ಪರಮ ಶ್ರದ್ಧೇಯ ಸ್ವಾಮಿ ಗೌತಮಾನಂದಜೀ ಮಹಾರಾಜ್ ಸ್ವಾಮಿ ಜಿತಕಾಮಾನಂದಜೀ ಮಹಾರಾಜ್ ಸ್ವಾಮಿ ನಿರ್ಭಯಾನಂದ ಸರಸ್ವತಿ, ಸ್ವಾಮಿಮ ವೀರೇಶಾನಂದ ಸರಸ್ವತೀ, ಸ್ವಾಮಿ ಪರಮಾನಂದಜೀ, ದೇಶದ ದಿಕ್ಕುದಿಕ್ಕುಗಳಿಂದ – ಮೂಲೆ ಮೂಲೆಗಳಿಂದ ಆಗಮಿಸಿ ಉಪಸ್ಥಿತರಾಗಿರುವ ಋಷಿ-ಮುನಿ-ಸಂತ ಸಮೂಹವೇ ಹಾಗೂ ಸಾವಿರಾರು ಸಂಖ್ಯೆಯಲ್ಲಿ ಉಪಸ್ಥಿತರಾಗಿರುವ ಯುವಜನ ಮಿತ್ರರಿಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು.

ಶತಾಯುಷಿ ಪರಮಪೂಜ್ಯ ಶ್ರೀ ಶಿವಕುಮಾರಸ್ವಾಮೀಜಿಯವರ ಚರಣಕಮಲಗಳಿಗೆ ನನ್ನ ಶ್ರದ್ಧಾಪೂರ್ವಕ ನಮನಗಳು.
ತುಮಕೂರಿನ ರಾಮಕೃಷ್ಣ ಆಶ್ರಮ ಸ್ಥಾಪಿತವಾಗಿ ಇಪ್ಪತ್ತೈದು ವರ್ಷಗಳು
ಸ್ವಾಮಿ ವಿವೇಕಾನಂದರ ಐತಿಹಾಸಿಕ ಚಿಕಾಗೋ ಉಪನ್ಯಾಸ ನೂರ ಇಪ್ಪತ್ತೈದು ವರ್ಷಗಳು
ಸೋದರಿ ನಿವೇದಿತಾಳ ನೂರ ಐವತ್ತನೇ ಜನ್ಮವರ್ಷ
ಇವುಗಳ ತ್ರಿವೇಣಿ ಸಂಗಮ ನಿಮ್ಮ ಯುವಜನ ಸಮ್ಮೇಳನ

ಶ್ರೀ ರಾಮಕೃಷ್ಣ, ಶ್ರೀ ಶಾರದಾಮಾತೆ, ಸ್ವಾಮಿ ವಿವೇಕಾನಂದರ ಸಂದೇಶವಾಹಕರಾದ ನನ್ನ ಪ್ರೀತಿಯ ಸಹೋದರ ಸಹೋದರಿಯರಿಗೆ ಪ್ರೀತಿಯ ಶುಭಾಷಯಗಳು.ತುಮಕೂರಿನ ಈ ಮೈದಾನವು ಈ ಸಮಯದಲ್ಲಿ ಸಾವಿರಾರು ವಿವೇಕಾನಂದರು, ಸಾವಿರಾರು ಸೋದರಿ ನಿವೇದಿತಾರ ಪ್ರಭೆ-ತೇಜಸ್ಸಿನಿಂದ ಕಂಗೊಳಿಸುತ್ತಿದೆ.ಎಲ್ಲೆಡೆಯೂ ಕೇಸರಿ ಬಣ್ಣ ಈ ತೇಜಸ್ಸನ್ನು ಮತ್ತೂ ವರ್ಧಿಸುತ್ತದೆ.ತಮ್ಮ ಈ ತೇಜಸ್ಸಿನ ಪ್ರಭೆಯ ಆಶೀರ್ವಾದವನ್ನು ನಾನೂ ಸಹ ಪಡೆಯಬಯಸಿದ್ದೆ. ಆದ್ದರಿಂದ ಯಾವಾಗ ಮೂರು ದಿನಗಳ ಹಿಂದೆ ಸ್ವಾಮಿ ವೀರೇಶಾನಂದ ಸರಸ್ವತಿರವರ ಪತ್ರ ಬಂತೋ, ಆಗ ನಾನು ತಮ್ಮ ಸಮ್ಮುಖದಲ್ಲಿ ಆಗಮಿಸುವುದಕ್ಕೋಸ್ಕರ ಅತ್ಯಂತ ಹರ್ಷದಿಂದ ಸಿದ್ಧನಾಗಿದ್ದೆ.ಇಂದು ರಾಜಧಾನಿ ದೆಹಲಿಗೆ ವಿದೇಶದ ಅತಿಥಿಗಳು ಸರಕಾರಿ ಪ್ರವಾಸದ ಮೇಲೆ ಆಗಮಿಸಿದ್ದಾರೆ.ಆದ್ದರಿಂದ ನಾನು ಖುದ್ದಾಗಿ ಬರಲಾಗಲಿಲ್ಲ. ಆದರೆ ತಂತ್ರಜ್ಞಾನ ಮಾಧ್ಯಮದಿಂದ ತಮ್ಮೊಂದಿಗೆ ಕೂಡಿಕೊಳ್ಳುತ್ತಿದ್ದೇನೆ.

ಯುವಪೀಳಿಗೆಯೊಂದಿಗೆ ಯಾವುದೇ ರೀತಿಯ ಸಂವಾದ ನಡೆದರೂ, ಅವುಗಳಿಂದ ಒಂದಲ್ಲ ಒಂದು ಅಂಶ ಕಲಿಯುವುದಕ್ಕೆ ದೊರಕುತ್ತದೆ.ಆದ್ದರಿಂದಲೇ ನಾನು ಯುವಕರನ್ನು ಹೆಚ್ಚು ಹೆಚ್ಚು ಭೇಟಿಮಾಡಲು, ಅವರೊಂದಿಗೆ ಮಾತನಾಡಲು ಅವರ ಅನುಭವಗಳನ್ನು ಕೇಳಲು ಸಾಧ್ಯವಿದ್ದಷ್ಟು ಪ್ರಯತ್ನಿಸುತ್ತೇನೆ. ಅವುಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಲು ನಾನು ನಿರಂತರ ಪ್ರಯತ್ನಿಸುತ್ತೇನೆ.

ಈ ಭವ್ಯ ಯುವಜನ ಮಹೋತ್ಸವ ಮತ್ತು ಸಾಧು-ಭಕ್ತ ಸಮ್ಮೇಳನಗಳ ಶುಭಾರಂಭ-ಉದ್ಘಾಟನೆ ಮಾಡುವ ಅವಕಾಶ ದೊರೆತದ್ದು ನನ್ನ ಪರಮ ಸೌಭಾಗ್ಯ.

ಮೂರು ವರ್ಷಗಳ ಹಿಂದೆ ನಾನು ಪರಮಪೂಜ್ಯ ಶ್ರೀ ಶಿವಕುಮಾರಸ್ವಾಮೀಜಿಯವರ ಆಶೀರ್ವಾದ ಪಡೆಯಲು ತುಮಕೂರಿಗೆ ಬಂದಾಗ ಅಲ್ಲಿಯ ಜನಗಳಿಂದ ಮತ್ತು ವಿಶೇಷವಾಗಿ ಯುವ ಸಮುದಾಯದಿಂದ ಯಾವ ಸ್ನೇಹ ಪ್ರಾಪ್ತವಾಗಿತ್ತೋ ಅದು ನನಗೆ ಇಂದಿಗೂ ಸ್ಮರಣೆಯಲ್ಲಿದೆ.ಜಗಜ್ಯೋತಿ ಬಸವೇಶ್ವರ ಮತ್ತು ಸ್ವಾಮಿ ವಿವೇಕಾನಂದರ ಆಶೀರ್ವಾದದಿಂದ ಶ್ರೀ ಶಿವಕುಮಾರಸ್ವಾಮೀಜಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಭಾಗಿಗಳಾಗಿದ್ದಾರೆ. ನಾನು ಅವರಿಗೆ ಮಹೋನ್ನತ ಆರೋಗ್ಯ ಭಾಗ್ಯ ಹಾಗೂ ದೀರ್ಘಾಯು ಪ್ರಾಪ್ತವಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

