗ ಅಸಮಾನತೆ ಮತ್ತು ಮಹಿಳೆಯರ ಹಕ್ಕುಗಳು, ಯುವಜನ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ಭವಿಷ್ಯದ ಕೆಲಸ, ನಗರೀಕರಣ, ವಲಸೆ ಮತ್ತು ವೃದ್ಧಾಪ್ಯ ಇವುಗಳ ದೃಷ್ಟಿಯಿಂದ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ.
33. ಕೆಲವು ಬ್ರಿಕ್ಸ್ ರಾಷ್ಟ್ರಗಳು ಸೇರಿದಂತೆ ಜಗತ್ತಿನ ನಾನಾ ಭಾಗಗಳಲ್ಲಿ ನಡೆಯುತ್ತಿರುವ ಭಯೋತ್ಪಾದನಾ ಚಟುವಟಿಕೆಗಳನ್ನು ನಾವು ಖಂಡಿಸುತ್ತೇವೆ. ಭಯೋತ್ಪಾದನೆಯು ಯಾವುದೇ ರೂಪದಲ್ಲಿರಲಿ ಅಥವಾ ಅದು ಯಾವುದೇ ಕಾರ್ಯಸೂಚಿಯನ್ನು ಹೊಂದಿರಲಿ, ಅಥವಾ ಅದು ಎಲ್ಲೇ ಸಂಭವಿಸಲಿ ಮತ್ತು ಅದನ್ನು ಯಾರೇ ಕೈಗೊಳ್ಳಲಿ, ಅದನ್ನು ನಾವು ಬಿಲ್ಕುಲ್ ಒಪ್ಪುವುದಿಲ್ಲ. ಆದ್ದರಿಂದ ಭಯೋತ್ಪಾದನೆಯನ್ನು ನಿಗ್ರಹಿಸಲು ವಿಶ್ವಸಂಸ್ಥೆಯು ಒಪ್ಪಿರುವ ಅಂತಾರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಗಟ್ಟಿಯಾದ ಪ್ರಯತ್ನಗಳನ್ನು ಕೈಗೊಳ್ಳಬೇಕೆಂದು ಮತ್ತು ಈ ಬಗೆಯ ಬದ್ಧತೆ ಅತ್ಯಗತ್ಯವಾಗಿದೆಯೆಂದು ನಾವು ಆಗ್ರಹಿಸುತ್ತೇವೆ. ಜೊತೆಗೆ, ಯಾವೊಂದು ರಾಷ್ಟ್ರವೂ ಭಯೋತ್ಪಾದಕರ ಜಾಲಕ್ಕಾಗಲಿ, ಭಯೋತ್ಪಾದನಾ ಚಟುವಟಿಕೆಗಳಿಗಾಗಲಿ ಆರ್ಥಿಕ ನೆರವನ್ನು ನೀಡದೆ, ಜವಾಬ್ದಾರಿಯಿಂದ ವರ್ತಿಸಬೇಕು ಎಂದು ನಾವು ಮತ್ತೊಮ್ಮೆ ಹೇಳುತ್ತಿದ್ದೇವೆ.
34. ಭಯೋತ್ಪಾದನೆಯ ಪಿಡುಗನ್ನು ನಿರ್ಮೂಲ ಮಾಡಲು ಅಂತಾರಾಷ್ಟ್ರೀಯ ಸಮುದಾಯವು ಒಂದು ಮೈತ್ರಿ ಕೂಟವನ್ನು ಸ್ಥಾಪಿಸಿಕೊಳ್ಳಬೇಕೆಂದು ಮತ್ತು ಇದಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ವಹಿಸಲಿರುವ ಪ್ರಧಾನ ಸಮನ್ವಯಕಾರನ ಪಾತ್ರವನ್ನು ಬೆಂಬಲಿಸಬೇಕೆಂದು ನಾವು ಕರೆ ಕೊಡುತ್ತಿದ್ದೇವೆ. ಭಯೋತ್ಪಾದನೆಯ ವಿರುದ್ಧದ ಈ ಹೋರಾಟವು ಅಂತಾರಾಷ್ಟ್ರೀಯ ಕಾನೂನು, ವಿಶ್ವಸಂಸ್ಥೆಯ ನಿಯಮಗಳು, ನಿರಾಶ್ರಿತರಿಗೆ ಸಂಬಂಧಿಸಿದ ಮತ್ತು ಮಾನವೀಯ ನೆಲೆಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಕಾನೂನುಗಳು, ಮಾನವ ಹಕ್ಕುಗಳು ಮತ್ತು ಮೂಲಭೂತ ಹಕ್ಕುಗಳಿಗೆ ಅನುಗುಣವಾಗಿ ಇರಬೇಕೆಂಬುದು ನಮ್ಮ ಆಗ್ರಹವಾಗಿದೆ. ಭಯೋತ್ಪಾದನೆಯ ನಿರ್ಮೂಲಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯು ರೂಪಿಸಿರುವ ಕಾರ್ಯಕ್ರಮಕ್ಕೆ ಸದಸ್ಯ ರಾಷ್ಟ್ರಗಳೆಲ್ಲವೂ ಪರಸ್ಪರ ಸಹಕಾರ ನೀಡಬೇಕು ಮತ್ತು ಹೊಂದಾಣಿಕೆಯಿಂದ ಕೆಲಸ ಮಾಡಬೇಕು ಎನ್ನುವುದಕ್ಕೆ ನಾವು ಎಂದಿನಂತೆಯೇ ಬದ್ಧರಾಗಿದ್ದೇವೆ. ಅಂತಿಮವಾಗಿ, `ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಕುರಿತ ಸಮಗ್ರ ಶೃಂಗಸಭೆ'ಯನ್ನು ಆಖೈರುಗೊಳಿಸಿ, ಅದನ್ನು ವಿಶ್ವಸಂಸ್ಥೆಯ ಮಹಾಸಭೆಯು ಅಂಗೀಕರಿಸಿ, ಅಳವಡಿಸಿಕೊಳ್ಳಬೇಕು ಎಂದು ನಾವು ಕರೆ ಕೊಡುತ್ತಿದ್ದೇವೆ.
35. ರಾಸಾಯನಿಕ ಮತ್ತು ಜೈವಿಕ ಭಯೋತ್ಪಾದನೆಯ ಗಂಡಾಂತರ ಎದುರಿಸಲು ನಿಶಸ್ತ್ರೀಕರಣ ಕುರಿತಂತೆ ಸಮಾವೇಶ ನಡೆಸುವುದೂ ಸೇರಿದಂತೆ ಜೈವಿಕ ಮತ್ತು ರಾಸಾಯನಿಕ ಭಯೋತ್ಪಾದನಾ ಕೃತ್ಯಗಳ ನಿಗ್ರಹಕ್ಕೆ ಅಂತಾರಾಷ್ಟ್ರೀಯ ಒಪ್ಪಂದಕ್ಕೆ ಬಹುಹಂತದ ಸಮಾಲೋಚನೆಗಳನ್ನು ಆರಂಭಿಸಲು ನಾವು ಬೆಂಬಲಿಸುತ್ತೇವೆ ಮತ್ತು ಒತ್ತು ನೀಡುತ್ತೇವೆ.
36. ಯಾವ ಸಂಘಟನೆಗಳು ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತವೆಯೋ, ಸಂಘಟಿಸುತ್ತವೆಯೋ ಅಥವಾ ಬೆಂಬಲಿಸುತ್ತವೆಯೋ ಅಂತಹ ಸಂಘಟನೆಗಳನ್ನು ಹೊಣೆಗಾರರನ್ನಾಗಿ ಮಾಡಬೇಕೆಂಬುದರಲ್ಲಿ ನಮಗೆ ಬಲವಾದ ನಂಬಿಕೆ ಇದೆ. ಎಲ್ಲ ಬಗೆಯ ಭಯೋತ್ಪಾದನೆ, ಮೂಲಭೂತವಾದ, ಬಂಡುಕೋರರ ಸಮಸ್ಯೆ, ಭಯೋತ್ಪಾದಕರ ನೇಮಕ, ವಿದೇಶಿ ಉಗ್ರಗಾಮಿ ಹೋರಾಟಗಾರರ ಪ್ರಯಾಣ, ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವ ಮೂಲಗಳನ್ನು ಅಥವಾ ಸಂಪರ್ಕವನ್ನು ಕಡಿತಗೊಳಿಸುವುದು, ಉದಾಹರಣೆಗೆ ಸಂಘಟಿತ ಆರ್ಥಿಕ ಅಪರಾಧ ಮಾರ್ಗಗಳು, ಶಸ್ತ್ರಾಸ್ತ್ರಗಳ ಪೂರೈಕೆ, ಮಾದಕ ದ್ರವ್ಯಗಳ ಕಳ್ಳಸಾಗಾಣೆ, ಮತ್ತಿತರ ಅಪರಾಧಿಕ ಚಟುವಟಿಕೆಗಳು ಉಗ್ರರ ಮೂಲ ಶಿಬಿರಗಳ ನಾಶ, ಇತ್ತೀಚಿನ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿಎಸ್) ಮೂಲಕ ಉಗ್ರಗಾಮಿಗಳಿಂದ ಅಂತರ್ಜಾಲ ದುರ್ಬಳಕೆಯಾಗುವುದನ್ನು ತಡೆಯುವುದು ಸೇರಿದಂತೆ ಎಲ್ಲ ಬಗೆಯ ಕೃತ್ಯಗಳನ್ನು ಹತ್ತಿಕ್ಕಲು ಸಮಗ್ರ ಧೋರಣೆಯನ್ನು ಎಲ್ಲ ರಾಷ್ಟ್ರಗಳು ಅಳವಡಿಸಿಕೊಳ್ಳೇಕಾದ ಅಗತ್ಯವಿದೆ ಎಂದು ನಾವು ಕರೆ ನೀಡುತ್ತೇವೆ.
37. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ(ಐಸಿಟಿಎಸ್) ಬಳಕೆಯಲ್ಲಿ ಸುರಕ್ಷತೆಯನ್ನು ಖಾತ್ರಿಪಡಿಸಲು ವಿಶ್ವಸಂಸ್ಥೆಯಡಿ ರಾಷ್ಟ್ರಗಳಿಗೆ ನೀತಿ ನಿಯಮಗಳು ಮತ್ತು ಹೊಣೆಗಾರಿಕೆಯ ತತ್ವಗಳನ್ನು ನಿಗದಿಪಡಿಸುವ ಪ್ರಾಮುಖ್ಯತೆಯನ್ನು ನಾವು ಪುನರ್ ಪ್ರತಿಪಾದಿಸುತ್ತೇವೆ.
38. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ)ದಲ್ಲಾಗುತ್ತಿರುವ ಬದಲಾವಣೆಗಳು, ಅದರಲ್ಲೂ ವಿಶೇಷವಾಗಿ ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸಂದರ್ಭದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಅವಕಾಶಗಳು ಮತ್ತು ಲಭ್ಯವಾಗುತ್ತಿರುವ ಪ್ರಯೋಜನಗಳನ್ನು ಪಡೆದುಕೊಳ್ಳಬೇಕೆಂದು ನಾವು ಪ್ರತಿಪಾದಿಸುತ್ತೇವೆ. ಆದರೆ ಈ ಬೆಳವಣಿಗೆಗಳು ಹೊಸ ಸವಾಲುಗಳನ್ನು ಹಾಗೂ ಅಪಾಯಗಳನ್ನೂ ಸಹ ತಂದೊಡ್ಡುತ್ತಿದ್ದು, ಅಪರಾಧ ಚಟುವಟಿಕೆಗಳಿಗೆ ಐಸಿಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಹೆಚ್ಚುತ್ತಿದೆ. ದೇಶಗಳಲ್ಲಿ ಐಸಿಟಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ವಿಶ್ವಸಂಸ್ಥೆಯಿಂದಲೇ ಐಸಿಟಿಯನ್ನು ಅಪರಾಧಿಕ ಉದ್ದೇಶಕ್ಕಾಗಿ ಬಳಕೆ ಮಾಡುವುದನ್ನು ನಿಗ್ರಹಿಸಲು ಏಕರೂಪದ ನಿಯಂತ್ರಣ ವ್ಯವಸ್ಥೆಯನ್ನು ಅಭಿವೃದ್ಧಿಗೊಳಿಸುವ ಅಗತ್ಯತೆ ಇದೆ ಎಂದು ನಾವು ಪ್ರತಿಪಾದಿಸುತ್ತೇವೆ ಮತ್ತು ಉಗ್ರಗಾಮಿಗಳು ಹಾಗೂ ಅಪರಾಧಿಗಳು, ಐಸಿಟಿ ತಂತ್ರಜ್ಞಾನ ಬಳಕೆಯನ್ನು ತಪ್ಪಿಸಲು ಅಂತಾರಾಷ್ಟ್ರೀಯ ಸಹಕಾರ ಅತ್ಯಗತ್ಯ ಎಂಬುದು ನಮ್ಮ ಬಲವಾದ ಪ್ರತಿಪಾದನೆ. ಐಸಿಟಿ ಬಳಕೆಯಲ್ಲಿ ಸುರಕ್ಷತೆ ಮತ್ತು ಖಾತ್ರಿ ಒದಗಿಸುವುದು ಅಥವಾ ಇನ್ನಾವುದೇ ಪರಸ್ಪರ ಒಪ್ಪಿತ ಕಾರ್ಯತಂತ್ರದಡಿ ಬ್ರಿಕ್ಸ್ ಹಾಕಿಕೊಟ್ಟಿರುವ ಮಾರ್ಗಸೂಚಿ ಅನ್ವಯ ಸಹಕಾರ ಉತ್ತೇಜಿಸುವ ನಿಟ್ಟಿನಲ್ಲಿ ಪ್ರಗತಿ ಸಾಧಿಸಲಾಗಿದೆ ಎಂಬುದನ್ನು ನಾವು ಇಲ್ಲಿ ಗುರುತಿಸುತ್ತಿದ್ದೇವೆ. ಐಸಿಟಿ ಬಳಕೆಯಲ್ಲಿ ಸುರಕ್ಷತೆ ಕುರಿತಂತೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಹಕಾರದ ಒಪ್ಪಂದ ಸ್ಥಾಪನೆ ಅಗತ್ಯತೆಯನ್ನು ನಾವು ಮನಗಂಡಿದ್ದೇವೆ. ಆ ನಿಟ್ಟಿನಲ್ಲಿ ಬ್ರಿಕ್ಸ್ ಸದಸ್ಯ ರಾಷ್ಟ್ರಗಳು ಅಂತರ ಸರ್ಕಾರ ಒಪ್ಪಂದ ಸಹಕಾರದ ವಿಸ್ತರಣೆಗೆ ಮತ್ತು ಪರಿಶೀಲನೆ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕಿದೆ.
III ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕುರಿತಂತೆ ಬ್ರಿಕ್ಸ್ ನ ಸಹಕಾರ ಬಲವರ್ಧನೆ ಮತ್ತು ಒಗ್ಗೂಡುವಿಕೆ
39. ರಾಜಕೀಯ ಮತ್ತು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿವಾದ/ಬಿಕ್ಕಟ್ಟುಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಸಾಮೂಹಿಕ ಪ್ರಯತ್ನಗಳಿಗೆ ನಮ್ಮ ಬದ್ಧತೆಯಿದೆ ಎಂದು ನಾವು ಪುನರುಚ್ಚರಿಸುತ್ತಿದ್ದೇವೆ. ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ನಿರ್ವಹಣೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪ್ರಾಥಮಿಕ ಹೊಣೆಗಾರಿಕೆಯಾಗಿದೆ.
40. ಮಧ್ಯಪ್ರಾಚ್ಯ ಪ್ರಾಂತ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟು ಹಾಗೂ ಉದ್ವಿಗ್ನ ಪರಿಸ್ಥಿತಿಗಳ ಬಗ್ಗೆ ನಮಗೆ ಅತ್ಯಂತ ಕಳವಳವಿದೆ. ಯಾವುದೇ ಬಿಕ್ಕಟ್ಟುಗಳ ಶಮನಕ್ಕೆ ಪಡೆಗಳನ್ನು ಅಥವಾ ಬಾಹ್ಯ ಹಸ್ತಕ್ಷೇಪವನ್ನು ಮಾಡುವ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡಬಾರದು ಎಂಬುದು ನಮ್ಮ ಬದ್ಧತೆಯಾಗಿದೆ. ಅಂತಿಮವಾಗಿ ಸ್ವಾತಂತ್ರ್ಯ, ಭೌಗೋಳಿಕ ಐಕ್ಯತೆ, ಆಯಾ ಪ್ರಾಂತ್ಯದ ರಾಷ್ಟ್ರಗಳ ಸಾರ್ವಭೌಮತೆಗೆ ಗೌರವ ನೀಡುವ ಮೂಲಕ ಸಮಗ್ರ ಮತ್ತು ವಿಸ್ತೃತ ರಾಷ್ಟ್ರೀಯ ಸಮಾಲೋಚನೆಗಳಿಂದ ಶಾಂತಿಯನ್ನು ನೆಲೆಸುವಂತೆ ಮಾಡಬೇಕಿದೆ. ಈ ಪ್ರಾಂತ್ಯಗಳ ಎಲ್ಲ ದೇಶಗಳಲ್ಲೂ, ವಿಶೇಷವಾಗಿ ಇಸ್ರೇಲ್ – ಪ್ಯಾಲಿಸ್ತೇನ್ ಪರಿಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಹೇಳುವುದಾದರೆ ಪ್ರಜೆಗಳು ತಮ್ಮ ನಾಗರಿಕ, ರಾಜಕೀಯ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳು ಹಾಗೂ ಮೂಲಭೂತ ಹಕ್ಕುಗಳನ್ನು ಸಂಪೂರ್ಣವಾಗಿ ಅನುಭವಿಸುವಂತೆ ಮಾಡಬೇಕು ಎಂಬುದನ್ನು ನಾವು ಒಪ್ಪುತ್ತೇವೆ.
41. ಮಧ್ಯಪೂರ್ವ ಮತ್ತು ಉತ್ತರ ಆಫ್ರಿಕಾ ರಾಷ್ಟ್ರಗಳಲ್ಲಿನ ದೀರ್ಘಾವಧಿಯ ಬಿಕ್ಕಟ್ಟುಗಳು ವಿಶೇಷವಾಗಿ ಪ್ಯಾಲಿಸ್ತೇನ್, ಇಸ್ರೇಲ್ ಬಿಕ್ಕಟ್ಟುಗಳ ನಿವಾರಣೆಗೆ ನಿರ್ಣಯ ಕೈಗೊಳ್ಳುವಾಗ ವಿಳಂಬ ಮಾಡಬಾರದು ಎಂಬುದನ್ನು ನಾವು ಒಪ್ಪುತ್ತೇವೆ. ವಿಶ್ವಸಂಸ್ಥೆ ಕೈಗೊಂಡಿರುವ ನಿರ್ಣಯಗಳು, ಮ್ಯಾಡ್ರಿಡ್ ತತ್ವಗಳು ಹಾಗೂ ಅರಬ್ ಶಾಂತಿ ಪ್ರಕ್ರಿಯೆ ಮತ್ತು ಹಿಂದಿನ ಒಪ್ಪಂದಗಳ ಅನ್ವಯ ಇಸ್ರೇಲ್ – ಪ್ಯಾಲಿಸ್ತೇನ್ ಬಿಕ್ಕಟ್ಟು ಇತ್ಯರ್ಥಪಡಿಸಿ, ಆ ಮೂಲಕ ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ನೆಲೆಸುವಂತೆ ಮಾಡಲು ರಾಜತಾಂತ್ರಿಕ ಪ್ರಯತ್ನಗಳನ್ನು ಪುನರ್ ಪರಿಶೀಲಿಸುವ ಅಗತ್ಯವಿದೆ ಎಂದು ನಾವು ಪ್ರತಿಪಾದಿಸುತ್ತೇವೆ. ಸಂಧಾನಗಳ ಮೂಲಕ ಇಸ್ರೇಲ್ ನೊಂದಿಗೆ ಶಾಂತಿ ಮತ್ತು ಭದ್ರತೆಯ ವಿಷಯವನ್ನು ಪಕ್ಕಕ್ಕಿಟ್ಟು ಪ್ಯಾಲಿಸ್ತೇನ್ ನ ಭೌಗೋಳಿಕ, ಸ್ವತಂತ್ರ ಮತ್ತು ಸ್ವಾಯತ್ತತೆ ಕಾಪಾಡಲು ಅಗತ್ಯವಿರುವಂತ ವಾತಾವರಣ ಸೃಷ್ಟಿಸಬೇಕಾಗಿದೆ. ಇಸ್ರೇಲ್ ಮತ್ತು ಪ್ಯಾಲಿಸ್ತೇನ್ ನಡುವಿನ ಸಮಾಲೋಚನೆಗಳ ಸನ್ನಿವೇಶದಲ್ಲಿ ಜರುಸಲೇಂನ ಸ್ಥಾನಮಾನವೊಂದು ಅಂತಿಮ ವಿಷಯವಾಗಲಿದೆ ಎಂಬುದನ್ನು ನಾವು ಪ್ರತಿಪಾದಿಸುತ್ತೇವೆ. ಗಾಝಾ ಸ್ಥಿತಿಗತಿ ಕುರಿತಂತೆ ವಿಶ್ವಸಂಸ್ಥೆಯ ಸಮಾನ್ಯ ಸಭೆ ಕೈಗೊಂಡಿರುವ ನಿರ್ಣಯ(ಎ/ಆರ್ಇಎಸ್/ಇಎಸ್-10/20)ಅನ್ನು ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸಲು ಮತ್ತು ಪ್ಯಾಲಿಸ್ತೇನ್ ಜನರಿಗೆ ರಕ್ಷಣೆ ನೀಡಲು ನಾವು ಬೆಂಬಲ ನೀಡುತ್ತೇವೆ.
