ಫ್ರೆಂಚ್ ಸಶಸ್ತ್ರ ಪಡೆಗಳ ಸಚಿವೆ ಶ್ರೀಮತಿ ಫ್ಲಾರೆನ್ಸ್ ಪಾರ್ಲೆ ಅವರಿಂದು ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.
ದ್ವಿಪಕ್ಷೀಯ ರಕ್ಷಣಾ ಸಹಕಾರದಲ್ಲಿನ ಬೆಳವಣಿಗಳ ಬಗ್ಗೆ ಶ್ರೀಮತಿ ಪಾರ್ಲೆ ಅವರು ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಭಾರತ ಮತ್ತು ಫ್ರಾನ್ಸ್ ನಡುವೆ ವ್ಯೂಹಾತ್ಮಕ ಪಾಲುದಾರಿಕೆಗೆ ರಕ್ಷಣಾ ಸಹಕಾರ ಪ್ರಮುಖ ಆಧಾರಸ್ತಂಭವಾಗಿದೆ ಎಂದ ಪ್ರಧಾನಿ, ಮೇಕ್ ಇನ್ ಇಂಡಿಯಾದಲ್ಲಿ ರಕ್ಷಣಾ ಉತ್ಪಾದನೆ ಮತ್ತು ಜಂಟಿ ಸಂಶೋಧನೆ ಹಾಗೂ ಅಭಿವೃದ್ಧಿಯ ಚೌಕಟ್ಟಿನ ಹೆಚ್ಚಿನ ಸಹಕಾರಕ್ಕೆ ಕರೆ ನೀಡಿದರು.
ಇಬ್ಬರೂ ನಾಯಕರು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಕುರಿತು ಚರ್ಚಿಸಿದರು.
ಅಧ್ಯಕ್ಷ ಮೆಕ್ರಾನ್ ಅವರನ್ನು ಹತ್ತಿರದ ಅನುಕೂಲಕರ ದಿನದಂದು ಭಾರತದಲ್ಲಿ ಬರಮಾಡಿಕೊಳ್ಳಲು ತಾವು ಎದಿರುನೋಡುತ್ತಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.