ಸಹೋದರ ಸಹೋದರಿಯರೇ,ಮೂರು-ಮೂರು ಮಹಾನ್ ಸಮ್ಮೇಳನಗಳು ಒಟ್ಟೊಟ್ಟಿಗೆ ಆಚರಿಸಲ್ಪಡುವುದು ಬಹಳ ಅಪರೂಪವಾಗಿದೆ.ಬಹಳ ವಿರಳವಾಗಿದೆ.ಆದರೆ ತುಮಕೂರಿನಲ್ಲಿ ಈ ಅಪೂರ್ವ ದಿವ್ಯ ಸಂಯೋಗವಾಗಿರುವುದು ಅನನ್ಯವಾದುದು.ತುಮಕೂರಿನಲ್ಲಿ ರಾಮಕೃಷ್ಣ ಆಶ್ರಮ ಸ್ಥಾಪನೆಯಾಗಿ 25 ವರ್ಷಗಳು, ಚಿಕಾಗೋನಲ್ಲಿ ಸ್ವಾಮಿ ವಿವೇಕಾನಂದಜೀರವರ ಭಾಷಣಕ್ಕೆ 125 ವರ್ಷಗಳು ಮತ್ತು ಸಹೋದರಿ ನಿವೇದಿತಾರವರ 150ನೇ ಜನ್ಮದಿನೋತ್ಸವಗಳ ನೆನಪಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಒಂದು ಅಪೂರ್ವ ಸನ್ನಿವೇಶವಾಗಿದೆ.ಇಂತಹ ಅನುಪಮ ಮೂರು ಸಂದರ್ಭಗಳ ತ್ರಿವೇಣಿಯಲ್ಲಿ ಮೀಯಲು ಕರ್ನಾಟಕದ ಸಾವಿರಾರು ಯುವಕ-ಯುವತಿಯರು ಇಲ್ಲಿ ಯುವಜನ ಮಹೋತ್ಸವದಲ್ಲಿ ಒಂದೆಡೆ ಸೇರುವುದು ಮಹತ್ವಪೂರ್ಣ ಉಪಲಬ್ಧಿಯಾಗಿದೆ.ನಾನು ಮತ್ತೊಮ್ಮೆ ತಮ್ಮೆಲ್ಲರಿಗೂ ಈ ಸಮ್ಮೇಳನಕ್ಕಾಗಿ ಅಭಿನಂದಿಸುತ್ತೇನೆ. ಶುಭಕೋರುತ್ತೇನೆ. ಇಂದು ಈ ಮೂರೂ ಮಹೋತ್ಸವಗಳ ಕೇಂದ್ರಬಿಂದು ಸ್ವಾಮಿ ವಿವೇಕಾನಂದರು.ಕರ್ನಾಟಕದ ಬಗ್ಗೆ ಸ್ವಾಮಿ ವಿವೇಕಾನಂದರಿಗೆ ವಿಶೇಷವಾದ ಸ್ನೇಹವಿದೆ.ಅಮೇರಿಕಾಕ್ಕೆ ತೆರಳುವ ಮೊದಲು, ಕನ್ಯಾಕುಮಾರಿಗೆ ಹೋಗುವ ಮೊದಲು ಅವರು ಕರ್ನಾಟಕದಲ್ಲಿ ಕೆಲವು ದಿನ ತಂಗಿದ್ದರು.

ನಾನು ನನ್ನ ಜೀವನ ಬದುಕಲು ಯೋಗ್ಯವಾಗುವಂತೆ ಮಾಡಿಕೊಳ್ಳುವಲ್ಲಿ ಯಾವ ವ್ಯಕ್ತಿಗಳು ಬಹಳ ಮಹತ್ತರವಾದ ಪಾತ್ರವನ್ನು ವಹಿಸಿದ್ದರೋ ಅವರುಗಳಲ್ಲಿ ಸ್ವಾಮಿ ವಿವೇಕಾನಂದರು ಪ್ರಮುಖರಾಗಿದ್ದಾರೆ.ಅವರ ಜೀವನ ಸಂದೇಶಗಳ ಬಗ್ಗೆ ತಮಗೆ ಹೆಚ್ಚು ಅಂಶಗಳು ಅರಿವಿರಬೇಕು. ಅವುಗಳಲ್ಲಿ ನಾನು ಈ ವೇದಿಕೆಯಲ್ಲಿ ಒಂದು ಸಂದೇಶವನ್ನು ಪುನರಾವರ್ತಿಸಲು ಬಯಸುತ್ತೇನೆ. ಅವರು ಹೇಳಿದ್ದರು “ಙou ತಿiಟಟ be ಟಿeಚಿಡಿeಡಿ ಣo heಚಿveಟಿ ಣhಡಿough ಜಿooಣbಚಿbಟಟ ಣhಚಿಟಿ ಣhಡಿough ಣhe sಣuಜಥಿ oಜಿ ಣhe ಉiಣಚಿ”.ಯಾವ ವ್ಯಕ್ತಿ ಆಧ್ಯಾತ್ಮವನ್ನು, ನಮ್ಮ ಸಂಸ್ಕøತಿಯನ್ನು, ನಮ್ಮ ಪರಂಪರೆಯನ್ನು ಇಷ್ಟೊಂದು ಎತ್ತರಕ್ಕೆ ಒಯ್ದಿರುವನೋ, ಅವನು ಈ ಮಾತನ್ನು ನುಡಿಯುತ್ತಿದ್ದನು.“ನಾವು ಚಂಡಾಟ ಆಡಿಯೂ ಸಹ ಭಗವಂತನನ್ನು ಪಡೆಯಬಲ್ಲೆವು” ಎಂದು ಹೇಳಿದರೆ ಅವರು ಯಾವ ಉನ್ನತ ಮಟ್ಟದಲ್ಲಿ ಆಲೋಚಿಸುತ್ತಿದ್ದರೆಂಬುದನ್ನು ಅಂದಾಜು ಮಾಡಬಹುದು.ಯಾವ ಗೀತೆ ನಮಗೆ ಕಾಯಕ ಮಾಡುವುದನ್ನು ಕಲಿಸುತ್ತದೆಯೋ, ಮುಕ್ತಿಮಾರ್ಗವನ್ನು ತೋರಿಸುತ್ತದೆಯೋ, ಅದನ್ನು ಮತ್ತೂ ಉತ್ತಮ ವಿಧದಲ್ಲಿ ತಿಳಿಯಬೇಕೆಂದರೆ ನಮ್ಮ ಬುದ್ಧಿ ಮತ್ತು ಶರೀರ ಆರೋಗ್ಯವಾಗಿರಬೇಕು, ಶಕ್ತಿಶಾಲಿಯಾಗಿರಬೇಕು.ಅವರು ನಮ್ಮ ಆಧ್ಯಾತ್ಮಿಕ ವಿಸ್ತಾರವನ್ನು, ಸಕಾಲಿಕ ಅವಶ್ಯಕತೆಗಳೊಂದಿಗೆ ಜೋಡಿಸಿದ್ದರು, ಕೂಡಿಸಿದ್ದರು, ಅವರು ನಮ್ಮ ಗೌರವಯುತ ಇತಿಹಾಸವನ್ನು ವರ್ತಮಾನದೊಂದಿಗೆ ಮಿಳಿತಗೊಳಿಸಿದ್ದರು.

ಇಂದಿನ ಕಾರ್ಯಕ್ರಮದಲ್ಲಿ ಸಾಧು-ಭಕ್ತ ಸಮ್ಮೇಳನದ ಮುಖಾಂತರ ಆಧ್ಯಾತ್ಮಿಕ ವಿಸ್ತಾರ ಮತ್ತು ಯುವ ಸಮ್ಮೇಳನದ ಮುಖಾಂತರ ನಮ್ಮ ವರ್ತಮಾನದೊಂದಿಗೆ ಮೇಳೈಸಿದೆ ಎಂಬುದು ನನಗೆ ಹರ್ಷವನ್ನುಂಟುಮಾಡಿದೆ.ರಾಷ್ಟ್ರದೆಲ್ಲೆಡೆ ಸಂತ ಸಮಾಜ ಮತ್ತು ಯುವ ಜನಾಂಗವೂ ಸಹ ತೊಡಗಿಕೊಂಡಿದೆ.

ಇಲ್ಲಿ ಪವಿತ್ರ ತೀರ್ಥಗಳ ವಿಚಾರ ಆಗುತ್ತಿರುವುದರ ಜೊತೆಗೆ ತಾಂತ್ರಿಕ ಜ್ಞಾನದ ಚರ್ಚೆಯೂ ಇದೆ.ಇಲ್ಲಿ ಭಗವಂತನ ವಿಷಯದ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಮತ್ತು ಹೊಸ ಅನ್ವೇಷಣೆಯ ಬಗ್ಗೆಯೂ ಚರ್ಚೆಯಾಗುತ್ತಿದೆ.