42. ಪ್ಯಾಲಿಸ್ತೇನ್ ನ ಪೂರ್ವ ಭಾಗದ ನಿರಾಶ್ರಿತರಿಗೆ ಪರಿಹಾರ ಒದಗಿಸಲು ವಿಶ್ವಸಂಸ್ಥೆ ಕೈಗೊಂಡಿರುವ – ಯು ಎನ್ ಆರ್ ಡಬ್ಲ್ಯೂ ಎ ಕಾರ್ಯವನ್ನು ನಾವು ಬೆಂಬಲಿಸುತ್ತೇವೆ. ಪ್ಯಾಲಿಸ್ತೇನ್ ನ ನಿರಾಶ್ರಿತ ಸುಮಾರು 5.3 ಮಿಲಿಯನ್ ಜನರಿಗೆ ಆರೋಗ್ಯ, ಶಿಕ್ಷಣ ಹಾಗೂ ಇನ್ನಿತರ ಮೂಲ ಸೇವೆಗಳನ್ನು ಒದಗಿಸುವ ಮಹತ್ವದ ಪಾತ್ರವನ್ನು ವಹಿಸುತ್ತಿರುವುದಕ್ಕೆ ನಾವು ಶ್ಲಾಘಿಸುತ್ತೇವೆ. ಆ ಮೂಲಕ ಪ್ರಾಂತ್ಯದಲ್ಲಿ ಸ್ಥಿರತೆ ತರುವ ಜತೆಗೆ ಅದಕ್ಕೆ ಬೇಕಾದ ಅಗತ್ಯ ಮತ್ತು ಸುಸ್ಥಿರ ನಿಧಿಯನ್ನು ಸಂಸ್ಥೆ ಒದಗಿಸುತ್ತಿರುವುದಕ್ಕೆ ಮೆಚ್ಚುಗೆ ಸೂಚಿಸುತ್ತಿದ್ದೇವೆ.
43. ಯಮನ್ ಗಣರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಬಿಕ್ಕಟ್ಟು ಹಾಗೂ ಮಾನವೀಯ ಸಂಘರ್ಷದ ಬಿಕ್ಕಟ್ಟು ಬಗ್ಗೆಯೂ ನಮಗೆ ಕಳಕಳಿ ಇದೆ. ಯಮನ್ ನ ಎಲ್ಲ ಭಾಗದ ಜನರಿಗೂ ಯಾವುದೇ ಅಡೆತಡೆ ಇಲ್ಲದೆ ಮಾನವೀಯತೆಯ ಸಹಾಯ ಹಸ್ತ ದೊರಕಬೇಕು ಎಂಬುದು ನಮ್ಮ ಬಯಕೆಯಾಗಿದೆ. ಅಂತಾರಾಷ್ಟ್ರೀಯ ಸಮುದಾಯ ಅಗತ್ಯ ಸಹಾಯವನ್ನು ತ್ವರಿತವಾಗಿ ನೀಡಬೇಕು ಎಂದು ನಾವು ಆಗ್ರಹಿಸುತ್ತೇವೆ. ಎಲ್ಲ ದೇಶಗಳು ಅಂತಾರಾಷ್ಟ್ರೀಯ ಕಾನೂನಿಗೆ ಗೌರವ ನೀಡಬೇಕು ಎಂದು ನಾವು ಒತ್ತಾಯಿಸುತ್ತಿದ್ದು, ಒತ್ತೆ ಪ್ರಕರಣಗಳನ್ನು ನಿಲ್ಲಿಸಬೇಕು, ವಿಶ್ವಸಂಸ್ಥೆಯಲ್ಲಿ ನಡೆಯುತ್ತಿರುವ ಶಾಂತಿ ಮಾತುಕತೆಗೆ ಮರಳಬೇಕು, ಬಿಕ್ಕಟ್ಟು ಕೊನೆಗಾಣಿಸಲು ರಾಜಕೀಯ ಸೂತ್ರ ಸಾಧನೆಗೆ ಯಮನ್ ನೇತೃತ್ವದಲ್ಲಿ ಸಮಗ್ರ ಸಮಾಲೋಚನೆ ನಡೆಸಬೇಕಾಗಿದೆ.
44. ಗಲ್ಫ್ ಪ್ರಾಂತ್ಯದಲ್ಲಿ ಪ್ರಸ್ತುತ ರಾಜತಾಂತ್ರಿಕ ಬಿಕ್ಕಟ್ಟು ನೇರವಾಗಿ ಎದುರಿಸುತ್ತಿರುವ ಎಲ್ಲ ದೇಶಗಳು ಹಾಗೂ ಅಲ್ಲಿನ ಪಕ್ಷಗಳು ಮಾತುಕತೆಯ ಮೂಲಕ ಅವುಗಳನ್ನು ನಿವಾರಿಸಿಕೊಳ್ಳಬೇಕೆಂದು ನಾವು ಕರೆ ನೀಡುತ್ತೇವೆ ಮತ್ತು ಈ ನಿಟ್ಟಿನಲ್ಲಿ ಕುವೈತ್ ಪ್ರಯತ್ನಗಳನ್ನು ನಾವು ಸ್ವಾಗತಿಸುತ್ತೇವೆ.
45. 'ಆಫ್ಘನ್ ನೇತೃತ್ವದ – ಆಫ್ಘನ್ ಒಡೆತನ' ದಡಿ ನಡೆಯುತ್ತಿರುವ ರಾಷ್ಟ್ರೀಯ ಶಾಂತಿ ಮತ್ತು ಸಂಧಾನ ಪ್ರಕ್ರಿಯೆಯನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಅಫ್ಘಾನಿಸ್ತಾನದಲ್ಲಿನ ಸ್ಥಿತಿಗತಿ ವಿಕೋಪಕ್ಕೆ ತಿರುಗುತ್ತಿರುವುದರ ಬಗ್ಗೆ ನಮಗೆ ಕಳಕಳಿ ಇದೆ. ಅಲ್ಲಿ ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳು, ಸರ್ಕಾರ ಮತ್ತು ನಾಗರಿಕರ ಮೇಲೆ ಭಯೋತ್ಪಾದನಾ ಸಂಬಂಧಿ ದಾಳಿಗಳ ಸಂಖ್ಯೆ ಹಾಗೂ ತೀವ್ರತೆ ಹೆಚ್ಚಾಗುತ್ತಿದೆ. ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಅಫ್ಘಾನಿಸ್ತಾನದ ಎಲ್ಲ ಜನರು ಸಹಕರಿಸಬೇಕು ಮತ್ತು ಅದಕ್ಕೆ ಸರ್ಕಾರಗಳಿಗೆ ಅಂತಾರಾಷ್ಟ್ರೀಯ ಸಮುದಾಯವೂ ಸಹ ಸಹಾಯ ಮಾಡಬೇಕು ಎಂದು ನಾವು ಕರೆ ನೀಡುತ್ತೇವೆ. ಆ ದೇಶದಲ್ಲಿ 2018ರ ಅಕ್ಟೋಬರ್ ನಲ್ಲಿ ನಿಗದಿಯಾಗಿರುವ ಸಂಸದೀಯ ಚುನಾವಣೆಗಳು ಮತ್ತು 2019ರಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗಳನ್ನು ನಾವು ಸ್ವಾಗತಿಸುತ್ತೇವೆ.
46. ಸಿರಿಯಾದ ಬಿಕ್ಕಟ್ಟು ನಿವಾರಣೆಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಬದ್ಧತೆಯನ್ನು ನಾವು ಪ್ರತಿಪಾದಿಸುತ್ತಿದ್ದೇವೆ.
ಸೂಚಿಯಲ್ಲಿ ನಡೆದ ಸಿರಿಯಾ ರಾಷ್ಟ್ರೀಯ ಸಮಾಲೋಚನೆಯ ಫಲಿತಾಂಶವನ್ನು ಪರಿಗಣಿಸಿ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ನಿರ್ಣಯ 2254(2015)ರ ಅನ್ವಯ 'ಸಿರಿಯಾ ನೇತೃತ್ವದ – ಸಿರಿಯಾ ಒಡೆತನ'ದಡಿ ಸಿರಿಯಾದ ಭೌಗೋಳಿಕ ಐಕ್ಯತೆ ಮತ್ತು ಸ್ವಾತಂತ್ರ್ಯ ಹಾಗೂ ಸಾರ್ವಭೌಮತೆ ರಕ್ಷಣೆಗೆ ರಾಜಕೀಯ ಪ್ರಕ್ರಿಯೆ ನಡೆಯುತ್ತಿದೆ. ಜಿನಿವಾ ಮಾತುಕತೆಯನ್ನು ನಾವು ಬೆಂಬಲಿಸುತ್ತೇವೆ ಮತ್ತು ವಿಶ್ವಸಂಸ್ಥೆಯ ಮಧ್ಯಸ್ಥಿಕೆಯನ್ನು ನಾವು ಸ್ವಾಗತಿಸುತ್ತೇವೆ. ಆಸ್ಟಾನ ಪ್ರಕ್ರಿಯೆಯಿಂದಾಗಿ ವಾಸ್ತವದಲ್ಲಿ ಆಗುತ್ತಿರುವ ಸಕಾರಾತ್ಮಕ ಬೆಳವಣಿಗೆಗಳು ಮತ್ತು ಈ ಎರಡೂ ಉಪಕ್ರಮಗಳು ಪೂರಕವಾಗಿರುತ್ತವೆ. ಸಿರಿಯಾ ಬಿಕ್ಕಟ್ಟಿಗೆ ಶಾಂತಿಯುತ ನಿರ್ಣಯ ಕೈಗೊಳ್ಳಬೇಕೆಂಬ ಬದ್ಧತೆಯನ್ನು ನಾವು ಪುನರ್ ಪ್ರತಿಪಾದಿಸುತ್ತಾ ವಿಶ್ವಸಂಸ್ಥೆಯ ಒಪ್ಪಂದ ಮತ್ತು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳಿಗೆ ವಿರುದ್ಧವಾಗಿ ಕೈಗೊಳ್ಳುವ ಕ್ರಮಗಳನ್ನು ನಾವು ವಿರೋಧಿಸುತ್ತೇವೆ ಮತ್ತು ಅಂತಹ ಕ್ರಮಗಳು ರಾಜಕೀಯ ಪ್ರಕ್ರಿಯೆ ಮುಂದುವರಿಕೆಗೆ ಯಾವುದೇ ಕೊಡುಗೆ ನೀಡುವುದಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯಗಳು ಅತ್ಯಂತ ಪ್ರಸ್ತುತವಾಗಿದ್ದು, ಸಿರಿಯಾದಲ್ಲಿ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಹೋರಾಡಲು ಒಗ್ಗೂಡುವ ಪ್ರಾಮುಖ್ಯತೆ ಇದೆ ಎಂಬುದನ್ನು ನಾವು ಇಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದೇವೆ. ಯಾವುದೇ ರಾಷ್ಟ್ರ ಯಾವುದೇ ಉದ್ದೇಶಕ್ಕೆ ಮತ್ತು ಎಂತಹುದೇ ಸಂದರ್ಭಗಳಲ್ಲಿ ರಾಸಾಯನಿಕ ಅಸ್ತ್ರಗಳನ್ನು ಬಳಕೆ ಮಾಡುವುದನ್ನು ನಾವು ಬಲವಾಗಿ ಖಂಡಿಸುವುದನ್ನು ಪುನರುಚ್ಚರಿಸುತ್ತಿದ್ದೇವೆ ಮತ್ತು ಅಂತಹ ಕೃತ್ಯಗಳ ಬಗ್ಗೆ ಸಮಗ್ರ ನಿಶ್ಪಕ್ಷಪಾತ ಸ್ವತಂತ್ರ ಮತ್ತು ಪಾರದರ್ಶಕ ತನಿಖೆಯಾಗಬೇಕು ಎಂದು ನಾವು ಒತ್ತಾಯಿಸುತ್ತೇವೆ. ಸಿರಿಯಾದ ಜನತೆಗೆ ತುರ್ತು ಮರು ನಿರ್ಮಾಣ ಅಗತ್ಯತೆಗಳನ್ನು ಗಮನದಲ್ಲಿರಿಸಿಕೊಂಡು ಅತ್ಯಗತ್ಯ ಮಾನವೀಯ ನೆರವು ಒದಗಿಸಲು ನಡೆಸುತ್ತಿರುವ ಪ್ರಯತ್ನಗಳನ್ನು ಹೆಚ್ಚಿಸಬೇಕು ಎಂಬುದು ನಮ್ಮ ಬಯಕೆಯಾಗಿದೆ.
47. ಇರಾನ್ ನ ಅಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಜಂಟಿ ಸಮಗ್ರ ಕ್ರಿಯಾ ಯೋಜನೆ(ಜೆಸಿಪಿಒಎ)ಅನ್ನು ಎಲ್ಲ ರಾಷ್ಟ್ರಗಳು ಪಾಲಿಸಬೇಕು ಅದರ ನಿಬಂಧನೆಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಮತ್ತು ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ಶಾಂತಿ ಹಾಗೂ ಭದ್ರತೆಗೆ ಜೆಸಿಪಿಒಎ ಪೂರ್ಣ ಹಾಗೂ ಪರಿಣಾಮಕಾರಿ ಅನುಷ್ಠಾನಗೊಳ್ಳುವುದನ್ನು ಖಾತ್ರಿಪಡಿಸಬೇಕು.
48. ದಕ್ಷಿಣ ಪೂರ್ವ ಏಷ್ಯಾ ರಾಷ್ಟ್ರಗಳಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮತ್ತು ಕೊರಿಯಾ ಖಂಡದಲ್ಲಿ ಸಂಪೂರ್ಣ ಪರಮಾಣು ನಿಶಸ್ತ್ರೀಕರಣ ಸಾಧನೆಗೆ ಇತ್ತೀಚಿನ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ. ಪರಿಸ್ಥತಿಯನ್ನು ಸುಧಾರಿಸಲು ಶಾಂತಿಯುತ, ರಾಜತಾಂತ್ರಿಕ ಮತ್ತ ರಾಜಕೀಯ ಪರಿಹಾರಕ್ಕೆ ನಾವು ಬದ್ಧವಾಗಿದ್ದೇವೆ ಎಂಬುದನ್ನು ಪುನರುಚ್ಚರಿಸುತ್ತಿದ್ದೇವೆ.
49. ಬಾಹ್ಯಾಕಾಶದ ಹೊರಗೆ ಶಸ್ತ್ರಾಸ್ತ್ರ ಪೈಪೋಟಿ ಸಾಧ್ಯತೆಗಳ ಬಗ್ಗೆ ನಮಗೆ ತೀವ್ರ ಕಾಳಜಿ ಇದೆ. ಬಾಹ್ಯಾಕಾಶದ ಹೊರಗೆ ಮಿಲಿಟರಿ ಸಂಘರ್ಷದ ವಾತಾವರಣ ನೆಲೆಸಬಾರದು. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಜೋಡಿಸುವುದು ಸೇರಿದಂತೆ ಯಾವುದೇ ರೀತಿಯ ಶಸ್ತ್ರಾಸ್ತ್ರ ಪೈಪೋಟಿಯನ್ನು ನಿಯಂತ್ರಿಸಬೇಕು ಎಂಬುದು ನಮ್ಮ ಬಲವಾದ ದೃಢತೆಯಾಗಿದೆ, ಅದು ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಾರೀ ಅಪಾಯವನ್ನು ತಂದೊಡ್ಡಲಿದೆ. ಬಾಹ್ಯಾಕಾಶವನ್ನು ಶಾಂತಿಯುತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳುವ ಕುರಿತಂತೆ ಹಾಲಿ ಇರುವ ಕಾನೂನುಗಳನ್ನು ಕಠಿಣವಾಗಿ ಪಾಲಿಸುವ ಪ್ರಾಮುಖ್ಯತೆಗೆ ನಾವು ಒತ್ತು ನೀಡಬೇಕಿದೆ. ಪ್ರಾಂತ್ಯವನ್ನು ಒಗ್ಗೂಡಿಸುವ ಅಗತ್ಯವನ್ನು ನಾವು ಪ್ರತಿಪಾದಿಸುತ್ತೇವೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವುದನ್ನು ನಿಯಂತ್ರಿಸುವುದು ಸೇರಿದಂತೆ ಶಸ್ತ್ರಾಸ್ತ್ರ ಪೈಪೋಟಿಯನ್ನು ತಪ್ಪಿಸಲು ಕಾನೂನು ನಿಬಂಧನೆಗಳನ್ನು ಬಳಕೆ ಮಾಡುವ ಸಾಧ್ಯತೆಗಳ ಬಗ್ಗೆ ಚರ್ಚಿಸಲು ಹೊಸದಾಗಿ ಸರ್ಕಾರಿ ಪರಿಣಿತರ ಗುಂಪು ರಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಬಾಹ್ಯಾಕಾಶದಲ್ಲಿ ಶಸ್ತ್ರಾಸ್ತ್ರಗಳನ್ನು ಹೊಂದುವುದನ್ನು ತಡೆಯಲು ವಾಸ್ತವ ಪಾರದರ್ಶಕ ಮತ್ತು ವಿಶ್ವಾಸವೃದ್ಧಿ ಕ್ರಮಗಳನ್ನು ಕೈಗೊಳ್ಳುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸುತ್ತೇವೆ. ನಿಶಸ್ತ್ರೀಕರಣ ಕುರಿತಂತೆ ಸಮಾವೇಶ ನಡೆಸಬೇಕು ಎಂಬುದನ್ನು ನಾವು ಪುನರುಚ್ಚರಿಸುತ್ತೇವೆ. ಅದನ್ನು ಬಹು ಹಂತದ ನಿಶಸ್ತ್ರೀಕರಣ ಸಂಧಾನ ವೇದಿಕೆಯನ್ನಾಗಿ ಮಾಡಬೇಕು. ಅದರಲ್ಲಿ ಬಹುಹಂತದ ಒಪ್ಪಂದ ಸಂಧಾನ ಪ್ರಕ್ರಿಯೆ ಪ್ರಾಥಮಿಕ ಕೆಲಸವಾಗಬೇಕು, ಜೊತೆಗೆ ಎಲ್ಲ ವಿಧದಲ್ಲೂ ಬಾಹ್ಯಾಕಾಶದ ಹೊರಗೆ ಶಸ್ತ್ರಾಸ್ತ್ರ ಪೈಪೋಟಿ ನಿಯಂತ್ರಣಕ್ಕೆ ಅಗತ್ಯ ಒಪ್ಪಂದಗಳನ್ನು ಕೈಗೊಳ್ಳಬೇಕು.
50. ದಕ್ಷಿಣ ಆಫ್ರಿಕಾ 2018ರ ಜೂನ್ 4ರಂದು ಪ್ರೆಟೋರಿಯಾದಲ್ಲಿ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳು/ಅಂತಾರಾಷ್ಟ್ರೀಯ ಸಂಬಂಧಗಳ ಕುರಿತಾದ ಸಚಿವರ ಸಮ್ಮೇಳನದ ಆತಿಥ್ಯವಹಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಜಾಗತಿಕ ರಾಜಕೀಯ ಸ್ಥಿತಿಗತಿ, ಭದ್ರತೆ, ಆರ್ಥಿಕ ಮತ್ತು ಸಾಮಾನ್ಯ ಆಸಕ್ತಿಯ ಹಣಕಾಸು ವಿಷಯಗಳು ಮತ್ತು ಬ್ರಿಕ್ಸ್ ಸಹಕಾರ ಬಲವರ್ಧನೆ ಸೇರಿದಂತೆ ಹಲವು ಪ್ರಮುಖ ವಿಷಯಗಳ ಬಗ್ಗೆ ಸಚಿವರು ವಿಚಾರ ವಿನಿಮಯ ನಡೆಸಿದರು. ವಿಶ್ವಸಂಸ್ಥೆಯ 73ನೇ ಸಾಮಾನ್ಯ ಅಧಿವೇಶನದ ಸಂದರ್ಭದಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳು/ಅಂತಾರಾಷ್ಟ್ರೀಯ ಸಂಬಂಧಗಳ ಸಚಿವರ ಸಭೆಯನ್ನು ನಾವು ಎದುರು ನೋಡುತ್ತಿದ್ದೇವೆ.