ಕರ್ನಾಟಕದಲ್ಲಿ ಆಧ್ಯಾತ್ಮಿಕ ಹಬ್ಬ ಮತ್ತು ಯುವಜನಾಂಗದ ಹಬ್ಬದ ಒಂದು ಮಾದರಿಯ ಬೆಳವಣಿಗೆಯಾಗುತ್ತಿದೆ.ಇದನ್ನು ಮುಂಬರುವ ದಿನಗಳಲ್ಲಿ ಸಮಗ್ರ ದೇಶದಲ್ಲಿ ಪುನರಾವರ್ತಿಸಲಾಗುವುದು.ಭವಿಷ್ಯದ ಸಿದ್ಧತೆಗಾಗಿ ನಮ್ಮ ಐತಿಹಾಸಿಕ ಪರಂಪರೆಗಳು ಹಾಗೂ ವರ್ತಮಾನ ಯುವಶಕ್ತಿಯ ಈ ಸಮಾಗಮ ಒಂದು ಅದ್ಭುತ.ನಾವು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಗಮನಹರಿಸಿದರೆ 19 ಮತ್ತು 20ನೇ ಶತಮಾನದ ಕಾಲಘಟ್ಟದ ಬಗ್ಗೆ ಸೂಕ್ಷ್ಮ ದೃಷ್ಟಿ ಬೀರಿದರೆ ಬೇರೆ ಬೇರೆ ಹಂತದಲ್ಲೇ ಸಂತ ಸಮಾಜ ಮತ್ತು ವೃತ್ತಿಪರ ಸಮಾಜ ಇವೆರಡರ ಒಂದು ಸಂಯುಕ್ತ ಸಂಕಲ್ಪವನ್ನು ನಾವು ಗಮನಿಸಬಹುದು.ರಾಷ್ಟ್ರವನ್ನು ಗುಲಾಮಗಿರಿಯಿಂದ ಬಂಧನ ವಿಮುಕ್ತಗೊಳಿಸುವುದೇ ಈ ಸಂಯುಕ್ತ ಸಂಕಲ್ಪವಾಗಿತ್ತು.ಬೇರೆ ಬೇರೆ ಜಾತಿಗಳಲ್ಲಿ ಹರಿದು ಹಂಚಿಹೋಗಿದ್ದ ಸಮಾಜ ಬೇರೆ ಬೇರೆ ವರ್ಗಗಳಲ್ಲಿ ವಿಭಜಿತವಾಗಿದ್ದ ಸಮಾಜಗಳು ಇಂಗ್ಲೀಷರನ್ನು ಎದುರಿಸಲು ಸಮರ್ಥವಾಗಿರಲಿಲ್ಲ ಎಂಬುದನ್ನು ಅಂದಿನ ಸಂತ ಸಮಾಜ ಸ್ಪಷ್ಟವಾಗಿ ಕಂಡಿತ್ತು.ಈ ದೌರ್ಬಲ್ಯವನ್ನು ಕೊನೆಗೊಳಿಸಲು ಆ ಸಂದರ್ಭದಲ್ಲಿ ದೇಶದ ಬೇರೆ ಬೇರೆ ಭಾಗಗಳಲ್ಲಿ ಸಾಮಾಜಿಕ ಆಂದೋಲನಗಳು, ಚಳುವಳಿಗಳು ನಡೆದವು.ಈ ಚಳುವಳಿಗಳ ಮುಖಾಂತರ ಸಮಗ್ರ ರಾಷ್ಟ್ರದಲ್ಲಿ ಐಕ್ಯತೆ ಮೂಡಿತು ಹಾಗೂ ದೇಶವನ್ನು ಅದರ ಆಂತರಿಕ ದುರ್ಗುಣಗಳಿಂದ ಮುಕ್ತಿಗೊಳಿಸುವ ಪ್ರಯತ್ನ ಮಾಡಲಾಯಿತು.ಈ ಚಳುವಳಿಗಳ ಜವಾಬ್ದಾರಿ ನಿರ್ವಹಿಸಿದ ನೇತಾರರು ದೇಶದ ಸಾಮಾನ್ಯ ಜನರಿಗೆ ಸಮಾನತೆಯ ಗೌರವವನ್ನು ಒದಗಿಸಿಕೊಟ್ಟರು.ಅವರು ರಾಷ್ಟ್ರದ ಅವಶ್ಯಕತೆಯನ್ನು ಅರಿತು ತಮ್ಮ ಆಧ್ಯಾತ್ಮಿಕ ಯಾತ್ರೆಯನ್ನು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿಸಿದರು.ಜನಸೇವೆಯನ್ನು ಭಗವಂತನ ಸೇವೆಯ ಮಾಧ್ಯಮವನ್ನಾಗಿ ಮಾಡಿಕೊಂಡರು.

ಬಂಧುಗಳೇ, ಬೇರೆ ಬೇರೆ ಕ್ಷೇತ್ರಗಳಿಂದ, ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ವೃತ್ತಿಪರರು ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಭಾಗವಹಿಸಿದರು. ವಿಶೇಷವಾಗಿ ವಕೀಲರು, ಶಿಕ್ಷಕರು, ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‍ಗಳು ಮುಂತಾದ ವೃತ್ತಿಪರರು ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ಹೊಸ ರೂಪವನ್ನು ಕೊಟ್ಟರು. ಹೊಸ ದಿಕ್ಕನ್ನು ತೋರಿಸಿದರು ಮತ್ತು ಸ್ವಾತಂತ್ರ್ಯ ಪಡೆದ ನಂತರ ರಾಷ್ಟ್ರ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕಿದರು ಎಂಬುದು ಒಂದು ಅದ್ಭುತ ಸಂಚಲನೆ ಮೂಡಿಸಿತ್ತು. ಈ ಎರಡೂ ಪ್ರಯತ್ನಗಳು ಒಂದಾಗಿ ನಡೆದು ದೇಶ ಜಾಗೃತಿಯನ್ನು ಪಡೆಯಿತು ಮತ್ತು ಭಾರತ ಒಗ್ಗಟ್ಟಾಗಿ, ಜನರು ಆಂಗ್ಲರನ್ನು ಓಡಿಸಿಯೇ ವಿರಮಿಸಿದರು.ಸ್ವಾತಂತ್ರ್ಯದ ಸಂಯುಕ್ತ ಸಂಕಲ್ಪವನ್ನು ಈಡೇರಿಸಿಕೊಂಡರು.

ಸ್ವಾತಂತ್ರ್ಯ ಪಡೆದ ನಂತರ ಅನೇಕ ದಶಕಗಳು ಉರುಳಿದ ಮೇಲೆ ದೇಶದಲ್ಲಿ ಮತ್ತೊಮ್ಮೆ ಅದೇ ಸಂಕಲ್ಪ ಶಕ್ತಿ ಕಂಡು ಬರುತ್ತಿದೆ.ಯುವಜನಾಂಗದ ಸಂಕಲ್ಪ ಶಕ್ತಿಯ ಅದ್ಭುತ ಕೌಶಲ್ಯವನ್ನು ನಾವು ಮೊನ್ನೆ ತಾನೇ ಉತ್ತರ-ಪೂರ್ವ ರಾಜ್ಯಗಳಲ್ಲ್ಲಿ ಕಂಡಿದ್ದೇವೆ. ತ್ರಿಪುರ, ನಾಗಾಲ್ಯಾಂಡ್, ಮೇಘಾಲಯ ಈ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ಸನ್ನು ಜನತೆ ತಿರಸ್ಕರಿಸಿದೆ.ರಾಮಕೃಷ್ಣ ಮಿಷನ್ನಿನ ಸಾವಿರಾರು ಸಾಧು-ಸಂತರು, ಕಾರ್ಯಕರ್ತರು ಉತ್ತರ ಪೂರ್ವ ಭಾರತದರಾಜ್ಯಗಳಲ್ಲ್ಲಿ ಜನಕಲ್ಯಾಣ ಕಾರ್ಯಗಳಲ್ಲಿ ತೊಡಗಿದ್ದಾರೆ.ತಮಗೆ ಈ ಬಗ್ಗೆ ಹೆಚ್ಚು ತಿಳುವಳಿಕೆ ಇರಬಹುದು.

ಬಂಧುಗಳೇ, ತ್ರಿಪುರ ಫಲಿತಾಂಶ ವಾಸ್ತವವಾಗಿ ನಿಜಕ್ಕೂಐತಿಹಾಸಿಕವಾದದ್ದು, ಎಡಪಂಥೀಯರ ಕೋಟೆಯು ಅಭೇದ್ಯ ಎನ್ನಲಾಗುತ್ತಿತ್ತು. ಆ ಕೋಟೆಯನ್ನು ಯುವಶಕ್ತಿ, ನಾರಿ ಶಕ್ತಿ ಕೂಡಿ ಧೂಳೀಪಟಗೊಳಿಸಿದರು.ಭಾರತೀಯ ಜನತಾ ಪಕ್ಷದ ನೇತೃತ್ವದಲ್ಲಿ ಬಹುಶಃ ದೇಶದ ಯುವಸರ್ಕಾರ ರಚನೆಯಾಗಲಿದೆ. ಅಲ್ಲಿ ಹೆಚ್ಚು ಭಾ.ಜ.ಪ ಯುವ ಶಾಸಕರೇ ಗೆದ್ದಿದ್ದಾರೆ. ರಾಜ್ಯದ ಯಾವ ಇಪ್ಪತ್ತು ಸ್ಥಾನಗಳಲ್ಲಿ ನನ್ನ ಆದಿವಾಸಿ ಸೋದರ ಸೋದರಿಯರಬಾಹುಳ್ಯವಿತ್ತೋಆ 20 ಸ್ಥಾನಗಳಲ್ಲೂಭಾ.ಜ.ಪ ಜಯಗಳಿಸಿದೆ. ತ್ರಿಪುರಾದ ಯುವಜನಾಂಗ ಅಲ್ಲಿ ಭಯ, ಭ್ರಷ್ಟಾಚಾರ, ಕೌಟುಂಬಿಕ ಮತ್ತು ಭ್ರಮೆಯ ರಾಜಕೀಯ ಇವುಗಳನ್ನು ಪರಾಭವಗೊಳಿಸಿದೆ.