51. ಡರ್ಬನ್ ನಲ್ಲಿ 2018ರ ಜೂನ್ 28 ಹಾಗೂ 29ರಂದು ಬ್ರಿಕ್ಸ್ ರಾಷ್ಟ್ರಗಳ ಭದ್ರತೆ ಕುರಿತ ಪ್ರತಿನಿಧಿಗಳ 8ನೇ ಸಭೆ ನಡೆಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಜಾಗತಿಕ ಸುರಕ್ಷತಾ ವಾತಾವರಣ, ಭಯೋತ್ಪಾದನಾ ನಿಗ್ರಹ, ಐಸಿಟಿ ಬಳಕೆ ಸುರಕ್ಷತೆ ಪ್ರಮುಖ ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ತಾಣಗಳ ರಕ್ಷಣೆ, ಸಂಘಟಿತ ಅಪರಾಧಗಳ ನಿಯಂತ್ರಣ, ಶಾಂತಿಪಾಲನೆ, ರಾಷ್ಟ್ರೀಯ ಭದ್ರತೆ ಮತ್ತು ಅಭಿವೃದ್ಧಿ ವಿಚಾರಗಳ ನಡುವಿನ ಸಂಬಂಧ ಮತ್ತಿತರ ವಿಚಾರಗಳ ಬಗ್ಗೆ ಬ್ರಿಕ್ಸ್ ಸಮಾಲೋಚನೆ ನಡೆಸುತ್ತಿರುವುದು ಶ್ಲಾಘನೀಯ.
52. ಅಂತಾರಾಷ್ಟ್ರೀಯ ಶಾಂತಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಪ್ರಮುಖ ಪಾತ್ರವಹಿಸುತ್ತಿರುವುದಕ್ಕೆ ನಾವು ಒತ್ತು ನೀಡುತ್ತಿದ್ದು, ಈ ನಿಟ್ಟಿನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಕೊಡುಗೆಯನ್ನೂ ಸಹ ಸ್ಮರಿಸುತ್ತೇವೆ . ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ವಿಶ್ವಸಂಸ್ಥೆ ಕೈಗೊಂಡಿರುವ ಶಾಂತಿ ಕಾಯ್ದುಕೊಳ್ಳುವ ವಿಷಯಗಳಲ್ಲಿ ಇನ್ನೂ ಹೆಚ್ಚಿನ ಸಹಕಾರ ಮತ್ತು ಸಂವಹನ ಅಗತ್ಯವಿದೆ ಎಂಬುದನ್ನು ನಾವು ಪ್ರತಿಪಾದಿಸುತ್ತಾ, ಈ ನಿಟ್ಟಿನಲ್ಲಿ ಬ್ರಿಕ್ಸ್ ಕಾರ್ಯಕಾರಿ ಗುಂಪು ರಚನೆಯ ದಕ್ಷಿಣ ಆಫ್ರಿಕಾದ ಉಪಕ್ರಮವನ್ನು ಶ್ಲಾಘಿಸುತ್ತೇವೆ.
53. ಉಪಖಂಡದಲ್ಲಿ ಬಿಕ್ಕಟ್ಟುಗಳ ನಿರ್ವಹಣೆ ಮತ್ತು ಇತ್ಯರ್ಥ ನಿಟ್ಟಿನಲ್ಲಿ ಆಫ್ರಿಕನ್ ಒಕ್ಕೂಟ ಕೈಗೊಂಡಿರುವ ಪ್ರಯತ್ನಗಳನ್ನು ನಾವು ಶ್ಲಾಘಿಸುತ್ತೇವೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಆಫ್ರಿಕಾ ಒಕ್ಕೂಟದ ಶಾಂತಿ ಮತ್ತು ಭದ್ರತಾ ಮಂಡಳಿ ನಡುವಿನ ಸಹಕಾರ ಬಲವರ್ಧನೆಯನ್ನು ನಾವು ಸ್ವಾಗತಿಸುತ್ತೇವೆ. ಆಫ್ರಿಕಾ ಒಕ್ಕೂಟ '2020ರ ವೇಳೆಗೆ ಬಂದೂಕುಗಳ ಸದ್ದಡಗಿಸುವ' ಭದ್ದತೆಯನ್ನು ನಾವು ಶ್ಲಾಘಿಸಿ, ಆಫ್ರಿಕಾದ ಶಾಂತಿ ಮತ್ತು ಭದ್ರತಾ ವಿನ್ಯಾಸ ಬಲವರ್ಧನೆಯ ಎಲ್ಲ ಪ್ರಯತ್ನಗಳನ್ನು ನಾವು ಬೆಂಬಲಿಸುತ್ತೇವೆ.
IV ಜಾಗತಿಕ ಆರ್ಥಿಕ ಪುನಶ್ಚೇತನ, ಹಣಕಾಸು ಸುಧಾರಣೆಗಳು ಮತ್ತು ಜಾಗತಿಕ ಆರ್ಥಿಕ ನಿರ್ವಹಣಾ ಸಂಸ್ಥೆಗಳ ನಡುವಿನ ಬ್ರಿಕ್ಸ್ ಸಹಭಾಗಿತ್ವ ಮತ್ತು ನಾಲ್ಕನೇ ಕೈಗಾರಿಕಾ ಕ್ರಾಂತಿ
54. ಜಾಗತಿಕ ಆರ್ಥಿಕ ಸ್ಥಿತಿಗತಿ ಸುಧಾರಣೆಯಾಗುತ್ತಿರುವುದನ್ನು ನಾವು ಸ್ವಾಗತಿಸುತ್ತೇವೆ. ಪ್ರಗತಿ ಸ್ವಲ್ಪ ಹೆಚ್ಚಿನ ಕುಂಠಿತವಾಗದಿದ್ದರೂ ಕುಸಿತದ ಅಪಾಯ ಇನ್ನು ಹಾಗೆಯೇ ಇದೆ. ಇದರಿಂದಾಗಿ ವ್ಯಾಪಾರ ಸಂಘರ್ಷಗಳು ಹೆಚ್ಚಾಗುವ ಭೌಗೋಳಿಕ ರಾಜಕೀಯ ಬಿಕ್ಕಟ್ಟುಗಳು ಜಾಸ್ತಿಯಾಗುವ ವಸ್ತುಗಳ ಬೆಲೆ ಏರಿಕೆಯಾಗುವ ಖಾಸಗಿ ಹಾಗೂ ಸಾರ್ವಜನಿಕ ಸಾಲ ಹೆಚ್ಚಾಗುವ ಜೊತೆಗೆ ಅಸಮಾನತೆ ಮತ್ತು ಸಮಗ್ರ ಬೆಳವಣಿಗೆಯಾಗದಿರುವಂತಹ ನಾನಾ ಬಗೆಯ ಸವಾಲುಗಳು ಪ್ರತಿಫಲನಗೊಳ್ಳುತ್ತಿವೆ. ಬೆಳವಣಿಗೆಯ ಪ್ರಯೋಜನಗಳು ಹಂಚಿಕೆಯಾಗುತ್ತಿದ್ದು, ಅವುಗಳು ಸಮಗ್ರ ರೀತಿಯಲ್ಲಿ ಇಲ್ಲ ಎಂಬುದು ನಾವು ಅರ್ಥಮಾಡಿಕೊಳ್ಳಬೇಕಿದೆ. ಜಾಗತಿಕ ವ್ಯಾಪಾರದ ಸುಸ್ಥಿರ ಬೆಳವಣಿಗೆಗೆ ಅನುಕೂಲಕರವಾದ ವಾತಾವರಣ ನಿರ್ಮಾಣದ ಪ್ರಾಮುಖ್ಯತೆಯನ್ನು ನಾವು ಬಲವಾಗಿ ಪ್ರತಿಪಾದಿಸುತ್ತೇವೆ.
55. ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಆರ್ಥಿಕತೆ ಸದಾ ಜಾಗತಿಕ ಆರ್ಥಿಕ ವಿಸ್ತರಣೆ ಮತ್ತು ಆಯಾಮವನ್ನು ಬೆಂಬಲಿಸುವುದನ್ನು ಮುಂದುವರಿಸುತ್ತವೆ. ಸುಸ್ಥಿರ ಸಮತೋಲಿತ ಮತ್ತು ಸಮಗ್ರ ಬೆಳವಣಿಗೆಯ ಜತೆಗೆ ವಿತ್ತೀಯ ಹಣಕಾಸು ಮತ್ತು ವ್ಯವಸ್ಥಿತ ನೀತಿಗಳನ್ನು ನಾವು ಬೆಂಬಲಿಸುತ್ತೇವೆ. ಕೆಲವು ಆರ್ಥಿಕವಾಗಿ ಮುಂದುವರಿದ ರಾಷ್ಟ್ರಗಳಲ್ಲಿನ ಸೂಕ್ಷ್ಮ ಹಣಕಾಸು ನೀತಿಗಳ ಪರಿಣಾಮಗಳ ಬಗ್ಗೆ ನಾವು ಕಳವಳ ವ್ಯಕ್ತಪಡಿಸುತ್ತೇವೆ ಮತ್ತು ಇದು ಆರ್ಥಿಕವಾಗಿ ಬೆಳವಣಿಗೆ ಹೊಂದುತ್ತಿರುವ ರಾಷ್ಟ್ರಗಳ ಹಣಕಾಸು ಪರಿಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂಬ ಆತಂಕವಿದೆ. ಹಾಗಾಗಿ ನಾವು ಎಲ್ಲ ಪ್ರಮುಖ ಮುಂದುವರಿದ ಮತ್ತು ಪ್ರಗತಿ ಸಾಧಿಸುತ್ತಿರುವ ರಾಷ್ಟ್ರಗಳು ಜಿ-20 ರಾಷ್ಟ್ರಗಳ ಸಭೆ, ಎಫ್ ಎಸ್ ಬಿ ಮತ್ತು ಸಂಭಾವ್ಯ ಅಪಾಯಗಳನ್ನು ಎದುರಿಸಲು ನಿರಂತರವಾಗಿ ನೀತಿಗಳ ಸಮಾಲೋಚನೆ ಮತ್ತು ಸಮನ್ವಯತೆ ಸಾಧಿಸುವ ಅಗತ್ಯವಿದೆ.
56. ಜೋಹಾನ್ಸ್ ಬರ್ಗ್ ಶೃಂಗಸಭೆಯಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿಗೆ ಒತ್ತು ನೀಡಿದ್ದನ್ನು ಸ್ಮರಿಸುತ್ತಾ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೈಗಾರಿಕಾ ಸಚಿವರ ಸಭೆಯ ಫಲಿತಾಂಶವನ್ನು ಗಮನಿಸುತ್ತ ಹೊಸ ಕೈಗಾರಿಕಾ ಕ್ರಾಂತಿಗೆ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಸಹಭಾಗಿತ್ವ – ಬ್ರಿಕ್ಸ್ ಪಾರ್ಟನರ್ ಶಿಪ್ ಆನ್ ನ್ಯೂ ಇಂಡಸ್ಟ್ರಿಯಲ್ ರೆವಲ್ಯೂಶನ್ – 'ಪಾರ್ಟ್ ನಿರ್' ಸ್ಥಾಪನೆಗೆ ಮುಂದಾಗಿರುವುದನ್ನು ನಾವು ಅಭಿನಂದಿಸುತ್ತೇವೆ. ಈ ಪಾರ್ಟ್ ನಿರ್ ಸಲಹಾ ಸಮಿತಿಯ ಪೂರ್ಣ ಪ್ರಮಾಣದ ಕಾರ್ಯಾಚರಣೆ ಆರಂಭವಾಗಬೇಕು, ಅದರಲ್ಲಿ ಬ್ರಿಕ್ಸ್ ರಾಷ್ಟ್ರಗಳ ಕೈಗಾರಿಕಾ ಸಚಿವರು ಪ್ರತಿನಿಧಿಗಳಾಗಿರಬೇಕು. ಜೊತೆಗೆ ಸಂಬಂಧಿಸಿದ ಸಚಿವರೊಡನೆ ಸಮಾಲೋಚಿಸಿ, ಮೊದಲ ಹಂತವನ್ನು ಅಭಿವೃದ್ಧಿಪಡಿಸಬೇಕು. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಆದ್ಯತೆಗಳ ಕಾರ್ಯಯೋಜನೆ ಮತ್ತು ನಿಯಮ ನಿಬಂಧನೆಗಳನ್ನು ರೂಪಿಸಿ ಬ್ರಿಕ್ಸ್ ಪೀಠಕ್ಕೆ ಅದನ್ನು ಸಲ್ಲಿಸಬೇಕು. ಈ ಪಾರ್ಟ್ ನಿರ್ ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ನಡುವೆ ಡಿಜಿಟಲೀಕರಣ, ಕೈಗಾರಿಕೀಕರಣ, ಆವಿಷ್ಕಾರ, ಸಮಗ್ರ ಅಭಿವೃದ್ಧಿ, ಬಂಡವಾಳ ಹೂಡಿಕೆ ಸಂಬಂಧಗಳನ್ನು ಇನ್ನಷ್ಟು ಬಲವರ್ಧಿಸುವ ಜೊತೆಗೆ ಅವಕಾಶಗಳನ್ನು ಹೆಚ್ಚಿಸುವುದು, ನಾಲ್ಕನೇ ಕೈಗಾರಿಕಾ ಕ್ರಾಂತಿಯಿಂದ ಹಾಗೂ ಎದುರಾಗುವ ಸವಾಲುಗಳನ್ನು ಹತ್ತಿಕ್ಕಲು ನೆರವಾಗುತ್ತದೆ. ಆರ್ಥಿಕ ಪ್ರಗತಿಯ ಉತ್ತೇಜನ ಬ್ರಿಕ್ಸ್ ರಾಷ್ಟ್ರಗಳ ನಡುವೆ ಆರ್ಥಿಕ ಪರಿವರ್ತನೆಗೆ ಪ್ರೋತ್ಸಾಹ, ಸುಸ್ಥಿರ ಕೈಗಾರಿಕಾ ಉತ್ಪಾದನಾ ಸಾಮರ್ಥ್ಯವೃದ್ಧಿ, ವಿಜ್ಞಾನ ಪಾರ್ಕ್ ಗಳ ಸಂಪರ್ಕಜಾಲ ಸೃಷ್ಟಿ, ತಂತ್ರಜ್ಞಾನ ವ್ಯಾಪಾರ ಸಂಪೋಷನಾ ಕೇಂದ್ರಗಳ ಸ್ಥಾಪನೆ ಮತ್ತು ತಂತ್ರಜ್ಞಾನ ಆಧಾರಿತ ಸಣ್ಣ ಹಾಗೂ ಮಧ್ಯಮ ವರ್ಗದ ಉದ್ದಿಮೆಗಳನ್ನು ಬೆಂಬಲಿಸುವ ಅನುಕೂಲಗಳು ಹೆಚ್ಚಾಗಲಿವೆ. ಬ್ರಿಕ್ಸ್ ಸಂಪರ್ಕ ಜಾಲದಲ್ಲಿ ವಿಜ್ಞಾನ ಪಾರ್ಕ್ ಗಳು, ತಾಂತ್ರಿಕ ವ್ಯಾಪಾರ ಸಂಪೋಷಣಾ ಕೇಂದ್ರಗಳು ಮತ್ತು ಸಣ್ಣ ಹಾಗೂ ಮಧ್ಯಮವರ್ಗದ ಉದ್ದಿಮೆಗಳ ಸ್ಥಾಪನೆ ಈ ನಿಟ್ಟಿನಲ್ಲಿ ಅತ್ಯಂತ ವಿಶ್ವಾಸಾರ್ಹ ಹೆಜ್ಜೆಯಾಗಿದೆ ಎಂದು ನಾವು ನಂಬಿದ್ದೇವೆ.
57. ಜಾಗತಿಕ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಯಲ್ಲಿ ಅಂತರ್ಜಾಲ ಅತ್ಯಂತ ಕಠಿಣ ಹಾಗೂ ಸಕಾರಾತ್ಮಕ ಪಾತ್ರ ವಹಿಸುತ್ತಿರುವುದನ್ನು ನಾವು ಗುರುತಿಸಿದ್ದೇವೆ. ಈ ನಿಟ್ಟಿನಲ್ಲಿ ಹಾಲಿ ಇರುವ ಸುರಕ್ಷತಾ, ಮುಕ್ತ, ಶಾಂತಿಯುತ ಹಾಗೂ ಸಹಕಾರ ಮತ್ತು ವ್ಯವಸ್ಥಿತ ರೀತಿಯಲ್ಲಿ ಐಸಿಟಿ ತಂತ್ರಜ್ಞಾನದ ಬಳಕೆ ಕಾರ್ಯತಂತ್ರಗಳನ್ನು ಪಾಲಿಸಲು ಎಲ್ಲರೂ ಒಗ್ಗೂಡಿ ಕಾರ್ಯೋನ್ಮುಖವಾಗುವ ಬದ್ಧತೆ ಮುಂದುವರಿಸಬೇಕು. ಇದರಲ್ಲಿ ಎಲ್ಲ ರಾಷ್ಟ್ರಗಳ ಭಾಗಿ ಅಗತ್ಯ. ಅವುಗಳು ಅಂತರ್ಜಾಲದ ಕಾರ್ಯವೈಖರಿ ಮತ್ತು ಬೆಳವಣಿಗೆಯನ್ನು ಸಮಾನ ರೀತಿಯಲ್ಲಿ ಕಾಣಬೇಕು. ಅಂತರ್ಜಾಲದ ಕಾರ್ಯವೈಖರಿ ಮತ್ತು ಅದರ ಆಡಳಿತವನ್ನು ಗಮನದಲ್ಲಿರಿಸಿಕೊಂಡು ಸಂಬಂಧಿಸಿದವರ ಪಾತ್ರ ಮತ್ತು ಹೊಣೆಗಾರಿಕೆಗಳನ್ನು ಗುರುತಿಸಿ ಅವರನ್ನು ಭಾಗಿ ಮಾಡಿಕೊಳ್ಳುವುದು ಅಗತ್ಯವಿದೆ.
58. ಸುಸ್ಥಿರ ಅಭಿವೃದ್ಧಿ ಹಾಗೂ ಎಲ್ಲರನ್ನೂ ಒಳಗೊಂಡ ಪ್ರಗತಿಯನ್ನು ಸಾಧಿಸಲು ಬ್ರಿಕ್ಸ್ನ ವೈಜ್ಞಾನಿಕ, ತಾಂತ್ರಿಕ, ಅನ್ವೇಷಕ ಹಾಗೂ ಔದ್ಯಮಿಕ ಸಹಕಾರದ ಅಗತ್ಯವನ್ನು ನಾವು ಗುರುತಿಸಿದ್ದೇವೆ. ವಿಜ್ಞಾನ, ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಬ್ರಿಕ್ಸ್ನ ಕ್ರಿಯಾಶೀಲ ಬೆಳವಣಿಗೆಯನ್ನು ಮತ್ತು ಈ ಕ್ಷೇತ್ರಗಳಲ್ಲಿ ನಮ್ಮಗಳ ಜಂಟಿ ಕಾರ್ಯವನ್ನು ಮುಂದುವರಿಸುವಿಕೆಗೆ ನೀಡಿರುವ ವಿಶೇಷ ಪ್ರಾಮುಖ್ಯತೆಯನ್ನು ನಾವು ಸ್ವಾಗತಿಸುತ್ತೇವೆ. ವಿಜ್ಞಾನ, ತಂತ್ರಜ್ಞಾನ ಮತ್ತು ಔದ್ಯಮಿಕ ಸಾಮಥ್ರ್ಯವನ್ನು ಪ್ರೋತ್ಸಾಹಿಸುವ ಗುರಿ ಇಟ್ಟುಕೊಂಡಿರುವ ಸಂಯೋಜಿತ ವೈಜ್ಞಾನಿಕ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಅಗತ್ಯವನ್ನು ನಾವು ಅರ್ಥ ಮಾಡಿಕೊಂಡಿದ್ದು, ನಮ್ಮ ಸಂಯೋಜಿತ ಪ್ರಯತ್ನಗಳು ನಾಲ್ಕನೇ ಕೈಗಾರಿಕಾ ಕ್ರಾಂತಿಯ ಸವಾಲುಗಳನ್ನು ಎದುರಿಸಲು ನೆರವಾಗಲಿವೆ ಎಂದು ಭಾವಿಸಿದ್ದೇವೆ.
59. ಬ್ರಿಕ್ಸ್ ಐಪಿಆರ್ ಸಹಕಾರದ ಪ್ರಗತಿಯನ್ನು ನಾವು ಶ್ಲಾಘಿಸುತ್ತೇವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ಸಂಬಂಧಿಸಿದಂತೆ ತಂತ್ರಜ್ಞಾನದ ಅಭಿವೃದ್ಧಿ ಹಾಗೂ ವರ್ಗಾವಣೆಯ ಪ್ರಾಮುಖ್ಯತೆಯನ್ನು ನಾವು ಗುರುತಿಸಿದ್ದು, ಇವು ದೀರ್ಘಕಾಲೀನ ಸುಸ್ಥಿರ ಹಾಗೂ ಸಮತೋಲಿತ ಜಾಗತಿಕ ಪ್ರಗತಿಗೆ ತಮ್ಮ ಪಾಲು ನೀಡಬಲ್ಲವು. ಒಟ್ಟಾರೆ ಸಮಾಜದ ಒಳಿತಿಗೆ ನೆರವಾಗಬಲ್ಲ ಅನ್ವೇಷಣೆ ಮತ್ತು ನೂತನ ತಂತ್ರಜ್ಞಾನದ ಶೋಧನೆಗೆ ತಮ್ಮ ದೇಣಿಗೆ ನೀಡುವ ಬೌದ್ಧಿಕ ಆಸ್ತಿ ಹಕ್ಕುಗಳ ಕ್ಷೇತ್ರವನ್ನು ಬಲಗೊಳಿಸಲು ಒತ್ತು ನೀಡಬೇಕೆಂದು ಒತ್ತಾಯಿಸುತ್ತೇವೆ.