ಯುವಸಂಕಲ್ಪದ ಈ ಪ್ರವಾಹವನ್ನು ಈಗ ಕರ್ನಾಟಕದ ಈ ಕ್ರೀಡಾಂಗಣದಲ್ಲೂ ಅನುಭವಿಸಬಹುದಾಗಿದೆ.ಯಾವ ಶ್ರದ್ಧಾನ್ವಿತರು ಈ ವೇದಿಕೆಯಲ್ಲಿ ಉಪಸ್ಥಿತರಿರುವರೋ ಅವರುಗಳು ಇದರ ಹೆಚ್ಚಿನ ಅನುಭೂತಿ ಹೊಂದುತ್ತಿರಬಹುದು.

ಬಂಧುಗಳೇ,ರಾಷ್ಟ್ರನಿರ್ಮಾಣಕ್ಕೆ ಸಮರ್ಪಿತ ಈ ಸಂಕಲ್ಪವನ್ನು ಸ್ವಾಮಿ ವಿವೇಕಾನಂದರ ಒಂದು ಸಂದೇಶದಿಂದ ಹೆಚ್ಚು ಸ್ಪಷ್ಟ ರೀತಿಯಲ್ಲಿ ತಿಳಿಯಬಹುದು. ಅವರು ಹೇಳಿದ್ದರು “ಐiಜಿe is shoಡಿಣ, buಣ ಣhe souಟ is immoಡಿಣಚಿಟ ಚಿಟಿಜ eಣeಡಿಟಿಚಿಟ ಚಿಟಿಜ oಟಿe ಣhiಟಿg beiಟಿg ಛಿeಡಿಣಚಿiಟಿ, ಜeಚಿಣh. ಐeಣ us ಣheಡಿeಜಿoಡಿe ಣಚಿಞe uಠಿ ಚಿ gಡಿeಚಿಣ iಜeಚಿಟ ಚಿಟಿಜ give uಠಿ ouಡಿ ತಿhoಟe ಟiಜಿe ಣo iಣ”. ಜೀವನ ಚಿಕ್ಕದು ಮತ್ತು ಮೃತ್ಯು ನಿಶ್ಚಿತವಾದದ್ದು.ಆದ್ದರಿಂದ ನಾವು ಒಂದು ಸಂಕಲ್ಪ ನಿಶ್ಚಯಿಸಿಕೊಂಡು ಅದಕ್ಕೆ ನಮ್ಮ ಜೀವವನ್ನು ಸಮರ್ಪಣೆ ಮಾಡಬೇಕು.

ಇಂದು ಸಾವಿರಾರು ಯುವಜನಾಂಗದ ನಡುವೆ, ನಾನು ನಿಮ್ಮೆಲ್ಲರಲ್ಲೂ ಒಂದು ಪ್ರಶ್ನೆ ಕೇಳಬಯಸುತ್ತೇನೆ. ಅದೇನೆಂದರೆ ನಾನು ಸ್ವತಃ ಈ ಪ್ರಶ್ನೆಯನ್ನು ಮಾಡಿದ್ದೆ.ಈ ಪ್ರಶ್ನೆಯನ್ನು ಎಷ್ಟು ಬೇಗ ನಾವು ಎದುರಿಸುತ್ತೇವೆಯೋ ಅಷ್ಟೇ ಬೇಗ ನಮ್ಮ ಜೀವನ ಭವಿಷ್ಯದ ಮಾರ್ಗ ಸ್ಪಷ್ಟವಾಗುತ್ತದೆ.ನಮ್ಮ ಜೀವನದ ಗುರಿ ಏನಾಗಿರಬೇಕು?ಸಂಕಲ್ಪ ಏನಾಗಿರಬೇಕು?ಈ ಸಂಕಲ್ಪ ಯಾವಾಗ ಸ್ಪಷ್ಟವಾಗುತ್ತದೆಯೋ, ಆಗ ನಾವು ಸ್ವಲ್ಪ ಗುರಿಯನ್ನು ಸಾಧಿಸಬಹುದು. ಯಾವಾಗ ಸಂಕಲ್ಪ ಗೊಂದಲದಿಂದ ಕೂಡಿರುತ್ತದೆಯೋ ಆಗ ಛಿoಟಿಜಿuseಜ ಆಗುತ್ತದೆ. ಆಗ ಗುರಿಸಾಧನೆ ಅಸಂಭವವಾಗುತ್ತದೆ.ಆದ್ದರಿಂದ ಇಂದು ಈ ಯುವ ಸಮ್ಮೇಳನಕ್ಕೆ ಆಗಮಿಸಿರುವ ಪ್ರತಿಯೊಬ್ಬ ಯುವಕರು ತಮ್ಮ ಸಂಕಲ್ಪವನ್ನು ಸ್ಪಷ್ಟಮಾಡಿಕೊಳ್ಳಿ. ಜೀವನದಲ್ಲಿ ಯಾವುದನ್ನು ಪಡೆದುಕೊಳ್ಳಬೇಕು, ಸಾಧಿಸಬೇಕೆಂಬುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ನಾನು ಆಗ್ರಹಿಸುತ್ತೇನೆ.

ಸೋದರ, ಸೋದರಿಯರೇ, ಇಂದು ನಮ್ಮ ಭಾರತ ಸಮಗ್ರ ವಿಶ್ವದಲ್ಲಿ ಅತ್ಯಂತ ಶ್ರೇಷ್ಠ ಯುವಾವಸ್ಥೆಯ ರಾಷ್ಟ್ರವಾಗಿದೆ.ಶೇಕಡಾ 65ಕ್ಕಿಂತಹೆಚ್ಚು ಜನರವಯಸ್ಸು 35ಕ್ಕಿಂತ ಕಡಿಮೆಯಿದÉ, ಯುವಶಕ್ತಿಯ ಈ ಅಪಾರ ಶಕ್ತಿ, ತೇಜಸ್ಸು ದೇಶದ ಅದೃಷ್ಟವನ್ನು ಪರಿವರ್ತನೆ ಮಾಡÀಬಲ್ಲದು.ನಮ್ಮ ಬಳಿ ಇದನ್ನು ತಪ್ಪಿಸುವ ಯಾವುದೇ ವಿಕಲ್ಪ ಇಲ್ಲವೇ ಇಲ್ಲ. ಈ ಯುವಶಕ್ತಿಯ ಅಪಾರ ಬಲವೇ ದೇಶವನ್ನು 21ನೇ ಶತಮಾನದಲ್ಲಿ ನೂತನ ಎತ್ತರಗಳಿಗೆ ಒಯ್ಯುತ್ತದೆ.

2014ರಲ್ಲಿ ಸರ್ಕಾರ ನಿರ್ಮಾಣವಾದ ನಂತರ, ನಮ್ಮ ಸರ್ಕಾರ ಯುವಶಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಈ ಶಕ್ತಿ ತೇಜಸ್ಸನ್ನು ರಾಷ್ಟ್ರನಿರ್ಮಾಣಕ್ಕಾಗಿ ಉಪಯೋಗಿಸುವುದಕ್ಕೋಸ್ಕರ ಅನೇಕ ತೀರ್ಮಾನಗಳನ್ನು ಕೈಗೊಂಡು, ಅವು ನಿರಂತರವಾಗಿ ಚಾಲನೆಯಲ್ಲಿವೆ. ಯಾವಾಗ ನಾನು ಯುವಶಕ್ತಿ ಬಗ್ಗೆ ಮಾತನಾಡುತ್ತೇನೆಯೋ ಆಗ ಕಾಂಗ್ರೆಸ್ ಸರ್ಕಾರ ಈ ವಿಷಯದ ಬಗ್ಗೆ ಆಲೋಚಿಸುವ ರೀತಿಯನ್ನು ತಿಳಿಸಬೇಕಾದ್ದು ಅವಶ್ಯಕ.

ಬಂಧುಗಳೇ, ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಸ್ಕಿಲ್ ಡೆವಲಪ್‍ಮೆಂಟ್‍ನ ಕೆಲಸ 40-50 ಬೇರೆ ಬೇರೆ ಸಚಿವಾಯಲಗಳಲ್ಲಿ ಆಗುತ್ತಿತ್ತು ಎಂಬುದನ್ನು ತಿಳಿದು ನೀವು ಆಶ್ಚರ್ಯಪಡಬಹುದು. ಎಲ್ಲಾ ಸಚಿವಾಲಯಗಳೂ ಸೀಮತ ಚೌಕಟ್ಟಿನಲ್ಲಿ ಕೆಲಸಮಾಡುತ್ತಿದ್ದರು.ಒಬ್ಬರು ಮತ್ತೊಬ್ಬರಿಗೆ ಸಂಪರ್ಕ ಇರಲಿಲ್ಲ.ಪ್ರತಿ ಸಚಿವಾಲಯ ತಮ್ಮ ದೃಷ್ಟಿಯಿಂದ ಬೇರೆ ಬೇರೆ ತೀರ್ಮಾನಗಳನ್ನು ಮಾಡುತ್ತಿದ್ದವು.ಯಾವ ಇಂಡಸ್ಟ್ರಿಯಲ್ಲಿ ಯಾವ ಸ್ಕಿಲ್‍ಗಳಿಗೆ ಡಿಮ್ಯಾಂಡ್ ಇದೆ, ಯಾವ ರೀತಿಯ ಸ್ಕಿಲ್ ವರ್ಕ್ ಫೋರ್ಸ್ ಡಿಮ್ಯಾಂಡ್ ಇದೆ ಎಂಬುದರ ಬಗ್ಗೆ ಗಮನ ಕೊಡುತ್ತಿರಲಿಲ್ಲ. ಅಷ್ಟೆ ಅಲ್ಲದೆ ಯಾವುದಾದರೂ ಯುವಕ ತನ್ನ ಸಾಮಥ್ರ್ಯದಿಂದ ಏನನ್ನಾದರೂ ಮಾಡಬಯಸಿದರೆ, ಅವರಿಗೆ ಬ್ಯಾಂಕ್‍ನಿಂದ ಸಾಲ ತೆಗೆದುಕೊಳ್ಳಲು ಬಹಳ ಸಂಕಷ್ಟಗಳು ಎದುರಾಗುತ್ತಿದ್ದವು.ಕಾಂಗ್ರೆಸ್‍ನ ಸಂಪೂರ್ಣ ವ್ಯವಸ್ಥೆತಮ್ಮ ನಿಕಟವರ್ತಿಗಳಿಗೆ ಬ್ಯಾಂಕ್‍ನಿಂದ ಸಾಲ ಕೊಡಿಸುವುದರಲ್ಲೇ ಭಾಗಿಯಾಗುತ್ತಿತ್ತು.ಆದ್ದರಿಂದ ಯುವಕರ ಅವಶ್ಯಕತೆಗಳ ಕಡೆ ಅವರು ಗಮನ ಕೊಡಲಿಲ್ಲ. ಈ ಕಾರಣದಿಂದ ಯುವಕರು ಬ್ಯಾಂಕ್‍ನಲ್ಲಿ ಸಾಲ ಪಡೆಯಲು ಹೋದಾಗ ಅನೇಕ ಸಂಕಷ್ಟಗಳನ್ನು ಅನುಭವಿಸುತ್ತಿದ್ದರು.

ಯುವಕನೇನಾದರೂ ತನ್ನ ಸ್ವಸಾಮಥ್ರ್ಯದಿಂದ ಯಾವುದಾದರೂ ವಸ್ತುವನ್ನುತಯಾರಿಸಿದರೆ ಅದನ್ನು ಮಾರ್ಕೆಟ್ ಮಾಡಲು, ಅದನ್ನು ಮಾರಾಟ ಮಾಡಲು ಅವರಿಗೆ ಹೆಚ್ಚು ಸಮಸ್ಯೆಯಾಗುತ್ತಿತ್ತು ಎಂಬುದು ಅಚ್ಚರಿಯಾಗಿತ್ತು.ಅಂದರೆ ಒಂದು ದೃಷ್ಟಿಯಿಂದ ಯುವಕರ ಹಾಗೂ ಅವರ ಕನಸುಗಳ ಬಗ್ಗೆ ಮಾತು ಬಹಳ ಆಗುತ್ತಿತ್ತು.ಆದರೆ ಸಮಗ್ರ ದೃಷ್ಟಿಕೋನ (ಹೋಲಿಸ್ಟಿಕ್ ವಿಷನ್) ಅವರ ಅವಶ್ಯಕತೆಗಳನ್ನು ಮತ್ತು ಅವರುಗಳ ಸಮಸ್ಯೆಗಳನ್ನು ಅರಿತು ಪರಿಹಾರಕ್ಕೆ ಸೂಕ್ತ ನೀತಿಗಳನ್ನು ಮಾಡಲಿಲ್ಲ, ನಿರ್ಣಯಗಳನ್ನು ತೆಗೆದುಕೊಳ್ಳಲಿಲ್ಲ.
ಆದರೆ ಇಂದಿನ ಈ ಸರ್ಕಾರ ಕಳೆದ 4 ವರ್ಷಗಳಿಂದ ಯುವಕ ಸ್ಕಿಲ್ ಡೆವಲ್‍ಮೆಂಟ್‍ನಿಂದ ಹಿಡಿದು ಅವರ ಸಾಲ ಸೌಲಭ್ಯ ಮತ್ತು ಅವರು ತಯಾರಿಸಿದ ವಸ್ತುವಿನ ಮಾರುಕಟ್ಟೆ ಮಾಡುವವರಿಗೆ ಒಂದು ಹೊಸ ವೈಖರಿಯೊಂದಿಗೆ ಕಾರ್ಯ ಮಾಡಲಾಗುತ್ತಿದೆ.

ದೇಶದ ಯುವಕರ ಸ್ಕಿಲ್ ಡೆವಲಪ್‍ಮೆಂಟ್Àಗಾಗಿ ಪ್ರತ್ಯೇಕಸಚಿವಾಲಯ ಪ್ರಾರಂಭಿಸಲಾಗಿದೆ. ಈ ಸಚಿವಾಲಯ ಈಗ ದೇಶದ ಎಲ್ಲೆಡೆ ಸ್ಕಿಲ್ ಡೆವಲಪ್‍ಮೆಂಟ್‍ನ ಕೆಲಸವನ್ನು ನೋಡುತ್ತಿದೆ. ದೇಶದ ಪ್ರತಿ ಜಿಲ್ಲೆಯಲ್ಲಿ ಕೌಶಲ್ಯಾಭಿವೃದ್ಧಿ ಸೆಂಟರ್ ಪ್ರಾರಂಭಿಸಲಾಗುತ್ತಿದೆ.ಯುವಕರಿಗೆ ಕಾರ್ಖಾನೆಗಳಲ್ಲಿಯ ಅವಶ್ಯಕತೆಗಳನ್ನು ಅರಿತು ಅಲ್ಪಾವಧಿ ಮತ್ತು ದೀರ್ಘಾವಧಿ ತರಬೇತಿ (shoಡಿಣ ಣeಡಿm ಮತ್ತು ಟoಟಿg ಣeಡಿm ಣಡಿಚಿiಟಿiಟಿg) ಕೊಡಲಾಗುತ್ತಿದೆ.ಯುವಕರು ತಮ್ಮ ಸಾಮಥ್ರ್ಯದ ಮೇಲೆ ತಮ್ಮ ಬಿಸಿನೆಸ್ ಪ್ರಾರಂಭಿಸಬಹುದು.ಇದಕ್ಕಾಗಿ ಅವರಿಗೆ ಬ್ಯಾಂಕ್ ಗ್ಯಾರಂಟಿಯೂ ಇಲ್ಲದೆ ಸಾಲ ನೀಡಲಾಗುತ್ತದೆ.ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಇಲ್ಲಿತನಕ ದೇಶದಲ್ಲಿ ಸುಮಾರು 11 ಕೋಟಿ ಸಾಲ ಸೌಲಭ್ಯ ನೀಡಲಾಗಿದೆ.ಕರ್ನಾಟಕದ ಯುವಕರಿಗಾಗಿ 1 ಕೋಟಿ 14 ಲಕ್ಷಕ್ಕಿಂತ ಹೆಚ್ಚು ಸಾಲ ಸ್ವೀಕಾರ ಮಾಡಲಾಗಿದೆ (ನೀಡಲಾಗಿದೆ).