60. ಎಲ್ಲರನ್ನೂ ಒಳಗೊಳ್ಳುವ ಪ್ರಗತಿಗೆ ವ್ಯಾಪಾರ ಮತ್ತು ತಂತ್ರಜ್ಞಾನ ಪ್ರಮುಖ ಮೂಲಗಳು. ಇದರೊಟ್ಟಿಗೆ, ಜಾಗತಿಕ ಮೌಲ್ಯ ಸರಪಳಿಗಳನ್ನು ಸುಸ್ಥಿರವಾಗಿ ಹಾಗೂ ಸಮಾನತೆಯ ಮಾರ್ಗದಲ್ಲಿ ಆರ್ಥಿಕವಾಗಿ ಏಕತ್ರಗೊಳಿಸುವಿಕೆ ಮತ್ತು ದೃಢಗೊಳಿಸುವಿಕೆಯೂ ನಡೆಯಬೇಕು ಎಂದು ನಮಗೆ ಮನವರಿಕೆಯಾಗಿದೆ. ಉತ್ಪನ್ನಗಳು ಹಾಗೂ ಸೇವೆಗಳ ಮೇಲೆ ಮಾತ್ರವಲ್ಲದೆ ಜನರ ಆದಾಯದ ಮೇಲೆಯೂ ತಾಂತ್ರಿಕ ಪ್ರಗತಿಯು ವಿಸ್ತಾರ ವ್ಯಾಪ್ತಿಯ ಪರಿಣಾಮಗಳನ್ನು ಬೀರಿದೆ. ತಾಂತ್ರಿ ಕ ಪ್ರಗತಿಯ ಲಾಭಗಳು ಅಭಿವೃದ್ಧಿಶೀಲ ದೇಶಗಳಿಗೆ ದೊರೆಯುವಂತೆ ಆಗಬೇಕು ಹಾಗೂ ಅವುಗಳು ತಾಂತ್ರಿಕತೆಯನ್ನು ಬೇಗ ಅನುಷ್ಠಾನಗೊಳಿಸಿಕೊಳ್ಳದೆ ಇರುವುದರಿಂದ ನಷ್ಟ ಅನುಭವಿಸದಂತೆ ನೋಡಿಕೊಳ್ಳಲು ಸೂಕ್ತ ಕಾರ್ಯನೀತಿಯನ್ನು ಹಾಗೂ ಕ್ರಮಗಳನ್ನು ಕೈಗೊಳ್ಳಬೇಕು. ಡಿಜಿಟಲ್ ಕಂದಕವನ್ನು ನಿವಾರಿಸಲು ಕಲಿಕೆಗೆ ಬೆಂಬಲಿಸುವುದು ಮತ್ತು ಸೂಕ್ತ ತಂತ್ರಜ್ಞಾನಗಳ ವರ್ಗಾವಣೆಯನ್ನು ಖಾತ್ರಿಪಡಿಸಿಕೊಳ್ಳುವುದು ಸೇರಿದಂತೆ ಪರಿಣಾಮಕಾರಿ ಕಾರ್ಯನೀತಿಯನ್ನು ಅಭಿವೃದ್ಧಿಪಡಿಸಬೇಕು.
61. ತಂತ್ರಜ್ಞಾನ ಹಾಗೂ ಜ್ಞಾನಾಧರಿತ ಜಾಗತಿಕ ಆರ್ಥಿಕತೆಗೆ ಬೇಕಾದ ನೂತನ ಕೌಶಲಗಳು ಹಾಗೂ ಹಲವು ಕೆಲಸಗಾರರ ಹಳೆಯ ಕೌಶಲಗಳ ನಡುವೆ ಹೊಂದಾಣಿಕೆ ಇಲ್ಲದಿರುವುದನ್ನು ನಿವಾರಿಸುವಲ್ಲಿ ಕೌಶಲ ತರಬೇತಿ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ ಎಂದು ನಾವು ಒಪ್ಪುತ್ತೇವೆ. ಜಗತ್ತಿನ ಆರ್ಥಿಕ ಬದಲಾವಣೆಯ ವೇಗ, ಪ್ರಮಾಣ ಮತ್ತು ವ್ಯಾಪ್ತಿಯನ್ನು ಪರಿಗಣಿಸಿದಾಗ, ಇದು ಅತ್ಯಂತ ಸವಾಲಿನ ಕೆಲಸವಾಗಲಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ, ಜಿ20 ರ ಗುಣಮಟ್ಟ ಉತ್ತೇಜನ ಅಪ್ರೆಂಟಿಸ್ಶಿಪ್ ಉಪಕ್ರಮ ಹಾಗೂ ಬ್ರಿಕ್ಸ್ನ ಕೌಶಲದ ಮೂಲಕ ಬಡತನ ನಿವಾರಣೆ ಹಾಗೂ ಕಡಿಮೆಗೊಳಿಸುವಿಕೆ ಕಾರ್ಯನೀತಿಯ ಪ್ರಸ್ತಾಪದಲ್ಲಿರುವ ಶಿಫಾರಸು ಸೇರಿದಂತೆ ಇನ್ನಿತರ ಕ್ರಮಗಳನ್ನು ನಾವು ಬೆಂಬಲಿಸುತ್ತೇವೆ. ಔದ್ಯೋಗಿಕ ಜಗತ್ತು ಮತ್ತು ಬೆಳೆಯುತ್ತಿರುವ ಆರ್ಥಿಕತೆಯ ಬೇಡಿಕೆ ಪೂರೈಸಲು ಸೂಕ್ತವಾದ ವೃತ್ತಿಪರ ತರಬೇತಿ, ಜೀವಿತಾವಧಿಯಿಡೀ ಕಲಿಕೆ ಮತ್ತು ತರಬೇತಿ ನೀಡುವಿಕೆಗೆ ಅನುವು ನೀಡಲಾಗುತ್ತದೆ.
62. ವಿಶ್ವ ವ್ಯಾಪಾರ ಸಂಸ್ಥೆ(ಡಬ್ಲ್ಯುಟಿಒ)ಯ ಮಾರ್ಗಸೂಚಿಗೆ ಅನುಗುಣವಾದ ನಿಯಮಗಳನ್ನು ಆಧರಿಸಿದ, ಪಾರದರ್ಶಕ, ತಾರತಮ್ಯರಹಿತ, ಮುಕ್ತ ಹಾಗೂ ಒಳಗೊಂಡ ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಗೆ ನಾವು ಬದ್ಧರಾಗಿದ್ದೇವೆ. ಈ ವ್ಯವಸ್ಥೆಯು ಸಂಭವನೀಯ ವ್ಯಾಪಾರ ವಾತಾವರಣವನ್ನು ಉತ್ತೇಜಿಸಲಿದ್ದು, ಅಭಿವೃದ್ಧಿ ಆಯಾಮಕ್ಕೆ ಪ್ರಾಮುಖ್ಯತೆ ನೀಡಲಿದೆ. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯನ್ನು ಬಲಪಡಿಸಲು ಎಲ್ಲ ಪ್ರಯತ್ನ ಮಾಡಲಿದ್ದೇವೆ.
63. ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯು ಪೂರ್ವನಿಶ್ಚಿತವಲ್ಲದ ಸವಾಲುಗಳನ್ನು ಎದುರಿಸುತ್ತಿದೆ ಎನ್ನುವುದು ನಮಗೆ ಗೊತ್ತಿದೆ. ಮುಕ್ತ ಜಾಗತಿಕ ಆರ್ಥಿಕತೆಯ ಪ್ರಾಮುಖ್ಯತೆ ಬಗೆಗೆ ಅರಿವಿದ್ದು, ಅದು ಜಾಗತೀಕರಣದ ಲಾಭವನ್ನು ಎಲ್ಲ ದೇಶಗಳು ಹಾಗೂ ಜನರು ಪಡೆಯಲು ಸಾಧ್ಯವಿರುವ ಹಾಗೂ ಎಲ್ಲರನ್ನೂ ಒಳಗೊಂಡ, ಸುಸ್ಥಿರ ಅಭಿವೃದ್ಧಿಯನ್ನು ಬೆಂಬಲಿಸುವ ಮತ್ತು ಆರ್ಥಿಕ ಸಮೃದ್ಧಿಯನ್ನು ತರುವಂತೆ ಇರಬೇಕಿದೆ. ಡಬ್ಲ್ಯುಟಿಒದ ಎಲ್ಲ ಸದಸ್ಯರು ಸಂಘಟನೆಯ ನಿಯಮಗಳನ್ನು ಪಾಲಿಸಬೇಕು ಹಾಗೂ ಈಗಾಗಲೇ ಸಮ್ಮತಿಸಿದಂತೆ, ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯಡಿ ಬದ್ಧತೆಯನ್ನು ಗೌರವಿಸಬೇಕು ಎಂದು ಕೋರು ತ್ತೇವೆ.
64. ಡಬ್ಲ್ಯುಟಿಒದ ವಿವಾದ ಬಗೆಹರಿಸುವಿಕೆ ವ್ಯವಸ್ಥೆಯು ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಮೂಲೆಗಲ್ಲಾಗಿದ್ದು, ಅಂತಾರಾಷ್ಟ್ರೀಯ ವ್ಯಾಪಾರದಲ್ಲಿ ನಿಶ್ಚಿತತೆ ಹಾಗೂ ಭದ್ರತೆಯನ್ನು ಹೆಚ್ಚಿಸಲು ರೂಪುಗೊಂಡಿದೆ. ಮೇಲ್ಮನವಿ ಮಂಡಳಿಯ ನೂತನ ಸದಸ್ಯರ ಆಯ್ಕೆ ಪ್ರಕ್ರಿಯೆಯಲ್ಲಿ ಆಗಿರುವ ಬಿಕ್ಕಟ್ಟಿನಿಂದ ವಿವಾದ ಬಗೆಹರಿಸುವಿಕೆ ವ್ಯವಸ್ಥೆಯು ಪಾಶ್ರ್ವವಾಯು ಪೀಡಿತವಾಗಲಿದೆ ಮತ್ತು ಸದಸ್ಯರ ಹಕ್ಕು ಮತ್ತು ಕರ್ತವ್ಯಗಳನ್ನು ದುರ್ಬಲಗೊಳಿಸಲಿದೆ. ಆದ್ದರಿಂದ ಎಲ್ಲ ಸದಸ್ಯರು ಈ ವಿಷಯವನ್ನು ಆದ್ಯತೆ ಎಂದು ಪರಿಗಣಿಸಿ, ಸವಾಲುಗಳನ್ನು ಬಗೆಹರಿಸಬೇಕು ಎಂದು ಕೋರುತ್ತೇವೆ.
65. ಡಬ್ಲ್ಯುಟಿಒದ ರಾಜಿಸಂಧಾನ ಕ್ರಿಯೆಯ ಮೇಲ್ವಿಚಾರಣೆ ಅಗತ್ಯವಿದೆ ಎನ್ನುವುದನ್ನು ನಾವು ಒಪ್ಪಿಕೊಳ್ಳಬೇಕಿದೆ. ಆದ್ದರಿಂದ, ಅಭಿವೃದ್ಧಿಶೀಲ ದೇಶಗಳು ಸೇರಿ ದಂತೆ ಡಬ್ಲ್ಯುಟಿಒದ ಎಲ್ಲ ಸದಸ್ಯರ ಆಸಕ್ತಿ ಮತ್ತು ಕಾಳಜಿಗಳನ್ನು ಗಮನದಲ್ಲಿರಿಸಿಕೊಂಡು, ಬಹುಪಕ್ಷೀಯ ವ್ಯಾಪಾರ ವ್ಯವಸ್ಥೆಯ ಶಾಸನಾತ್ಮಕ ಚೌಕಟ್ಟನ್ನು ಇನ್ನಷ್ಟು ಅಭಿವೃದ್ಧಿಪಡಿಸಲು ಎಲ್ಲ ದೇಶಗಳು ರಚನಾತ್ಮಕವಾಗಿ ತೊಡಗಿಕೊಳ್ಳಲು ಸಮ್ಮತಿಸಿದ್ದೇವೆ.
66. ಆಫ್ರಿಕದಲ್ಲಿ ಮೂಲಸೌಕರ್ಯ ವ್ಯವಸ್ಥೆಯ ಅಭಿವೃದ್ಧಿ ಹಾಗೂ ಸಂಪರ್ಕದ ಪ್ರಾಮುಖ್ಯತೆಯನ್ನು ನಾವು ಅರ್ಥಮಾಡಿಕೊಂಡಿದ್ದು, ಆಫ್ರಿಕದ ಅಭಿವೃದ್ಧಿಗಾಗಿ ನೂತನ ಸಹಭಾಗಿತ್ವ(ನ್ಯೂ ಪಾರ್ಟ್ನರ್ಶಿಪ್ ಫಾರ್ ಆಫ್ರಿಕಾಸ್ ಡೆವಲಪ್ಮೆಂಟ್, ಎನ್ಇಪಿಎಡಿ) ಮತ್ತು ಆಫ್ರಿಕದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ(ಪಿಐ ಡಿಎ) ಮೂಲಕ ಖಂಡದ ಮೂಲಸೌಕರ್ಯ ಸಂಬಂಧಿತ ಸವಾಲುಗಳನ್ನು ಎದುರಿಸುವಲ್ಲಿ ಆಫ್ರಿಕಾ ಒಕ್ಕೂಟ ಇಟ್ಟ ಹೆಜ್ಜೆಗಳನ್ನು ನಾವು ಗುರುತಿಸಿದ್ದೇವೆ. ಆಫ್ರಿಕದಲ್ಲಿ ಕೈಗಾರಿಕಾಭಿವೃದ್ಧಿ, ಉದ್ಯೋಗ ಸೃಷ್ಟಿ, ಕೌಶಲಾಭಿವೃದ್ಧಿ, ಆಹಾರ ಮತ್ತು ಪೌಷ್ಟಿಕಾಂಶ ಸುರಕ್ಷೆ, ಬಡತನ ನಿವಾರಣೆ ಹಾಗೂ ಸುಸ್ಥಿರ ಅಭಿವೃದ್ಧಿ ಕ್ಷೇತ್ರದಲ್ಲಿ ಪರಸ್ಪರ ಅನುಕೂಲಕರವಾದ ರೀತಿಯಲ್ಲಿ ಬಂಡವಾಳ ಹೂಡಿಕೆಯನ್ನು ನಾವು ಬೆಂಬಲಿಸುತ್ತೇವೆ.
67. ಆಫ್ರಿಕದಲ್ಲಿ ಕೈಗಾರಿಕೀಕರಣವನ್ನು ಹಾಗೂ ಆಫ್ರಿಕನ್ ಒಕ್ಕೂಟದ ಅಜೆಂಡಾ 2063ನ್ನು ಆಗುಮಾಡುವ ಅಗತ್ಯದ ಬಗೆಗೆ ಅರಿವಿದ್ದು, ಆಫ್ರಿಕದ ದೇಶಗಳು ಹಾಗೂ ಆಫ್ರಿಕನ್ ಒಕ್ಕೂಟವು ಆಫ್ರಿಕನ್ ಕಾಂಟಿನೆಂಟಲ್ ಫ್ರೀ ಟ್ರೇಡ್ ಏರಿಯಾ(ಎಎಫ್ಸಿ ಎಫ್ಟಿಎ)ಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸುತ್ತೇವೆ. ಖಂಡದ ಆರ್ಥಿಕ ಸಮಗ್ರತೆಯಲ್ಲಿ ಈ ಒಪ್ಪಂದವು ಒಂದು ಬಹು ಮುಖ್ಯ ಹೆಜ್ಜೆಯಾಗಿದ್ದು, ಆಫ್ರಿಕದ ದೇಶಗಳಲ್ಲಿ ಅಂತರ್ ವ್ಯಾಪಾರದ ಅಪಾರ ಸಾಮಥ್ರ್ಯವನ್ನು ಬಿಡು ಗಡೆಗೊಳಿಸುವಲ್ಲಿ ಹಾಗೂ ಅದರ ಸಾಮಾಜಿಕೋ-ಆರ್ಥಿಕ ಸವಾಲುಗಳನ್ನು ಎದುರಿಸಲು ನೆರವಾಗಲಿದೆ. ಅಜೆಂಡಾ 2063ಕ್ಕೆ ನಮ್ಮ ಬೆಂಬಲವನ್ನು ಮತ್ತೊಮ್ಮೆ ಘೋಷಿಸುತ್ತಿದ್ದು, ಖಂಡದ ಏಕತೆ ಹಾಗೂ ಅಭಿವೃದ್ಧಿಯನ್ನು ಉತ್ತೇಜಿಸುವ ಪ್ರಯತ್ನಗಳನ್ನು ಬೆಂಬಲಿಸುತ್ತೇವೆ.
68. ಪಾಲು(ಕೋಟಾ) ಆಧರಿತ, ಸಾಕಷ್ಟು ಸಂಪನ್ಮೂಲವುಳ್ಳ ಅಂತಾರಾಷ್ಟ್ರೀಯ ವಿತ್ತ ನಿಧಿ(ಐಎಂಎಫ್)ಯು ಕೇಂದ್ರವಾಗುಳ್ಳ ಬಲಿಷ್ಠ ಜಾಗತಿಕ ಹಣಕಾಸು ಸುರ ಕ್ಷಾ ಜಾಲ ಇರಬೇಕು ಎನ್ನುವುದು ನಮ್ಮ ಅಭಿಪ್ರಾಯ. ಕಡು ಬಡ ದೇಶಗಳ ದನಿಯನ್ನು ರಕ್ಷಿಸುವ ಜತೆಗೆ ಹೊಸ ಕೋಟಾ ಸೂತ್ರವೂ ಸೇರಿದಂತೆ ಐಎಂಎಫ್ನ ಕೋಟಾದ 15ನೇ ಸಾಮಾನ್ಯ ಪುನರ್ವಿಮರ್ಶೆಗೆ, 2019ರ ವಸಂತ ಋತುವಿಗೆ ಮುನ್ನ ಇಲ್ಲವೇ 2019ರ ವಾರ್ಷಿಕ ಸಭೆಗೆ ಮುನ್ನ, ನಾವು ಬದ್ಧರಾಗಿದ್ದೇವೆ. ಐಎಂಎಫ್ನ ಆಡಳಿತದಲ್ಲಿ ಸುಧಾರಣೆಯಿಂದ ಸಹರಾ ಕೆಳಗಿನ ದೇಶಗಳು ಸೇರಿದಂತೆ, ಕಡು ಬಡ ದೇಶಗಳ ದನಿ ಮತ್ತು ಪ್ರಾತಿನಿಧ್ಯ ಬಲಗೊಳ್ಳಲಿದೆ.
69. ಅಂತಾರಾಷ್ಟ್ರೀಯ ಹಣಕಾಸು ಹಾಗೂ ಆರ್ಥಿಕ ಸಮಿತಿಯ ಅಧ್ಯಕ್ಷರಾಗಿ ಆಯ್ಕೆಯಾದ ದಕ್ಷಿಣ ಆಫ್ರಿಕದ ರಿಸರ್ವ್ ಬ್ಯಾಂಕ್ನ ಲೆಸೆಟ್ಜಾ ಗನ್ಯಾಗೋ ಅವರನ್ನು ನಾವು ಸ್ವಾಗತಿಸುತ್ತೇವೆ ಹಾಗೂ ಅಭಿನಂದನೆ ಸಲ್ಲಿಸುತ್ತೇವೆ.
70. ಬ್ರಿಕ್ಸ್ ಕಂಟಿಂಜೆಂಟ್ ರಿಸರ್ವ್ ಅರೇಂಜ್ಮೆಂಟ್(ಸಿಆರ್ಎ)ನ ಬಲಗೊಳಿಸುವಿಕೆ ಹಾಗೂ ಕ್ಷಿಪ್ರವಾಗಿ ಕಾರ್ಯಾಚರಣೆಗೆ ಸಿದ್ಧಗೊಳ್ಳುವಿಕೆಯ ಖಾತ್ರಿಗೊಳಿಸುವಿಕೆಗೆ ತೆಗೆದುಕೊಂಡ ಹೆಜ್ಜೆಗಳನ್ನು ನಾವು ಗಮನಿಸಿದ್ದು, ಸಿಆರ್ಎ ಕಾರ್ಯಜಾಲದ ಪರೀಕ್ಷಾ ಪ್ರಯೋಗ ಯಶಸ್ವಿಯಾಗಿರುವುದನ್ನು ಸ್ವಾಗತಿಸುತ್ತೇವೆ. ಸಿಆರ್ಎ ಹಾಗೂ ಐಎಂಎಫ್ ನಡುವೆ ಸಹಕಾರವನ್ನು ನಾವು ಉತ್ತೇಜಿಸುತ್ತೇವೆ.
71. ಬ್ರಿಕ್ಸ್ ಸ್ಥಳೀಯ ಕರೆನ್ಸಿ ಫಂಡ್ನ ಸ್ಥಾಪನೆಗೆ ಸಂಬಂಧಿಸಿದಂತೆ ಆಗಿರುವ ಪ್ರಗತಿ ಬಗೆಗೆ ನಮಗೆ ತೃಪ್ತಿಯಿದ್ದು, ಅದು ಕಾರ್ಯಾಚರಣೆ ಆರಂಭಿಸುವುದನ್ನು ಎದುರು ನೋಡುತ್ತಿದ್ದೇವೆ.