ಸೋದರ, ಸೋದರಿಯರೇ ನಾಲ್ಕೂವರೆ ಲಕ್ಷ ಕೋಟಿ ರೂಪಾಯಿಗಿಳಿಗಿಂತ ಹೆಚ್ಚು ಹಣವನ್ನು ನಮ್ಮ ಸರಕಾರವು ಯುವಕರಿಗೆ ಯಾವರೀತಿ ವಾಪಸ್ ಮಾಡುತ್ತೀರಿ ಎಂದು ಕೇಳದೆಯೇ ಸಾಲ ಕೊಟ್ಟಿದೆ.ದೇಶದ ಯುವಕರ ಬಗ್ಗೆ ಈ ರೀತಿ ವಿಶ್ವಾಸವನ್ನು ನಾವು ತೋರಿದ್ದೇವೆ.ಈ ಯೋಜನೆಯ ಕಾರಣದಿಂದ ದೇಶಕ್ಕೆ ಸುಮಾರು ಮೂರು ಕೋಟಿ ಹೊಸ ಉದ್ಯಮಿಗಳು ದೊರೆತಿದ್ದಾರೆ.ಆದ್ದರಿಂದ ನಾನು ಯುವಶಕ್ತಿ ಮತ್ತು ಮಹಿಳಾ ಶಕ್ತಿಯನ್ನು ನಮಿಸುತ್ತೇನೆ. ಏಕೆಂದರೆ ಮುದ್ರಾಯೋಜನೆಯಡಿ ನೀಡಲಾದ ಸಾಲದ ಮರುಪಾವತಿಯ ವೇಗವೂ ಹೆಚ್ಚಾಗಿದೆ.ಮುದ್ರಾ ಯೋಜನೆಯಡಿ ಸಾಲಪಡೆಯುವವರಲ್ಲಿ ಶೇ.70ಕ್ಕೂ ಹೆಚ್ಚು ಮಹಿಳೆಯರೇ ಆಗಿದ್ದಾರೆ ಹಳ್ಳಿಗಳಲ್ಲಿ, ತಾಲ್ಲೂಕುಗಳಲ್ಲಿ, ಹೋಬಳಿಗಳಲ್ಲಿ ತಮ್ಮ ಸ್ವಂತ ಸಾಮಥ್ರ್ಯದ ಮೇಲೆ ಒಂದಲ್ಲ ಒಂದು ಉದ್ಯೋಗ, ವ್ಯಾಪಾರ ಪ್ರಾರಂಭಿಸಿದ್ದಾರೆ.

ಕೌಶಲ್ಯಾಭಿವೃದ್ಧಿ ಮತ್ತು ಸ್ವ-ಉದ್ಯೋಗವನ್ನು ಪ್ರೋತ್ಸಾಹಿಸುವುದರ ಜೊತೆಗೆ ನಮ್ಮ ಸರ್ಕಾರ ನವ ಯುವಕರು ತಮ್ಮ ವಸ್ತುಗಳಿಗೆ ಮಾರುಕಟ್ಟೆ ನಿರ್ಮಿಸುವ ಕೆಲಸ ಮಾಡಿದೆ.ನನ್ನ ಸರ್ಕಾರವು ಕೊಂಡುಕೊಳ್ಳುವಿಕೆಯಲ್ಲಿ ಸ್ಥಾನೀಯ ಉತ್ಪನ್ನಗಳಿಗೆಆದ್ಯತೆ ನೀಡಿದೆ. ಇದಲ್ಲದೆ ಮತ್ತೊಂದು ವ್ಯವಸ್ಥೆ ಮಾಡಲಾಗಿದೆ, ಉಇಒಅಂದರೆ ಉoveಡಿಟಿmeಟಿಣ-e-ಒಚಿಡಿಞeಣ ಎಂಬ ಹೆಸರಿನಿಂದ ಈ oಟಿಟiಟಿe ಠಿಟಚಿಣಜಿoಡಿm ನ ಮುಖಾಂತರ ಈ ಯಾವುದೇ ಯುವಕನು ತನ್ನ ಕಂಪನಿಯ ವಸ್ತುಗಳನ್ನು ಅಥವಾ ಸೇವೆಗಳನ್ನು ನೇರವಾಗಿ ಸರ್ಕಾರಕ್ಕೆ ಮಾರಬಹುದು. ನಾವು ರಾಜ್ಯ ಸರ್ಕಾರಕ್ಕೂ ಸಹ ಪ್ರೋತ್ಸಾಹ ನೀಡುತ್ತಿದ್ದೇವೆ. ಏಕೆಂದರೆ ಅವರೂ ಸಹ ತಮ್ಮ ರಾಜ್ಯದ ಯುವ ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹಿಸಲು ಈ ಪೋರ್ಟಲ್‍ನೊಂದಿಗೆ ಕೂಡಿಕೊಳ್ಳಲಿ.ದೇಶದ 20 ರಾಜ್ಯ ಸರ್ಕಾರಗಳು ಈ ಅಭಿಯಾನದಲ್ಲಿ ಕೇಂದದ ಜೊತೆಗೂಡಿವೆ. ತಮಗೆ ನಮ್ಮ ಸರ್ಕಾರದ ಬಗ್ಗೆ ಭರವಸೆ ಇದೆ.ಆದರೆ ಈ 20 ರಾಜ್ಯಗಳಲ್ಲಿ ಕರ್ನಾಟಕದ ಹೆಸರಿಲ್ಲ.

ಬಂಧುಗಳೇ, ನಮ್ಮ ಸರ್ಕಾರದ ನಿರಂತರ ಪ್ರಯತ್ನದಿಂದ ದೇಶದಲ್ಲಿ ಒಂದು ವಾತಾವರಣ ನಿರ್ಮಾಣವಾಗಿದೆ. ಅಲ್ಲಿ ಯುವಕರು ಇಂದಿನ ಕೈಗಾರಿಕಾ ಅವಶ್ಯಕತೆ ಅನುಸಾರ ಟ್ರೈನಿಂಗ್ ಪಡೆದು, ತಮ್ಮ ಸಾಮಥ್ರ್ಯದಿಂದ ಏನಾದರೂ ಮಾಡಬಹುದು ಮತ್ತು ತಮ್ಮ ವಸ್ತುಗಳನ್ನು ಮಾರುಕಟ್ಟೆ ಮಾಡಬಹುದು.ಇದು ಎಷ್ಟು ಮಹತ್ವಪೂರ್ಣವಾದದ್ದು ಎಂಬುದನ್ನು ಕರ್ನಾಟಕದ ಯುವಕರು ತಿಳಿಯಬಹುದು. ಯುವಕರ ಆಶೋತ್ತರಗಳನ್ನು ಈಡೇರಿಸಲು ಸರ್ಕಾರ Sಣಚಿಡಿಣuಠಿ Iಟಿಜiಚಿ – Sಣಚಿಟಿಜ uಠಿ Iಟಿಜiಚಿ ಇಂತಹಕಾರ್ಯಕ್ರಮ ನಡೆಸುತ್ತಿದೆ.

ಮೊಟ್ಟ ಮೊದಲ ಬಾರಿಗೆ ನಮ್ಮ ಸರ್ಕಾರ ಉದ್ಯೋಗವನ್ನು ತೆರಿಗೆ ಪ್ರೋತ್ಸಾಹದೊಂದಿಗೆ(ಖಿಚಿx iಟಿಛಿeಟಿಣives) ದೊಂದಿಗೆಜೋಡಿಸಿದೆ.ಯಾವ ಕಂಪನಿ ಯುವಕರಿಗೆ ಅಪ್ರೆಂಟಿಸ್‍ಶಿಪ್ ಮಾಡಿಸಿದೆಯೋ ಅವರಿಗೆ ಸರಕಾರದ ಮುಖಾಂತರ ಟ್ಯಾಕ್ಸ್‍ನಲ್ಲಿ ರಿಯಾಯಿತಿ ಕೊಡುತ್ತಿದೆ.ಯುವಕರಿಗೆ ಪಿ.ಎಫ್.ಕಡಿತವಾಗುತ್ತದೆ.ಅವರಿಗೆ ಸರಕಾರದ ಮುಖಾಂತರ ಆರ್ಥಿಕ ನೆರವು ನೀಡಲಾಗುತ್ತದೆ.ಯಾವ ಯುವಕರ ಕಂಪನಿ ಎರಡು ಕೋಟಿಯವರೆಗೆ ಟರ್ನ್‍ಓವರ್ ಹೊಂದಿದೆಯೋ ಮತ್ತು ಡಿಜಿಟಲ್ ರೀತ್ಯಾ ಪಾವತಿ ಮಾಡುತ್ತಿದ್ದಾರೋ ಅವರಿಗೂ ತೆರಿಗೆಯಲ್ಲಿ ರಿಯಾಯಿತಿ ಕೊಡಲಾಗುತ್ತಿದೆ. ನಮ್ಮ ಯುವಕರಲ್ಲಿ ಪರ್ಪಸ್ ಆಫ್ ಲೈಪ್ ಮತ್ತು ಸೆನ್ಸ್ ಆಫ್ ಮಿಷನ್‍ನ ಯಾವ ಕೊರತೆಯೂ ಇಲ್ಲ. ಅವರು ತಮ್ಮ ಐಡಿಯಾವನ್ನು, ತಮ್ಮ ಇನ್ನೋವೇಟಿವ್ ಸಲ್ಯೂಷನ್‍ನ್ನು ಈ ರೀತಿಯಲ್ಲಿ ಕಾರ್ಯರೂಪಕ್ಕೆ ತರಬಯಸುವವರು, ಆ ಸಾಮಗ್ರಿಗಳು eಜಿಜಿiಛಿieಟಿಣ ಮತ್ತು eಛಿoಟಿomiಛಿಚಿಟ ಆಗಿರಬೇಕು. ಆದ್ದರಿಂದ ಅದನ್ನು ಯಾವ ರೀತಿ ಪ್ರೋತ್ಸಾಹಿಸಲು ಅವಶ್ಯಕತೆ ಇದೆಯೋ ಅದನ್ನುಮಾಡಲು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ.

ಗೆಳೆಯರೇ,ಹೊಸತನ (ಇನ್ನೋವೇಷನ್) ಮಾತ್ರವೇ ಉತ್ತಮ ಭವಿಷ್ಯದ ಆಧಾರ.ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಈ ಯೋಜನೆಯೊಂದಿಗೆ ಇನ್ನೋವೇಷನ್‍ನ್ನು ಶಾಲಾ ಸಂಸ್ಕøತಿಯ ಭಾಗವನ್ನಾಗಿ ಮಾಡಲಾಗುತ್ತಿದೆ.ಶಾಲೆಯಲ್ಲಿ ಕಡಿಮೆ ವಯಸ್ಸಿನ ಮಕ್ಕಳ ಐಡಿಯಾವನ್ನು ಇನ್ನೋವೇಷನ್‍ನಲ್ಲಿ ಪರಿವರ್ತಿಸಲು ಸರ್ಕಾರ ಅಟಲ್ ಇನ್ನೋವೇಷನ್ ಮಿಷನ್‍ನ್ನು ಪ್ರಾರಂಭಿಸಿದೆ.ಇಲ್ಲಿಯವರೆಗೆ ದೇಶದಲ್ಲಿ 2400ಕ್ಕಿಂತ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್ಸ್‍ಗಳಿಗೆ ಒಪ್ಪಿಗೆ ನೀಡಲಾಗಿದೆ.

ಕೇಂದ್ರ ಸರ್ಕಾರ ಒಂದು ಮತ್ತು ಬಹುದೊಡ್ಡದಾದ ಮಿಷನ್ ಮೇಲೆ ಕೆಲಸ ಮಾಡುತ್ತಿದೆ.ಅದೇನೆಂದರೆ, ದೇಶದಲ್ಲಿ 20 ಜಾಗತಿಕ ಮಟ್ಟದ ಶಿಕ್ಷಣ ಸಂಸ್ಥೆಗಳನ್ನುರೂಪಿಸಲು ದೇಶದಲ್ಲಿ 20 iಟಿsಣiಣuಣioಟಿs oಜಿ ಇmiಟಿeಟಿಛಿe ನ ಕೆಲಸ, ಈ ಮಿಷನ್‍ನಡಿಯಲ್ಲಿ ಪಬ್ಲಿಕ್ ಸೆಕ್ಟರ್‍ನ 10 ಸಂಸ್ಥೆಗಳನ್ನು ಆಯ್ಕೆ ಮಾಡಿ ಒಂದು ಅವಧಿಯಲ್ಲಿ ಒಟ್ಟು 10 ಸಾವಿರ ಕೋಟಿ ರೂ.ಗಳ ಆರ್ಥಿಕ ಸಹಾಯ ನೀಡಲಾಗುವುದು.ಈ iಟಿsಣiಣuಣioಟಿs oಜಿ ಇmiಟಿeಟಿಛಿe ಶಿಕ್ಷಣ ಕ್ಷೇತ್ರದಲ್ಲಿ ಭಾರತದ ಪ್ರಾಚೀನ ಗೌರವವನ್ನು ಪುನಃ ಸ್ಥಾಪಿಸುವುದು.

ಈ ಬಜೆಟ್‍ನಲ್ಲಿ ನಾವು ಖeviಣಚಿಟisiಟಿg iಟಿಜಿಡಿಚಿsಣಡಿuಛಿಣuಡಿes ಚಿಟಿಜ sಥಿsಣems iಟಿ eಜuಛಿಚಿಣioಟಿ ಅಂದರೆ ಖISಇ ಹೆಸರಿನಲ್ಲಿ ಒಂದು ಹೊಸ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಇದರ ಅಡಿಯಲ್ಲಿ ನಮ್ಮ ಸರಕಾರ ಮುಂದಿನ ನಾಲ್ಕು ವರ್ಷಗಳೊಳಗಾಗಿ ದೇಶದ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಲು ಒಂದು ಲಕ್ಷ ಕೋಟಿ ರೂಪಾಯಿಗಳನ್ನು ವ್ಯಯಿಸಲಾಗುತ್ತದೆ.

ಇದೇ ಬಜೆಟ್‍ನಲ್ಲಿ ಸರಕಾರದ ಮುಖಾಂತರ Pಡಿime ಒiಟಿisಣeಡಿ’s ಖeseಚಿಡಿಛಿh ಈeಟಟoತಿs Sಛಿheme ನ ಪೋಷಣೆ ಮಾಡಲಾಗಿದೆ. ಇದರ ಅಡಿಯಲ್ಲಿ ದೇಶದ ಒಂದು ಸಾವಿರ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪಿ.ಹೆಚ್.ಡಿಗಾಗಿ ಐದು ವರ್ಷಗಳವರೆಗೆ ಪ್ರತಿ ತಿಂಗಳು 70 ರಿಂದ 80 ಸಾವಿರ ರೂಪಾಯಿಗಳು ಆರ್ಥಿಕ ಸಹಾಯ ನೀಡಲಾಗುವುದು.

ಭವಿಷ್ಯದ ಅವಶ್ಯಕತೆಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ನಮ್ಮ ಮಾನವ ಸಂಪನ್ಮೂಲದ(ಊumಚಿಟಿ ಖesouಡಿಛಿe) ಶಕ್ತಿ ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರದಿಂದ ಪ್ರಾರಂಬಿಸಲಾದ ಅನೇಕ ಯೋಜನೆಗಳ ಲಾಭ ಕರ್ನಾಟಕದ ಯುವಕರಿಗೆ ದೊರೆಯುವ ಸಂಭವವಿದೆ. ಕೇಂದ್ರ ಸರ್ಕಾರದ ಮುಖಾಂತರ ಇನ್ನೋವೇಷನ್ ಕ್ಷೇತ್ರದಲ್ಲಿ ಮಾಡಲಾಗುತ್ತಿರುವ ಕಾರ್ಯ, ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್‍ನೆಟ್ ಆಫ್ ಥಿಂಗ್ಸ್‍ಗಾಗಿ ಮಾಡಲಾಗುತ್ತಿರುವ ಕಾರ್ಯಗಳು ಕರ್ನಾಟಕ ಯುವಕರಿಗೋಸ್ಕರ, ಹೊಸ ಸಂಭವನೀಯತೆ ಮುಖಾಂತರ ತೆರೆಯಬಹುದು.ವಿಶೇಷವಾಗಿ ಸ್ಮಾಟ್‍ಸಿಟಿ ಮಿಷನ್ ದೇಶದೆಲ್ಲೆಡೆ ಕರ್ನಾಟPದ ಪ್ರತಿಭಾಶಾಲೀ ಯುವಕರು ದೇಶದೆಲ್ಲಡೆ ತಲುಪಲು ಸುಲಭಗೊಳಿಸಿದೆ.ಅವರ ಪ್ರತಿಭೆಯು ಉತ್ತಮವಾಗಿ ಉಪಯೋಗವಾಗುವುದನ್ನು ನಿಶ್ಚಿತಗೊಳಿಸಿದೆ.

ಗೆಳೆಯರೇ, ಸಹೋದರಿ ನಿವೇದಿತಾರ ಮಾತು ನಿಜವಾಗಲಿ.
“ಙouಡಿ eಜuಛಿಚಿಣioಟಿ shouಟಜ be ಚಿಟಿ eಜuಛಿಚಿಣioಟಿ oಜಿ ಣhe heಚಿಡಿಣ ಚಿಟಿಜ ಣhe sಠಿiಡಿiಣ ಚಿಟಿಜ oಜಿ ಣhe sಠಿiಡಿiಣ ಚಿs muಛಿh oಜಿ ಣhe bಡಿಚಿiಟಿ; iಣ shouಟಜ be ಚಿ ಟiviಟಿg ಛಿoಟಿಟಿeಛಿಣioಟಿ beಣತಿeeಟಿ ಥಿouಡಿseಟves ಚಿಟಿಜ ಥಿouಡಿ ಠಿಚಿsಣ ಚಿs ತಿeಟಟ ಚಿs ಣhe moಜeಡಿಟಿ ತಿoಡಿಟಜ!”