72. ಬ್ರಿಕ್ಸ್ ದೇಶಗಳಲ್ಲಿ ಬಾಂಡ್ಗಳ ನೀಡಿಕೆಗೆ ಸಂಬಂಧಿಸಿದಂತೆ ಲೆಕ್ಕಪತ್ರ ಪರಿಶೀಲನೆ ಹಾಗೂ ಅದರ ಮಾನದಂಡಗಳ ಸಮಗ್ರಗೊಳಿಸುವಿಕೆಯನ್ನು ಇನ್ನಷ್ಟು ಬಲಗೊಳಿಸಲು ನಾವು ಒಪ್ಪಿದ್ದು, ಈ ಕ್ಷೇತ್ರದಲ್ಲಿ ಮತ್ತಷ್ಟು ಸಹಕಾರ ನೀಡಲು ಸಮ್ಮತಿಸಿದ್ದೇವೆ.
73. ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯ ಸಂದರ್ಭದಲ್ಲಿ ಬ್ಲಾಕ್ಚೈನ್ ತಂತ್ರಜ್ಞಾನ ಹಾಗೂ ಡಿಸ್ಟ್ರಿಬ್ಯೂಟೆಡ್ ಲೆಡ್ಜರ್ ಕುರಿತು ಸಂಯೋಜಿತ ಸಂಶೋಧನೆಗಾಗಿ ಎಂಓಯುಗೆ ಸಹಿ ಹಾಕಿರುವುದನ್ನು ಸ್ವಾಗತಿಸುತ್ತೇವೆ. ಅಂತರ್ಜಾಲ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ ಇದು ನಮಗೆ ನೆರವಾಗಲಿದೆ ಎಂದು ನಂಬಿದ್ದೇವೆ.
74. ಮೂಲಸೌಕರ್ಯ, ಬಂಡವಾಳ ಹೂಡಿಕೆ ಮತ್ತು ಅಂತಾರಾಷ್ಟ್ರೀಯ ಅಭಿವೃದ್ಧಿ ನೆರವು ಯೋಜನೆಗಳು ಸುಸ್ಥಿರ ಆರ್ಥಿಕ ಅಭಿವೃದ್ಧಿ ಹಾಗೂ ಪ್ರಗತಿಗೆ ಬುನಾದಿಗಳಾಗಿವೆ; ಅವು ಉತ್ಪಾದಕತೆಯ ಹೆಚ್ಚಳಕ್ಕೆ ಹಾಗೂ ಸಮಗ್ರತೆಗೆ ಕಾರಣವಾಗುತ್ತವೆ. ನಿಕಟ ಆರ್ಥಿಕ ಸಂಬಂಧ ಬೆಳೆಸುವಲ್ಲಿ ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಸಮಗ್ರತೆಯ ಪ್ರಾಮುಖ್ಯತೆಯನ್ನು ನಾವು ಒತ್ತಿ ಹೇಳುತ್ತಿದ್ದೇವೆ.
75. ಸಾರ್ವಜನಿಕ ಮೂಲಸೌಕರ್ಯ ಮತ್ತು ಹೂಡಿಕೆ ಕ್ಷೇತ್ರದಲ್ಲಿ ಖಾಸಗಿಯವರು ಬಂಡವಾಳ ತೊಡಗಿಸುವಲ್ಲಿ ಬಹುಪಕ್ಷೀಯ ಅಭಿವೃದ್ಧಿ ಬ್ಯಾಂಕ್(ಎಂಡಿಬಿ)ಗಳು, ಅದರಲ್ಲೂ ನ್ಯೂ ಡೆವಲಪ್ಮೆಂಟ್ ಬ್ಯಾಂಕ್(ಎನ್ಡಿಬಿ) ವೇಗವರ್ಧಕದಂತೆ ಕಾರ್ಯ ನಿರ್ವಹಿಸುತ್ತದೆ ಎಂದು ಅರ್ಥ ಮಾಡಿಕೊಂಡಿದ್ದೇವೆ.
76. ನಮ್ಮ ದೇಶಗಳಲ್ಲಿ ಸಾಮಾಜಿಕ, ಆರ್ಥಿಕ ಹಾಗೂ ಪಾರಿಸರಿಕ ಕ್ಷೇತ್ರಗಳಿಗೆ ಸಂಪನ್ಮೂಲ ನೀಡುವಲ್ಲಿ ಎನ್ಡಿಬಿಯ ಪ್ರಗತಿ ನಮಗೆ ತೃಪ್ತಿ ತಂದಿದೆ ಮತ್ತು ಯೋಜನಾ ಸಿದ್ಧತೆ ನಿಧಿಗೆ ಶೀಘ್ರವೇ ಚಾಲನೆ ನೀಡಲಾಗುತ್ತದೆ ಎಂದು ನಿರೀಕ್ಷಿಸುತ್ತಿದ್ದೇವೆ. ಬ್ರೆಜಿಲ್ನ ಸವೋ ಪೋಲೋದಲ್ಲಿ ಅಮೆರಿಕದ ಪ್ರಾಂತೀಯ ಕಚೇರಿ ತೆರೆಯುತ್ತಿರುವುದನ್ನು ನಾವು ಸ್ವಾಗತಿಸುತ್ತಿದ್ದು, ಇದು ಆಫ್ರಿಕದ ಪ್ರಾಂತೀಯ ಕೇಂದ್ರದೊಡಗೂಡಿ ಖಂಡದಲ್ಲಿ ಎನ್ಡಿಬಿಯು ತನ್ನ ಸ್ಥಾನವನ್ನು ಬಲಗೊಳಿಸಿಕೊಳ್ಳ ಲು ನೆರವಾಗಲಿದೆ. ಚೀನಾದ ಶಾಂಗೈಯಲ್ಲಿ ಮೇ 28-29ರಂದು ನಡೆದ ಮೂರನೇ ವಾರ್ಷಿಕ ಸಭೆಯಲ್ಲಿ ಎನ್ಡಿಬಿಯ ಆಡಳಿತ ಮಂಡಳಿಯು ಅಭಿವೃದ್ಧಿ ಕ್ಷೇತ್ರಕ್ಕೆ ಹಣಕಾಸು ನೆರವು ನೀಡುವ ಕುರಿತು ಚರ್ಚೆ ನಡೆಸಿರುವುದನ್ನು ನಾವು ಗಮನಿಸಿದ್ದೇವೆ. ಬದಲಾಗುತ್ತಿರುವ ಜಾಗತಿಕ ಸನ್ನಿವೇಶದಲ್ಲಿ ಎನ್ಡಿಬಿಯ ಭವಿಷ್ಯದ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿತ್ತು.
77. ಬ್ರಿಕ್ಸ್ ದೇಶಗಳ ಅಭಿವೃದ್ಧಿಯ ಅಗತ್ಯಗಳನ್ನು ಪೂರೈಸಲು ಹಾಗೂ ವಾಸ್ತವಿಕ ಆರ್ಥಿಕತೆಗೆ ಸೇವೆ ನೀಡಲು ಆರ್ಥಿಕ ಸಹಕಾರವನ್ನು ಹೆಚ್ಚಿಸುವ ಅಗತ್ಯವನ್ನು ನಾವು ಒತ್ತಿ ಹೇಳುತ್ತಿದ್ದೇವೆ. ಈ ಸಂಬಂಧ, ಬ್ರಿಕ್ಸ್ ದೇಶಗಳ ನಡುವೆ ಆರ್ಥಿಕ ಸೇವೆಗಳ ವ್ಯಾಪ್ತಿಯನ್ನು ಹಾಗೂ ಹಣಕಾಸು ಸಂಸ್ಥೆಗಳ ಕಾರ್ಯಜಾಲವನ್ನು ಉತ್ತೇಜಿಸುವ ಮೂಲಕ ಆರ್ಥಿಕ ಮಾರುಕಟ್ಟೆಯನ್ನು ಸಮಗ್ರಗೊಳಿಸುವುದಕ್ಕೆ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸುತ್ತಿದ್ದೇವೆ. ಇದೇ ವೇಳೆ, ಪ್ರತಿ ದೇಶದ ಪ್ರಸ್ತುತ ಶಾಸನಾತ್ಮಕ ಚೌಕಟ್ಟು ಹಾಗೂ ಡಬ್ಲ್ಯುಟಿಒ-ಗ್ಯಾಟ್ನ ನಿಯಮಗಳನ್ನು ಗಮನದಲ್ಲಿ ಇರಿಸಿಕೊಂಡು, ವಿತ್ತ ಕ್ಷೇತ್ರದ ನಿಯಂತ್ರಕರ ನಡುವೆ ಸಹಕಾರ ಮತ್ತು ಸಂವಹನವನ್ನು ಖಾತ್ರಿಗೊಳಿಸಿ ಕೊಳ್ಳಲಾಗುತ್ತದೆ. ಪ್ರತಿ ದೇಶದ ಕೇಂದ್ರ ಬ್ಯಾಂಕ್ನ ಶಾಸನಾತ್ಮಕ ಕಟ್ಟುಪಾಡುಗಳಿಗೆ ಅನುಗುಣವಾಗಿ ಕರೆನ್ಸಿಯ ಸಹಕಾರವನ್ನು ಹೆಚ್ಚಿಸಲು ಹಾಗೂ ಸಹಕಾರದ ಇನ್ನಷ್ಟು ಮಾರ್ಗಗಳನ್ನು ಕಂಡುಕೊಳ್ಳಲು ಯತ್ನಿಸುತ್ತೇವೆ. ಬ್ರಿಕ್ಸ್ ದೇಶಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಹಸಿರು ಹಣಕಾಸು ನೆರವು(ಗ್ರೀನ್ ಫೈನಾನ್ಸಿಂಗ್) ಇನ್ನಷ್ಟು ಹೆಚ್ಚಿಸುತ್ತೇವೆ.
78. ಫೈನಾನ್ಷಿಯಲ್ ಆಕ್ಷನ್ಸ್ ಟಾಸ್ಕ್ಫೋರ್ಸ್(ಎಫ್ಎಟಿಎಫ್) ಮತ್ತು ವಿಶ್ವ ಕಸ್ಟಮ್ಸ್ ಸಂಸ್ಥೆಗೆ ಸಹಕಾರ ಸೇರಿದಂತೆ, ಹಣದ ಅಕ್ರಮ ಹರಿವು ತಡೆಗೆ ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಪ್ರಯತ್ನಗಳಿಗೆ ನಮ್ಮ ಬದ್ಧತೆಯನ್ನು ದೃಢಪಡಿಸುತ್ತಿದ್ದೇವೆ. ಈ ಸಂಬಂಧ, ಪರಸ್ಪರ ವಿನಿಮಯ ಹಾಗೂ ಮಾಹಿತಿ ಹಂಚಿಕೊಳ್ಳುವಿಕೆಯನ್ನು ಹೆಚ್ಚಿಸುವ ಪ್ರಾಮುಖ್ಯತೆಯನ್ನು ಮನಗಂಡಿದ್ದೇವೆ. ಎಫ್ಎಟಿಎಫ್ನ ಉದ್ದೇಶಗಳನ್ನು ಎತ್ತಿ ಹಿಡಿಯುವ-ಬೆಂಬಲಿಸುವ ಮತ್ತು ಎಫ್ಎಟಿಎಫ್ ಜಾರಿ ಮೂಲಕ ಹಣ ಕಳ್ಳಸಾಗಣೆ ಮತ್ತು ಉಗ್ರ ಚಟುವಟಿಕೆಗಳ ವಿಸ್ತರಣೆ-ಚಟುವಟಿಕೆಗೆ ಹಣಕಾಸು ಪೂರೈಕೆಯನ್ನು ತಡೆಯಲು ಪರಸ್ಪರ ಸಹಕಾರವನ್ನು ತೀವ್ರ ಗೊಳಿಸುವ ಅಗತ್ಯವನ್ನು ಮನಗಂಡಿದ್ದೇವೆ.
79. ಭ್ರಷ್ಟಾಚಾರವು ದೇಶಗಳ ಶಾಸನ ವ್ಯವಸ್ಥೆಯನ್ನು ಬುಡಮೇಲು ಮಾಡುವುದೂ ಸೇರಿದಂತೆ, ದೀರ್ಘಕಾಲೀನ ವಿಪರಿಣಾಮ ಬೀರಬಲ್ಲ ಜಾಗತಿಕ ಸವಾಲಾಗಿದೆ. ಅದು ಸ್ಥಳೀಯ ಹಾಗೂ ವಿದೇಶಿ ಹೂಡಿಕೆಗೆ ತಡೆಯೊಡ್ಡುವ ಮೂಲಕ ದೇಶದ ಆರ್ಥಿಕ ಪ್ರಗತಿಗೂ ಹಾನಿಯೊಡ್ಡುತ್ತಿದೆ. ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಶ್ವ ಸಂಸ್ಥೆಯ ಒಪ್ಪಂದದ ನಾಲ್ಕನೇ ಅಧ್ಯಾಯದಲ್ಲಿ ಉಲ್ಲೇಖಿಸಿರುವ, ಅಂತಾರಾಷ್ಟ್ರೀಯ ಸಹಕಾರಕ್ಕೆ ಬದ್ಧರಾಗಿದ್ದೇವೆ. ಇದಕ್ಕಾಗಿ ಬ್ರಿಕ್ಸ್ನ ಭ್ರಷ್ಟಾಚಾರ ವಿರೋಧ ಸಹಕಾರ ಕುರಿತ ಕಾರ್ಯಕಾರಿ ಗುಂಪಿನೊಳಗೇ ಅಂತಾರಾಷ್ಟ್ರೀಯ ಸಹಕಾರವನ್ನು ಬಲಗೊಳಿಸಲು ಬದ್ಧರಾಗಿದ್ದೇವೆ. ದೇಶಿ ಶಾಸನ ವ್ಯವಸ್ಥೆಯನ್ನು ಉಲ್ಲಂಘಿಸದೆ, ಭ್ರಷ್ಟಾಚಾರ ವಿರೋಧ ಕಾನೂನುಗಳ ಜಾರಿ, ದೇಶಭ್ರಷ್ಟರು, ಆರ್ಥಿಕ-ಭ್ರಷ್ಟಾಚಾರ ಅಪರಾಧಿಗಳ ಬಂಧನ ಮತ್ತು ಸ್ವದೇಶಕ್ಕೆ ವಾಪಸ್ ಕಳಿಸುವುದು, ಅವರ ಆಸ್ತಿಯ ಮುಟ್ಟುಗೋಲು, ಭ್ರಷ್ಟಾಚಾರಕ್ಕೆ ಸಂಬಂಧಿಸಿದ ಕ್ರಿಮಿನಲ್ ಮತ್ತು ಕ್ರಿಮಿನಲ್ ಅಲ್ಲದ ಅಪರಾಧ ಸೇರಿದಂತೆ ಇನ್ನಿತರ ವಿಷಯಗಳಲ್ಲಿ ನಾವು ಸಹಕಾರ ನೀಡುತ್ತೇವೆ. ಅಂತೆಯೇ, ಭ್ರಷ್ಟಾಚಾರಿಗಳಿಗೆ ಹಾಗೂ ಅವರ ಸಂಪತ್ತಿನ ಸಂಗ್ರಹಣೆಗೆ ಅವಕಾಶ ನೀಡಬಾರದು ಎಂದು ಅಂತಾರಾಷ್ಟ್ರೀಯ ಸಮುದಾಯವನ್ನು ಕೋ ರುತ್ತೇವೆ. ಬ್ರಿಕ್ಸ್ ದೇಶಗಳ ನಡುವೆ ಭ್ರಷ್ಟಾಚಾರದ ವಿರುದ್ಧದ ಸಹಕಾರಕ್ಕೆ ಪರಸ್ಪರ ಅರ್ಥ ಮಾಡಿಕೊಳ್ಳುವುದು, ಅನುಭವಗಳನ್ನು ಹಂಚಿಕೊಳ್ಳುವುದು ಹಾಗೂ ವಿನಿಮಯ ಕೀಲಿಕೈ ಎಂದು ನಾವು ಭಾವಿಸಿದ್ದು, ಹಿಂದಿನಂತೆ ಮುಂದೆಯೂ ಪ್ರಯತ್ನಗಳನ್ನು ಮುಂದುವರಿಸಲಿದ್ದೇವೆ. ಮಾಹಿತಿ ವಿನಿಮಯಕ್ಕೆ ಅಗತ್ಯವಾದ ವೇದಿಕೆಗಳನ್ನು ಸೃಷ್ಟಿಸುವ ಹಾಗೂ ಬಹುಪಕ್ಷೀಯ ವೇದಿಕೆಗಳಲ್ಲಿ ಒಮ್ಮುಖಗೊಳಿಸುವಿಕೆ ಮೂಲಕ, ಯುಎನ್ಸಿಎಸಿಯನ್ನು ಅನುಷ್ಠಾನಗೊಳಿಸಲು ಪರಸ್ಪರ ಬೆಂಬಲ ನೀಡುತ್ತೇವೆ. ಆಫ್ರಿಕದ ಒಕ್ಕೂಟವು 2018ನ್ನು ಭ್ರಷ್ಟಾಚಾರ ವಿರೋಧಿ ವರ್ಷ ಎಂದು ಘೋಷಿಸಿರುವುದನ್ನು ಶ್ಲಾಘನೀಯ.
80. ಬ್ರಿಕ್ಸ್ನ ಆರ್ಥಿಕ ಸಹಭಾಗಿತ್ವ ಕಾರ್ಯತಂತ್ರವನ್ನು ಜಾರಿಗೊಳಿಸುವಲ್ಲಿ ಅದರ ವಾಣಿಜ್ಯ ಸಚಿವರ ಎಂಟನೇ ಸಭೆಯ ಸಕಾರಾತ್ಮಕ ಫಲಿತಾಂಶವನ್ನು ನಾವು ಸ್ವಾಗತಿಸುತ್ತೇವೆ. ಬ್ರಿಕ್ಸ್ನ ಆರ್ಥಿಕ ಮತ್ತು ವಾಣಿಜ್ಯಿಕ ವಿಷಯಗಳ ಸಂಪರ್ಕ ಗುಂಪಿನ(ಸಿಜಿಇಟಿಐ) ಮುಂದುವರಿದ ಚಟುವಟಿಕೆಗಳಿಗೆ ಸಭೆ ಬೆಂಬಲ ನೀಡಿತ್ತು. ಬ್ರಿಕ್ಸ್ನ ಆರ್ಥಿಕ ಮತ್ತು ವಾಣಿಜ್ಯಿಕ ಸಹಕಾರ ಕ್ರಿಯಾನೀತಿಯ ಅನುಷ್ಠಾನದಲ್ಲಿ ಆದ ಉತ್ತಮ ಪ್ರಗತಿಯನ್ನು ನಾವು ಸ್ವಾಗತಿಸುತ್ತೇವೆ. ಅಧಿಕ ಪಾಲ್ಗೊಳ್ಳುವಿಕೆ, ಮೌಲ್ಯವರ್ಧನೆ ಮತ್ತು ಜಾಗತಿಕ ಮೌಲ್ಯ ಸರಪಳಿಯಲ್ಲಿ ನಮ್ಮ ಕಂಪನಿಗಳ ಮೇಲೇರುವಿಕೆ, ಅದರಲ್ಲೂ ವಿಶೇಷವಾಗಿ ಕೈಗಾರಿಕೆ ಹಾಗೂ ಕೃಷಿ ಕ್ಷೇತ್ರದಲ್ಲಿ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ(ಎಂಎಸ್ಎಂಇ)ಗಳಲ್ಲಿ ಕೈಗಾರಿಕಾಭಿವೃದ್ಧಿಯನ್ನು ಉತ್ತೇಜಿಸುವ ಕಾರ್ಯನೀತಿಯನ್ನು ಕಾಯ್ದುಕೊಳ್ಳುವುದೂ ಸೇರಿದಂತೆ, ಉತ್ತೇಜನ ಉಪಕ್ರಮಗಳನ್ನು ನಾವು ಬೆಂಬಲಿಸುತ್ತೇವೆ. ಬ್ರಿಕ್ಸ್ ದೇಶಗಳ ನಡುವೆ ಮೌಲ್ಯವರ್ಧಿತ ವ್ಯಾಪಾರದ ಹೆಚ್ಚಳದ ಪ್ರಾಮುಖ್ಯತೆಯನ್ನು ಗುರುತಿಸುತ್ತಲೇ, ಸಿಜಿಇಟಿಐಯ ವ್ಯಾಪಾರ ಉತ್ತೇಜನ ಕಾರ್ಯಕಾರಿ ಗುಂಪು ಹಾಗೂ ಬ್ರಿಕ್ಸ್ ಇ-ವಾಣಿಜ್ಯ ಕಾರ್ಯಕಾರಿ ಗುಂಪಿನ ಸಭೆಯನ್ನು ಮತ್ತೆ ಕರೆಯಬೇಕೆಂದು ಶಿಫಾರಸು ಮಾಡುತ್ತೇವೆ. ಬ್ರಿಕ್ಸ್ ದೇಶಗಳ ನಡುವೆ ಮೌಲ್ಯವರ್ಧಿತ ವ್ಯಾಪಾರವನ್ನು ಉತ್ತೇಜಿಸಲು ಜಂಟಿ ಅಧ್ಯಯನದ ಮರು ಅವಲೋಕನಕ್ಕೆ ಮುಂದಾಗಿರುವುದನ್ನು ಸ್ವಾಗತಿಸುತ್ತೇವೆ. ಐಪಿಆರ್, ಇ-ವಾಣಿಜ್ಯ, ಸೇವಾ ಕ್ಷೇತ್ರದಲ್ಲಿ ವ್ಯಾಪಾರ ಮತ್ತು ಇ ವಾಣಿಜ್ಯ, ಮಾದರಿಗಳು ಹಾಗೂ ತಾಂತ್ರಿಕ ನಿಯಂತ್ರಣಗಳು, ಎಂಎಸ್ಎಂಇಗಳು ಹಾಗೂ ಮಾದರಿ ಇ-ಪೋರ್ಟ್ನಲ್ಲಿ ಸಹಕಾರ ಕುರಿತ ಬ್ರಿಕ್ಸ್ನ ವ್ಯಾಪಾರ ಸಚಿವರ ಎಂಟನೇ ಸಭೆಯ ಸಕಾರಾತ್ಮಕ ಫಲಿತಾಂಶವನ್ನು ಸ್ವಾಗತಿಸುತ್ತೇವೆ.