ಅಂದರೆ ನಮ್ಮ ಇತಿಹಾಸ, ನಮ್ಮ ವರ್ತಮಾನ ಮತ್ತು ನಮ್ಮ ಭವಿಷ್ಯದ ನಡುವೆ ಕನೆಕ್ಟ್ ಮಾಡುವುದು ಬಹಳ ಅವಶ್ಯಕ.ನಮ್ಮ ಪರಂಪರೆಗಳಿಂದ ಎಷ್ಟು ಇವುಗಳನ್ನು ಜೋಡಣೆ ಮಾಡಿದ್ದು ಗಟ್ಟಿಯಾಗಿದೆಯೋ ಅಷ್ಟೇ ದೇಶದ ಯುವಕರು ತಮ್ಮನ್ನು ತಾವು ಸಮರ್ಥರೆಂದು ಭಾವಿಸಿಕೊಳ್ಳುತ್ತಾರೆ.

ಸಹೋದರ ಮತ್ತು ಸಹೋದರಿಯರೇ, ನಮ್ಮ ಪರಂಪರೆಯೊಂದಿಗಿನ ಬಗ್ಗೆ ಗೌರವದ ಭಾವನೆ ಕೇಂದ್ರ ಸರ್ಕಾರದ ಮೂಲಕ ಪ್ರಾರಂಭಿಸಲಾಗಿರುವ ಖೇಲೋ ಇಂಡಿಯಾ ಯೋಜನೆಯಲ್ಲಿ ಸಹ ಕಾಣಸಿಗುತ್ತದೆ.ಇದಕ್ಕಾಗಿ ನಾವು ಸರ್ಕಾರದ ನೀತಿಯಲ್ಲಿ ಒಂದು ದೊಡ್ಡ ಬದಲಾವಣೆಯನ್ನು ಮಾಡಿದ್ದೇವೆ. ಕ್ರೀಡೆಯಲ್ಲಿ ಗುರು ಶಿಷ್ಯ ಪರಂಪರೆಯನ್ನು ಬೆಳೆಸಲು, ಉತ್ತೇಜಿಸಲು ಕೇವಲ ವರ್ತಮಾನ ಕೋಚ್ ಮಾತ್ರವಲ್ಲದೆ, ಆಟಗಾರರನ್ನು ತರಬೇತಿಗೊಳಿಸಿದ ಎಲ್ಲ ತರಬೇತುದಾರರನ್ನೂ ಗೌರವಿಸಲಾಗುವುದು.ತನ್ಮೂಲಕ ಅಂತರರಾಷ್ಟ್ರೀಯ ಪದಕ ಗೆಲ್ಲುವ ಆಟಗಾರನ ವರ್ತಮಾನ ಗುರುವಲ್ಲದೇ ಮೊದಲು ತರಬೇತುಗೊಳಿಸಿದ ಗುರುವರ್ಯರಿಗೂ ಗೌರವಧನ ನೀಡಲಾಗುವುದು.

ಪರಂಪರೆಯೊಂದಿಗಿನ ಸಂಬಂಧಗವನ್ನು ಗಮನದಲ್ಲಿಟ್ಟುಕೊಂಡು ಖೇಲೋ ಇಂಡಿಯಾ ಕಾರ್ಯಕ್ರಮದಲ್ಲಿ ಕಬಡ್ಡಿ ಮತ್ತು ಖೋಖೋನಂತಹ ಸ್ವದೇಶಿ ಆಟಗಳಿಗೂ ಒತ್ತು ನೀಡಲಾಗುತ್ತಿದೆ.ದೇಶದ ಮೂಲೆ ಮೂಲೆಗಳಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಅವಕಾಶ ನೀಡುವ ವೇದಿಕೆಯನ್ನು ನಿರ್ಮಿಸಲು ಸರ್ಕಾರ ಪ್ರಯತ್ನಿಸುತ್ತಿದೆ.ಪ್ರತಿವರ್ಷ ಒಂದು ಸಾವಿರ ಯುವ ಕ್ರೀಡಾಪಟುಗಳನ್ನು ಆಯ್ಕೆ ಮಾಡಿ, ಅವರಿಗೆ ಆಧುನಿಕ ಕ್ರೀಡಾ ಮೂಲಭೂತ ಸೌಕರ್ಯಗಳಡಿ ತರಬೇತಿ ನೀಡಲು ಐದು ಲಕ್ಷ ರೂ.ಗಳ ಆರ್ಥಿಕ ಸಹಾಯ ಪ್ರತಿವರ್ಷ ನೀಡಲಾಗುವುದು.

ಬಂಧುಗಳೇ,
‘ವಿದ್ಯಾರ್ಥಿ ದೇವೋಭವ’ ಇದು ಕೇವಲ ನಿಮ್ಮದಷ್ಟೇ ಅಲ್ಲ ನಮ್ಮ ಮಂತ ಕೂಡ. ನಾನು ತಮ್ಮ ಒಪ್ಪಿಗೆಯೊಂದಿಗೆ ಹೇಳಬಯಸುವುದೆಂದರೆ ‘ಯುವ ದೇವೋಭವ, ಯುವಶಕ್ತಿ ದೇವೋಭವ’.

ಯುವ ಜನಾಂಗವನ್ನು ನಾನು ದೈವೀ ಶಕ್ತಿಯ ಅಂಶವೆಂದು ಭಾವಿಸುತ್ತೇನೆ. ಏಕೆಂದರೆ ಯುವ ಜನಾಂಗವನ್ನು ನಾನು ಪರಿಸ್ಥಿತಿ ಅಲ್ಲ, ಆಯಸ್ಸು ಆಲ್ಲ್ಲ ಒಂದು ಮನಸ್ಥಿತಿ ಎಂದು ಭಾವಿಸುತ್ತೇನೆ. ಯುವಕರು ನಾನು ಮೊದಲು ಚೆನ್ನಾಗಿದ್ದೆ ಅದೇ ಚೆನ್ನಾಗಿತ್ತು ಎಂದು ಯೋಚಿಸದೆ ಹಿಂದಿನದರಿಂದ ಕಲಿತು ಭವಿಷ್ಯವನು ಇನ್ನೂ ಚೆನ್ನಾಗಿ ಮಾಡಬಹುದೆಂದು ಯೋಚಿಸುತ್ತಾರೆ.ಆದ್ದರಿಂದ ಅವರು ದೇಶವನ್ನು ಬದಲಿಸುವುದಕ್ಕಾಗಿ ಕಾರ್ಯ ಮಾಡುತ್ತಾರೆ.ಜಗತ್ತನ್ನು ಬದಲಿಸಲು ಶ್ರಮ ಪಡುತ್ತಾರೆ. ಭವಿಷ್ಯವು ವರ್ತಮಾನ ಮತ್ತು ಅತೀತ ಇವೆರಡಕ್ಕಿಂತ ಸಮರ್ಥ, ಶಕ್ತಿಶಾಲಿಯಾಗಿರಲಿ ಎಂದು ಅಪೇಕ್ಷಿಸುತ್ತಾರೆ.

ಆದ್ದದರಿಂದ ನಾನು ದೇಶದ ನವಯುವಕರ ಶಕ್ತಿಗೆ ಮತ್ತೊಮ್ಮೆ ನಮಿಸುತ್ತೇನೆ. ಸಂಕಲ್ಪದಂದ ಸಿದ್ಧಿಯ ಯಾವ ಯಾತ್ರೆಯಲ್ಲಿ ದೇಶ ನಡೆಯುತ್ತದೆಯೋ ನವಭಾರತ (ನ್ಯೂ ಇಂಡಿಯಾ)ದ ಯಾವ ಕನಸನ್ನು ಪೂರ್ಣಗೊಳಿಸಲು ಮುಂದೆ ಸಾಗುತ್ತಿದೆಯೋ ಅದರ ದೊಡ್ಡ ಜವಾಬ್ದಾರಿಯ ಯುವಕರ ಮೇಲಿದೆ.ಅವರೆಲ್ಲರಿಗೆ ಭವಿಷ್ಯದ ಶುಭಹಾರೈಕೆಗಳೊಂದಿಗೆ ನನ್ನ ಮಾತಿಗೆ ವಿರಾಮ ಹೇಳುತ್ತೇನೆ.

ಇಂತಹ ಸಮಾರಂಭಕ್ಕಾಗಿ ರಾಮಕೃಷ್ಣ ವಿವೇಕಾನಂದ ಆಶ್ರಮಕ್ಕೆ ಮತ್ತೊಮ್ಮೆ ಹೃತ್ಪೂರ್ವಕವಾಗಿ ಆಭಿನಂದಿಸುತ್ತೇನೆ.

ಧನ್ಯವಾದಗಳು.

 

Explore More
140 करोड़ देशवासियों का भाग्‍य बदलने के लिए हम कोई कोर-कसर नहीं छोड़ेंगे: स्वतंत्रता दिवस पर पीएम मोदी

लोकप्रिय भाषण

140 करोड़ देशवासियों का भाग्‍य बदलने के लिए हम कोई कोर-कसर नहीं छोड़ेंगे: स्वतंत्रता दिवस पर पीएम मोदी
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.