81. ಪ್ರಾದೇಶಿಕ ವಿಮಾನಯಾನಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿರುವುದನ್ನು ಸ್ವಾಗತಿಸುತ್ತೇವೆ. ಇದು ಸಂಪರ್ಕ ಹಾಗೂ ಮೂಲಸೌಕರ್ಯ ಕ್ಷೇತ್ರದಲ್ಲಿ ಸಹಕಾರವನ್ನು ಬಲಗೊಳಿಸುವ ಪ್ರಮುಖ ಮೈಲುಗಲ್ಲು ಎಂದು ನಾವು ನಂಬಿದ್ದೇವೆ.
82. ಬ್ರಿಕ್ಸ್ ಸೀಮಾಸುಂಕ ವ್ಯವಸ್ಥೆಯ ಕಾರ್ಯಶೀಲ ಚೌಕಟ್ಟನ್ನು ಅನುಷ್ಠಾನಗೊಳಿಸುವಲ್ಲಿ ಬ್ರಿಕ್ಸ್ನ ಸೀಮಾಸುಂಕ ಆಡಳಿತವು ನೀಡಿದ ಸಹಕಾರದ ಫಲಿತಾಂಶಗಳನ್ನು ಶ್ಲಾಘಿಸುತ್ತೇವೆ. ಶೀಘ್ರವೇ ಅಂತ್ಯಗೊಳ್ಳುವ ಮತ್ತು ಬ್ರಿಕ್ಸ್ನ ಸೀಮಾಸುಂಕ ಪರಸ್ಪರ ನೆರವು ಒಪ್ಪಂದಕ್ಕೆ ಪ್ರವೇಶವೂ ಸೇರಿದಂತೆ ಅದರ ದೀರ್ಘಕಾಲೀನ ಗುರಿಗಳನ್ನು ಸ್ವಾಗತಿಸುತ್ತೇವೆ. ಇದರಿಂದ 2022ರೊಳಗೆ ಪರಸ್ಪರ ನಿಯಂತ್ರಣಗಳು ಮತ್ತು ಆರ್ಥಿಕ ಆಪರೇಟರ್ಗಳ ಗುರುತಿಸುವಿಕೆಯೂ ಸೇರಿದಂತೆ ಬ್ರಿಕ್ಸ್ನ ಆಥರೈಸ್ಡ್ ಎಕನಾಮಿಕ್ ಆಪರೇಟರ್ ಕಾರ್ಯಕ್ರಮವು ಆರಂಭಗೊಳ್ಳಲಿದೆ. ಇದಕ್ಕೆ ಸಂಬಂಧಿಸಿದಂತೆ, ಬ್ರಿಕ್ಸ್ನ ಸೀಮಾಸುಂಕ ಆಡಳಿತವು ಉದ್ದೇಶಿತ ಗುರಿಯನ್ನು ತಲುಪಲು ಮತ್ತು ಬ್ರಿಕ್ಸ್ ಸೀಮಾಸುಂಕ ತರಬೇತಿ ಕೇಂದ್ರಗಳನ್ನು ಆರಂಭಿಸುವುದೂ ಸೇರಿದಂತೆ ಕಡಿಮೆ, ಮಧ್ಯಮ ಹಾಗೂ ದೀರ್ಘ ಕಾಲದಲ್ಲಿ ಸಾಮೂಹಿಕವಾಗಿ ಕೈಗೆತ್ತಿಕೊಳ್ಳಬಹುದಾದ ಕೆಲಸಗಳನ್ನು ಗುರುತಿಸುವ ಬ್ರಿಕ್ಸ್ನ ಕ್ರಿಯಾಯೋಜನೆಯನ್ನು ನಾವು ಸ್ವಾಗತಿಸುತ್ತೇವೆ.
83. ಬ್ರಿಕ್ಸ್ನ ಸೀಮಾಸುಂಕ ಸಹಕಾರ ಸಮಿತಿಯ ಸಾಮಥ್ರ್ಯವನ್ನು ನಾವು ಗುರುತಿಸಿದ್ದು, ಬ್ರಿಕ್ಸ್ನ ದೇಶಗಳ ನಡುವೆ ವ್ಯಾಪಾರ ಸವಲತ್ತು, ಕಾನೂನು ಜಾರಿಗೊಳಿ ಸುವಿಕೆ, ಉನ್ನತ ಸಂವಹನ ತಂತ್ರಜ್ಞಾನದ ಬಳಕೆ ಮತ್ತು ಸಾಮಥ್ರ್ಯ ನಿರ್ಮಾಣ ಸೇರಿದಂತೆ ಇತರ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರವನ್ನು ಹೆಚ್ಚಿಸಬೇಕೆಂದು ಕೋರುತ್ತೇವೆ.
84. ಜಾಗತಿಕವಾಗಿ ಸಮನಾದ ಹಾಗೂ ಪಾರದರ್ಶಕ ತೆರಿಗೆ ವ್ಯವಸ್ಥೆಯನ್ನು ನಿರ್ಮಿಸಲು ಅಗತ್ಯವಾದ ಸಕಲ ಅಂತಾರಾಷ್ಟ್ರೀಯ ಉಪಕ್ರಮಗಳನ್ನು ರೂಪಿಸಲು ಬ್ರಿಕ್ಸ್ ರೆವಿನ್ಯೂ ಅಧಿಕಾರಿಗಳು ನೀಡಿದ ನಿರಂತರ ಬೆಂಬಲವನ್ನು ನಾವು ಒಪ್ಪಿಕೊಂಡಿದ್ದೇವೆ. ಡಿಜಿಟಲ್ ಆರ್ಥಿಕತೆಯ ಪರಿಣಾಮಗಳನ್ನು ಎದುರಿಸಲು ಹಾಗೂ ಅಂತಾರಾಷ್ಟ್ರೀಯ ತೆರಿಗೆ ವ್ಯವಸ್ಥೆಯಲ್ಲಿ ಅದರಲ್ಲೂ ನಿರ್ದಿಷ್ಟವಾಗಿ, ಬಂಡವಾಳದ ಸವಕಳಿ ತಡೆ, ಲಾಭದ ಸ್ಥಳಾಂತರ, ಮನವಿ ಮೇರೆಗೆ ಇಲ್ಲವೇ ತನ್ನಿಂದತಾನೇ ತೆರಿಗೆ ಮಾಹಿತಿಗಳ ವಿನಿಮಯ ಹಾಗೂ ಅಭಿವೃದ್ಧಿಶೀಲ ದೇಶಗಳ ಅಗತ್ಯವನ್ನು ಆಧರಿಸಿದ ಸಾಮಥ್ರ್ಯ ನಿರ್ಮಾಣದಲ್ಲಿ ನ್ಯಾಯಬದ್ಧತೆಯನ್ನು ಕಾಯ್ದುಕೊಳ್ಳಲು ನಮ್ಮ ಬದ್ಧತೆಯನ್ನು ಮುಂದುವರಿಸುತ್ತೇವೆ. ತೆರಿಗೆಗೆ ಸಂಬಂಧಿಸಿದಂತೆ ವಿನಿಮಯವನ್ನು ಇನ್ನಷ್ಟು ಹೆಚ್ಚಿಸುವುದು, ಅನುಭವಗಳ ಹಂಚಿಕೊಳ್ಳುವಿಕೆ, ಉತ್ತಮ ಆಚರಣೆಗಳು, ಪರಸ್ಪರ ಕಲಿಕೆ ಮತ್ತು ಸಿಬ್ಬಂದಿ ವಿನಿಮಯಕ್ಕೆ ನಾವು ಬದ್ಧರಾಗಿದ್ದೇವೆ. ಬ್ರಿಕ್ಸ್ನ ಕಂದಾಯ ಅಧಿಕಾರಿಗಳ ನಡುವೆ ಸಾಮಥ್ರ್ಯ ನಿರ್ಮಾಣ ಕಾರ್ಯಕ್ರಮವನ್ನು ಆರಂಭಿಸಿರುವುದನ್ನು ಸ್ವಾಗತಿಸುತ್ತೇವೆ.
85. ಮೂಲಸೌಲಭ್ಯ, ಉತ್ಪಾದನೆ, ಇಂಧನ, ಕೃಷ್ಯೋದ್ಯಮ, ಆರ್ಥಿಕ ಸೇವೆಗಳು, ಪ್ರಾಂತೀಯ ವಿಮಾನಯಾನ, ತಾಂತ್ರಿಕ ಮಾದರಿಗಳ ಹೊಂದಾಣಿಕೆ ಹಾಗೂ ಕೌಶಲ ಅಭಿವೃದ್ಧಿಯಲ್ಲಿ ಸಹಕಾರ ಮತ್ತು ವ್ಯಾಪಾರ ವಹಿವಾಟು ಹೆಚ್ಚಳದಲ್ಲಿ ಬ್ರಿಕ್ಸ್ನ ವ್ಯವಹಾರ ಮಂಡಳಿ ಮತ್ತು ಅದರ ಐದನೇ ವಾರ್ಷಿಕ ವರದಿ ಹಾಗೂ ಬ್ರಿಕ್ಸ್ ಬಿಸಿನೆಸ್ ಫೋರಂನ ಕಾಣಿಕೆಯನ್ನು ಒಪ್ಪಿಕೊಂಡಿದ್ದೇವೆ. ಬ್ರಿಕ್ಸ್ನ ಬಿಸಿನೆಸ್ ಮಂಡಳಿಯ ಚೌಕಟ್ಟಿನೊಳಗೆ ಡಿಜಿಟಲ್ ಆರ್ಥಿಕತೆ ಕಾರ್ಯಕಾರಿ ಗುಂಪನ್ನು ಸ್ಥಾಪಿಸಿರುವುದನ್ನು ನಾವು ಸ್ವಾಗತಿಸುತ್ತೇವೆ.
85. ಸಹ್ಯ ಆರ್ಥಿಕತೆ ಮತ್ತು ಸಾಮಾಜಿಕ ಅಭಿವೃದ್ದಿಗೆ ಪ್ರವಾಸೋದ್ಯಮದಿಂದ ದೊಡ್ದ ಕೊಡುಗೆ ಸಲ್ಲುವ ಸಾಮರ್ಥ್ಯವನ್ನು ಮನಗಂಡು ಪ್ರವಾಸೋದ್ಯಮಕ್ಕೆ ಸಂಬಂಧಿಸಿದಂತೆ ಬ್ರಿಕ್ಸ್ ಕಾರ್ಯ ತಂಡವನ್ನುಬ್ರಿಕ್ಸ್ ದೇಶಗಳ ನಡುವೆ ಸಹಕಾರ ವರ್ಧನೆ , ಆರ್ಥಿಕ ಅಭಿವೃದ್ದಿ ಹೆಚ್ಚಳ ಮತ್ತು ಜನತೆ ಹಾಗು ಜನತೆ ನಡುವೆ ಸಂಪರ್ಕ, ಸಂಬಂಧ ಸುಧಾರಣೆಗಾಗಿ ಸ್ಥಾಪಿಸುವ ನಿಟ್ಟಿನಲ್ಲಿ ನಡೆದಿರುವ ಆರಂಭಿಕ ಕ್ರಮಗಳನ್ನುನಾವು ಸ್ವಾಗತಿಸುತ್ತೇವೆ. ಬ್ರಿಕ್ಸ್ ಪ್ರವಾಸೋದ್ಯಮ ಕಾರ್ಯ ತಂಡವು ಪ್ರವಾಸೋದ್ಯಮ ಕ್ಷೇತ್ರದ ಉತ್ತಮ ನಡಾವಳಿ, ಅನುಭವ, ಮತ್ತು ಜ್ಞಾನ ವಿನಿಮಯವನ್ನು ಕೈಗೊಳ್ಳುವುದಲ್ಲದೆ , ವಾಯು ಸಂಪರ್ಕ, ಪ್ರವಾಸೋದ್ಯಮ ಮೂಲಸೌಕರ್ಯ, ಸಂಸ್ಕೃತಿ ಮತ್ತು ವೈದ್ಯಕೀಯ ಪ್ರವಾಸೋದ್ಯಮ, ಪ್ರವಾಸೋದ್ಯಮ ಮಾರುಕಟ್ಟೆಯಲ್ಲಿರುವ ಅಡೆ ತಡೆಗಳು , ಪ್ರವಾಸೋದ್ಯಮ ಸುರಕ್ಷೆ ಮತ್ತು ಹಣಕಾಸು, ವಿಮಾಮತ್ತು ವೈದ್ಯಕೀಯ ಬೆಂಬಲಗಳ ಬಗ್ಗೆಯೂ ಗಮನ ಹರಿಸಲಿದೆ. ಬ್ರಿಕ್ಸ್ ಅಂತರ್ಗತ ಪ್ರವಾಸೋದ್ಯಮ ಜಾಗತಿಕ ಆರ್ಥಿಕ ಹಿಂಜರಿತದ ಹೊರತಾಗಿಯೂ ಬೆಳವಣಿಗೆ ಸಾಧಿಸಿರುವುದನ್ನು ನಾವು ತೃಪ್ತಿಯಿಂದಗಮನಿಸಿದ್ದೇವೆ.
v. ಜನತೆ –ಜನತೆ ನಡುವೆ ಸಹಕಾರ
86. ಬ್ರಿಕ್ಸ್ ಜನತೆಯನ್ನು ಕೇಂದ್ರೀಕರಿಸಿ ಮತ್ತು ಅದರ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ ನಾವು ಕ್ರೀಡಾ ಕ್ಷೇತ್ರ, ಯುವ ಜನತೆ , ಚಲನ ಚಿತ್ರ, ಸಂಸ್ಕೃತಿ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲಿವಿನಿಮಯ ಮತ್ತು ನಿರಂತರ ಪ್ರಗತಿಯನ್ನು ನಾವು ಶ್ಲ್ಯಾಘಿಸುತ್ತೇವೆ.
87. ಜನ ಸಮುದಾಯದ ಎಲ್ಲಾ ವರ್ಗಗಳನ್ನು ಒಳಗೊಳ್ಳುವ ಅಭಿವೃದ್ದಿಗಾಗಿ ಜನ ಕೇಂದ್ರಿತ ಧೋರಣೆಗೆ ಬದ್ದವಾಗಿರುವುದನ್ನು ನಾವು ಪುನರುಚ್ಚರಿಸುತ್ತೇವೆ.
88. ವಿಶ್ವ ಮಟ್ಟದಲ್ಲಿ ನೀರನ್ನು ಆದ್ಯತೆ ಎಂದು ಪರಿಗಣಿಸುವಂತೆ ಮಾಡುವಲ್ಲಿ ಯಶಸ್ವಿಯಾದ, ಇದೇ ಮೊದಲ ಬಾರಿಗೆ ದಕ್ಷಿಣ ಗೋಳಾರ್ಧದಲ್ಲಿ ವಿಶ್ವದ ಪ್ರಮುಖ ಜಲ ಸಂಬಂಧಿ ಕಾರ್ಯಕ್ರಮವಾದ , ಬ್ರೆಸಿಲಿಯಾದಲ್ಲಿ ನಡೆದ 8 ನೇ ವಿಶ್ವ ಜಲ ವೇದಿಕೆ ಕಾರ್ಯಕ್ರಮವನ್ನು ನಾವು ಪರಿಗಣಿಸಿ ಅಂಗೀಕರಿಸಿದ್ದೇವೆ.
89. ಬಾಹ್ಯಾಕಾಶಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಬ್ರಿಕ್ಸ್ ರಾಷ್ಟ್ರಗಳೊಳಗೆ ಸಹಕಾರದ ಮಹತ್ವಕ್ಕೆ ನಾವು ಒತ್ತು ನೀಡುತ್ತೇವೆ ಮತ್ತು ಈ ಕ್ಷೇತ್ರದಲ್ಲಿ ಪ್ರಸಕ್ತ ಜಾರಿಯಲ್ಲಿರುವ ಉಪಕ್ರಮಗಳನ್ನು ಬಲಪಡಿಸಲು ಬೆಂಬಲವನ್ನು ನಾವು ದೃಢಪಡಿಸುತ್ತೇವೆ.
90 . ಬ್ರಿಕ್ಸ್ ದೇಶಗಳೊಳಗೆ ಲಸಿಕೆ ಸಂಶೋಧನೆ ಮತ್ತು ಅಭಿವೃದ್ದಿಗಾಗಿ ಸಹಕಾರ ಮತ್ತು ಸಮನ್ವಯವನ್ನು ಬಲಪಡಿಸಲು ನಾವು ಬದ್ದರಾಗಿದ್ದೇವೆ ಮತ್ತು ಬ್ರಿಕ್ಸ್ ಲಸಿಕೆ ಸಂಶೋಧನಾ ಮತ್ತು ಅಭಿವೃದ್ದಿ ಕೇಂದ್ರವನ್ನು ಸ್ಥಾಪಿಸುವ ಪ್ರಸ್ತಾಪವನ್ನು ಸ್ವಾಗತಿಸುತ್ತೇವೆ.
91. ಸಹ್ಯ ಅಭಿವೃದ್ದಿ ಶಕೆಯಲ್ಲಿ ಕ್ಷಯರೋಗ ಮುಕ್ತಗೊಳಿಸುವ ನಿಟ್ಟಿನಲ್ಲಿ 2017 ರಲ್ಲಿ ಮಾಸ್ಕೋದಲ್ಲಿ ನಡೆದ ಬಹು ಆಯಾಮದ ಪ್ರತಿಕ್ರಿಯೆ ಕುರಿತ ಪ್ರಥಮ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಚಿವರ ಸಮ್ಮೇಳನವನ್ನು ಸ್ವಾಗತಿಸುತ್ತೇವೆ. ಮತ್ತು ಆ ಸಂಬಂಧದ ಫಲಿತವಾದ ಕ್ಷಯ ರೋಗವನ್ನು ಕೊನೆಗಾಣಿಸುವ ಮಾಸ್ಕೋ ಘೋಷಣೆಯನ್ನು ಸ್ವಾಗತಿಸುತ್ತೇವೆ. ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕ್ಷಯ ರೋಗ ಕೊನೆಗೊಳಿಸುವುದಕ್ಕೆ ಸಂಬಂಧಿಸಿದಂತೆ ನಡೆಯಲಿರುವ ಪ್ರಥಮ ಉನ್ನತ ಮಟ್ಟದ ಸಭೆ ಹಾಗು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ 2018 ರ ಸೆಪ್ಟೆಂಬರ್ ತಿಂಗಳಲ್ಲಿ ನಡೆಯಲಿರುವ ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕುರಿತ ಮೂರನೇ ಉನ್ನತ ಮಟ್ಟದ ಸಭೆಯ ಮಹತ್ವವನ್ನು ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ.
92. ನಾಲ್ಕನೇ ಕೈಗಾರಿಕಾ ಕ್ರಾಂತಿಯ ಚಾಲಕ ಶಕ್ತಿಯಲ್ಲಿ ಸಂಸ್ಕೃತಿಯ ಪಾತ್ರ ಮತ್ತು ಅದರ ಮಹತ್ವವನ್ನು ನಾವು ಗುರುತಿಸಿದ್ದೇವೆ ಮತ್ತು ಅದು ಒದಗಿಸುವ ಆರ್ಥಿಕ ಅವಕಾಶಗಳನ್ನೂ ಪರಿಗಣಿಸಿದ್ದೇವೆ.
93. 3 ನೇ ಬ್ರಿಕ್ಸ್ ಚಲನ ಚಿತ್ರೋತ್ಸವ ಸಂಘಟನೆಯನ್ನು ಶ್ಲ್ಯಾಘಿಸುತ್ತೇವೆ ಮತ್ತು ಈ ಕ್ಷೇತ್ರದಲ್ಲಿ ಇನ್ನಷ್ಟು ಆಳವಾದ ಸಹಕಾರದ ಅಗತ್ಯವನ್ನು ಗುರುತಿಸಿದ್ದೇವೆ. ಬ್ರಿಕ್ಸ್ ಸಂಸ್ಕೃತಿಗಳ ವೈವಿಧ್ಯತೆಯನ್ನು ಪ್ರದರ್ಶಿಸಲು ಚಲನ ಚಿತ್ರಗಳನ್ನು ಸಹ-ನಿರ್ಮಾಣದಲ್ಲಿ ತಯಾರಿಸುವುದಕ್ಕೆ ಸಂಬಂಧಿಸಿ ಕರಡು ಬ್ರಿಕ್ಸ್ ಒಪ್ಪಂದ ಕುರಿತು ದಕ್ಷಿಣ ಆಫ್ರಿಕಾದ ಪ್ರಸ್ತಾಪವನ್ನು ನಾವು ಪರಿಗಣನೆಗೆ ತೆಗೆದುಕೊಂಡಿದ್ದೇವೆ.
94. ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಂಸ್ಕೃತಿ ಕ್ಷೇತ್ರದಲ್ಲಿ ರಚನಾತ್ಮಕ ಮತ್ತು ಸಹ್ಯ ಸಾಂಸ್ಕೃತಿಕ ಸಹಕಾರಕ್ಕಾಗಿ ಒಪ್ಪಂದ ಅನುಷ್ಟಾನ (2017-2021 ) ನಿಟ್ಟಿನಲ್ಲಿ ಕ್ರಿಯಾ ಯೋಜನೆಯ ಮಾರ್ಗದರ್ಶಿ ಪಾತ್ರದ ಬಗ್ಗೆ ನಾವು ಅದ್ಯತೆ ಕೊಡುತ್ತೇವೆ ಮತ್ತು ಬ್ರಿಕ್ಸ್ ಸಾಂಸ್ಕೃತಿಕ ತಜ್ಞರ ಉಪಕ್ರಮಗಳು ಹಾಗು ಈಗ ನಡೆಯುತ್ತಿರುವ ಚಟುವಟಿಕೆಗಳನ್ನು ಗಮನಿಸಿದ್ದೇವೆ.
95. ನಾವು 2018 ರಲ್ಲಿ ಜೊಹಾನ್ಸ್ ಬರ್ಗ್ ನಲ್ಲಿ ಆಯೋಜನೆಯಾದ ಆಡಳಿತ ಕುರಿತ 2 ನೇ ಬ್ರಿಕ್ಸ್ ವಿಚಾರ ಸಂಕಿರಣವನ್ನು ಅಂಗೀಕರಿಸಿದ್ದೇವೆ. ಹೆಚ್ಚಿನ ಮತ್ತು ದೊಡ್ಡ ಪ್ರಮಾಣದಲ್ಲಿ ಹಾಗೂ ವೈವಿಧ್ಯಮಯ ಅಕಾಡೆಮಿಕ್ ಮತ್ತು ಚಿಂತನಾ ಕೂಟಗಳ ಪಾಲ್ಗೊಳ್ಳುವಿಕೆಯೊಂದಿಗೆ 2019 ರಲ್ಲಿ 3 ನೇ ಸಭೆಯನ್ನು ಆಯೋಜಿಸಲು ಬ್ರೆಜಿಲ್ ಮುಂದಿಟ್ಟಿರುವ ಆಶಯವನ್ನು ಪರಿಗಣಿಸಿದ್ದೇವೆ.
96. ಚಿಂತಕರ ಚಾವಡಿ ಮಂಡಳಿ, ಅಕಾಡೆಮಿಕ್ ವೇದಿಕೆ, ನಾಗರಿಕ ಬ್ರಿಕ್ಸ್ ವೇದಿಕೆ, ಯುವ ರಾಜತಾಂತ್ರಿಕರ ವೇದಿಕೆ , ಯುವ ಶೃಂಗ ಮತ್ತು ಯುವ ವಿಜ್ಞಾನಿಗಳ ವೇದಿಕೆ ಸಹಿತ ವಿನಿಮಯ ಮೂಲಕ ಸಹಕಾರ ಮತ್ತು ನಮ್ಮ ಜನತೆಯ ನಡುವೆ ಸಂವಹನವನ್ನು ಬಲಗೊಳಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಾಧಿತವಾಗಿರುವ ಪ್ರಗತಿಯನ್ನು ನಾವು ಸಂತೃಪ್ತಿಯಿಂದ ಅನುಮೋದಿಸಿದ್ದೇವೆ.
97 ಬ್ರಿಕ್ಸ್ ವಿದೇಶೀ ವ್ಯವಹಾರಗಳ ವಕ್ತಾರರ ಕಾರ್ಯಕ್ರಮಗಳಿಗೆ ಸಂಬಂಧಿಸಿ ದಕ್ಷಿಣ ಆಫ್ರಿಕಾ ಕೈಗೊಂಡ ಆರಂಭಿಕ ಕ್ರಮಗಳನ್ನು ನಾವು ಅಂಗೀಕರಿಸಿದ್ದೇವೆ.
98. ದಕ್ಷಿಣ ಆಫ್ರಿಕಾ 3ನೇ ಬ್ರಿಕ್ಸ್ ಕ್ರೀಡಾಕೂಟದ ಆತಿಥ್ಯವನ್ನು ಯಶಸ್ವಿಯಾಗಿ ನಿಭಾಯಿಸಿದ್ದನ್ನು ನಾವು ಸ್ವಾಗತಿಸುತ್ತೇವೆ. ಮತ್ತು ನಾವು ಬ್ರಿಕ್ಸ್ ಕ್ರೀಡಾ ಮಂಡಳಿ ಸ್ಥಾಪನೆ ನಿಟ್ಟಿನಲ್ಲಿ ಆಗಿರುವ ಪ್ರಗತಿಯನ್ನು ಗಮನಿಸಿದ್ದೇವೆ.
99. ಮಹಿಳಾ ಸಂಸದರು ಸೇರಿದಂತೆ ಬ್ರಿಕ್ಸ್ ಸಂಸದೀಯ ವಿನಿಮಯಗಳ ಮಹತ್ವವನ್ನು ಒತ್ತಿಹೇಳುತ್ತಾ ನಾವು ಈ ನಿಟ್ಟಿನಲ್ಲಿ ಬ್ರಿಕ್ಸ್ ವಿನಿಮಯಗಳು ಇನ್ನಷ್ಟು ಬಲಯುತವಾಗುವುದನ್ನು ಆಶಿಸುತ್ತೇವೆ.
100. ಒಳಗೊಳ್ಳುವ ಅಭಿವೃದ್ದಿಯಲ್ಲಿ ಮಹಿಳೆಯರು ವಹಿಸುವ ಪಾತ್ರದ ಮಹತ್ವವನ್ನು ಮನಗಾಣುತ್ತಾ, ನಾವು ಬ್ರಿಕ್ಸ್ ಮಹಿಳಾ ವೇದಿಕೆ ಮತ್ತು ಬ್ರಿಕ್ಸ್ ಮಹಿಳಾ ವ್ಯಾಪಾರೋದ್ಯಮ ಮೈತ್ರಿಕೂಟ ಸ್ಥಾಪನೆ ನಿಟ್ಟಿನಲ್ಲಿ ನಡೆದಿರುವ ಕಾರ್ಯವನ್ನು ಗಣನೆಗೆ ತೆಗೆದುಕೊಂಡಿದ್ದೇವೆ.
101. 2018 ರಲ್ಲಿ ಬ್ರಿಕ್ಸ್ ನಾಯಕತ್ವವನ್ನು ವಹಿಸಿಕೊಂಡ ದಕ್ಷಿಣ ಅಫ್ರಿಕಾವನ್ನು ಬ್ರೆಜಿಲ್, ರಶ್ಯಾ, ಭಾರತ ಮತ್ತು ಚೀನಾಗಳು ಶ್ಲ್ಯಾಘಿಸುತ್ತವೆ ಮತ್ತು 10 ನೇ ಬ್ರಿಕ್ಸ್ ಶೃಂಗವನ್ನು ಜೋಹಾನ್ಸ್ ಬರ್ಗ್ ನಲ್ಲಿ ಆಯೋಜಿಸಿದ ದಕ್ಷಿಣ ಆಫ್ರಿಕಾ ಸರಕಾರ ಮತ್ತು ಜನತೆಗೆ ತಮ್ಮ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತವೆ.
102. 2009 ರಲ್ಲಿ 11 ನೇ ಬ್ರಿಕ್ಸ್ ಶೃಂಗದ ಆತಿಥ್ಯವನ್ನು ವಹಿಸಿಕೊಂಡು ನಾಯಕತ್ವ ವಹಿಸುವುದಕ್ಕೆ ಬ್ರೆಜಿಲ್ ಮುಂದಾಗಿರುವುದಕ್ಕೆ ರಶ್ಯಾ , ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳು ಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತವೆ.
ಅನುಬಂಧ 1: ಜೋಹಾನ್ಸ್ ಬರ್ಗ್ ಕ್ರಿಯಾ ಯೋಜನೆ.
10 ನೇ ಬ್ರಿಕ್ಸ್ ಶೃಂಗಸಭೆ -25-27 ಜುಲೈ (ಜೋಹಾನ್ಸ್ ಬರ್ಗ್ )
ಜೋಹಾನ್ ಬರ್ಗ್ ಸಮಾವೇಶದವರೆಗಿನ ದಕ್ಷಿಣ ಆಫ್ರಿಕಾದ ಬ್ರಿಕ್ಸ್ ಅಧ್ಯಕ್ಷತೆಯಲ್ಲಿ ನಡೆದ ಈ ಕೆಳಗಿನ ಸಭೆಗಳ ಫಲಿತಾಂಶಗಳನ್ನು ನಾವು ಗಣನೆಗೆ ತೆಗೆದುಕೊಂಡಿದ್ದೇವೆ.
ಸಚಿವರ ಸಭೆಗಳು:
• ಬ್ರಿಕ್ಸ್ ಹಣಕಾಸು ಡೆಪ್ಯುಟಿಗಳ ಸಭೆ- 17-20 ಮಾರ್ಚ್ (ಬ್ಯೂನೋಸ್ ಐರಿಸ್)
• ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕುಗಳ ಗವರ್ನರ್ ಗಳ ಸಭೆ. -18-20 ಏಪ್ರಿಲ್ (ವಾಷಿಂಗ್ಟನ್ ಡಿ.ಸಿ.)
• ಬ್ರಿಕ್ಸ್ ಹಣಕಾಸು ಡೆಪ್ಯುಟಿಗಳ ಸಭೆ -18-20 ಏಪ್ರಿಲ್ (ವಾಷಿಂಗ್ಟನ್ ಡಿ.ಸಿ.)
• ಬ್ರಿಕ್ಸ್ ಪರಿಸರ ವ್ಯವಹಾರಗಳ ಸಚಿವರ ಸಭೆ -18 ಮೇ (ಡರ್ಬಾನ್)
• ಬ್ರಿಕ್ಸ್ ವಿದೇಶೀ ವ್ಯವಹಾರಗಳು, ಅಂತಾರಾಷ್ಟ್ರೀಯ ಸಂಬಂಧಗಳ ಸಚಿವರ ಸಭೆ. -4 ಜೂನ್ (ಪ್ರಿಟೋರಿಯಾ)
• ಬ್ರಿಕ್ಸ್ ಕಂದಾಯ ಪ್ರಾಧಿಕಾರಗಳ ಮುಖ್ಯಸ್ಥರ ಸಭೆ. -18-21 ಜೂನ್ 2018 (ಜೋಹಾನ್ಸ್ ಬರ್ಗ್)
• ಬ್ರಿಕ್ಸ್ ಕೃಷಿ ಮತ್ತು ಕೃಷಿ ಅಭಿವೃದ್ದಿ ಸಚಿವರ 8ನೇ ಸಭೆ -19-22 ಜೂನ್ (ಎಂಪುಮಲಂಗಾ)
• ರಾಷ್ಟ್ರೀಯ ಭದ್ರತಾ ಸಲಹೆಗಾರರ 8 ನೇ ಸಭೆ -28-29 ಜೂನ್ ,2018 (ಡರ್ಬಾನ್ )
• ಬ್ರಿಕ್ಸ್ ಇಂಧನ ಸಚಿವರ ಸಭೆ -28-29 ಜೂನ್ (ಗುಟೆಂಗ್)
• ಬ್ರಿಕ್ಸ್ ವಿಪತ್ತು ನಿರ್ವಹಣಾ ಸಚಿವರ ಸಭೆ -29 ಜೂನ್ -1ನೇ ಜುಲೈ (ಪೂರ್ವ ಲಂಡನ್ )
• ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣಾ ಸಚಿವರ 6 ನೇ ಸಭೆ -3, ಜುಲೈ (ಡರ್ಬಾನ್)
• ಬ್ರಿಕ್ಸ್ ಕೈಗಾರಿಕಾ ಸಚಿವರ 3ನೇ ಸಭೆ -4 ನೇ ಜುಲೈ (ಗುಟೆಂಗ್)
• ಬ್ರಿಕ್ಸ್ ವ್ಯಾಪಾರೋದ್ಯಮ ಸಚಿವರ 8ನೇ ಸಭೆ -5, ಜುಲೈ ( ಮಗಲಿಸ್ಬರ್ಗ್)
• ಬ್ರಿಕ್ಸ್ ಶಿಕ್ಷಣ ಸಚಿವರ ಸಭೆ -10ನೇ ಜುಲೈ (ಕೇಪ್ ಟೌನ್ )
• ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕ್ ಗವರ್ನರ್ ಗಳ ಸಭೆ -19 -22 ಜುಲೈ (ಅರ್ಜೆಂಟೀನಾ)
• ಬ್ರಿಕ್ಸ್ ಆರೋಗ್ಯ ಸಚಿವರ 8ನೇ ಸಭೆ -20 ಜುಲೈ (ಡರ್ಬಾನ್ )
ಹಿರಿಯ ಅಧಿಕಾರಿಗಳು ಮತ್ತು ವಲಯ ಸಭೆಗಳು :
• ಬ್ರಿಕ್ಸ್ ಶೆರ್ಪಾಗಳ ಮೊದಲ ಸಭೆ -4-6 ಫೆಬ್ರವರಿ (ಕೇಪ್ ಟೌನ್ )
• ಬ್ರಿಕ್ಸ್ ಭ್ರಷ್ಟಾಚಾರ ವಿರೋಧಿ ಕಾರ್ಯ ಗುಂಪಿನ ಮೊದಲ ಸಭೆ -26 ಫೆಬ್ರವರಿ (ಬ್ಯೂನೋಸ್ ಐರಿಸ್, ಅರ್ಜೆಂಟೀನಾ )
• ಆರ್ಥಿಕ ಮತ್ತು ವ್ಯಾಪಾರ ಸಂಬಂಧಿ ವಿಷಯಗಳ ಸಂಪರ್ಕ ಗುಂಪಿನ 17 ನೇ ಸಭೆ (ಸಿ.ಜಿ. ಇ.ಟಿ.ಐ.)-28 ಫೆಬ್ರವರಿಯಿಂದ 2 ಮಾರ್ಚ್ (ಜೋಹಾನ್ಸ್ ಬರ್ಗ್)
• ಬ್ರಿಕ್ಸ್ ಕಚೇರಿಗಳ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಅಧಿಕಾರಿಗಳ 9ನೇ ತಾಂತ್ರಿಕ ಸಮ್ಮೇಳನ -13-15 ಮಾರ್ಚ್ (ಪ್ರಿಟೋರಿಯಾ)
• ಬ್ರಿಕ್ಸ್ ಬಾಂಡ್ ನಿಧಿ (ಬಿ.ಬಿ.ಎಫ್.) ಕಾರ್ಯ ಗುಂಪಿನ ಸಭೆ- 17-20 ಮಾರ್ಚ್ (ಬ್ಯೂನೋಸ್ ಐರಿಸ್)
• ಕಸ್ಟಂಸ್ ತಜ್ಞರ ಸಭೆ -16-17 ಏಪ್ರಿಲ್ (ಡರ್ಬಾನ್ )
• ಕಸ್ಟಂಸ್ ಸಹಕಾರ ಸಮಿತಿ ಎರಡನೇ ಸಭೆ -18-19 ಏಪ್ರಿಲ್ (ಡರ್ಬಾನ್)
• ಬಿ.ಬಿ.ಎಫ್. ಕಾರ್ಯ ಗುಂಪು ಮತ್ತು ಬ್ರಿಕ್ಸ್ ಸಿ.ಆರ್.ಎ. ಸ್ಥಾಯೀ ಸಮಿತಿ ಸಭೆ – 18-20 ಏಪ್ರಿಲ್ (ವಾಷಿಂಗ್ಟನ್ ಡಿ.ಸಿ., ಅಮೇರಿಕಾ )
• ಭಯೋತ್ಪಾದನಾ ನಿಗ್ರಹ ಕಾರ್ಯ ಗುಂಪು -19 ರಿಂದ 20 ಏಪ್ರಿಲ್ (ವೈಟ್ ರಿವರ್ , ನೆಲ್ಸ್ ಪ್ರುಟ್ )
• ಬ್ರಿಕ್ಸ್ ಶೆರ್ಪಾಗಳ ಎರಡನೇ ಸಭೆ -24 ರಿಂದ 26 ಏಪ್ರಿಲ್ (ಬೆಲಬೇಲಾ, ಲಿಂಪೊಪೊ)
• ಪ್ರಥಮ ಕಾರ್ಮಿಕ ಮತ್ತು ಉದ್ಯೋಗ ಕಾರ್ಯ ಗುಂಪಿನ (ಇ.ಡಬ್ಲ್ಯು. ಜಿ.) ಸಭೆ -7 ರಿಂದ 10 ಮೇ (ಎಂಪುಮಲಂಗಾ )
• ಬ್ರಿಕ್ಸ್ ಬೌದ್ಧಿಕ ಆಸ್ತಿ ಹಕ್ಕುಗಳ ಸಹಕಾರ ವ್ಯವ್ಅಸ್ಥೆಯ ಎರಡನೇ ಸಭೆ -10 ಮೇ (ಪೂರ್ವ ಲಂಡನ್ )
• ಬ್ರಿಕ್ಸ್ ಇ-ವಾಣಿಜ್ಯ ಕಾರ್ಯ ಗುಂಪಿನ ಎರಡನೇ ಸಭೆ -10 ಮೇ (ಪೂರ್ವ ಲಂಡನ್ )
• ಬ್ರಿಕ್ಸ್ ವ್ಯಾಪಾರ ಉತ್ತೇಜನ ಕಾರ್ಯ ಗುಂಪಿನ ಮೊದಲನೇ ಸಭೆ -10 ಮೇ (ಪೂರ್ವ ಲಂಡನ್ )
• ತಾಂತ್ರಿಕ ನಿಯಂತ್ರಣ ನಿಯಮಾವಳಿಗಳು , ಗುಣ ಮಾನಕಗಳು, ಬದ್ಧತೆ ಮೌಲ್ಯಮಾಪನ , ಅಳತೆ ಮತ್ತು ತೂಕ ಮತ್ತು ಮಾನ್ಯತೆ ಕ್ಷೇತ್ರದ ತಾಂತ್ರಿಕ ತಜ್ಞರ ಸಭೆ . -10 ಮೇ (ಪೂರ್ವ ಲಂಡನ್ )
• ಸೇವೆಗಳ ಸಂಖ್ಯಾಶಾಸ್ತ್ರದಲ್ಲಿ ವ್ಯಾಪಾರ ಕುರಿತ ಕಾರ್ಯಾಗಾರ -10 ಮೇ (ಪೂರ್ವ ಲಂಡನ್ )
• ಆರ್ಥಿಕ ಮತ್ತು ವ್ಯಾಪಾರ ವಿಷಯಗಳಿಗೆ ಸಂಬಂಧಿಸಿದ ಸಂಪರ್ಕ ಗುಂಪಿನ (ಸಿ.ಜಿ.ಇ.ಟಿ.ಐ.) 18 ನೇ ಸಭೆ -11 ರಿಂದ 12 ಮೇ (ಪ್ರಿಟೋರಿಯಾ)
• ಬ್ರಿಕ್ಸ್ ಪರಿಸರ ವ್ಯವಹಾರಗಳ ಕಾರ್ಯ ಗುಂಪಿನ ಸಭೆ -14ರಿಂದ 16 ಮೇ (ಪ್ರಿಟೋರಿಯಾ)
• ಐ.ಸಿ.ಟಿ . ಗಳ ಕಾರ್ಯ ಗುಂಪಿನಲ್ಲಿ ಭದ್ರತೆ -16 ರಿಂದ 17 ಮೇ (ಕೇಪ್ ಟೌನ್ )
• ಬ್ರಿಕ್ಸ್ ಪರಿಸರ ವ್ಯವಹಾರಗಳ ಹಿರಿಯ ಅಧಿಕಾರಿಗಳ ಸಭೆ – 17 ಮೇ (ಡರ್ಬಾನ್ )
• ಬ್ರಿಕ್ಸ್ ಇಂಧನ ದಕ್ಷತೆ ಮತ್ತು ಇಂಧನ ಉಳಿತಾಯ ಕಾರ್ಯ ಗುಂಪಿನ ಸಭೆ -17 ರಿಂದ 18 ಮೇ (ಕೇಪ್ ಟೌನ್ )
• ಬ್ರಿಕ್ಸ್ ಚಿಂತಕರ ಚಾವಡಿ ಮಂಡಳಿಯ (ಬಿ.ಟಿ.ಟಿ.ಸಿ. ) ಸಭೆ -28 ಮೇ (ಪಾರ್ಕ್ ಟೌನ್ )
• ಬ್ರಿಕ್ಸ್ ಶಿಕ್ಷಣ ತಜ್ಞರ ವೇದಿಕೆ -28 ರಿಂದ 31 ಮೇ (ಜೋಹಾನ್ಸ್ ಬರ್ಗ್ )
• ಗುಣಮಟ್ಟ ಮೂಲಸೌಕರ್ಯ ಸಭೆ (ಗುಣಮಾನಕಗಳು, ಮಾನ್ಯತೆ ಮತ್ತು ತೂಕ ಹಾಗು ಅಳತೆ ಸಂಸ್ಥೆಗಳು ) -16 ಮೇ (ಗುಟೆಂಗ್)
• ವಿಶ್ವ ಆರೋಗ್ಯ ಸಭೆಯ ಮಿತಿಗೆ ಸಂಬಂಧಿಸಿದ ಬ್ರಿಕ್ಸ್ ಆರೋಗ್ಯ ಸಭೆ –ಮೇ (ಜಿನೇವಾ-ಸ್ವಿಜರ್ ಲ್ಯಾಂಡ್ )
• 3 ನೇ ಬ್ರಿಕ್ಸ್ ಶೆರ್ಪಾ ಸಭೆ -2ರಿಂದ 3 ಜೂನ್ (ಪ್ರಿಟೋರಿಯಾ )
• ತೆರಿಗೆ ವಿಷಯಗಳ ತಜ್ಞರ ಸಭೆ -18 ರಿಂದ 19 ಜೂನ್ (ಕೇಪ್ ಟೌನ್ )
• ಮಧ್ಯ ಪೂರ್ವ ಮತ್ತು ಉತ್ತರ ಆಫ್ರಿಕಾ (ಮೀನಾ) ಕುರಿತಂತೆ ಹಿರಿಯ ಅಧಿಕಾರಿಗಳು , ತಜ್ಞರ 4 ನೇ ಸಭೆ -19 ಜೂನ್ . (ಪ್ರಿಟೋರಿಯಾ )
• ಕೃಷಿ ಸಹಕಾರ ಕಾರ್ಯ ಗುಂಪಿನ 8 ನೇ ಸಭೆ -20 ಜೂನ್ (ನೆಲ್ಸ್ ಪ್ರುಟ್ )
• ಕೃಷಿ ಕ್ಷೇತ್ರಗಳಿಗೆ ಭೇಟಿ -22 ಜೂನ್
• ನಾಗರಿಕ ಸೊಸೈಟಿ ಸಂಘಟನೆಗಳ (ಸಿ.ಎಸ್.ಒ.ಗಳು ) ಸಭೆ -25 ರಿಂದ 26 ಜೂನ್ (ಜೋಹಾನ್ಸ್ ಬರ್ಗ್ )
• ಸಿವಿಲ್ ಬ್ರಿಕ್ಸ್ -25ರಿಂದ 27 ಜೂನ್ (ಪಾರ್ಕ್ ಟೌನ್ , ಜೋಹಾನ್ಸ್ ಬರ್ಗ್ )
• ಕಸ್ಟಮ್ಸ್ ಸಹಕಾರ ಸಮಿತಿಯ 3 ನೇ ಸಭೆ -26 ಜೂನ್ (ಬ್ರುಸೆಲ್ಸ್, ಬೆಲ್ಜಿಯಂ )
• ಬ್ರಿಕ್ಸ್ ಭ್ರಷ್ಟಾಚಾರ ನಿರೋಧ ಕಾರ್ಯ ಗುಂಪಿನ 2 ನೇ ಸಭೆ -26 ಜೂನ್ (ಪ್ಯಾರಿಸ್, ಫ್ರಾನ್ಸ್. )
• 4 ನೇ ಯುವ ರಾಜತಾಂತ್ರಿಕರ ವೇದಿಕೆ -25 ರಿಂದ 29 ಜೂನ್ (ಪ್ರಿಟೋರಿಯಾ)
• 3 ನೇ ಬ್ರಿಕ್ಸ್ ಯುವ ವಿಜ್ಞಾನಿಗಳ ವೇದಿಕೆ -25ರಿಂದ 29 ಜೂನ್ (ಡರ್ಬಾನ್ ಐ.ಸಿ.ಸಿ.)
• ಬ್ರಿಕ್ಸ್ ಗೆಳೆತನ ನಗರಗಳು ಮತ್ತು ಸ್ಥಳೀಯಾಡಳಿತ ಸಹಕಾರ ವೇದಿಕೆ -28 ರಿಂದ 29 ಜೂನ್ (ಪೂರ್ವ ಲಂಡನ್ )
• ನಿಧಿ ಸಂಸ್ಥೆಗಳ ಬ್ರಿಕ್ಸ್ ಎಸ್.ಟಿ.ಐ.ಕಾರ್ಯ ಗುಂಪಿನ 4 ನೇ ಸಭೆ-30 ಜೂನ್ (ಡರ್ಬಾನ್ )
• ಬ್ರಿಕ್ಸ್ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆ (ಎಸ್ . ಟಿ.ಐ.)ಗಾಗಿನ 8 ನೇ ಸಮ್ಮೇಳನ -2 ಜುಲೈ (ಡರ್ಬಾನ್ )
• ಕೈಗಾರಿಕಾ ತಜ್ಞರ 3 ನೇ ಸಭೆ-3 ನೇ ಜುಲೈ ( ಮಗಲೀಸ್ ಬರ್ಗ್ )
• ಆಡಳಿತ ಕುರಿತ 2 ನೇ ಬ್ರಿಕ್ಸ್ ವಿಚಾರ ಸಂಕಿರಣ -3 ರಿಂದ 4 ಜುಲೈ (ಜೋಹಾನ್ಸ್ ಬರ್ಗ್ )
• ಆರ್ಥಿಕ ಮತ್ತು ವ್ಯಾಪಾರಿ ವಿಷಯಗಳಿಗೆ ಸಂಬಂಧಿಸಿದ ಸಂಪರ್ಕ ಗುಂಪಿನ 19 ನೇ ಸಭೆ (ಸಿ.ಜಿ.ಇ.ಟಿ.ಐ.)-2ರಿಂದ 4 ಜುಲೈ (ಗುಟೆಂಗ್)
• ಬ್ರಿಕ್ಸ್ ಜಾಲ ವಿಶ್ವವಿದ್ಯಾಲಯ ಸಮ್ಮೇಳನ-5-7 ಜುಲೈ (ಸ್ಟೆಲ್ಲೆನ್ ಬೋಶ್)
• ಬ್ರಿಕ್ಸ್ ಶಿಕ್ಷಣ ಕ್ಷೇತ್ರದ ಹಿರಿಯ ಅಧಿಕಾರಿಗಳ ಸಭೆ-9 ಜುಲೈ (ಕೇಪ್ ಟೌನ್)
• ಐ.ಸಿ.ಟಿ.ಐ-ಸಾರಿಗೆ ಮೂಲಸೌಕರ್ಯ ಕುರಿತ ಅಂತಾರಾಷ್ಟ್ರೀಯ ಸಮ್ಮೇಳನ -9 ರಿಂದ 10 ಜುಲೈ (ಪ್ರಿಟೋರಿಯ)
• 4ನೇ ಬ್ರಿಕ್ಸ್ ಯುವ ಸಮ್ಮೇಳನ -16 ರಿಂದ 21 ಜುಲೈ (ಬ್ಲೊಯೆಂಫಾಂಟೀನ್, ಫ್ರೀ ಸ್ಟೇಟ್ )
• 3 ನೇ ಬ್ರಿಕ್ಸ್ ಕ್ರೀಡಾಕೂಟ -17 ರಿಂದ 22 ಜುಲೈ (ಜೋಹಾನ್ಸ್ ಬರ್ಗ್ )
• ಬ್ರಿಕ್ಸ್ ಆರೋಗ್ಯ ಕ್ಷೇತ್ರದ ಹಿರಿಯ ಅಧಿಕಾರಿಗಳ ಸಭೆ -18 ರಿಂದ 19 ಜುಲೈ (ಡರ್ಬಾನ್ )
• ಬಿಬಿಎಫ್ ಕಾರ್ಯ ಗುಂಪು ಸಭೆ ಮತ್ತು ಬ್ರಿಕ್ಸ್ ಸಿ.ಆರ್.ಎ. ಸ್ಥಾಯೀ ಸಮಿತಿ ಸಭೆ-19 ರಿಂದ 22 ಜುಲೈ (ಅರ್ಜೆಂಟೀನಾ)
• ಬ್ರಿಕ್ಸ್ ವ್ಯಾಪಾರೋದ್ಯಮ ಮಂಡಳಿಯ ವಾರ್ಷಿಕ ಸಭೆ- 22 ರಿಂದ 23 ಜುಲೈ ಡರ್ಬಾನ್
• 3 ನೇ ಬ್ರಿಕ್ಸ್ ಚಲನ ಚಿತ್ರೋತ್ಸವ 2018- 22 ರಿಂದ 28 ಜುಲೈ (ಡರ್ಬಾನ್ )
• 4 ನೇ ಬ್ರಿಕ್ಸ್ ಶೆರ್ಪಾ ಸಭೆ-20 ರಿಂದ 24 ಜುಲೈ (ಜೋಹಾನ್ಸ ಬರ್ಗ್ )
• ಬ್ರಿಕ್ಸ್ ವ್ಯಾಪಾರೋದ್ಯಮ ಮಂಡಳಿ ಇಂಧನ ವೇದಿಕೆ -24 ಜುಲೈ (ಜೋಹಾನ್ಸ್ ಬರ್ಗ)
• ಬ್ರಿಕ್ಸ್ ವ್ಯಾಪಾರೋದ್ಯಮ ವೇದಿಕೆ -25 ಜುಲೈ (ಸ್ಯಾಂಡ್ ಟೋನ್)
• ಬ್ರಿಕ್ಸ್ ಐ.ಸಿ.ಎಂ. ಅಧ್ಯಕ್ಷರ ವಾರ್ಷಿಕ ಸಭೆ -25 ರಿಂದ 26 ಜುಲೈ (ಕೇಪ್ ಟೌನ್ )
• ಬ್ರಿಕ್ಸ್ ಹಣಕಾಸು ವೇದಿಕೆ -25 ರಿಂದ 26 ಜುಲೈ (ಕೇಪ್ ಟೌನ್ )
ದಕ್ಷಿಣ ಆಫ್ರಿಕಾದ ಬ್ರಿಕ್ಸ್ ಅಧ್ಯಕ್ಷತೆ 2018 ರ ಕಾರ್ಯಚಟುವಟಿಕೆಗಳ ಶೇಷಬಾಧ್ಯತೆಗಳು
ಬ್ರಿಕ್ಸ್ ಮುಖಂಡರ ಅನೌಪಚಾರಿಕ ಸಭೆ (ಬ್ಯೂನೋಸ್ ಐರಿಸ್, ಅರ್ಜೆಂಟೀನಾ )
ಸಚಿವರ ಸಭೆಗಳು:
• ಬ್ರಿಕ್ಸ್ ಕ್ರೀಡಾ ಮಂಡಳಿಗಳ ಸಚಿವರ ಸಭೆ
• ಬ್ರಿಕ್ಸ್ ಕಾರ್ಮಿಕ ಮತ್ತು ಉದ್ಯೋಗ ಸಚಿವರ ಸಭೆ (ಎಲ್.ಇ.ಎಂ.ಎಂ.) (ಡರ್ಬಾನ್).
• ಬ್ರಿಕ್ಸ್ ಸಂಪರ್ಕ ಸಚಿವರ 4 ನೇ ಸಭೆ ( ಡರ್ಬಾನ್ )
ಬ್ರಿಕ್ಸ್ ವಿದೇಶೀ ವ್ಯವಹಾರಗಳು, ಅಂತಾರಾಷ್ಟ್ರೀಯ ಸಂಬಂಧಗಳ ಖಾತೆಗಳ ಸಚಿವರ ಸಭೆ (ನ್ಯೂಯಾರ್ಕ್, ಅಮೇರಿಕಾ )
• ಬ್ರಿಕ್ಸ್ ಹಣಕಾಸು ಸಚಿವರು ಮತ್ತು ಕೇಂದ್ರೀಯ ಬ್ಯಾಂಕು ಗವರ್ನರುಗಳ ಸಭೆ.
• ಬ್ರಿಕ್ಸ್ ಪ್ರವಾಸೋದ್ಯಮ ಇಲಾಖೆ ಹಿರಿಯ ಅಧಿಕಾರಿಗಳ ಸಭೆ (ಗುಟೆಂಗ್)
ಹಿರಿಯ ಅಧಿಕಾರಿಗಳು ಮತ್ತು ವಲಯಗಳ ಸಭೆಗಳು:
• ಎರಡನೇ ಕಾರ್ಮಿಕ ಮತ್ತು ಉದ್ಯೋಗ ಕಾರ್ಯ ಗುಂಪಿನ (ಇ.ಡಬ್ಲ್ಯು.ಜಿ.) ಸಭೆ (ಡರ್ಬಾನ್)
• ಬ್ರಿಕ್ಸ್ ಕ್ಷಯರೋಗ ಸಂಶೋಧನಾ ಜಾಲ (ಡರ್ಬಾನ್ )
• 3 ನೇ ಬ್ರಿಕ್ಸ್ ಮಾಧ್ಯಮ ವೇದಿಕೆ.
• ಐ.ಸಿ.ಟಿ.ಯಲ್ಲಿ ಸಹಕಾರಕ್ಕಾಗಿರುವ 3 ನೇ ಬ್ರಿಕ್ಸ್ ಕಾರ್ಯ ಗುಂಪಿನ ಸಭೆ .
• ಬ್ರಿಕ್ಸ್ ವಿಜ್ಞಾನ , ತಂತ್ರಜ್ಞಾನ ಮತ್ತು ಅನ್ವೇಷಣಾ ಮಹಿಳಾ ವೇದಿಕೆ (ಪ್ರಿಟೋರಿಯಾ)
• ಕೃಷಿ-ವ್ಯಾಪಾರ ರೋಡ್ ಶೋ.
• ಆಫ್ರಿಕಾದಲ್ಲಿ ಹಣಕಾಸು ಅಭಿವೃದ್ದಿ ಕುರಿತು ಬ್ರಿಕ್ಸ್ ಸಮ್ಮೇಳನ (ನೆಲ್ಸನ್ ಮಂಡೇಲಾ ವಿಶ್ವವಿದ್ಯಾಲಯ, ಪೋರ್ಟ್ ಎಲಿಜಬೆತ್.)
• ಬ್ರಿಕ್ಸ್ ಕಾನೂನು ವೇದಿಕೆ (ಕೇಪ್ ಟೌನ್ )
• ಬ್ರಿಕ್ಸ್ ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳ ಸಭೆ
• ಬ್ರಿಕ್ಸ್ ಸಾಂಸ್ಕೃತಿಕ ಉತ್ಸವ (ವಿವಿಧ ನಗರಗಳಲ್ಲಿ )
• ಬ್ರಿಕ್ಸ್ ಕಾರ್ಯ ಗುಂಪುಗಳ ಸಭೆಗಳು
• ಸ್ಪರ್ಧಾ ಪ್ರಾಧಿಕಾರಗಳ ಮುಖ್ಯಸ್ಥರ ಸಭೆ (ಪ್ರಿಟೋರಿಯಾ)
• 3 ನೇ ಬ್ರಿಕ್ಸ್ ಆಡಳಿತ ಮತ್ತು ಸುಧಾರಣೆಗಳಿಗೆ ಸಂಬಂಧಿಸಿದ ಎಸ್.ಒ.ಇ. ವೇದಿಕೆ (ಡರ್ಬಾನ್)
• 4 ನೇ ವ್ಯಾಪಾರೋದ್ಯಮದಿಂದ ವ್ಯಾಪಾರೋದ್ಯಮಕ್ಕೆ (ಕೈಗಾರಿಕಾ ಮಾತುಕತೆ ) ಸಭೆ (ಡರ್ಬಾನ್ )
• ಬ್ರಿಕ್ಸ್ ಶೆರ್ಪಾಗಳ 5 ನೇ ಸಭೆ (ನ್ಯೂಯಾರ್ಕ್, ಅಮೇರಿಕಾ )
• 2 ನೇ ಬ್ರಿಕ್ಸ್ ಕೌಶಲ್ಯ ಸ್ಪರ್ಧೆ (ಜೋಹಾನ್ಸ್ ಬರ್ಗ್ )
• ಬ್ರಿಕ್ಸ್ ಸಿ.ಆರ್.ಎ. ಆಡಳಿತ ಮಂಡಳಿ ಸಭೆ ಮತ್ತು ಬ್ರಿಕ್ಸ್ ಬಿ.ಎಫ್. ಕಾರ್ಯ ಗುಂಪಿನ ಸಭೆ ( ಬಾಲಿ, ಇಂಡೋನೇಶಿಯಾ )
• ಜೈವಿಕ ವೈದ್ಯಕೀಯ ಮತ್ತು ಜೈವಿಕ ತಂತ್ರಜ್ಞಾನ ಕುರಿತ 2 ನೇ ಬ್ರಿಕ್ಸ್ ಎಸ್.ಟಿ.ಐ. ಕಾರ್ಯ ಗುಂಪಿನ ಸಭೆ (ಕೇಪ್ ಟೌನ್ )
• 3 ನೇ ಬ್ರಿಕ್ಸ್ ಸಂಸ್ಕೃತಿ ಸಚಿವರ ಸಭೆ , 2018 (ಡರ್ಬಾನ್ )
• ಬ್ರಿಕ್ಸ್ ನೀತಿ ಯೋಜನಾ ಸಲಹೆಗಳ 4 ನೇ ಸುತ್ತು.
• ಭೂಅಂತರಿಕ್ಷ ವಿಜ್ಞಾನಗಳು ಮತ್ತು ಅದರ ಆನ್ವಯಿಕತೆಗಳು ಕುರಿತ ಬ್ರಿಕ್ಸ್ ಕಾರ್ಯ ಗುಂಪಿನ 3 ನೇ ಸಭೆ (ಪ್ರಿಟೋರಿಯಾ )
• ಪ್ರಾಕೃತಿಕ ವಿಪತ್ತುಗಳ ಮೇಲೆ ನಿಗಾ ಇರಿಸುವ ಮತ್ತು ತಡೆಯುವ ಬ್ರಿಕ್ಸ್ ಕಾರ್ಯತಂಡದ 3ನೇ ಸಭೆ, (ಪ್ರಿಟೋರಿಯಾ)
• ಬ್ರಿಕ್ಸ್ ರಾಷ್ಟ್ರೀಯ ಸಂಖ್ಯಾಶಾಸ್ತ್ರ ಕಚೇರಿ ಸಭೆ
• ಬ್ರಿಕ್ಸ್ ಬಾಹ್ಯಾಕಾಶ ಏಜೆನ್ಸಿಗಳ ವೇದಿಕೆ (ಪ್ರಿಟೋರಿಯಾ )
• ಬ್ರಿಕ್ಸ್ ಖಗೋಳವಿಜ್ಞಾನ ಸಮ್ಮೇಳನ (ಸುದರ್ಲ್ಯಾಂಡ್: ಸಾಲ್ಟ್-ದಕ್ಷಿಣ ಆಫ್ರಿಕನ್ ಬೃಹತ್ ದೂರದರ್ಶಕ )
• ಬ್ರಿಕ್ಸ್ ಶೆರ್ಪಾಗಳ 6ನೇ ಸಭೆ (ಬ್ಯೂನೋಸ್ ಐರಿಸ್, ಅರ್ಜೆಂಟಿನಾ )
• ಬ್ರಿಕ್ಸ್ ಎಸ್.ಟಿ.ಐ.ದಲ್ಲಾಳಿ ಕಾರ್ಯಕ್ರಮ
• ಬ್ರಿಕ್ಸ್ ವಿಜ್ಞಾನ ಅಕಾಡೆಮಿಗಳ ಸಮಾಲೋಚನೆ ( ಜೋಹಾನ್ಸ್ ಬರ್ಗ್)
• 3 ನೇ ಬ್ರಿಕ್ಸ್ ಜಲ ವೇದಿಕೆ ( ಪ್ರಿಟೋರಿಯಾ)
• ಬ್ರಿಕ್ಸ್ ಎಸ್.ಟಿ.ಐ. ಸಲಹಾ ಪರಿಷತ್ತುಗಳ ದುಂಡುಮೇಜಿನ ಕಾರ್ಯಕ್ರಮ (ಪ್ರಿಟೋರಿಯಾ)
• ಬ್ರಿಕ್ಸ್ ಎಸ್.ಟಿ.ಐ. ತಂತ್ರಜ್ಞಾನ ವರ್ಗಾವಣೆ ಮತ್ತು ಎಸ್.ಎಂ.ಎಂ.ಇ. ವೇದಿಕೆ (ಪ್ರಿಟೋರಿಯಾ)
• ಬ್ರಿಕ್ಸ್ ಶೆರ್ಪಾಗಳ ೭ನೇ ಸಭೆ.
• ಜನಸಂಖ್ಯಾ ವಿಷಯಗಳಿಗೆ ಸಂಬಂಧಿಸಿ ಬ್ರಿಕ್ಸ್ ಅಧಿಕಾರಿಗಳು ಮತ್ತು ತಜ್ಞರ ಸಭೆ ( ಪಿಲಾನೆಸ್ ಬರ್ಗ್, ರೂಸ್ಟೆನ್ ಬರ್ಗ್)